ಉದಯ ರವಿಯ ಕಿರಣವೊಂದು
ಹಾಡುತಿಹುದು ಹೊಸದೊಂದು ರಾಗ
ರಾಗ – ರಾಗ – ರಾಗ ||

ಧರೆಯ ಮಡಿಲ ಹಸಿರ
ಚಿಗುರು ತೋರುತಿಹುದು
ಹೊಸದೊಂದು ವೇಗ ವೇಗ – ವೇಗ ||

ಭರತ ಮಾತೆ ಮಡಿಲ
ಕುಸುಮ ನಲಿಯುತಿರಲು
ಆನಂದದ ಅನುರಾಗ – ರಾಗ- ರಾಗ- ರಾಗ ||

ನೆತ್ತರನು ಸುರಿಸಿ ಅತ್ತ
ಶಿಶುಗಳ ಹೊತ್ತು ನೇವರಿಸಿ
ಸಂತೈಸಿದ ಮಮತಾ ಮಾಯಿಯ ತ್ಯಾಗ- ತ್ಯಾಗ – ತ್ಯಾಗ ||

ಎಲ್ಲರೂ ಒಂದೆ ಎನ್ನುವ
ಐಕ್ಯತೆ ಭಾವ ತುಂಬಿದಾ
ಅಂತರಾಳದಾ – ಉದ್ವೇಗ- ವೇಗ- ವೇಗ ||

ಸರ್‍ವ ಧರ್‍ಮ ಶಾಂತಿಯ
ನವ ಚೇತನ ಕಿರಣ
ಅದುವೆ ಆಯಿತು ಆನಂದದ ಸ್ವರಗಾನ
ಸ್ವರ್‍ಗ – ರ್‍ಗ – ರ್‍ಗ ||
*****