ವಾಗ್ದೇವಿ – ೪೯

ವಾಗ್ದೇವಿ – ೪೯

ಕಟ್ಟಳೆಗನುಸಾರನಾಗಿ ಪ್ರಧಮತಃ ಮಾಡಬೇಕಾದ ಅಕ್ಕಿ ಮುಹೂ ರ್ತಕ್ಕೆ ದಿನ ನೋಡಬೇಕೆಂದು ಚಂಚಲನೇತ್ರರಿಂದ ಆಜ್ಞಾಪಿಸಲ್ಪಟ್ಟ ಮಠದ ಸೇವಕರೆಲ್ಲರೂ ಸಕಲ ಸಾಮಗ್ರಿಗಳನ್ನು ಸಂಗ್ರಹಿಸುವುದರಲ್ಲಿ ಅಮರಿದರು. ಒಮ್ಮೆ ಅವರನ್ನು ಪ್ರವೇಶವಾಗಲಿಕ್ಕೆ ಬಿಟ್ಟರೆ ಮುಂದಿ ಅವರನ್ನು ತಡಿಯು ವದು ಪ್ರಯಾಸಕರವಾದ್ದೆಂಬ ಯೋಚನೆಯು ರಫಘುವೀರರಾಯರಿಗೆ ಹತ್ತಿ ಕೊಂಡಿತು. ರಾಮದಾಸನ ಕೂಡೆ ಆಲೋಚನೆ ಮಾಡಿದಾಗ ಅವನು ತನ್ನ ಅಭಿಪ್ರಾಯ ಹಾಗೆಯೇ ಸರಿ ಎಂದನು. ಶಾಬಯ್ಯನೂ ಭೀಮಾಜಿಯೂ ಚಂಚಲನೇತ್ರರ ಹಿತಚಿಂತಕರೆಂದು ಎಲ್ಲರಿಗೆ ಗೊತ್ತದೆ. ಮನವಿ ಮೊದ ಲಾದ ವ್ಯವಹರಣೆ ಉದ್ಯಮಿಸಿದರೆ ಜಯ ದೊರೆಯದು. ನಾಲ್ಕು ಮಠದವ ರಿಗೆ ಜನಬಲವೇನಾದರೂ ಕಡಿಮೆ ಅದೆಯೇ? ಹತ್ತು ಐವತ್ತು ಅಥವಾ ನೂರು ದಾಂಡಿಗರನ್ನು ಕಟ್ಟಿಕೊಂಡು ದೇವಸ್ಥಾನದ ಎದುರು ಸಾಲಾಗಿ ನಿಂತುಕೊಂಡು ಒಳಗೆ ಹೊಕ್ಕರೆ ಸೊಂಟಮುರಿದು ಹಾಕುವೆವೆಂದು ದಿಗಿಲು ಹತ್ತಿಸಿಬಿದೋಣ. ಚಂಚಲನೇತ್ರರು ಬಿಡು ಅವರ ಅಜ್ಜನೂ ಓಡಿ ಹೋಗನೇ? ಏನಯ್ಯಾ ರಾಮದಾಸ ಹೇಳೆನಲಾಗಿ ವಾಸ್ತವ್ಯವೆಂದು ರಾಮ ದಾಸನು ಶಿರ ಸಂಕೇತಮಾಡಿದನು. “ಬೇರೆ ಉಪಾಯವೇನಾದರೂ ಇದ್ದರೆ ಹೇಳಿಬಿಡು. ನೀನು ಸಣ್ಣವನಾದರೂ ನಿನ್ನ ಬುದ್ಧಿ ಸಣ್ಣದೇನಯ್ಯಾ?” ಎಂದು ರಘುವೀರನು ಪುನಃ ಪ್ರಶ್ನೆಮಾಡಲಾಗಿ ತಮ್ಮದು ತೈಲ ಬುದ್ಧಿ ಸ್ವಾಮಿ; ಇನ್ನೊಂದು ಯೋಚನೆ ನನ್ನ ಬುದ್ಧಿಗೆ ತೋಚದೆಂದು ರಾಮದಾಸನು ಪ್ರತ್ಯುತ್ತರಕೊಟ್ಟು ಮೌನವಾದನು.

ನೃಸಿಂಹಪುರದ ಮರಾಧಿಪತಿಗಳು ಹೇಳದಂತೆ ಉಳಕಿ ಮೂರು ಮಠ ದವರು ನಡೆಯುವವರಾದ ಕಾರಣ ವಕೀಲನಿಗೆ ಅಗತ್ಯಬೀಳುವ ಅನುಜ್ಞೆ ಗಳೆಲ್ಲಾ ಅವರೊಬ್ಬರಿಂದಲೇ ಸಿಕ್ಕುವದಾಯಿತು. ತನ್ನ ಆಲೋಚನೆಯನ್ನು ಆ ಮರಾಧಿಪತಿಗಳಿಗೆ ಬರೆದು ತಿಳಿಸಿದರು. ಅದು ಅವರಿಗೆ ಒಡಂಬಡಿಕೆ ಯಾಯಿತು. ಇಂಧವನೊಬ್ಬ ಮುಂಚೆಯೇ ನಮಗೆ ಆಲೋಚನೆ ಕೊಡ ಲಿಕ್ಕೆ ದೊರಕುತಿದ್ದರೆ ಇಷ್ಟು ಕಷ್ಟಗಳು ಉಂಟಾಗುತಿದ್ದಿ ಲ್ಲವೆಂಬ ಪಶ್ಚಾತ್ತಾ ಸವು ಅವರಿಗೆ ಹುಟ್ಟುವದಾಯಿತು. ತಾಮಸವಿಲ್ಲದೆ ನೂರಾರು ದಾಂಡಿಗ ರಾದ ವಕ್ಷುಗಳು ರಘುವೀರರಾಯನ ಅಜ್ಞೆಯಂತೆ ನಡಕೊಳ್ಳ ಬೇಕೆಂಬ ನಿರೂಪವು ಮರದಿಂದ ಆವಾವ ಮುತ್ತಾಲಿಕ ಜನರಿಗೆ ಸಕಾಲದಲ್ಲಿ ಕಳು ಸೋಣಾಯಿತು. ರಘುವೀರನು ಆ ಪ್ರಕಾರ ಕೈ ವಶಮಾಡಿಕೊಂಡ ಜನರಲ್ಲಿ ತಾನು ನೆನಸಿದ ಕಾರ್ಯಕ್ಕೆ ಉಪಯುಕ್ತರಾದವರನ್ನು ಆರಿಸಿ, ಅವರು ಮಾಡಬೇಕಾದ ಕೆಲಸವನ್ನು ಕುರಿತು ಅವರಿಗೆ ಪ್ರಥಮತಾ ಬೋಧನೆ ಕೊಟ್ಟು, ಗುಟ್ಟು ಯಾರೊಬ್ಬರಿಗೂ ಸಿಕ್ಕದಹಾಗೆ ಬಹು ರಹಸ್ಯವಾಗಿ ವಿಶಿಷ್ಟ ಮುಂಜಾಗ್ರತೆ ತಕ್ಕೊಂಡನು. ಮತ್ತು ಈ ಉಪಾಯವು ಉತ್ಕೃಷ್ಟ ವಾದಕಾರಣ ಅದರಿಂದ ಚತುರ್ಮಠದವರು ಗೆಲ್ಲುವರೆಂಬ ಭರವಸೆಯಲ್ಲಿ ಇದ್ದನು. ಇಂಧಾದ್ದೊಂದು ವೈನ ನಡಿಸುವುದಕ್ಕೆ ಈ ವಕೀಲನು ಉದ್ಯುಕ್ತ ನಾಗಿರುವನೆಂಬ ಮರ್ಮವು ಭೀಮಾಜಿಗೆ ತಿಳಿಯದೆ ಹೋಗಿರಲಿಲ್ಲ. ಅವನ ಸರಿಮುಖ ಶಾಬಯ್ಯನೂ ಅದನ್ನು ಅರಿತವನಾಗಿದ್ದನು.

