ವಾಗ್ದೇವಿ – ೫೭

ವಾಗ್ದೇವಿ – ೫೭

ಸೂರ್ಯನಾರಾಯಣನು ವೆಂಕಟಸುಬ್ಬಿಯನ್ನು ಕರಕೊಂಡು ಹೇಮಳ ದ್ವೀಪಕ್ಕೆ ಹೋದನೆಂಬುದು ವಾಚಕರಿಗೆ ಇದರ ಮೊದಲೇ ತಿಳಿದು ಬಂತಲ್ಲ. ಅಲ್ಲಿ ಅವನು ಹ್ಯಾಗೆ ಪರಿಣಾಮ ಹೊಂದಿದನೆಂಬ ಸಮಾಚಾರವನ್ನು ತಿಳ ಕೊಳ್ಳುವದಕ್ಕೆ ಸಕಲರಿಗೂ ಕುತೂಹಲವಿರುವದು. ಆದುದರಿಂದ ಈ ವಿಷ ಯವಾಗಿ ಪ್ರಸ್ತಾಪಿಸುವದು ಉಚಿತವಾಗಿದೆ. ಅವನು ತಾನೊಬ್ಬ ಬನಿಯನೆ ನ್ನಿಸಿ ಗೋವರ್ಧನ ದಾಸ ಸೆಟ್ಟಿ ಎಂಬ ಹೆಸರು ಹಾಕಿಕೊಂಡನು. ವೆಂಕಟ ಸುಬ್ಬಿಯು ತುಳಸಿಬಾಯಿಯೆಂಬ ನಾಮವನ್ನು ಧರಿಸಿಕೊಂಡಳು. ಇವರು ಭಯತರೂ ನ್ಯಾಯವಾದ ಗಂಡಹೆಂಡರೆನ್ನಿಸಿಕೊಂಡು ಏಕಗೃಹಕೃತ್ಯದಲ್ಲಿ ಏಕಪಾತದಲ್ಲಿ ಬಹು ಅನುರಕ್ತಿಯಿಂದ ನಡಕೊಂಡರು. ಅವರಿಬ್ಬರ ಕೈಯ ಲ್ಲಿಯೂ ಗುಪ್ತಧನ ಸಾಕಷ್ಟು ಇತ್ತು. ಅದರ ಬಲದಿಂದ ಸೂರ್ಯನಾರಾ ಯಣನು ಪ್ರಥಮದಲ್ಲಿ ಆ ದ್ವೀಪದಲ್ಲಿ ವಾಡಿಕೆ ಇರುವ ಕ್ರಮವನ್ನು ಅವ ಲಂಬಿಸಿ ಒಂದು ದ್ರಾಕ್ಷೆ ತೋಟವನ್ನು ಕ್ರಯಕ್ಕೆ ಪಡಕೊಂಡು ಅದನ್ನು ವೃದ್ಧಿ ಪಡಿಸಿ ದ್ರಾಕ್ಷೆ ಬೆಳೆಯು ಪುಷ್ಟಿಯಾಗಿ ಸಿಕ್ಕ ತೊಡಗಿದ್ದರಿಂದ ವಿಳಂಬ ವಿಲ್ಲದೆ ಹಣದ ರಾಶಿಹಾಕಿದನು. ದ್ರವ್ಯಬಲ ಏರಿದ ಹಾಗೆ ವ್ಯಾಪಾರದ ಪರಿಮಿತವನ್ನು ಹೆಚ್ಚಿಸಿ ನಷ್ಟವೆಂದರೇನೆಂದು ತಿಳಿಯದೆ. ವರ್ಷ ವರ್ಷ ಯಥೇಚ್ಛ ಧನವನ್ನು ಸಂಪಾದಿಸಿ ನಾಲ್ಕೈದು ವರ್ಷಗಳಲ್ಲಿ ಲಕ್ಷಾಧಿಪತಿಯಾಗಿ ಜೋಡು ಕುದುರೆ ಸಾರಟು ಏರಿ ಮೆರೆದನು. ಹಾಗೆಯೇ ವೆಂಕಟ ಸುಬ್ಬಿ ತನ್ನ ಗೆಳೆಯನ ಒಡನಾಟದಲ್ಲಿ ಅಪರಿಮಿತ ಸುಖಾನಂದವನ್ನು ಅನು ಭವಿಸಿ ಸೂರ್ಯಚಂದ್ರರಂತ ತೇಜಸ್ಟಿಗಳಾದ ಇಬ್ಬರು ಗಂಡು ಮಕ್ಕಳನ್ನು ಪಡೆದಳು. ಅವರಿಗೆ ರಾಮಶೆಟ್ಟಿ ಲಕ್ಷ್ಮಣಶೆಟ್ಟಿ ಎಂಬ ಹೆಸರುಗಳನ್ನು ಇಡೋ ಣಾಯಿತು. ಈ ಮುದ್ದು ಮಕ್ಕಳನ್ನು ನೋಡಿದ ಮಾತ್ರದಿಂದ ಪ್ರವಾಸದ ಚಿಂತೆಯು ಅವರಿಬ್ಬರಿಂದಲೂ ದೂರ ಹೋಯಿತು. ಇನ್ನು ತಾವು ಇದೇ ತಮ್ಮ ಸ್ವದೇಶವನ್ನಾಗಿ ಮಾಡಿ ಬದುಕಿಕೊಂಡರೆ ಮರ್ಯಾದೆ ಉಳಿಯುವದ ಲ್ಲದೆ ಊರಿಗೆ ಮರಳಿದರೆ ತಮ್ಮ ಸ್ವರೂಪಕ್ಕೆ ಚಿಕ್ಕಾಸು ಬೆಲೆ ಕಟ್ಟುವರೆಂದು ಜನ್ಮಭೂಮಿಯ ನೆನಪೇ ಬಿಟ್ಟುಬಿಟ್ಟರು. ಸೂರ್ಯನಾರಾಯಣನ ವೈಭ ವವು ಪೂರ್ಣಮಿ ಚಂದ್ರನಂತೆ ಪ್ರವರ್ಧಮಾನವಾಗಿ ಇಡೀ ದ್ವೀಪದಲ್ಲಿ ಇಷ್ಟು ದೊಡ್ಡ ಮನುಷ್ಯ ಇನ್ನೊಬ್ಬನಿರುವದಿಲ್ಲವೆಂಬಂತೆ ಅನೇಕರು ಹೇಳುವವರಾ ದರು. ಅವನ ಸದ್ಗುಣಗಳಿಗೆ ಬಹುಮಂದಿ ಸೋತರು. ಹಾಗೆಯೇ ವೆಂಕಟ ಸುಬ್ಬಿಯ ಗುಣಗಳು ಶ್ಲಾಘನೀಯವಾದವುಗಳೇ. ಗಂಡಗೆ ಯೋಗ್ಯವಾದ ಜತೆಯೆಂದು ಸರ್ವರೂ ಹೊಗಳಲಾರಂಭಿಸಿದರು. ವೆಂಕಟಸುಬ್ಬಿಯ ತಾಯಿ ಯು ಮೊದಲೇ ಸತ್ತು ಹೋಗಿದ್ದಳು. ಆದುದರಿಂದ ಅವಳಿಗೆ ಸ್ವದೇಶದ ಕಡೆಗೆ ಮನಸ್ಸು ಎಳಿಯುತ್ತಿದ್ದಿಲ್ಲ.

ಸೂರ್ಯನಾರಾಯಣಕನಿಗೆ ತನ್ನ ಪ್ರಿಯತಾಯಿಯ ನೆನಪು ದಿನಕ್ಕೆ ಮೂರು ಸಲ ಬರುತ್ತಿತ್ತು. ತ್ರಿಕಾಲವೂ ಅವಳ ನೆನಪು ಮಾಡಿಕೊಳ್ಳುವದೇ ಹೊರ್ತು ಅವಳನ್ನು ಒಮ್ಮೆ ಕಂಡು ಅವಳ ವ್ಯಾಕುಲವನ್ನು ಪರಿಹರಿಸಲಕ್ಕೆ ಸಂದರ್ಭ ಸಿಕ್ಕಲಿಲ್ಲವೆಂಬ ದೊಡ್ಡ ವ್ಯಥೆಯು ಅವನಿಗೆ ಹಿಡಕೊಂಡಿರುತ್ತಿತ್ತು. ಒಂದೇ ಒಂದು ದಿನವಾದರೂ ವೆಂಕಟಸುಬ್ಬಿಯು ಅವನನ್ನು ಅಗಲಿರಲಿಕ್ಕೆ ಒಡಂಬಡುವವಳಲ್ಲ. ಊರಿನ ಪ್ರಸ್ತಾಪ ಅವನು ಮಾಡಿದರೆ ಅವನನ್ನು ಮನೆಯಿಂದ ಬೀದಿಗೆ ಇಳಿಯಲಿಕ್ಕೆ ಬಿಡವಲ್ಲಳು ಯಾಕೆಂದರೆ ತಾಯಿಯನ್ನು ನೋಡುವದಕ್ಕೆ ಹೊರಟು ಹೋದರೆ ತನ್ನ ಹಂಬಲಿಲ್ಲದೆ ತಿರುಗಿ ಬರಲಿಕ್ಕಿಲ್ಲ ವೆಂಬ ಹೆದರಿಕೆಯು ಅನಳಿಗೆ ಘಟ್ಟಿಯಾಗಿ ತಗಲಿ ಕೊಂಡಿತ್ತು. ರಾತ್ರೆ ಕಾಲ ಫಿದ್ರೆಯಲ್ಲಿ “ಅಮ್ಮ್ಮಾ ಅಮ್ಮಾ ನಿನ್ನ ಮುಖಾವಲೋಕನದ ಸುಖ ಎಂದು ದೊರಕುವುದು? ನಾನು ಕೇವಲ ಕಡುಪಾಪಿಯಾಗಿ ನಿನ್ನ ಉದರದಲ್ಲಿ ಜನಿ ಸಿದೆ.” ಎನ್ನುತ್ತಾ ನಿಟ್ಟುಸುರು ಬಿಟ್ಟು ಘಟ್ಟಿಯಾಗಿ ರೋದನ ಮಾಡುವದನ್ನು ಕಂಡು ವೆಂಕಟಸುಬ್ಬಿಯು ಅವನಿಗೆ ಮೈತಟ್ಟಿ ಎಬ್ಬಿಸಿ ಕೆಟ್ಟ ಕನಸು ಕಟ್ಟಿ ತೇನೆಂದು ವಿಚಾರಿಸಿದರೆ ಹಾಗೇನೂ ಇಲ್ಲವೆಂದು ಪುನಹ ನಿದ್ರಾರೂಪವನ್ನು ತಾಳಿಕೊಳ್ಳುವನು. ಹಲವು ಸರ್ತಿ ಇಂಥಾ ದೃಷ್ಟಾಂತಗಳನ್ನು ಕಂಡು ಅವಳಿಗೆ ಕನಿಕರ ಹುಟ್ಟಿ ತನ್ನ ಅಂತಸ್ತವನ್ನು ತಿಳಿಸಲಿಕ್ಕೆ ಅಂಜುವ ಕಾರಣ ವನ್ನು ಬಹು ಪ್ರೀತಿಯಿಂದ ಕೇಳಿದಾಗ ಅವನು ಸಣ್ಣ ಮಗುವಿನಂತೆ ಎಡೆ ಬಿಡದೆ ಅತ್ತು ತಾಯಿಯನ್ನು ಒಂದು ಸಲನೋಡಿ ತನ್ನ ಸಂಗಡ ಬಂದರೆ ಅವಳನ್ನು ಕರಕೊಂಡು ಬರುವೆನೆಂಬ ಆಶೆಯು ತನುವಿಗೆ ಸುತ್ತು ಹಾಕಿ ಕೊಂಡಿದೆ. ಅದನ್ನು ಪೂರೈಸಿಕೊಳ್ಳುವದಕ್ಕೆ ಸಂದರ್ಭ ಸಿಕ್ಕದೆ ಬಳಲುವದಾ ಯಿತೆಂದನು. ತನ್ನಿಂದ ಅಡ್ಡಿಯಾಗಿ ತಾಯಿಮಕ್ಕಳ ಸಂದರ್ಶನವು ನಿಂತು ಹೋಯಿತೆಂಬ ಅಪವಾದ ಬರಬಾರದು; ಎರಡು ವಾರಗಳಷ್ಟು ಸಮಯದಲ್ಲಿ ಮರಳದಿದ್ದರೆ ತಾನು ಮಕ್ಕಳ ಸಮೇತ ಹೊರಡುವೆನೆಂದು ವೆಂಕಟಸುಬ್ಬಿಯು ಹೇಳಿದಳು. ಒಡನೆ ಅವನು ತಥಾಸ್ತು ಎಂದು ಹಡಗ ಪಯಣವನ್ನು ಬೆಳಸ ಲಿಕ್ಕೆ ಹವಣಿಸಿದನು.

