ಭಗವನ ಒಂದೊಂದು ದಿನವೂ ಹೀಗೆ
ವ್ಯರ್ಥವಾಗಿ ಹೋಗುತ್ತಿದೆ ತನ್ನ ತಾನಾಗೆ
ನಿನ್ನ ಕಾಣುವ ಭಾಗ್ಯ ಯಾವ ಕ್ಷಣ ಅದೊ
ನೀನಿರದ ಇಲ್ಲಿ ಮತ್ತೇನು ಇಹುದೊ
ಬಾಲ್ಯದ ದಿನಗಳಲಿ ಆಟದಲ್ಲಿ ಕಳೆದೆ
ತಾರುಣ್ಯದಲ್ಲಿ ಕಾಮನ ಮೋಹಿಸಿದೆ
ಸಂಸಾರ ಸಾರದಲ್ಲಿ ನಿನ್ನೊಲುವ ಮರೆತು
ಅರಸುತ್ತಿದ್ದೆ ಬಂಧು ಬಾಂಧವರ ಇನಿತು
ಯಾವ ಜನ್ಮದ ಪುಣ್ಯ ಫಲವೆಂದು
ಎಚ್ಚರಗೊಂಡೆ ವಿಷಯ ಸುಖಗಳ ನಡುವೆ
ನನ್ನೊಡೆಯನು ನಾನು ಮರೆತು ಮರಗಿ
ಅತ್ತು ಅತ್ತು ತೊಳಲಾಡಿದೆ ಮನವು ಕರಗಿ
ಈಗೊಂದುಂದು ನಿಮಿಷಗಳು ಹೀಗೆ ಸಾಗಿ
ನೀ ನಿಲ್ಲದೆ ನರಳಾಡಿವೆ ನಶಿಸುತ್ತ ಬರಡಾಗಿ
ನೀ ನೋರ್‍ವನೆ ಕ್ಷಮಾಮಯಿ ಮನ್ನಿಸೆನ್ನೆನ್ನ
ಮಾಣಿಕ್ಯ ವಿಠಲನಾಗಿ ರಕ್ಷಿಸು ನಿ ಎನ್ನ
*****