ಅಕ್ಕಿಯ ಮುಹೂರ್ತಕ್ಕೆ ನಿಶ್ಚಯಿಸಿದ ದಿನವು ಸಮೀಪಿಸಿತು. ಭೀಮಾ ಜಿಯು ಮುಂದಾಗಿ ತಿಳಿಸಿದ ಪ್ರಕಾರ ಏನಾದರೂ ತಂಟೆ ನಡೆಯದಂತೆ ಸರ್ಕಾರದವರು ಎಚ್ಚರದಿಂದಿರಬೇಕಾಗಿ ಚಂಚಲನೇತ್ರರ ಕಡೆಯಿಂದ ಕಾರ ಭಾರಿಯ ಮುಂದೆ ಒಂದು ಮನವಿಯು ಕೊಡಲ್ಪಟ್ಟಿತು. ಸರಿ ಸರಿ ಬೇಕಾದ ಮುಂಜಾಗ್ರತೆ ತಕ್ಕೊಳುವ ಹಾಗೆ ಕೊತ್ವಾಲನಿಗೆ ತಾಕೀದು ಕಳುಹಿಸೋ ಣಾಗುವದೆಂಬ ಅಭಯವಾಯಿತು. ಹಾಗೆಯೇ ಕೊತ್ವಾಲನಿಗೆ ನಿರೂಪವೂ ಬಂತು. ಅದು ತಲ್ಪಿದ ಕೂಡಲೇ ಅವನು ಜವಾನರ ಸಹಿತ ಅನುವಾದನು. ರಾಮದಾಸನು ಚಂಚಲನೇತ್ರರನ್ನು ತಡೆಯುವದಕ್ಕೆ ಕೂಡಿದ ಗುಂಪಿನಲ್ಲಿ ತಾನು ಸೇರಿದರೆ ಇಲಿಯು ಕತ್ರಿಯಲ್ಲಿ ಬೀಳುವಂತೆ ಸಿಕ್ಕಿಬಿದ್ದು ನಷ್ಟ ಭ್ರಷ್ಟ ಕಷ್ಟ ಪಡೆಯ ಬೇಕಾಗುವದು. ಹಿಂದೆ ಒಮ್ಮೆ ಅಜಾಗ್ರತೆಯಿಂದ ಪಟ್ಟ ವ್ಯಾಕುಲವೂ ದ್ರವ್ಯ ನಷ್ಟವೂ ಮರಿಯಲೇ ಇಲ್ಲವೆಂದು ಶ್ವಶುರಗೃಹಕ್ಕೆ ಅವನು ಏನೋ ಪ್ರಸ್ತದ ನೆವನದಿಂದ ತೆರಳಿದನು. ರವಷ್ಟಾದರೂ ಧೈರ್ಯ ವಿಲ್ಲದ ಇಂಧಾ ಬಾಯಿಬಡಕನು ಇದ್ದರೂ ಸಮ, ಇಲ್ಲದಿದ್ದರೂ ಲೇಸೆಂದು ರಘುವೀರರಾಯನು ರಾಮದಾಸನ ಮೇಲೆ ಸಿಟ್ಟಿನಿಂದ ಹಲ್ಲುಕಡಿಯುತ್ತಾ, ಸಿಪಾಯರಿಗೆ ಕವಾತು ಆಡಿಸುವ ಹಾಗೆ ತಾನು ಕೂಡಿಸಿದ ಅಕ್ರಮ ಕೂಟದ ವರನ್ನು ದೇವಾಲಯದ ಬಾಗಲಿನ ಒಳಗೂ ಹೊರಗೂ ಸಂದು ಮೂಲೆ ಯಲ್ಲಿಯೂ ಸಾಲಾಗಿ ನಿಲ್ಲಿಸಿ, ಜಯದ್ರಥನು ಚಕ್ರಬಿಂಬ ಕೋಟೆಯ ಬಾಗಿಲಲ್ಲಿ ನಿಂತಂತೆ ಎದುರು ಬಾಗಿಲ ಮುಂಭಾಗದಲ್ಲಿ ಮೀಶೆ ಮೇಲೆ ಕೈ ಆಡಿಸುತ್ತಾ ಅಲೆದಾಡಿಕೊಂಡಿದ್ದನು.

ವಾದ್ಯ ಘೋಷದಿಂದ ಕುಮುದಪುರದ ಮಠದ ಕಡೆಯಿಂದ ದೊಡ್ಡ ಸ್ತೋಮವು ಬರುವದಾಯಿತು. ಒಳಹೊಕ್ಕರೆ ಸೊಂಟ ಮುರಿದು. ಹಾಕುವೆನೆಂದು.. ರಘುವೀರನು ಬೆದರಿಸಿದರೂ ಕೇಳದೆ ಕೆಲವು ಕಟ್ಟಾಳುಗಳು ಒಳಗೆ ನುಗ್ಗಲಿಕ್ಕೆ ನೋಡುವಾಗ ಎದುರು ಪಕ್ಷದ ಕೂಟದವರಲ್ಲಿ ಒಬ್ಬರಿಬ್ಬರು ಅವರನ್ನ ದೂಡಲಿಕ್ಕೆ ಸನ್ನದ್ಧರಾದರು. ಕೂಡಲೇ ದೂರದಲ್ಲಿ ನಿಂತುಕೊಂಡಿದ್ದ ಭೀಮಾಜಿಯು ಸನ್ನೆಮಾಡಿದನು. ಯಾಕುಬಖಾನನು ಬೇರೆ ಜವಾನರ ಗುಂಪಿನ ಸಂಗಡ ತೀವ್ರವಾಗಿ ಕಲಹದ ಜಾಗಕ್ಕೆ ತಲಸಿ, ರಘುವೀರರಾಯನನ್ನು ಆದಿಯಲ್ಲಿ ಹಿಡಿದು, ಚತುರ್ಭು ಜಾಕಾರವಾಗಿ ಬಿಗಿದು ಬಿಟ್ಟನು. ಒಳಗೆ ನಿಂತುಕೊಂಡಿರುವ ನೂರಾರು ಮಂದಿ ಕಲಹಪ್ರಿಯರು ಬಡಿಗೆ ಕೋಲು ಮುಂತಾದ ಆಯುಧಗಳ ಸಮೇತ ದಿಕ್ಕಾಪಾಲಾಗಿ ಹಿಂಬಾಗಲಿನಿಂದ ಓಡಿದರು. ಮೂಡು ಪಡು ದಿಡ್ಡಿ, ಬಾಗಲುಗಳಿಂದ ಬೇರೆ ಕೆಲವರು ಭಯದಿಂದ ನಡುಗಿ ಹಿಂದೆ ನೋಡುತ್ತಾ ಓಟಹಾಕಿದರು. ಬಲಿಷ್ಕರು ಬಲಹೀನರ ಗುಂಪನ್ನು ಬಾಗಲಿನಿಂದ ಚದರಿಸಿ ಪಲಾಯೆನ ಮಾಡಿದರು. ಆ ಗೌಜಿಯಲ್ಲಿ ಹಲವರು ಬಿದ್ದು. ಮೂಗು ತುಟಿಗಳನ್ನು ಒಡಕೊಂಡು, ಕೈಗಳಿಂದ ರಕ್ತ ಪ್ರವಾಹವನ್ನು ಒರಸಿಕೊಳ್ಳುತ್ತಾ ದೇಶಭ್ರಷ್ಟರಾದರು.

