ವಾಗ್ದೇವಿ – ೫೫

ವಾಗ್ದೇವಿ – ೫೫

ಶೃಂಗಾರಿಯೂ ತಿಪ್ಪಾಶಾಸ್ತ್ರಿಯೂ ತನ್ನ ಕುತ್ಸಿತ ವಚನಗಳನ್ನು ಸಹಿಸಕೂಡದೆ, ಕುಪಿತರಾಗಿ ಹೊರಟು ಹೋದದ್ದನ್ನು ಕುರಿತು ವಾಗ್ದೇ ವಿಯು. ಚಿಂತಾಕ್ರಾಂತಳಾಗಿ. ಅವರನ್ನು ಹುಡುಕಿತರುವುದಕ್ಕೋಸ್ಟರ ಸೂರ್ಯನಾರಾಯಣನ ಸಮೇತ ಅದೇ ಶಾಂತಿಪುರಕ್ಕೆ ಬಂದಳು. ಪ್ರಾಣಸಖ ನಾದ ಭೀಮಾಜಿಯು ಇರುವ ಊರಲ್ಲಿ ತನಗೇನು ಕಡಿಮೆ ಎಂದು ಬಗ್ಗಿ, ಅವನ ಮನೆಯ ಬಳಿಗೆ ಹೋಗುವಾಗ ಮನೆಯ ಮುಂದುಗಡೆಯಲ್ಲಿ ಅಲೆ ದಾಡುತ್ತಾ ಇರುವ ಕೊತ್ವಾಲನು ಇವಳ ಮೇಲೆ ದೃಷ್ಟಿಬೀಳುವಷ್ಟರಲ್ಲಿ ಮನೆಯ ಹಿಂದುಗಡೆ ತಿರುಗಿ ಒಳಗೆ ಹೋಗಿ ಅಡಗಿಬಿಟ್ಟನು. ವಾಗ್ದೇವಿಯು ಈ ವೈನವನ್ನು ಪೂರ್ಣವಾಗಿ ನೋಡಿದಳು. ಅವಳಿಗೆ ತಡೆಯಲಾರದ ಸಿಟ್ಟು ಬಂದರೂ ಈತನ ಸ್ವರೂಪ ನೋಡಿಬಿಡುವುದಕ್ಕೆ ಮುಂಬಾಗಿಲಿಗೆ ಹೋಗಿ ನಿಂತು, ಜವಾನನನ್ನು ಕರೆದು ತನ್ನ ಹೆಸರು ಧನಿಗೆ ತಿಳಿಸೆಂದಳು. ಧನಿಯು ಕೊಂಚ ರಜವನ್ನು ತಕ್ಕೊಂಡು ಸ್ವದೇಶಕ್ಕೆ ಹೋಗಿರುವನೆಂದು ಜವಾನನು ಹೇಳಿದನು. ವಾಗ್ದೇವಿಯು ಥೂ ಇವನ ಮುಖ ನೋಡಿದರೆ ಸಚೇಲಸ್ನಾನ ಮಾಡಬೇಕು. ತಾನು ಇಲ್ಲಿಗೆ ಬರುವದಕ್ಕಿಂತ ಸ್ಮಶಾನ ದರ್ಶನ ಮಾಡು ವುದು ಪ್ರಯೋಜನಕರವೆಂದು ನಡೆದುಬಿಟ್ಟಳು. ಮರುದಿನ ಸಾಯಂಕಾಲ ಶಾಬಯ್ಯನ ಭೇಟ ಸಿಕ್ಕುವುದೋ ನೋಡಿಬಿಡಬೇಕೆಂದು ಅವನ ಮನೆಯ ಕಡೆಗೆ ಹೋಗುವಾಗ ಉಪ್ಪರಿಗೆಯ ಮುಖ ಮಂಟದ ಗಾಳಿಗೆ ಮೈಬಿಟ್ಟು ನಿಂತಿರುವ ಶಾಬಯ್ಯನು ವಾಗ್ದೇವಿಯನ್ನು ಕಂಡು, ತಗಣೆಯಂತೆ ಅಡಗಿದನು. ಇವನ ಸ್ಥಿತಿಯನ್ನು ಪೂರ್ಣವಾಗಿ ಪರೀಕ್ಷಿಸಿ ನೋಡುವ ಕುತೂಹಲದಿಂದ ವಾಗ್ದೇವಿಯು ಮನೆಯ ಬಾಗಲಲ್ಲಿ ನಿಂತು, ತನ್ನ ಹೆಸರು ಯಜಮಾನರಿಗೆ ತಿಳಿಸೆಂದು ಪೇದೆಗೆ ಅಪೇಕ್ಷಿಸೋಣ, ಅವನು–ಧನಿಗಳು ಪರಸ್ತ್ರೀಯರ ಮುಖಾನಲೋಕನ ಮಾಡುವದೇ ಇಲ್ಲ. ಸುಮ್ಮಗೆ ಅವರ ಕೂಡೆ ಹೇಳಿ ಏನು ಪುರುಷಾರ್ಥನೆಂದನು. ಸರಿ ಸರಿ; ವಾಗ್ದೇವಿಗೆ ಈಗ ಯೌವನ ಇಲ್ಲ. ಕೈಯಲ್ಲಿ ದುಡ್ಡೂ ಇಲ್ಲ. ಇವೆರಡರಲ್ಲಿ ಒಂದಾದರೂ ಇದ್ದರೆ ಯಾರೂ ಇಂಥಾ ಲಂಡತನ ಮಾಡುವ ಹಾಗಿಲ್ಲವೆಂದು ಶಾಬಯ್ಯನು ಕೇಳುವ ಹಾಗೆ ಹೇಳಿ, ಛೀ ಥೂ ಎಂದು ಮೂರು ಸಲ ಉಗುಳಿಬಿಟ್ಟು, ಬೆನ್ನುಹಾಕಿದಳು. ಶಾಬಯ್ಯಗೆ ಲಜ್ಜೆಯಿಂದ ಸತ್ತ ಹಾಗಾಯಿತು. ಜವಾನರ ಮುಂದೆ ಅವಳು ತನ್ನ ಸ್ವರೂಪಕ್ಕೆ ಚಿಕ್ಕಾಸು ಮಾಡಿಬಿಟ್ಟಳೆಂಬ ಪಶ್ಚಾತ್ತಾಪದಿಂದ ಅವನು ಮುಖವೆತ್ತಡೆ ಕುಳಿತು ಕೊಂಡನು. ಅವನ ಹೆಂಡತಿಯ ಕಿವಿಗೂ ಈ ಆಭಾಸದ ಸಮಾಚಾರ ಬಿತ್ತು. ಗಂಡನ ಕೂಡೆ ಮಾತಾಡದೆ, ಅನಾವಶ್ಯಕ ವಾಗಿ ಅವಮಾನಪಡಿಸಿದ ದೆಸೆಯಿಂದ ಬಂದ ನಾಚಿಕೆಯನ್ನು ಸಹಿಸಿಕೊಳ್ಳ ಬೇಕೆಂದಳು.