ವಾಗ್ದೇವಿಯು ಪ್ರಾಣತ್ಯಾಗ ಮಾಡುವ ಆಲೋಚನೆಯಲ್ಲಿಯೇ ಇದ್ದಳು. ಹ್ಯಾಗೆ ವದ್ದಾಡಿದರೂ ಕೆರೆ ಬಳಿಯ ಜನ ಸಮೂಹ ತಪ್ಪುವದಿಲ್ಲ. ವೈಶಾಖಬಹುಳ ಅಮಾವಾಸ್ಯಾ ದಿನ ಸೂರ್ಯ ಗ್ರಹಣ ಬಂತು. ಅಂದು ಪುಣ್ಯ ಕಾಲದಲ್ಲಿ ಸ್ಪಾನಮಾಡುವದಕ್ಕೆ ಅಬಾಲವೃದ್ಧರು ಸಮುದ್ರದ ಬಳಿಗೆ ಹೋದರು. ಶೃಂಗಾರಿಯು ಪಂಡಿತನ ಸಮೇತ ಅಲ್ಲಿಗೆ ತಾನೇ ಹೋಗಿರುತ್ತಿ ದ್ದಳು. ವಾಗ್ದೇವಿಗೆ ಶೃಂಗಾರಿಯು ಕರದಾಗ ತಾನ ದೇಹಾಯಾಸದಲ್ಲಿರು ವದಾಗಿ ಉತ್ತರ ಕೊಟ್ಟಳು. ಕೆರೆ ಬಳಿಯಲ್ಲಿ ಯಾರೂ ಇಲ್ಲದೆ ಇರುವ ಇದೇ ಸಮಯವು ತನ್ನ ಗುಪ್ತ ಉದ್ದೇಶಕ್ಕೆ ಸಮುಚಿತವಾದದ್ದೆಂದು ಸಂತೋಷ ಪಟ್ಟು ಪಂಡಿತನ ಮನೆಯಿಂದ ಹೊರಟು ಕೆರೆದಡದಲ್ಲಿ ನಿಂತು ಕೊಂಚ ಸಮಯ ಚನ್ನಾಗಿ ಸುತ್ತು ಮುತ್ತು ನೋಡಿದಳು. ಯಾರೂ ಸಮೀಪವಿ ದ್ದಂತೆ ಕಂಡು ಬರಲಿಲ್ಲ. ಕಣ್ಣೀರು ಸುರಿಸುತ್ತಾ ತನ್ನಷ್ಟಕ್ಕೆ ಅವಳು ಹೇಳ ತೊಡಗಿದ್ದೇನೆಂದರೆ-

“ಹೇ ನನ್ನ ಮುದ್ದು ಮಗ ಸೂರ್ಯನಾರಾಯಣ, ನಿನ್ನ ಒಳ್ಳೇತನ ವನ್ನು ಹಾರೈಸಿ ಬಹಳ ಪ್ರಯಾಸಪಟ್ಟು ದೊಡ್ಡ ದೊಡ್ಡ ಸಂಕಷ್ಟಗಳಿಂದ ನಿನ್ನನ್ನು ತಪ್ಪಿಸಿ ಸನ್ಯಾಸ ಪಟ್ಟಕ್ಕೆ ಯೋಗ್ಯನಾಗಿ ಮಾಡಿದೆ. ಮಿತಿಮಾರಿ ಹಣ ವೆಚ್ಚಮಾಡಿದೆ. ಜಯಪ್ರಾಪ್ರಿಯಾಯಿತು. ಆದರೆ ಅದರ ರಭಸವು ತಣಿಯುವಷ್ಟರೊಳಗೆ ಅಪಜಯವು ಬೆನ್ನಟ್ಟಿ ಪುನಃ ಹಲವು ಬಾಥೆಗಳಿಗೆ ಗುರಿಯಾದಾಗ್ಯೂ ಕಟ್ಟಕಡೆಯಲ್ಲಿ ದಯಾವಂತನಾದ ಶಿವರಾಮಸೆಟ್ಟಯ ಧರ್ಮದಿಂದ ಒಂದು ಮಠವನ್ನು ಮಾಡಿ ಕೊಂಡು ಜೀವನ ನಡಿಸಿಕೊಂಡಿ ರುವಾಗ ಕಡುಪಾಪಿಯಾದ ನನ್ನ ದುರಾದೃಷ್ಟದಿಂದ ಆ ಶೂದ್ರಸ್ತ್ರೀಯ ಸ್ನೇಹವನ್ನು ಬೆಳಸಿ ಅವಳ ಒಟ್ಟಿನಲ್ಲಿ ಕಳ್ಳನಂತೆ ಓಡಿ ಹೋಗಿ ನನ್ನ ಹೊಟ್ಟೆಗೆ ಶೂಲವನ್ನು ನಾಂಟಿಸಿದೆಯಾ! ಮುದಿ ಪ್ರಾಯದಲ್ಲಿ ನನ್ನನ್ನು ದಾರಿಯಲ್ಲಿ ಹಾಕಿ ಗೆಳತಿಯ ಮೇಳದಲ್ಲಿ ಮಗ್ನವಾಗಿದ್ದೀಯಾ! ಅಪ್ಪಾ ಮಗು! ನವಮಾಸ ನನ್ನ ಉದರದಲ್ಲಿ ವಾಸಮಾಡಿಕೊಂಡಿದ್ದ ನೆನಪೂ ಮರೆತು ಬಿಟ್ಟೆಯಾ!. ಬಹು ಪ್ರೀತಿಯಿಂದ ಸಾಕಿ ಸಲಹಿದ ಉಪಕಾರವನ್ನು ಸಲಿಸುವ ಕ್ರಮವು ಇದೇನಪ್ಪಾ! ಸದ್ಗುಣವಂತನೆಂದು ನನ್ನ ಶತ್ರುಗಳ ಬಾಯಿಯಿಂದಲೂ ಅನಿಸಿಕೊಂಡು ನನ್ನ ಮೇಲೆ ಮಾತ್ರ ನಿಷ್ಕಾರಣವಾಗಿ ಮುನಿದು ಒಂದು ಮಾತಾದರೂ ಹೇಳದೆ ಓಡಿ ಹೋದಿಯಾ! ಈಗ ನಾಲ್ಕೈದು ವರ್ಷಗಳು ಕಳೆದರೂ ತಾಯಿಯ ಹಂಬಲು ಲೇಶವಾದರೂ ಇಲ್ಲವೇ! ಒಂದು ದಿನವಾ ದರೂ ನನ್ನ ಮಾತು ಮೀರಿ ನಡಕೊಂಡವನಲ್ಲ. ಆಹಾ! ನಾನು ಕಡುಪಾಪಿ ಅಲ್ಲವಾದರೆ ಮುದಿಪ್ರಾಯದಲ್ಲಿ ಪುತ್ರವಿಯೋಗ ಸಹಿಸಕೂಡದೆ ಕಂಡವರ ಮನೆ ಬಾಗಲಲ್ಲಿ ಬಿದ್ದು ಕೊಂಡಿರುವ ದುರ್ಗತಿ ಬರುತ್ತಿತ್ತೇನು! ಇನ್ನು ಈ ಪ್ರಥ್ವಿಯಲ್ಲಿ ನನ್ನಂಥಾ ಪಾಪಿಮುಂಡೆಯು ಸಜೀವಳಾಗಿರಕೂಡದು. ಇದೇ ನನ್ನ ಅಂತ್ಯಕಾಲ. ನನ್ನ ಮೋಹದ ಕಂದನಾದ ಸೂರ್ಯನಾರಾಯಣನೇ ನೀನು ಎಷ್ಟು ಅಪರಾಧಗಳು ಮಾಡಿದ್ದರೂ ಮನಃಪೂರ್ತಿಯಾಗಿ ಕ್ಷಮಿಸಿರು ವೆನು. ನೀನು ದೀರ್ಫಾಯುವಾಗಿ ಪುತ್ರಪೌತ್ರರೊಡಗೂಡಿ ಐಹಿಕ ಸುಖಗ ಳನ್ನೆಲ್ಲಾ ಅಮಿತವಾಗಿ ಅನುಭವಿಸಿ ಶ್ರೀಪತಿಯ ದಯವನ್ನು ಪೂರ್ಣವಾಗಿ ಹೊಂದು. ಅಂತ್ಯದಲ್ಲಿ ಸಾಯುಜ್ಯವನ್ನು ಪಡಿ ಎಂದು ಬಹು ವಿನಯದಿಂದ ಸೂರ್ಯಚಂದ್ರರ ಸಾಕ್ಷಿಯಾಗಿ ಶ್ರೀಕಾಂತನನ್ನು ಬೇಡಿಕೊಂಡು ಇಗೋ ಪ್ರಾಣಬಿಡುತ್ತೇನೆ!”

ಹೀಗೆಂದು ವಾಗ್ದೇವಿಯು ಕೆರೆಯ ಮೆಟ್ಲುಗಳನ್ನು ಸಟ ಸಟನೆ ಇಳದು ಕಡೆ ಮೆಟ್ಟಿಲಲ್ಲಿ ನಿಂತು ನೀರಿಗೆ ಹಾರುವಷ್ಟರಲ್ಲಿ ಪಕ್ಷಿಯು ರಕ್ಷೆಗಳನ್ನು ಪಸರಿಸಿ ಮೂತಿಯಿಂದ ಮತ್ಸ್ಯವನ್ನು ಎತ್ತುವಷ್ಟು ಹಸ್ತಲಾಗವದಿಂದ ಒಬ್ಬ ಯೌವನಸ್ಥನು ವಾಗ್ದೇವಿಯ ಬೆನ್ನ ಹಿಂದಿನಿಂದ ಅದೇ ಮೆಟ್ಲುಗಳಿಂದ ಇಳದು ಅವಳನ್ನು ಅಪ್ಪಿಕೊಂಡು ಮೇಲಕ್ಕೆ ಎತ್ತಿ ನಿಲ್ಲಿಸಿ ಅಮ್ಮಾ! ದುರ್ಮು ರಣದಿಂದ ನರಕಕ್ಕೆ ಹೋಗುವ ದಾರಿಯನ್ನು ಹುಡುಕುತ್ತಿಯೇನು? ಎಂದನು ವಾಗ್ದೇವಿಯು-ಇದೇನು ಸ್ವಪ್ನಾವಸ್ಥೆಯ ಹಾಗಾಯಿತು. ಇವನ್ಯಾರೆಂದು ಹಿಂತಿರುಗಿ ನೋಡುವಾಗ ತನ್ನನು ಘಟ್ಟಿಯಾಗಿ ಬಿಗಿದಪ್ಪಿಕೊಂಡಿದ್ದ ಯೌವಸ್ಥನು ತನ್ನ ಮಗನೇ ಎಂದು ಪ್ರತ್ಯಕ್ಷವಾಯಿತು. ವಾಗ್ದೇವಿಯು ಪುಳಕಿತಳಾದಳು. ನನ್ನನ್ನು ಪರಾನ್ನಕ್ಕೆ ಹಾಕದೆ ನೀನು ಇರುವಲ್ಲಿಗೆ ಕರ ಕೊಂಡು ಹೋಗಿ ಬಿಡು. ಸತ್ತರೆ ಸುಟ್ಟು ಮೂರು ಮುಷ್ಟಿ ಬೂದಿಮಾಡಿ ಬಿಡಪ್ಪಾ ಮಗನೇ! ಎಂದು ವಾಗ್ದೇವಿಯು ಮಗನನ್ನು ಕೇಳಿಕೊಂಡಳು. ನಿನ್ನನ್ನು ಕರಕೊಂಡು ಹೋಗುವದಕ್ಕೇನೇ ಬಂದಿರುನೆನೆಂದು ತಾಯಿಯನ್ನು ತಾನು ಬಂದಿರುವ ಹಡಗದಲ್ಲಿ ಏರಿಸಿ ಶೃಂಗಾರಿಯು ಪಂಡಿತನನ್ನು ಬಿಟ್ಟು ಹೊರಡುವ ಸಂಭವವಿಲ್ಲವೆಂದು ತಿಳಿದ ಕಾರಣ ಅವಳನ್ನು ಮಾತಾಡಿಸದೆ ಹೇಮಳ ದ್ವೀಪಕ್ಕೆ ಹೊರಟುಹೋದನು.
*****
ಮುಗಿಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಿಂಚಿತ್ ಶೇಷ
Next post ಸಂಸಾರ ಪರಮಾತ್ಮ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…