ಅಂದು ರಘುವೀರರಾಯನಲ್ಲಿ ಆದ ಔತಣನನ್ನು ಚಂದಾಗಿ ಉಂಡು ಡೊಳ್ಳು ಉಬ್ಬಿಸಿಕೊಂಡು ಸರಿಯಾಗಿ ಉಸುರು ಬಿಡಲಿಕ್ಕು ಪ್ರಯಾಸವಾಗಿ ದೂರದಲ್ಲಿ ತಮ್ಮಷ್ಟಕ್ಕೆ ನಿಂತುಕೊಂಡಿರುವ ಕೆಲವು ಅಚಾರ್ಯರ ಮೇಲೆ ಭೀಮಾಜಿಯ ದೃಷ್ಟಿಯು ಬಿತ್ತು. ಅವನು ಅವರನ್ನು ಹಿಡಿಸಿದನು. ಒಬ್ಬೊಬ್ಬನ ಬೆನ್ನಿಗೆ ಒಂದೊಂದು ಮುಷ್ಟಿ ಪ್ರಹಾರ ಹದವಾಗಿ ಬೀಳುತ್ತಲೇ ಮಧ್ಯಾನ್ಹದಲ್ಲಿ ಉಂಡ ಮುಸ್ಕಿನೊಡೆ ಆಂಬೊಡೆ ಇತ್ಯಾದಿ ಭಕ್ಷಗಳ ತುಂಡು ಗಳು ಪಾಯಸದ ಸಮೇತ ಬಕ್ಕನೆ ವಮನರೂಪವಾಗಿ ಆಚಾರ್ಯರ ಬಾಯಿಗಳಿಂದ ಹೊರಟು, ಅವರ ಮೈ ಮೇಲೂ ಉಡುಪಿನ ಮೇಲೂ ಬಿದ್ದುವು. ಈ ವಿಚಿತ್ರವನ್ನು ನೋಡುವವರು ಚೆನ್ನಾಗಿ ನಕ್ಕರು. ಜಗಳ ಗಂಟರ ಕೂಟವನ್ನು ಕೂತ್ವಾಲನ ಪೇದೇರು ಮಾನಭಂಗ ಪಡಿಸಿ, ಅವರಿಗೆ ಬೀದಿ ಮೆರವಣಿಗೆಯಾಗುವ ರೀತಿಯಲ್ಲಿ ಕುಮುದಪುರದ ಮಠದ ಬಾಗಲಿ ಗಾಗಿ ಕೊತ್ವಾಲ ಚಾವಡಿಗೆ ಕೊಂಡುಹೋಗಿ ಅಲ್ಲಿ ಅವರ ಹೆಸರು ವಾಸ ಸ್ಥಾನಾದಿ ವಿವರಗಳನ್ನು ಬರಕೊಂಡು, ಅವರ ಹೇಳಿಕೆಗಳನ್ನು ಬರದಾದ ತರುವಾಯ ಅವರ ಮೇಲೆ ದೋಷಾರೋಪಕ ಪತ್ರವನ್ನು ಬರೆದು, ತ್ವರೆ ಯಾಗಿ ಕಾರಭಾರಿಯ ಸಮ್ಮುಖದಲ್ಲಿ ಸಾಲಾಗಿ ನಿಲ್ಲಿಸಿ, ವಿಚಾರಣೆಯನ್ನು ಪೂರ್ಣ ಮಾಡುವ ಪರಿಯಂತರ ಅವರನ್ನು ಜಾಮೀನಿನ ಮೇಲೆ ಬಿಡಲೇ ಕೈದಿನಲ್ಲಿ ಇಡಲೇ ಎಂದು ಕೊತ್ವಾಲನು ಅಪ್ಪಣೆಯನ್ನು ಕೇಳಿದನು. ಕೈದಿನಲ್ಲಿರಿಸೆಂದು ಆಜ್ಞೆ ಮಾಡಿದರೆ ದೊಡ್ಡದೊಂದು ಪುಕಾರೆಯಾಗುವದು; ವಿಮರ್ಶಾಧಿಕಾರಿಗೆ ದೂರು ಕೂಡಲಿಕ್ಕೆ ಮನಸ್ಸಿರುವ ಈ ಉಪದ್ರಕಾರಕ ಜನರನ್ನು ವೈನದಿಂದ ಸಿಕ್ಕಿಸಿ ಹಾಕುವದೇ ಲೇಸೆಂದು ಯೋಚಿಸಿ,–ಪರ್ವಾ ಯಿಲ್ಲ; ತಕ್ಕ ಜಾಮೀನು ಕೊಟ್ಟರೆ ಬಿಡದೆ ಇರಬೇಕ್ಯಾಕೆ? ಅಪರಾಧ ಸ್ಥಾಪನೆಯಾಗುವ ಪರಿಯಂತರ ಒಬ್ಬನನ್ನು ನಿರಾಪರಾಧಿಯಂತೆ ಭಾವಿಸ ಬೇಕಲ್ಲವೇ? ಎಂದು ಅರೆ ನೆಗೆಯಿಂದ ಕಾರಭಾರಿಯು ಕೊತ್ವಾಲನಿಗೆ ಆಜ್ಞಾ ಪತ್ರವನ್ನು ಕಳುಹಿಸಿದನು. ಭೀಮಾಜಿಯು ಎಲ್ಲರಿಗೂ ಜಾಮಾನು ತಕ್ಕೊಂಡು, ಮನೆಗೆ ಹೋಗಗೊಟ್ಟನು. ಮರುದಿವಸ ಕೊತ್ವಾಲನ ವಿಚಾರಣೆಗೆ ನೇಮಿಸಲ್ಪಟ್ಟಿತು.