ವಾಗ್ದೇವಿಯು ಮರುದಿನವೇ ಸೂರ್ಯನಾಣಾಯಣನ ಒಟ್ಟಿನಲ್ಲಿ ಇನ್ನೊಂದು ಊರಿಗೆ ಹೋಗುವದಕ್ಕಾಗಿ ಪ್ರಯಾಣಮಾಡುವ ಸಮಯದಲ್ಲಿ ಕೊಂಚ ದೂರದಲ್ಲೊಂದು ಹಳ್ಳಿಯಲ್ಲಿ ಶೃಂಗಾರಿಯೂ ತಿಪ್ಪಾಶಾಸ್ತ್ರಿಯೂ ಉಳ ಕೊಂಡಿರುವ ವರ್ತಮಾನ ಸಿಕ್ಕಿದ್ದರಿಂದ ಅಲ್ಲಿಗೆ ಹೋಗಿ ಅವರಿಬ್ಬರನ್ನು ಕಂಡು ಪ್ರಯಾಸದಿಂದ ಅವರ ಕೂಡೆ ವಿವೇಕಮಾಡಿಕೊಂಡ ಬಳಿಕ ನಾಲ್ಕು ವ್ಯಕ್ತಿ ಗಳೂ ಒಟ್ಟಾಗಿ ಯಾವ ಊರಲ್ಲಿ ತಮಗೆ ಆಶ್ರಯ ಸಿಕ್ಯುವದೆಂಬ ಚಿಂತೆಯಿಂದ ದಿನಹರಣ ಮಾಡಿದರು. ಬೆಟ್ಟದ ನಾಡು ಎಂಬಲ್ಲಿ ಒಬ್ಬ ಮುದುಕ ವಕೀಲ ನಲ್ಲಿ ಗೋಷ್ಟದ ಬಳಿಯೇ ಇರುವ ಚಿಕ್ಕದೊಂದು ಝೋಪಡಿಯಲ್ಲಿ ಬಿಡಾರ ವಾಸಿಗಳಾಗಿ ಕೆಲವು ಕಾಲ ಕಳೆದರು. ಆ ಊರಿನಲ್ಲಿ ಶಿವರಾಮಶೆಟ್ಟ ಎಂಬ ಒಕ್ಕಲಿಗನೊಬ್ಬನು ಬಹು ಆಢ್ಯಮನುಷ್ಯನಾಗಿ ಧಾರ್ಮಿಕನೆಂದು ಹೆಸರು ಗೊಂಡಿರುತ್ತಿದ್ದನು. ಅವನ ಸಹೋದರಿಯ ಹುಡುಗನೊಬ್ಬಗೆ ಜಡವಾಗಿ ಪ್ರಾಣಾಂತಿಕವೆಂಬ ಜನ್ಯವನ್ನು ಕೇಳಿ ಅವನ ಸ್ನೇಹಿತನೊಬ್ಬನು ತಿಪ್ಪಾಶಾ ಸ್ತ್ರಿಯನ್ನು ಅಲ್ಲಿಗೆ ಕರಕೊಂಡು ಈತನು ದೊಡ್ಡ ಜ್ಯೋತಿಷ್ಯಗಾರನೆಂದು ಗುರ್ತುಮಾಡಿಸಿದನು.

ಶಿವರಾಮ ಶೆಟ್ಟಿಯು ಹುಡುಗನ ಜಾತಕವನ್ನು ಜೋಯಿಸಗೆ ತೋರಿಸಿದನು. ತಿಪ್ಪಾಶಾಸ್ತ್ರಿಯು ಅದನ್ನು ನೋಡಿ ದಶಾಸಂಧಿಯ ಬಾಧಕ ತೊಲಗಿಯದೆ. ಚನ್ನಾಗಿ ಪರಿಹಾರ ಮಾಡಿದರೆ ಜೀವ ಉಳಿದೀತಾಗಿ ಧೈರ್ಯ ಹೇಳಿ ಮೃತ್ಯುಂಜಯ ಅಭಯಂಕರವೆಂಬ ದೊಡ್ಡ ದೊಡ್ಡ ಹೋಮಾದಿಗ ಳನ್ನು ಮಾಡಿಸುವದಕ್ಕೆ ತೊಡಗಿದನು. ಯಾರ ಪುಣ್ಯದಿಂದಲೋ ಹುಡುಗನಿಗೆ ಗುಣವಾಯಿತು. ಶಿವರಾಮ ಶೆಟ್ಟಿಗೂ ಅವನ ಸಹೋದರಿಗೂ ತಿಪ್ಪನ ಮೇಲೆ ಬಹು ವಿಶ್ವಾಸಹುಟ್ಟಿ ತು. ಅವನು ಆ ಊರಿಗೆ ಬಂದ ಹದನವೆಲ್ಲಾ ಪೂರ್ಣವಾಗಿ ಅರಿತು ಅವರಿಬ್ಬರೂ ಬಹಳ ಪಶ್ಚಾತ್ತಾಪ ಪಟ್ಟು, ಸಣ್ಣ ದೊಂದು ಮಠವನ್ನು ಕಟ್ಟಿಸಿ ಸೂರ್ಯನಾರಾಯಣ ವಾಗ್ದೇವಿ ಶೃಂಗಾರಿ ತಿಪ್ಪಾಶಾಸ್ತ್ರಿ ಇವರಿಗೂ ಆಶ್ರಯಕೊಟ್ಟು ಅವರ ಜೀವನ ನಡಿಯುವದಕ್ಕೆ ಅಗತ್ಯವಿರುವ ಸಹಾಯಮಾಡಿದರು.ದೇವರ ದಯೆಯಿಂದ ಜೀವನೋಪಾ ಯವು ಪ್ರಯಾಸವಿಲ್ಲದೆ ದೊರಕಿದ್ದಕ್ಕಾಗಿ ವಾಗ್ದೇವಿಯು ಉಲ್ಲಾಸಪಟ್ಟು ಇನ್ನು ಈ ಆಶ್ರಮ ಸ್ಟಾನದಲ್ಲಿ ಆಯುಷ್ಯವನ್ನು ಕಳೆದು ಬಿಡುವದೆಂದು ನಿಶ್ಚಯಮಾಡಿ ಕೂಳಿಗೆ ತತ್ವಾರವಿಲ್ಲದೆ ಅಲ್ಲಿ ಸುಖನಾಗಿ ಬದುಕಿಕೊಂಡಿರು ತ್ತಿರುವವೇಳೆ ಸೂರ್ಯನಾರಾಯಣನು ತಾನು ಪಡುತ್ತಾ ಇರುವ ಅಧ್ವಾನಗ ಳಂದನಿಮೋಚನಾದೆನೆಂಬ ಹರುಷದಿಂದ ಪೂರ್ವವೃತ್ತಾಂತವನ್ನು ಪೂರ್ಣ ವಾಗಿಮರೆತು ನಿರಾತಂಕನಾಗಿ ಯೌವನ ವೃದ್ಧಿ ಹೊಂದುತ್ತಾ ಬಂದನು.

ಶಿವರಾಮಶೆಟ್ಟಗೆ ಕಿರಿ ತಂಗಿ ವೆಂಕಟಸುಬ್ಬಿ ಎಂಬ ನವಯೌನಕೆಯಿ ದಳು. ಆ ಅಂಗನಾಮಣಿಯ ಮೇಲೆ ಸೂರ್ಯನಾರಾಯಣನ ದೃಷ್ಟಿ ಬಿತ್ತು. ಅವಳು ಅವನ ಮೇಲೆ ಪ್ರೇಮಭರಿತಳಾಗಿಯೇ ಇರುವಳೆಂಬಂತೆ ಅವಳ ಚೇಷ್ಟೆಗಳಂದ ಅವನ ಮನಸ್ಸಿಗೆ ಮಂದಟ್ಟಾಯಿತು. ಯಾರೊಬ್ಬನ ಮಧ್ಯ ಸ್ಥಿಕೆ ಇಲ್ಲದೆ ಇವರಿಬ್ಬರು ಗೋಪ್ಯವಾಗಿ ಒಡನಾಡಿಕೊಂಡು, ಹಲವು ದಿವಸಗಳ ಪರಿಯಂತರ ಅಂತರ್ಯವಾಗಿದ್ದರು. ಹೆಚ್ಚುಕಾಲ ಹೀಗೆಯೇ ನಡೆದರೆ ತಮ್ಮ ಸಮಾಗಮವು ಎದುರಿಗೆ ಅನರ್ಥಕ್ಕೆ ಕಾರಣವಾಗಿ ಸುಖಕ್ಕೆ ವೈಕಲ್ಯ ಬರುವದ ಲ್ಲದೆ ಪ್ರಾಣಹಾನಿಯ ಸಂಭವವೂ ಒದಗಲಾರದೆನ್ನ ಕೂಡದು. ಒಂದು ಕ್ಷಣವಾ ದರೂ ಅಗಲುವಿಕೆಯನ್ನು ಸಹಿಸಲಾರದಷ್ಟು ಪರಸ್ಪರ ಅನುರಾಗ ವೃದ್ಧಿಯು ಅವರೊಳಗೆ ಸಿದ್ಧಿಯಾದ ದೋಷ ನಿರಾತಂಕವಾಗಿ ತಮ್ಮ ಸಮ್ಮೇಳನವು ನಡಿಯಬೇಕಾದರೆ ಉಭಯತ್ರರು ಕೂಡಲೇ ಪಲಾಯನ ಮಾಡಬೇಕೆಂಬ ಯೋಚನೆಯು ಅವರಿಗೆ ಹತ್ತಿತು. ತಮ್ಮ ಅಭೀಷ್ಟವನ್ನು ನೆರವೇರಿಸುವ ದಕ್ಕೆ ಅವರು ಅವಕಾಶವನ್ನು ಕಾದಿರುವಾಗ ಶಿವರಾಮಸೆಟ್ಟಿಯ ಮನೆಯಲ್ಲಿ ವರ್ಷಾವಧಿ ಹರಿಸೇವೆಗೆ ದಿನ ನಿಶ್ಚೈಸಿತು. ಅಂದು ಬಹು ಜನ ನೆಂಟರಿಷ್ಟರೂ ಇಷ್ಟಮಿತ್ರರೂ ಬಂಧುಬಾಂಧವರೂ ಕೂಡಿ ದೊಡ್ಡ ಗೌಜು ಆಗುವಾಗ್ಗೆ ಯಾರು ಯಾವಲ್ಲಿರುವರೆಂಬ ಗೋಷ್ಠಿಯು ಒಬ್ಬರಿಗೂ ಇರಲಿಲ್ಲ. ಈ ಉತ್ಸವವನ್ನು ಕಂಡು ಬಿಡಬೇಕೆಂದು ವಾಗ್ದೇವಿಯೂ ಕೃಂಗಾರಿಯೂ ತಿಪ್ಪಾ ಶಾಸ್ತ್ರಿಯೂ ಹೋಗಿರುವ ಸಂದರ್ಭವನ್ನು ನೋಡಿ ವೆಂಕಟಸುಬ್ಬಿಯು ಮೈ ಮೇಲೆ ಧರಿಸಿಕೊಂಡಿರುವ ಅಮೂಲ್ಯವಾದ ಆಭರಣಗಳ ಸಮೇತ ಬೇಕಾ ದಷ್ಟು ಗುಪ್ತಧನವನ್ನು ಕಟ್ಟಿಕೊಂಡು ಸೂರ್ಯನಾರಾಯಣನ ಮಠಕ್ಕೆ ಬಂದು ಅವನನ್ನು ಕರಕೊಂಡು ಇಬ್ಬರೂ ತವಕದಲ್ಲಿ ನಡೆದುಬಿಟ್ಟರು. ಇಡೀರಾತ್ರೆ ಕೊಂಚವಾದರೂ ಶ್ರಮಿಸಿಕೊಳ್ಳದೆ ವೇಗದಿಂದ ನಡೆದು ಷಟ್ಪುರ ರಾಜ್ಯದ ಗಡಿಯನ್ನು ದಾಟ ಅನ್ಯ ರಾಜ್ಯವನ್ನು ಸೇರಿದರು. ಸೂರ್ಯನಾರಾ ಯಣನು ಸನ್ಯಾಸದ ಚಿಹೆಗಳನ್ನು ಮರೆಯಿಸಿ ತಾನು ಮತ್ತು ವೆಂಕಟಸುಬ್ಬಿ ಗಂಡಹೆಂಡಿರೆಂದು ಕಾಣುವ ರೀತಿಯಲ್ಲಿ ನಡಕೊಂಡು, ಹಗಲು ಸಮಯ ಹೆಚ್ಚಾಗಿ ಯಾರ ಎದುರಿಗೂ ಬೀಳದೆ ಬಿಡಾರದಲ್ಲಿಯೇ ಇಳುಕೊಂಡು ರಾತ್ರೆ ಕಾಲ ಹಡಗವನ್ನೇರಿ ದೂರ ಪ್ರಾಂತ್ರದಲ್ಲಿರುವ ಹೇಮಳವೆಂಬ ದ್ವೀವ ವನ್ನು ಸೇರಿದರು. ಅಲ್ಲಿ ಅವರು ಬೇರೆ ಹೆಸರುಗಳನ್ನು ತಾಳಿ ನಿರ್ಭೀತ ರಾಗಿ ವಾಸಮಾಡಿಕೊಂಡರು. ಹರಿ ಸೇವೆಯು ಬೆಳಗಿನ ಝಾವಕ್ಕೆ ಮುಗಿ ಯುತ್ತಾ ಬಂತು. ದರ್ಶಣೆಪಾತ್ರಿಯು “ಭಕ್ತಾ! ನಿನ್ನ ಸೇವೆಯನ್ನು ಒಡೆ ಯನು ಸಂತೋಷದಿಂದ ಒಪ್ಪಿಕೊಂಡಾಯಿತು. ನಿನ್ನ ಸರ್ವ ಮನಸಾಭೀಷ್ಟ ವನ್ನು ಸಲ್ಲಿಸಿಕೊಡುತ್ತಾನೆ. ಇಕೊ ನಂಬು” ಎಂದು ಯಜಮಾನನಿಗೆ ಪ್ರಸಾದ ಕೊಟ್ಟಾದ ಮೇಲೆ ಮನೆಯ ಜನರನ್ನು ಒಬ್ಬೊಬ್ಬರನ್ನೇ ಕರಿದು ಅವರಿಗೆ ಪ್ರಸಾದವಾಗುವಾಗ ವೆಂಕಟಸುಬ್ಬಿಯು ಕಾಣಲಿಲ್ಲ. ನಿದ್ರೆ ತಡೆಯಲಾರದೆ ಎಲ್ಲಿಯೋ ಬಿದ್ದುಕೊಂಡಿರಬೇಕು. ಕರಿಯಿರೆಂದು ಯಜಮಾನನ ಆಜ್ಞೆ ಯಾಯಿತು. ಮನೆಯ ಸಂದು ಮೂಲೆಗಳಲ್ಲಿಯೂ ಹಿತ್ತಲಿನ ಸುತ್ತು ಮುತ್ತೂ ಹುಡುಕಿ ಸಾಕಾದರೂ ವೆಂಕಟಸುಬ್ಬಿಯು ಸಿಗಲಿಲ್ಲ. ಪಾತ್ರಿಯ ಕೂಡೆ ಆದರೂ ಕೇಳಿ ನಿಷ್ಕರ್ಷೆ ಮಾಡುವದಕ್ಕೆ ಯಜಮಾನನು ಪ್ರಶ್ನೆ ಮಾಡಿದಾಗ–“ಚರವಾದ ಹಾಗೆ ತೋರುತ್ತದೆ. ಪೂರ್ಣ ಶೋಧವನ್ನು ಜೋಯಿಸರ ಮುಖದಿಂದ ಮಾಡಿಸಿಕೊಳ್ಳುವದು ಉತ್ತಮ. ಬಹಳ ಹೊತ್ತಾ ಯಿತು. ಪಾತ್ರಿಯು ದಣಿಯುತ್ತಾನೆ” ಎಂದು ಅವನು ವಾದ್ಯದವರಿಗೆ ತಿಳಿಸಿದರು. ದರ್ಶಣೆ ಹಿರಿಯುವ ವಾದ್ಯವಾದ ಕೂಡಲೇ ಪಾತ್ರಿಯು ನೆಲದ ಮೇಲೆ ಉದ್ದಂಡ ನಮಸ್ಕಾ ಹಾಕಿ ಎದ್ದು “ಗೋವಿಂದಾ ಗೋವಿಂದಾ” ಎನ್ನುತ್ತಾ ಒತ್ತಟ್ಟು ಮಲಗಿಕೊಂಡನು. ತಿಪ್ಪಾಶಾಶ್ತ್ರಿಯು ಅಲ್ಲಿಯೇ ಇರುತ್ತಿದ್ ನಷ್ಟೇ… ಜೋಯಿಸರೇ ಪ್ರಶ್ನ ಭಾವದಲ್ಲಿ ಏನು ಕಾಣುತ್ತದೆ ಹೇಳಿರೆಂದು ಶಿವರಾಮಶೆಟ್ಟಿಯು ಕೇಳಿದಾಗ ಈ ಸಮಯ ಪ್ರಶ್ನೆ ಹೇಳಲಿಕ್ಕೆ ಯೋಗ್ಯವಾದುದಲ್ಲ. ಅರುಣೋದಯವಾಗಿ ಹೋಯಿತು. ಮುಖ ಮಜ್ಜನಾದಿಗಳಿಂದೆ ಶುಚಿರ್ಭೂತನಾಗುವ ಮುಂಚೆ ಯೇ ಪ್ರಶ್ನೆ ನೋಡಲಿಕ್ಕೆ ಅಸಾಧ್ಯವೆಂದು ಬೇಗನೆ ಮಠಕ್ಕೆ ಬಂದು ನೋಡಲು ಸೂರ್ಯನಾರಾಯಣನು ಅಲ್ಲಿರಲಿಲ್ಲ. ಅವನು ಆಭರಣ ಮೊದಲಾದ ಸಕಲ ಒಡವೆಗಳನ್ನು ಕಟ್ಟಿಕೊಂಡು ಹೊರಟುಹೋದ ಹಾಗೆ ಸ್ಪಷ್ಟವಾಗಿ ತೋರಿ ಬಂತು. ದಂಡಕಾಷ್ಟವನ್ನು ಮುರಿದು ಎದುರಿರುವ ಕೆರೆಯಲ್ಲ ಬಿಸಾಡಿತ್ತು. ತಿಪ್ಪಾಶಾಸ್ತ್ರಿಯ ಹಿಂದೆಯೇ ಬಂದ ವಾಗ್ದೇವಿಯೂ ಶೃಂಗಾರಿಯೂ ಸೂರ್ಯ ನಾರಾಯಣನ ಪಲಾಯನದ ಸಂಗತಿಯನ್ನು ತಿಳಿದು ವೆಂಕಟಸುಬ್ಬಿಯನ್ನು ಈ ಗೃಹಸ್ತನೇ ಹಾರಿಸಿಕೊಂಡು ಹೋದನೆಂದು ಬಹಳ ಚಿಂತೆಯನ್ನು ತಾಳಿ ತಮ್ಮ ಮೇಲೆ ಇನ್ನೆಂಥ ಅಪಾಯ ಬರುವದೊ ಎಂಬ ಭೀತಿಯಿಂದ ನಡುಗಲಿಕ್ಕೆ ತೊಡಗಿದರು.

ಎಲ್ಲಿ ಹುಡುಕಿದರೂ ವೆಂಕಟಸುಬ್ಲಿಯು ಸಿಕ್ಕಲಿಲ್ಲ. ಇದ್ದ ಬಾವಿ, ಕೆರೆ, ಹೊಂಡ ಕಾಡು ಶೋಧಿಸಿ ನೋಡಿದರೂ ವ್ಯರ್ಧ ಪ್ರಯಾಸಪಟ್ಟ ಹಾಗಾ ಯುತು. ಶಿವರಾಮಶೆಟ್ಟಿಯೂ ಅವನ ಕುಟುಂಬದವರೂ ವ್ಯಾಕುಲವನ್ನು ತಡೆಯಲಾರದೆ ಶುದ್ಧ ಮರುಳರಂತೆ ವರ್ತಿಸಲಿಕ್ಕಾದರು. ಅವಳು ಕಳ್ಳರ ಕೈಗೆ ಸಿಕ್ಕಿ ಘಾಸಿಯಾದಳೋ? ಪುಂಡರು ಹೊಂಚು ಕಾಕಿ ಅವಳನ್ನು ಎತ್ತಿ ಕೊಂಡು ಹೋದರೊ? ತಾನಾಗಿಯೇ ಒಳ್ಳೇ ಸಂದರ್ಭವನ್ನು ನೋಡಿ ಸೊಕ್ಕಿನಿಂದ ಯಾರ ಹಿಂದೆಯಾದರೂ ನಡದುಬಿಟ್ಟಳೊ? ಮಂಕುಬೂದಿ ಯನ್ನು ತಳಿದು ಯಾವನಾದರೂ ಕೈವಶ ಮಾಡಿಕೊಂಡು ನಡೆದುಬಿಟ್ಟನೊ? ಎಂಬ ಹಲವು ಸಂದೇಹಗಳು ಅವರ ಮನಸ್ಸಿನಲ್ಲಿ ಗಲಿಬಿಲಿಯನ್ನು ಹುಟ್ಟಿಸಿದವು.

