ಪ್ರತೀಕ್ಷಾ-ಸಮಾಧಿ

ಬ್ರಹ್ಮಾಂಡಕೆ ಕಾನ್ ಕೊಡುತಿದ್ದೆ, ಒಬ್ಬೊಂಟಿಗ ಶಮ-ಶಿಖರದಲೂ
ಮುತ್ತಿತ್ತೋ ಗುಜುಗುಜು ನಾದಾ
ಝಗಝಗಿಸುವ ನಿದ್ದೆಯೊಳದ್ದಿ, ಮಾನಸವನು ಸುತ್ತಿದೆ ಎತ್ತೂ
ಮರ್ಮರಿಸುವ ನಿರ್ಭರ ಮೌನಾ.
ಚಿರಶುಭ್ರ ಜ್ವಾಲಾ ಗೂಢಾ, ಮನನಕ್ಕೆ ಪ್ರಾಪ್ತ ಪದಾರ್ಥಾ
ಜಿನುಗುಡುತಿದೆ ಅಸ್ಪುಟ ನಾದಾ
ದೃಕ್‌ಪಥಕತಿಗೋಚರಸೀಮಾ, ಪಡಿದನಿಸುತ್ತಿಹುದು ಅಲೀನಾ
ಜಡವಾದದ ಗಾಢ ವಿವಾದಾ
ಯಃಕಶ್ಚಿತ್ ಛಾಯಾವಿಹಗಾ, ಪಕ್ಷಾಹತ ಚಂಚಲವಾದಾ
ನಿಸ್ತೇಜಿತ ಪಲ್ವಲದಂತೆ,
ಕೆಳಕೆಳಗೋ ದೂರವಿದೂರಾ ಆಕ್ರಾಮಿತರಾಗ ವಿಭಂಗಾ
ಆಜೀವನ ಜಲಧಿ ಅಪಾರಾ
ಲಗುಬಗೆ ಬಗೆ ಚಕ್ರಾಕಾರಾ ಹಾರಾಟವ ನಿಲಿಸಿದೆ ಪೂರಾ
ಸ್ವನಿವೃತ್ತವೊ ಸ್ವಾಂತವಿಚಾರಾ
ನಿಸ್ತಬ್ಧಾ ನಾಡಿಸ್ಪಂದಾ, ಈ ಅಸ್ಮಿತೆ ಶಾಂತಾ ನಿಷ್ಠಾ
ಅಧ್ಭುತ ವಿಶ್ರಾ೦ತಿ ಸ್ನಾತಾ, –
ಅವಲೋಕಿಸ ಬಂದಿದೆ ಜ್ಞಾನಾ, ವಿಜ್ಞಾನದ ಮೀರಿದ ಮಾನಾ
ಆ ಮಾನಸ ಪ್ರಮೆಗೆ ಅಮೇಯಾ
ತುಂತುಂಬಿದೆ ತೂತೂಬಿನೊಳು, ಚೈತನ್ಯದ ಘನ ಅವಕಾಶಾ
ಸತ್‌ಸಾಕ್ಷಾತ್ಕಾರ ಪ್ರಕಾಶಾ,
ಕಂಪಿಸುತಿದೆ ಸಂವಿತ್ತಾಗ್ನಿ, ಪುಲಕಿಸುತಿದೆ ತಂತಾನಾಗಿ
ಸ್ವಾಧಿಷ್ಠಾನಪ್ರಭಾವಾ,
ಭೂದೇವಿಯ ನೂತನ ಪಾತ್ರಾ ಸಮಾಧಿಯೇ ಕಾಂಚೀದಾಮಾ
ಸ್ವರ್ಗಾಂಬರ ವಸನ ಸಮಾನಾ
ಶಾಶ್ವತತೆಯ ಹೆಬ್ಬಾಗಿಲೊಳು, ದಿವ್ಯಪ್ರಭೆ ಪಕ್ಷಗಳಾದ
ನಿಯತಿಯು ಶುಭನಿದ್ರಾಮಗ್ನಾ
ಕಾಲನಿರೀಕ್ಷಾಶೂನ್ಯಾ, ಚೇತಿಸುವಾ ವಿದ್ಯುಲ್ಲೇಖಾ
ವ್ಯವರ್ತಿಕ ಮಂತ್ರೋತ್ಸೇಕಾ,
ಪಾರ್ಥಿವ ಗೃಹ ಸರ್ಜನ ಸಿದ್ದಾ ಅವಕಾಶಾವಸ್ತಿತ ದೇವಾ
ಯೋಗಾಲಂಬಿ ಸ್ವಭಾವಾ
ಚಿರಂತನದ ಪಾದಾರ್ಪಣಕೆ ಆದೇಶಾಗಮನಾರ್ತಸ್ತಾ
ಪ್ರತೀಕ್ಷಾಪೇಕ್ಷ ಬುಭೂಷಾ
ಬೀಸಿತ್ತೋವೋ ಸಂಭಾವ್ಯಾ, ಆನಂದ ರಾಗಾಲಾಪಾ
ಆನಂತ್ಯದ ಸಾಗರದಿಂದಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಟಗಾರ್‍ತಿ
Next post ವಾಗ್ದೇವಿ – ೪೯

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…