ಈ ವದಂತಿಯು ಊರಿನಲ್ಲಿಯೂ ಪರ ಊರಿನಲ್ಲಿಯೂ ತುಂಬಿ, ಪ್ರತಿ ಒಬ್ಬನೂ ಬೇರೆ ಪ್ರಸ್ತಾಪ ಮಾಡದೆ, ಈ ಸುವಿಶೇಷವನ್ನೇ ಚರ್ಚೆ ಮಾಡು ವದರಲ್ಲಿ ಬಿದ್ದರು. ಚತುರ್ಮಠಾಧಿನತಿಗಳು ಅದನ್ನು ಕೇಳುವಾಗಲೇ ಮ್ಲಾನವದನರಾದರು. ಅವರಿಗೆ ಚೆನ್ನಾಗಿ ದಿಗಿಲು ಹುಟ್ಟಿ, ಮುಂದೇನು ಪಾಯ ಮಾಡುವದೆಂಬ ಯೋಚನೆ ಹಿಡಿಯಿತು. ಮತಾಭಿಮಾನದಿಂದ ಮುಖ್ಯವಾಗಿ ಒದ್ದಾಡುವ ರಘುವೀರರಾಯನ ಅವಸ್ಥೆಯು ಅವರಿಗೆ ಹೆಚ್ಚು ವ್ಯಾಕುಲವನ್ನುಂಟು ಮಾಡಿತು. ಅವನನಕ ಮೋರೆಯನ್ನೇ ತೋರಿಸಿ ಕೊಳ್ಳಲಿಕ್ಕೆ ನಾಚಿ, ತಾನು ಇಂಧಾ ನಿಂದೆಗೆ ಒಳಗಾದೆನೆಂಬ ಘೋರವಾದ ಚಿಂತಾವರ್ಣದಲ್ಲಿ ಮುಳುಗಿದನು. ರಾಮದಾಸನು ಈ ಅಪಜಯದ ವಾರ್ತೆಯನ್ನು ಶ್ವಶುರ ಗೃಹದಲ್ಲಿ ಕೇಳಿ, ಬೇಗ ಓಡಿ ಬಂದನು. ಅವನಿಗೆ ಹೆಚ್ಚು ಸಂತಾನ ಹುಟ್ಟಿರಲಿಲ್ಲ. ರಘುವೀರನ ಮೇಲೆ ಅವನಿಗೆ ಅಂತರ್ಯ ಶುದ್ಧವಿರಲಿಲ್ಲ. ಹಾಗೆಯೇ ಮಠದವರ ಮೇಲೆಯೂ ಅವನಿಗೆ ವಿಶ್ವಾಸ ಕಡಿಮೆಯಾಗಿತ್ತು. ತನ್ನೊಬ್ಬನನ್ನೇ ಮುಖ್ಯ ಮುತ್ತಾಲಿಕನಾಗಿ ನೇಮಿಸಿ ಸಾಕಷ್ಟು ದ್ರವ್ಯ ಸಹಾಯ ಕೊಡಲಿಕ್ಕೆ ಮಠದವರು ಅಂಜುವದ್ಯಾಕೆಂತ ಅವನಿಗೆ ತಿಳಿಯದೆ, ಅವರ ಮೇಲೆ ತಾಳಿಕೊಂಡ ವೈಮನಸ್ಸನ್ನು ಅವನು ಪ್ರಕಟವಾಗಿ ಕಾಣಿಸಿಕೊಳ್ಳುತ್ತಿದ್ದಿಲ್ಲ. ಒಟ್ಬಿನ ಮೇಲೆ ಹಲವು ಜನ ಸಮ ಗಾರರು ಕೂಡಿ ತೊಗಲಿನ ಹದ ಕೆಡಿಸಿದರೆಂಬ ಗಾದೆಯಂತೆ ಚತುರ್ಮಠದ ಕಡೆಯ ಪರಿವಾರದವರು ಹಿತಾಹಿತವನ್ನು ಯಥಾಯೋಗ್ಯವಾಗಿ ಗೃಹಿಸಿ ನೋಡದೆ, ಪೂರ್ವಾಪರ ತಿಳಿಯದೆ, ಸರಕಾರದ ಉದ್ಯೋಗಸ್ತರ ಮೇಲೆ ಅಪವಾದ ಹಾಕಿಬಿಟ್ಟು, ಸಕಲ ವಿಷಯಗಳಲ್ಲಿಯೂ ನಡೆಸಿದ ಸಾಧನೆ ಯಲ್ಲಿಯೇ ದೋಷ ಬಂದುದರಿಂದ ದುರ್ವಾಜ್ಯ ಪ್ರಿಯರೆಂಬ ದುರ್ನಾಮಕ್ಕೆ ತಮ್ಮ ಯಜಮಾನರನ್ನು ಯೋಗ್ಯರಾಗಿ ಮಾಡಿದರು.

ಭೀಮಾಜಿಯು ತನಗೆ ಒಪ್ಪಿದ ಪ್ರಥಮ ವಿಚಾರಣೆಯ ಕೆಲಸವನ್ನು ಪೂರ್ಣಮಾಡಿ, ಅಪರಾಧಿಗಳಲ್ಲಿ ರಘುವೀರರಾಯನನ್ನು ಪ್ರಥಮ ಸ್ಥಾನಕ್ಕೆ ಹಾಕಿಬಿಟ್ಟು ಉಳಕೆ ಜನರಲ್ಲಿ ಅವನ ಕರುಣಾಮೃತವನ್ನು ಬೇಡಿಕೊಂಡ ವರಿಗೆ ತುಂಟರಿಗೆ ತಡದಿಟ್ಟು, ಬಡಜನರ ಹೆಸರುಗಳನ್ನು ಪಾಪವೆಂದು ಬರಕೊಳ್ಳದೆ, ಮುಖ್ಯಸ್ಥರೆಂಬ ೪೦–೫೦ ಮಂದಿಯ ಮೇಲೆ ದೋಷಾರೋಪಣಾ ಪತ್ರವನ್ನು ಕಳುಹಿಸಿದನು. ಕಾರಭಾರಿಯ ಕಛೇರಿಗೆ ಅದು ತಲಪಿದೊಡನೆ ಅವನು ವಿಚಾರಣೆಯಾಗುವದಕ್ಕೋಸ್ಕರ ದಿನ ನಿಶ್ಚೈಸಿ ಅಜ್ಞಾಪತ್ರಗಳನ್ನು ಕೊಟ್ಟನು.