ಇದರ ಗುಟ್ಟು ತಿಳಿಯುವ ಹಾಗಿನ ವರ್ತಮಾನ ಕೊಂಚವಾದರೂ ಹೇಳುವವರಿಲ್ಲವಷ್ಟೇ ಎಂದು ವ್ಯಥೆಪಡುತ್ತಾ ಇರುವ ಸಮಯದಲ್ಲಿ ಯಾರೋ ಒಬ್ಬನು ಬಂದು ಮಠದಲ್ಲಿ ಸೂರ್ಯನಾರಾಯಣನು ಕಾಣುವದಿಲ್ಲವಂತೆ ಎಂದನು. ಆ ವದಂತಿಯ ನಿಜತ್ವವನ್ನು ತಿಳಕೊಂಡು ಬರುವದಕ್ಕೆ ಅವನ ತಮ್ಮನೇ ಹೋಗಿ ನೋಡಿ ಮರಳಿಬಂದು ಅನುಮಾನ ನಿವೃತ್ತಿಮಾಡಿದನು. ಸರಿ. ಆ ಅರ್ಜುನ ಸನ್ಯಾಸಿಯು ತನ್ನ ಮೋಹದ ತಂಗಿಯನ್ನು ಎತ್ತಿ ಹಾಕಿದ ನೆಂದು ಅವನಿಗೆ ಖಚಿತವಾಯಿತು. ತಿಪ್ಪಾಶಾಸ್ತ್ರಿಗೂ ಅವನ ಸಂಗಡಿಗರಿಗೂ ಆಶ್ರಯ ಕೊಟ್ಟು ತಂಗಿಯನ್ನು ಕಳಕೊಂಡು ಮನೆತನದ ಮರ್ಯಾದೆಗೆ ವಟ್ಟ ತಂದದ್ದಕ್ಕಾಗಿ ಶಿವರಾಮಶೆಟ್ಟಿಯು ಪಟ್ಟ ಪಶ್ಚಾತ್ತಾಪಕ್ಕೆ ಮಿತಿಯೇ ಇಲ್ಲ. ಒಮ್ಮೆ ಆ ಮೂವರನ್ನು ಸೀಳಿಬಿಡಲೋ ಎಂಬಷ್ಟು ಸಿಟ್ಟು ಬಂತು. ಆದರೆ ವಿವೇಕಿಯಾವ ಅವನು ಸಮಾಧಾನ ತಾಳಿದನು. ಏವಂಚ ಅವರ ಮುಖಾವಲೋಕನವನೇ ಆಗಬಾರದು. ಅವರನ್ನು ಕೂಡ್ಲೆ ಹೊರಡಿಸಿ ಬಿಡೆಂದು ಚಾಕರರಿಗೆ ಅಪ್ಪಣೆಮಾಡಿದನು. ಆ ಅನುಜ್ಞೆ ಯಂತೆ ಅವರು ಸಾವಾಕಾಶವಿಲ್ಲದೆ ವರ್ತಿಸಿದರು. ತಿಪ್ಪಾಶಾಸ್ತ್ರಿಯೂ ವಾಗ್ದೇವಿಯೂ ಶೃಂಗಾ ರಿಯೂ ಗಂಟುಮೂಟೆ ಕಟ್ಟಿ ನಿಮಿಷಾರ್ಧದಲ್ಲಿ ಆ ಹಳ್ಳಿಯನ್ನು ಬಿಟ್ಟು ಪಾರಾಗಿ ದೇವರ ದಯದಿಂದ ತಮ್ಮ ಜೀವ ಉಳಿದ ಹಾಗಾಯಿತೆಂದರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಾಧಿ
Next post ಕಾರ್‍ಗಿಲ್ ಹಾಡು

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…