ತನ್ಮಧ್ಯೆ ಚಂಚಲನೇತ್ರರ ಕಡೆಯಿಂದ ಕೊಡಲ್ಪಟ್ಟ ಅಕ್ಕಿ ಮೂಹೂರ್ತ ಮುಂತಾದ ವಿಶಿಷ್ಟ ಕಾರ್ಯವು ಸಂಭ್ರಮದಿಂದ ನಿರ್ವಿಘ್ನವಾಗಿ ನಡೆಯಿತು. ಜೀಮಾಜಿಗೂ ಕಾರಭಾರಿಗೂ ವಿವಿಧ ಭಕ್ಷ ಬೋಜ್ಯಗಳನ್ನು ಹರವಿಗಳಲ್ಲಿ ತುಂಬಿ ಕಳುಹಿಸಿಕೊಡೋಣಾಯಿತು. ಆ ಕಾಲದ ನ್ಯಾಯ ವಿಧಾಯಕ ಸಭೆಯವರ ಕಾನೂನಿಗೆ ಅಸಮ್ಮತವಲ್ಲದ ವಸ್ತ್ರಾಭರಣ ಇತ್ಯಾದಿ ಉಚಿತವು ಕೊಡಲ್ಪಟ್ಟಿತು. ವಾಗ್ದೇವಿಯು ಆನಂದದಿಂದ ಉುಬ್ಬಿದಳು. ಸೂರ್ಯ ನಾರಾಯಣನು ತಾಯಿಯ ದುರ್ನಡತೆಯ ಫಲವನ್ನು ಬಹು ಬೇಗ ತಾನೇ ಉಣ್ಣ ಬೇಕಾಯಿತೆಂಬ ವ್ಯಸನವನ್ನು ಆಶ್ರಮವಾದಂದಿನಿಂದ ತಾಳಿಕೊಂಡಿ ದ್ದಾಗ್ಯೂ ಅದನ್ನು ಪ್ರಕಟವಾಗಲಿಕ್ಕೆ ಬಿಡದೆ ಮನಸ್ಸಿನಲ್ಲಿಯೇ ಇರಿಸಿ ಕೊಂಡಿದ್ದನು. “ಜಗಳವು ಆದಿಭಾಗದಲ್ಲಿಯೇ ತಲೆಯೋರಿಯದೆ. ಮುಂದೆ ಏನೇನು ನಡೆಯಲಿಕ್ಕದೆಯೋ? ತನ್ನನ್ನು ದೇವರು ಯಾಕೆ ಸೃಷ್ಟಿಸಿದನಪ್ಪಾ!” ಎಂಬ ಘೋರನಾದ ವ್ಯಾಕುಲದಿಂದ ಅವನು ದಿನೇ ದಿನೇ ಕ್ಷೀಣವಾಗುತ್ತಾ ಬಂದನು. ಇವನ ದೇಹಸ್ವಿತಿಯನ್ನು ನೋಡಿ, ಹಲವರು ಹಲವು ವಿಧದಲ್ಲಿ ಮಾತನಾಡಿಕೊಂಡರು. ಆದರ ಕಾರಣವು ವ್ಯಾಕುಲವೇ ಎಂಬ ಮರ್ಮವು ಅವನ ತಾಯಿಗೆ ಮಾತ್ರ ತಿಳಿಯಲಿಕ್ಕೆ ಸಂದರ್ಭವಿತ್ತು. ಚಂಚಲನೇತ್ರರಿಗೂ ಅದರ ಗುಟ್ಟು ತಿಳಿಯದೆ ವೈದ್ಯರನ್ನು ಕರಿಸಿ, ಅವನಿಗೆ ಪುಷ್ಟಿಯಾಗುವ ಮದ್ದು ಕೊಡಿಸಲಿಕ್ಕೆ ಏರ್ಪಾಡು ಮಾಡಿದರು.

ಹಣವಿನ ಮೇಲಿನ ಮೋಹದಿಂದ ಇನ್ನೂ ಹಿಂಜರಿದರೆ ಲೋಕಾಪ ವಾದಕ್ಕೆ ಬೀಳುವದಾಗುವದೆಂಬ ಭಯದಿಂದಲೂ ತನ್ನ ಪಾರುಪತ್ಯಗಾರನ ಆಳಿಯನಾಗಿ ಭೋಜನಾಲಯದಲ್ಲಿ ಶ್ರೀಪಾದಂಗಳ ಪಂಕ್ತಿಯಲ್ಲಿ ಮರ್ಯಾದೆ ಉಳ್ಳ ಪ್ರಥಮ ಎಡೆಯಲ್ಲಿ ಕೂತುಕೊಂಡು ಉಣ್ಣುವ ಯೋಗ್ಯತೆಯುಳ್ಳವ ನಾದ ರಘುವೀರರಾಯನೇ ಸಿಕ್ಚಿಬಿದ್ದಿರುವುದರಿಂದಲೂ ಬೇರೆ ಮಠದವರು ಈ ವಿವಾದದಲ್ಲಿ ಜಯ ಹೊಂದುವದಕ್ಕೆ ತನ್ನಷ್ಟು ಆತುರವುಳ್ಳವರಾಗಿರುವ ದಿಲ್ಲವಾದರೂ ಚಿಂತೆ ಇಲ್ಲ. ತಾನು ಅವರಂತೆ ಹೇಡಿತನ ಮಾಡಲಾಗದೆಂದು ನೃಸಿಂಹಪುರದ ಮಠಾಧಿಪತಿಗಳು ಬೇಕಾದಷ್ಟು ದ್ರವ್ಛಾನುಕೂಲವನ್ನು ಒದಗಿಸಿಕೊಟ್ಟು, ತನ್ನ ಪಾರುಪತ್ಯಗಾರನೇ ಸ್ವತಹ ಶತಪ್ರಯತ್ನಮಾಡಿ ಅಪರಾಧಿಗಳನ್ನು ವಿಮುಕ್ತರಾಗಿಮಾಡಬೇಕೆಂದು ಆಜ್ಞಾಪಿಸಿ, ವಿಚಾರಣೆಯ ಫಲವು ದಿನವಹಿ ತರಿಸಿಕೊಳ್ಳುವ ಹಾಗಿನ ಜಾಗ್ರತ ತಕ್ಕೊಂಡರು. ಪಾರು ಪತ್ಯಗಾರನು ಕುಮುದಪುರಕ್ಕೆ ಹೊರಟನು. ಒಂದೊಂದು ಪ್ರಕರಣಕ್ಕೆ ಒಬ್ಬೊಬ್ಬ ವಕೀಲನನ್ನು ನೇಮಿಸುವದು ಮಠದ ಘನತೆಗೆ ಅಯೋಗ್ಯವಾದು ದರಿಂದ ಮುಖ್ಯ ವಿವಾದದ ಅನುಭವ ಚಂದಾಗಿ ಉಳ್ಳವನಾದ ಕೋದಂಡ ಪಾಣಿರಾಯನನ್ನೇ ಮರಳಿ ಆರಿಸುವ ಯೋಚನೆಯಿಂದ ಅವನನ್ನು ಕಂಡು ಪ್ರಕೃತದ ವಿಚಾರದಲ್ಲಿ ಹ್ಯಾಗೆ ನಡಕೊಳ್ಳ ಬೇಕೆಂದು ಬುದ್ಧಿ ಮಾರ್ಗ ಕೇಳಿ ದಾಗ ಮುಂಚಿತವಾಗಿ ತನ್ನ ಆಲೋಚನೆ ಸಾಮ್ಯವನ್ನು ಮಡಗಬೇಕೆಂದನು ಸ್ವಾಮಿಗಳು ಫಲಮಂತ್ರಾಕ್ಷತೆಯನ್ನು ಪ್ರೀತಿಯಿಂದ ಆಶೀರ್ವಾದ ಪೂರ್ವಕವಾಗಿ ಕಳುಹಿಸಿಕೊಟ್ಟರುವರೆಂದು ಪಾರುಪತ್ಯಗಾರನು ಹೇಳಿದನು. “ಆಚಾರ್ಯರೇ! ಚಿನ್ನದ ಮಂತ್ರಾಕ್ಷತೆ ಮುಷ್ಟಿ, ತುಂಬಾ ಕೊಡುವ ಕಾಲ ಇದೇ ಅರಿಸಿನ ಹಚ್ಚಿದ ಅಕ್ಕಿ ಕಾಳು ಕೊಡುವದರಿಂದ ತೃಪ್ತಿಯಾಗದು. ಅದು ಹಾಗಿದ್ದರೂ ನಾನೇನಾದರೂ ಅಷ್ಟಿಷ್ಟು ಕೊಡಬೇಕೆಂದು ವಾಚಾಟ ಮಾಡುವವನಲ್ಲಿ ನನಗೆ ಬೇರೆ ಯಥೇಷ್ಟ ಕೆಲಸವಿರುವದರಿಂದ ಆಲೋ ಚನೆ ಸಾಮ್ಯ ಕೇಳಬಿಟ್ಟರೆ ಸ್ವತೇವ ತಮಗೆ ನನ್ನ ಮೇಲೆ ಉದಾಸೀನವಾಗಿ ಇನ್ನೊಬ್ಬ ವಕೀಲನ ಮನೆಗೆ ಹೋಗುವಿರೆಂದು ತಿಳಕೊಂಡೆನು.” ಹೀಗೆಂದು ಕೋದಂಡಪಾಣಿಯು ಉತ್ತರ ಕೊಟ್ಟನು. ಮರುದಿನ ಪಾರುಪತ್ಯಗಾರನು ಬಿಡಾರಕ್ಕೆ ಹೋಗಿ ವಕೀಲನಿಗೆ ಮನೋಲ್ಲಾಸವಾಗುವ ಹಾಗೆ ಹಣ ತುಂಬಿದ ಚೀಲ ಆವನ ಮುಂಭಾಗದಲ್ಲಿ ಇಟ್ಟನು. ಆಗ ಅವನ ಕಣ್ಣು ಕೋರವಿಸಿದವು. ಬೇರೆ ವಕೀಲನನ್ನು ಹುಡುಕುವದಕ್ಕೆ ಇನ್ನೊಮ್ಮೆ ಹೇಳಬಿಟ್ಟರೆ ದ್ರವ್ಯ ನಷ್ಟಕ್ಕೆ ಕಾರಣನಾಗುವದೆಂಬ ಭಯದಿಂದ ವಕೀಲನು ಪ್ರಕರಣದ ಪೂರ್ವಾಪರವನ್ನು ಚನ್ನಾಗಿ ಗ್ರಹಿಸಿ ನೋಡಿ, ಏನಂದನೆಂದರೆ- “ವಕೀಲನಾದ ರಘುವೀರನು ಕಲಹದ ಕಾಲದಲ್ಲಿ ಜಗಳಗಂಟರ ಕೂಟದ ನಾಯಕನಾಗಿ ಎಲ್ಲಗಿಂತಲೂ ಮುಂದೆ ನಿಂತು ಕಲಹವನ್ನು ಆರಂಭಿಸಿದ್ದು ದೊಡ್ಡ ಹುಚ್ಚು ತನನೇ. ಅನನ ಮೇಲೆ ಅಪರಾಧದ ಭಾರವು ಘೋರ ವಾಗಿರುವಂತೆ ತೋಚುತ್ತೆ. ವಕೀಲನಾಗಿ ಅಂಥ ಅಕ್ರಮ ಕೂಟದಲ್ಲಿ ಕೂಡಿಡೆನೆಂದು ಅವನು ಒಪ್ಪಿಕೊಂಡರೆ ಸಿಕ್ಕಿಬೀಳುವನು. ತಾನಲ್ಲಿರಲಿಲ್ಲ ವೆಂಬ ಸುಳ್ಳು ಸಾಧನೆಯಿಂದ ಕಾರ್ಯ ಮತ್ತಷ್ಟು ಕೆಡುವದು. ಆದಕಾರಣ ಸಣ್ಣದೊಂದು ಬುದ್ಧಿವಂತಿಗೆ ಮಾಡಬೇಕು. ನೃಸಿಂಹಪುರದ ಮಠದಲ್ಲಿ ಆತನಿಗೊಂದು ಉದ್ಯೋಗವಿರುವದರಿಂದ ಅವನು ಆ ಮಠದ ಕಡೆಯಿಂದ ನ್ಯಾಯವಾಗಿ ನಡೆಯಬೇಕಾದ ಕೆಲಸದಲ್ಲಿ ಅವರಿರುವುದರಿಂದ ಬಂದವನಲ್ಲದೆ ಜನರರನ್ನು ಕೂಡಿಸಿ, ಜಗಳ ಮಾಡುವದಕ್ಕೆ ಉದುಕ್ತವಾಗಿದ್ದವನಲ್ಲ. ಬೇರ ಬೇರೆ ಮಠದವರ ಕಡೆಯಿಂದ ಕೆಲವರು ಚಂಚಲನೇತ್ರರನ್ನು ತಡೆಯ ಲಿಕ್ಶೆ ಬಂದಿರಬಹುದು ಅದು ಅವರಿಗೆ ಸಹಜವಾಗಿ ಒಪ್ಪಿದ ಧರ್ಮವಾಗಿರುವ ದೆಸೆಯಿಂದ ಅವರಿಗೆ ಸಹಾಯಕನಾಗಿ ಒಬ್ಬನು ಬೇಕೇ? ಇಂಧಾದೊಂದು ಸಾಧನೆ ಮಾಡುವದರ ದ್ವಾರ ರಘುವೀರನನ್ನು ಅವನ ಅಪ್ರಬುದ್ಧತೆಯ ಬಾಧಕದಿಂದ ತಪ್ಪಿಸಲಿಕ್ಕೆ ಅನುಕೂಲವಿದೆ. ಬೇರೆಎಲ್ಲಾ ವಿಷಯಗಳಲ್ಲಿಯೂ ಆವಾವ ಕಾಲಕ್ಕೆ ಯುಕ್ತ ತೋರುವ ಸಾಧನೆಯನ್ನು ಮಾಡೋಣ. ಈ ಸೂಚನೆಗಳೆಲ್ಲವೂ ಪಾರುಪತ್ಯಗಾರಗೆ ಸರಿಯಾಗಿ ತೋರಿ ಬಂದುದರಿಂದ ಹಾಗೆಯೇ ವರ್ತಿಸಿ ರಘುವೀರರಾಯನನ್ನು ನೃಸಿಂಹಪುರದ ಮಠದಲ್ಲಿ ಕಾರ್ಯಸ್ತನೆಂಬ ದೊಡ್ಡ ಸ್ರತಂತ್ರ ಕರ್ತುವಾಗಿ ನೇಮಿಸೋಣಾಯಿತು.

ವಿಚಾರಣೆಗೆ ನೇಮಿಸಿದ ದಿನವು ಬಂದೇ ಬಂತು. ಅಂದು ಅಪರಾಧಿಗಳ ನ್ನೆಲ್ಲಾ ಸಾಲಾಗಿ ಕಾರಭಾರಿಯ ಸಮ್ಮುಖ ನಿಲ್ಲಿಸಿದರು. ಅವರ ಸಂಖ್ಯೆ ಯನ್ನೂ ಅವರ ಕಡೆಯ ವಕೀಲರ ವಿಡಂಬನವನ್ನೂ ರಘುವೀರರಾಯನ ಬಡಾಯಿಯನ್ನೂ ರಾಮದಾಸರಾಯನ ಉತಾವಳಿಯನ್ನೂ ನೋಡುವದ ಕ್ಕಾಗಿ ಬಹು ಮಂದಿ ಸಂದಣಿಸಿದರು. ಇಂಧಾ ಪ್ರಕರಣದಲ್ಲಿ ಸರ್ಕಾರವೇ ವಾದಿಯಾಗಿ ವ್ಯವಹರಿಸುವ ಪದ್ಧತಿಗನುಸಾರವಾಗಿ ಯಾಕುಬಖಾನನನ್ನು ಪ್ರಮಾಣಮಾಡಿಸಿ, ಸಾಕ್ಷಿಗಾರನಾಗಿ ವಿಚಾರಣೆಗೆ ನಿಲ್ಲಿಸೋಣಾಯಿತು. ಅವನು ಸಾಕ್ಷಿ ನುಡಿದ ಬಳಿಕ ಅಡ್ಡ ವಿಚಾರಣೆಗೆ ಅಪರಾಧಿಗಳ ಕಡೆ ವಕೀ ಲನು ತೊಡಗಿದಾಗಲೇ ಶಾಬಯ್ಯನು ಮೂಗಿನ ಸೊಳ್ಳೆಗಳನ್ನು ಉಬ್ಬಿಸಿ, ಹುಬ್ಬುಗಳನ್ನು ಗಂಟು ಹಾಕಿ, ಕಣ್ಣುಗಳನ್ನು ಕವಣೆ ಕಲ್ಲುಗಳಂತೆ ತಿರುಗಿ ಸಿಕೊಳ್ಳುತ್ತಾ, ನಿಷ್ಠೂರವಾದ ವಾಕ್ಕುಗಳಂದ ಕೋದಂಡಪಾಣಿಯನ್ನು ಗದರಿಸಿದನು. ವಕೀಲನು ಅದಕ್ಕೆಲ್ಲಾ ಗಣ್ಯಮಾಡದೆ, ತನ್ನ ಧರ್ಮವನ್ನು ತ್ಯಜಿಸಲಾರೆನೆಂದು ಹೆದರದೆ ಪ್ರಶ್ನೆಗಳನ್ನು ಮಾಡುತ್ತಾ ಇದ್ದನು. ಇವನ ಪ್ರಶ್ನೆಗಳು ಬಹು ಜಾಗ್ರತೆಯಿಂದಲೂ ಕೌಶಲ ಪೂರ್ವಕವಾಗಿಯೂ ಕೇಳೋಣಾಗುವ ದೆಸೆಯಿಂದ ಸಾಕ್ಷಿಗಾರರು ಕೊಂಚ ತಪ್ಪಿ ಬೀಳಲಿಕ್ಕೆ ಕಾರಣವಾಗಿ ಕಾರಭಾರಿಗೆ ಸಿಟ್ಟೀರಿ ಮಿತಿಮಾರಿ ಕುತ್ಸಿತ ಮಾತುಗಳಾಡಿದನು.

ಕೋದಂಡಪಾಣಿರಾಯನು ಬಹಳ ಕೋಪದಿಂದ ಈ ಮೊಕದ್ದಮೆ ಯನ್ನು ಕಾರಭಾರಿಯು ವಿಚಾರಣೆ ಮಾಡದಂತೆ ಆಜ್ಞೆಯಾಗಬೇಕಾಗಿ ಮೇಲಧಿಕಾರಸ್ಥರಿಗೆ ಮನನಿ ಮಾಡುವೆನೆಂದು ತಿಳಿಸಿ, ಮೊಕದ್ದಮೆಯನ್ನು ತತ್ಕಾಲಕ್ಕೆ ಬಾಕಿಯಲ್ಲಿಡಬೇಕೆಂದು ಬೇಡಿಕೊಂಡನು. ಇದಕ್ಕಾಗಿ ಒಂದು ವಾರದ ವ್ಯವಧಾನ ಸಿಕ್ಕಿತು. ಕಾರಭಾರಿಯ ಮೇಲೆ ಹೆಚ್ಚು ದೂರು ಕಾಣಿಸಿ ಕೋದಂಡಪಾಣಿಯು ಮನವಿಯನ್ನು ಬರೆದು, ವಿಮರ್ಶಾಧಿಕಾರಿಯ ಮುಂದೆ ಇರಿಸಿದನು. ಅವನು ಮೊಕದ್ದಮೆಯ ಲವಾಜಮೆಗಳನ್ನು ಕಾರಭಾರಿಯ ಕಚೇರಿಯಿಂದ ತರಿಸಿಕೊಂಡು, ಚನ್ನಾಗಿ ಪರಾಂಬರಿಸಿ, ಉಭಯ ಕಡೆ ವಕೀ ಲರ ಚರ್ಚೆಗಳನ್ನು ಕೇಳಿದ ಮೇಲೆ ಪ್ರಕರಣವನ್ನು ಕಾರಭಾರಿಯ ಕಚೇರಿ ಯಿಂದ ವರ್ಗಮಾಡುವದಕ್ಕೆ ಸಾಕಾದ ಕಾರಣಗಳ್ಳಾವದೂ ಕಂಡುಬರಲಿಲ್ಲ ವಾಗಿ ತೀರಿಸಿಬಿಟ್ಟನು. ಆಯಿತೇ! ಕೋದಂಡಪಾಣಿಯ ತಲೆಯಮೇಲೆ ಕೈ ಇಟ್ಟುಕೊಂಡು ತ್ವರೆಯಾಗಿ ಮನೆಗೆ ಬಂದು. ಇಂಥಾ ಹೇಸಿಕೆಯಲ್ಲಿ ಯಾಕೆ ಕೈ ಹಾಕಿದನೆಂಬ ಯೋಚನೆಯಲ್ಲಿ ರವಷ್ಟು ಖೇದಪಟ್ಟರು. “ಆದಷ್ಟು ಪ್ರಯತ್ನ ಮಾಡೋಣ; ಜಯಾಪಜಯವು ಕಕ್ಷಿಗಾರರ ಪುಣ್ಯದ ಮೇಲೆ ಹೊಂದಿಯದಲ್ಲವೇ” ಎಂದು ತನಗೆ ತಾನೇ ಸಮಾಧಾನ ಹೇಳಿಕೊಂಡನು ಮತ್ತು ಯಥಾ ಪ್ರಕಾರ ಕಾರಭಾರಿಯ ಮುಂದೆ ವ್ಯವಹರಿಸಲಿಕ್ಕೆ ಬಂದನು.

ಕಾರಭಾರಿಯು ತನ್ನ ಹಟವೇ ಮೆರೆಯಿತೆಂಬ ಹೆಗ್ಗಳಿಕೆಯಿಂದ ತುಚ್ಛ ಯುಕ್ತವಾದ ಮುಗುಳು ನಗೆಯಿಂದ ಕೋದಂಡಪಸಾಣಿಯನ್ನು ಕಡೆಗಣ್ಣಿ ನಿಂದ ನೋಡುತ್ತಾ, ಆವಾವ ಸಂದರ್ಭದಲ್ಲಿ ಅವನನ್ನು ಜರಿಯುತ್ತಾ ವಿಚಾ ರಣೆಯನ್ನು ನಡಿಸಿದನು. ರಾಮದಾಸನು ಆಗಾಗ್ಗೆ ಕೋಪದಿಂದ ನಡುಗಿ ದರೂ ಅನುತ್ತರತೆಯೇ ಭದ್ರವೆಂದು ಮರನೆಯಲ್ಲಿದ್ದವನಂತೆ ಕಾಣಿಸಿ ಕೊಂಡನು. ವಾದಿಯ ಕಡೆಯ ಸಾಕ್ಷಿಯೆಲ್ಲಾ ತಕ್ಕೊಂಡು ಉಭಯ ಕಡೆ ವಕೀಲರ ಚರ್ಚೆಗಳನ್ನು ಕೇಳಿದ ಮೇಲೆ ಕಾರಭಾರಿಯು ಅಪರಾಧಿಗಳೆಲ್ಲರ ಮೇಲೂ ಆಪಾದನ ಪತ್ರವನ್ನು ಬರೆದು ಓದಿ ಹೇಳಿದನು. ಅವರ ವಾಙ್ಮೂಲ ಗಳನ್ನು ಬರಸಿಕೊಂಡನು. ಎದುರು ಸಾಕ್ಷಿಗಳಿದ್ದರೆ ತರಬೇಕೆಂದು ಅಪ್ಪಣೆ ಕೊಟ್ಟನು. ನೂರಾರು ಜನರ ಸಾಕ್ಷಿಯನ್ನು ಅಪರಾಧಿಗಳು ಅಪೇಕ್ಷಿಸಿದರು. ಸಾಕ್ಷಿಗಾರರ ಪಟ್ಟಿಯಲ್ಲಿ ಬಿಕ್ಷುಕನ ಮೊದಲುಗೊಂಡು ಧಾರಾಧಿಪತಿಗಳ ಪರಿಯಂತರ ಹೆಸರುಗಳು ಬರೆದು ಇದ್ದುವು. ಅನಾವಶ್ಯಕವಾಗಿ ಕಾಲಹರಣೆ ಮಾಡಿ ಪ್ರಕರಣದ ವಿನಿಯೋಗವನ್ನು ತಡೆಯುವದಕ್ಕೋಸ್ಕರ ಬರಿಸಲ್ಪಟ್ಟ ಸಾಕ್ಷಿಗಾರರನ್ನು ಕರಸಿಕೊಳ್ಳಲಕ್ಕೆ ಕಾರಭಾರಿಯು ಒಪ್ಪಲಿಲ್ಲ. ಕೆಲವರನ್ನು ಕರೆಸಿ ಅವರ ಸಾಕ್ಷಿಯನ್ನು ತಕ್ಕೊಂಡರೂ ಅದು ನಿಸ್ಸಾರವೆಂಬಂತೆ ತೋರಿ ಬಂತು. ಹೀಗಾಗಿ ರಘುವೀರನಿಗೆ ಇನ್ನೂರು ರುಪಾಯಿ, ಬೇರೆಯವರಿಗೆ ತಾರತಮ್ಯಾನುಸಾರ ನೂರರಿಂದ ಇಪ್ಪತ್ತು ರೂಪಾಯಿ ವರೆಗೆ ಅಪರಾಧ ಹಾಕಲ್ಪಟ್ಟಿತು. ಅದಲ್ಲದೆ ಈ ಘೋರವಾದ ಅನ್ಯಾಯ ಕೃತ್ಯವನ್ನು ಚತುರ್ಮಠದವರು ತೆರೆಯ ಹಿಂದೆ ನಿಂತು ನಡಿಸಿದರೆನ್ನಬಹುದಾದ ಪ್ರಯುಕ್ತ ಸಹಕಾರಿಗಳಾದ ಅವರ ವೇಲೆ ಕೊತ್ವಾಲನು ದೋಷಾರೋಪಣೆ ಪತ್ರವನ್ನು ಬರೆದು, ಸಾಕ್ಷಿಯನ್ನು ಸಂಗ್ರಹಿಸಿ ವ್ಯವಹರಿಸಬೇಕಾಗಿ ಅಪ್ಪಣೆ ಆಯಿತು. ಪಶ್ಟಾತ್ತಾಪಕರವಾದ ಈ ಸಮಾಚಾರವನ್ನು ಕೇಳಿದ ಚತುರ್ಮಠದವರಿಗೆ ದಿಗ್‌ಭ್ರಮೆ ಹಿಡಿಯಿತು. ತಮ್ಮ ಮೇಲೆ ಈಗ ಗ್ರಹಣ ಬಂತಷ್ಟೇ; ಇದರಿಂದ ತಪ್ಪುವ ದಾರಿ ಯಾವದು? ಯಾರ ಮರೆಹೋಗುವದೆಂಬ ಚಿಂತೆ ಯು ಅವರಿಗೆ ತಗಲಿತು. ಚಂಚಲನೇತ್ರರಿಗೂ ನೃಸಿಂಹಪುರದ ಸನ್ಯಾಸಿ ಗಳಿಗೂ ಬಂದ ಮನಃಕ್ಲೇಶದಿಂದ ಹುಟ್ಟಿದ ವಿವಾದದಲ್ಲಿ ಉಳಿದ ಮೂರು ಮಠಾಧಿಪತಿಗಳು ಸವ್ಯಾಪಸವ್ಯ ನೋಡದೆ ಸೇರಿಕೊಂಡ ಕಾರಣ ಅಪ ಮಾನವೂ ನಷ್ಟವೂ ವ್ಯಧೆಯೂ ಬರುವದಾಯಿತೆಂದು ಗುಣುಗುಟ್ಟಿದರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತೀಕ್ಷಾ-ಸಮಾಧಿ
Next post ರಕ್ಷಿಸು ಒಡೆಯ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys