ಒಲವೇ… ಭಾಗ – ೧೧

ಮಗಳ ಮೇಲೆ ನಿಮಗಿರುವ ಅತಿಯಾದ ಅಕ್ಕರೆಯೇ ಇಂತಹ ಕೆಟ್ಟ ಕೆಲಸಕ್ಕೆ ನಿಮ್ಮನ್ನ ದೂಡ್ತಾ ಇದೆ. ನಾವು ಮಾತ್ರ ಸುಖವಾಗಿಬೇಕು. ಉಳಿದವರು ಹಾಳಾದರೂ ಪವಾಗಿಲ್ಲ ಅಂತ ಆಲೋಚನೆ ಮಾಡ್ಬಾದು. ನಮ್ಮ ಸುಖಕೋಸ್ಕರ ಅಭಿಮನ್ಯು ವನ್ನು ಕೊಲ್ಲುವಂತ ಮನಸ್ಸು ನಿಮ್ಮಲ್ಲಿ ಯಾಕಾದ್ರೂ ಹುಟ್ಟಿಕೊಳ್ತು? ಏಟು ತಿಂದರೂ ಕುಗ್ಗದೆ ಮತ್ತೆ ಮತ್ತೆ ಅಭಿಮನ್ಯುವಿನ ಕೊಲೆ ಯುತ್ನದ ವಿಷಯವನ್ನೇ ರಾಜಶೇಖರ್ ಮುಂದಿಟ್ಟು ಉತ್ತರ ಪಡೆಯಲು ಪ್ರಯತ್ನಿಸಿದರು.

ನಿನ್ಗೆ ಏನು ಹೇಳ್ಬೇಕೂಂತ ನನ್ಗೆ ತೋಚುತ್ತಿಲ್ಲ. ನಿನ್ಗೆ ನನ್ನ ಮೇಲೆ ನಂಬಿಕೆ ಇಲ್ಲ ಅಂದಮೇಲೆ ನಾನು ಬದುಕ್ಕಿದ್ದೇನು ಪ್ರಯೋಜನ? ಎಲ್ಲಾದ್ರೂ ಹೋಗಿ ಸತ್ತು ಬಿಡುವ ಅನ್ನಿಸ್ತಾ ಇದೆ. ಪ್ರೀತಿ, ವಿಶ್ವಾಸಗಳಿಲ್ಲದೆ ಮೇಲೆ ಬದುಕಿದ್ದೇನು ಸುಖ ಹೇಳು? ನಿನ್ಗೆ ನನ್ನ ಮೇಲೆ ಅಷ್ಟೊಂದು ಸಂಶಯ ಇದ್ರೆ ಈಗ್ಲೇ ಅಭಿಮನ್ಯು ಬಳಿ ಹೋಗಿ ಎಲ್ಲಾ ಕೇಳಿ ತಿಳ್ಕೊಂಡು ನಿನ್ನ ಸಂಶಯನ ನಿವಾರಣೆ ಮಾಡ್ಕೊಂಡು ಬಬೊಹುದು. ಈಗತಾನೆ ಅಭಿಮನ್ಯುವನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಮಾತಾಡ್ಕೊಂಡು ಬಂದೆ. ಜೊತೆಗೆ ಅಕ್ಷರ ಕೂಡ ಇದ್ಲು. ಮನೆಗೆ ಬರೋದಕ್ಕೆ ಹೇಳ್ದೆ. ಅವಳಿಗೆ ಬರೋದಕ್ಕೆ ಮನಸ್ಸಿರಲಿಲ್ಲ. ಹಾಗೆ ಮೈಸೂರಿಗೆ ಹೊರಟು ಹೋದ್ಲು. ಎಲ್ಲರೂ ನನ್ನೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ತಾ ಇದ್ದಾರೆ. ಆದರೆ, ನೀನು ಮಾತ್ರ ಯಾಕೆ ಹೀಗೆ? ದುಃಖದಿಂದ ಕೇಳಿದರು.

ಎಲ್ಲವನ್ನೂ ಮುಚ್ಚಿಡೋದಕ್ಕೆ ಪ್ರಯತ್ನ ಮಾಡ್ಬೇಡಿ. ಸುಮ್ನೆ ಏನೆಲ್ಲೋ ಕಲ್ಪನೆ ಮಾಡ್ಕೊಂಡು ಹೇಳ್ತಾ ಇಲ್ಲ ನಾನು. ಇಷ್ಟು ವರ್ಷ ಮಗನಿಗೆ ಅಪ್ಪ, ಅಮ್ಮ, ತಂಗಿ ಮೇಲೆ ಯಾವ ಪ್ರೀತಿ ಕೂಡ ಇಲಿಲ್ಲ. ವರ್ಷಕ್ಕೆ ಒಂದ್ಸಲ ಕೂಡ ಫೋನ್ ಮಾಡಿ ಮಾತಾಡಿಸ್ತಾ ಇಲಿಲ್ಲ. ಅಂತವನು ದಿಢೀರಾಗಿ ಮನೆಗೆ ಯಾಕೆ ಬಂದ? ಅಭಿಮನ್ಯುವಿಗೆ ಏಟು ಬಿದ್ದ ಮರು ದಿನವೇ ತರಾತುರಿಯಲ್ಲಿ ಬೆಂಗಳೂರಿಗೆ ಯಾಕೆ ಹೊರಟು ಹೋದ? ಮಗಳನ್ನು ಅಭಿಮನ್ಯುವಿಗೆ ಕೊಟ್ಟು ಮದ್ವೆ ಮಾಡೋ ವಿಚಾರ ಪ್ರಸ್ತಾಪ ಮಾಡಿದ್ದೇ ಪ್ರೀತಮ್. ಆದರೆ, ಅಭಿಮನ್ಯುವಿಗೆ ಏಟು ಬಿದ್ದು ಸಾಯುವ ಸ್ಥಿತಿಯಲ್ಲಿರುವ ವಿಚಾರ ಗೊತ್ತಿದ್ರೂ ಯಾಕೆ.

ಬೆಂಗಳೂರಿಗೆ ಹೊರಟು ಹೋದ? ಇದೆಲ್ಲ ನೋಡ್ತಾ ಇದ್ರೆ ಅಭಿಮನ್ಯುವನ್ನು ನೀವೇ ಕೊಲ್ಲೋದಕ್ಕೆ ಪ್ರಯತ್ನ ಮಾಡಿದ್ದೀರ ಅಂತ ನನಗನ್ನಿಸ್ತಾ ಇದೆ. ಈಗ ಆಗಿದ್ದು ಆಯ್ತು. ಈಗ ಹೇಳಿ ಏನು ಸುಖ ಇಲ್ಲ. ಇನ್ನು ಮುಂದಾದರೂ ಮಗಳನ್ನು ಅಭಿಮನ್ಯುವಿಗೆ ಕೊಟ್ಟು ಮದ್ವೆ ಮಾಡೋದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡ್ತಿರ? ಅಥವಾ ಇದೀಗ ನಿಮ್ಗೆ ಅಂಟಿಕೊಂಡಿರುವ ಹೊಸ ಚಾಳಿಯನ್ನ ಮುಂದುವರೆಸ್ತೀರ!?

ನೀನಂದುಕೊಂಡಂತೆ ಕಟುಕ ನಾನಲ್ಲ. ಅಭಿಮನ್ಯುವಿನ ಬಗ್ಗೆ ನಿನಗಿಂತ ಹೆಚ್ಚಿನ ಅಭಿಮಾನ ನನ್ಗೆ ಇದೆ. ಅಭಿಮನ್ಯು ಏಟು ತಿಂದು ಆಸ್ಪತ್ರೆ ಸೇರಿದ್ದಕ್ಕೂ, ಮರುದಿನ ಪ್ರೀತಮ್ ಮನೆ ಬಿಟ್ಟು ಹೋಗಿದ್ದಕ್ಕೂ ಯಾವುದೇ ಸಂಬಂಧವಿಲ್ಲ. ಅವನು ಇಲ್ಲಿ ಎಷ್ಟು ದಿನಾಂತ ಇಲಿಕ್ಕೆ ಸಾಧ್ಯ ಹೇಳು? ಅಷ್ಟೊಂದು ದಿನ ರಜೆ ಹಾಕಿ ಇಲ್ಲಿ ಇದ್ದದ್ದೇ ದೊಡ್ಡ ವಿಷಯ. ಆದಷ್ಟು ಬೇಗ ಇಬ್ಬರ ಮದ್ವೆ ಮಾಡಿ ಮುಗಿಸಬೇಕೂಂತ ಪ್ರೀತಮ್ ಆಸೆ ಪಟ್ಟಿದ್ದಾನೆ. ಸಾಧ್ಯವಾದ್ರೆ ಅವನು ಮುಂದಿನ ತಿಂಗಳು ಬಬೊಹುದು. ಮುಂದಿನ ತಿಂಗಳೇ ಅಭಿಮನ್ಯುವಿನೊಂದಿಗೆ ಮಗಳ ನಿಶ್ಚಿತಾರ್ಥ ಇಟ್ಟುಕೊಳ್ಳುವ. ನೀನು ಯಾಕೆ ಏನೋ ಕಲ್ಪನೆ

ಮಾಡ್ಕೊಂಡು ಹುಚ್ಚುಚ್ಚಾಗಿ ಮಾತಾಡ್ತಾ ಇದ್ದೀಯ ಅಂತ ನನ್ಗೊಂದು ಅರ್ಥವಾಗ್ತಾ ಇಲ್ಲ ಕಣ್ಣೀರು ಸುರಿಸಿ ಪತ್ನಿಯ ಮನಗೆಲ್ಲಲು ಪ್ರಯತ್ನಿಸಿದರು.

ಸರಿ ಬಿಡಿ, ಅದ್ಕೆ ಯಾಕೆ ಬೇಸರ ಮಾಡ್ಕೊಂಡು ಅಳ್ತಾ ಇದ್ದೀರ. ನನ್ಗೇನೋ ಹಾಗೆ ಅನ್ನಿಸ್ತು. ಅದ್ಕೆ ಕೇಳ್ದೆ ಅಷ್ಟೆ. ಮನಸ್ಸಿನಲ್ಲಿ ಸಂಶಯ ಇಟ್ಟುಕೊಂಡು ಕೊರಗೋದಕ್ಕಿಂತ ಎಲ್ಲಾ ವಿಚಾರ ಎದುರಿಗೆ ಕೂತು ಕೇಳಿ ಪರಿಹರಿಸಿಕೊಳ್ಳೋದು ಒಳ್ಳೆಯದೆಂದು ತಿಳ್ಕೊಂಡು ಕೇಳ್ದೆ? ನಿಮ್ಮ ಮನಸ್ಸು ನೋಯಿಸಿದ್ರೆ ಕ್ಷಮೆ ಇರಲಿ ಕೈ ಮುಗಿದು ಕ್ಷಮೆಯಾಚಿಸಿದರು ಲೀಲಾವತಿ.

ನೀನ್ಯಾಕೆ ಕ್ಷಮೆ ಕೇಳ್ಬೇಕು ಹೇಳು. ನಾನೇ ಆತುರ ಬಿದ್ದು ನಿನ್ಗೆ ಹೊಡ್ದ್ದು ಬಿಟ್ಟೆ. ನನ್ನ ಮೊದ್ಲು ಕ್ಷಮಿಸಿ ಬಿಡು. ನೀನು ನನ್ನ ಬಾಳಸಂಗಾತಿಯಾಗಿರುವುದು ಹೋದ ಜನ್ಮದಲ್ಲಿ ನಾನು ಮಾಡಿದ ಪುಣ್ಯದ ಫಲ ಇಬೊಹುದು. ಏನೇ ಸಂಶಯವಿದ್ದರೂ ನನ್ನೊಂದಿಗೆ ಹಂಚಿಕೊಳ್ಳುವ ಮನಸ್ಥಿತಿ ಇರುವ ನಿನ್ನ ನಾನು ಅರ್ಥಮಾಡಿಕೊಳ್ಳದೆ ಹೊಡ್ದು ಬಿಟ್ಟೆ. ಈ ಪಾಪಿಯನ್ನ ದಯವಿಟ್ಟು ಕ್ಷಮಿಸಿ ಬಿಡು ಗೋಳಾಡಿದ ರಾಜಶೇಖರ್, ಲೀಲಾವತಿಯ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು.

ಲೀಲಾವತಿ ಮನದಲ್ಲಿ ಹುಟ್ಟಿಕೊಂಡ ಸಂಶಯ ಪೂರ್ಣವಾಗಿ ತಿಳಿಗೊಳ್ಳದೆ ಇದ್ದರೂ ಗಂಡ ಹೇಳಿದ ಮಾತುಗಳನ್ನು ಕೇಳಿ ಸತ್ಯ ಇದ್ದರೂ ಇರಬಹುದು. ಯಾವುದಕ್ಕೂ ಇನ್ನೊಂದಿಷ್ಟು ದಿನ ಕಾದು ನೋಡುವುದು ವಾಸಿ. ಸುಮ್ಮನೆ ಜಗಳವಾಡಿ ಸಂಸಾರವನ್ನ ಯಾಕೆ ಹಾಳು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ ಸುಮ್ಮನಾದರು. ಆದರೆ, ಮಗಳ ಭವಿಷ್ಯದ ಬಗ್ಗೆ ಯೋಚಿಸಿದಾಗ ಆಕೆಯಲ್ಲಿ ಆತಂಕ ಮತ್ತೆ ಹೆಚ್ಚಾಗ ತೊಡಗಿತು. ಒಂದ್ವೇಳೆ ತನ್ನ ಗಂಡನಲ್ಲದೆ ಅಭಿಮನ್ಯುವಿಗೆ ಬೇರೆ ಯಾರಾದರು ಶತ್ರುಗಳು ಇರಬಹುದೆ? ಮದುವೆಯಾದ ನಂತರ ಇಂಥಹ ಘಟನೆಗಳು ಮರುಕಳಿಸಿದರೆ ಮಗಳ ಭವಿಷ್ಯ ಹಾಳಾಗುವುದು ನಿಶ್ಚಿತ ಎಂದು ತಿಳಿದು ಚಿಂತೆಗೆ ಬಿದ್ದರು.

ರಾಜಶೇಖರ್ ಮನೆಯಿಂದ ಎಸ್ಟೇಟ್‌ಗೆ ತೆರಳಿದ ನಂತರ ಮಗಳಿಗೆ ದೂರವಾಣಿ ಕರೆ ಮಾಡಿದ ಲೀಲಾವತಿ ಅಭಿಮನ್ಯುವಿನ ಯೋಗಕ್ಷೇಮ ವಿಚಾರಿಸಿದರು.

ಅಕ್ಷರ, ನಾನೊಂದು ವಿಚಾರ ಹೇಳ್ತೇನೆ. ಆದರೆ, ಈ ವಿಚಾರ ನಮ್ಮಿಬ್ಬರ ನಡುವೆಯೇ ಇಬೇಕು. ಅಪ್ಪಿತಪ್ಪಿಯೂ ಯಾರಿಗೂ ಹೇಳೋದಕ್ಕೆ ಹೋಗ್ಬಾದು. ನೀನು ಪ್ರಾಮಿಸ್ ಮಾಡಿದರೆ ಹೇಳ್ತೇನೆ ಅಂದರು ಲೀಲಾವತಿ.

ಪ್ರಾಮಿಸಾಗಿ ಯಾರಿಗೂ ಹೇಳೋದಿಲ್ಲ. ನೀವು ರ್ಧೈಯವಾಗಿ ಹೇಳಿ ಎಂದು ಅಮ್ಮನಿಗೆ ಭಾಷೆ ನೀಡಿದಳು ಅಕ್ಷರ.

ಏನಿಲ್ಲ…, ಅಭಿಮನ್ಯು ತಲೆಗೆ ಮೊನ್ನೆ ಏಟು ಬೀಳ್ತಲ್ಲ. ಹೊಡೆದವರು ಯಾರು ಅಂತ ನಿನ್ಗೇನಾದ್ರು ಗೊತ್ತಾಯ್ತಾ?

ಇಲ್ಲ ಅಮ್ಮ, ಯಾರೋ ಇಬ್ಬರು ಹಿಂದಿನಿಂದ ಹಿಂಬಾಲಿಸಿಕೊಂಡು ಬಂದದ್ದು ಮಾತ್ರ ಅವನಿಗೆ ಗೊತ್ತು. ಯಾರೋ ತನ್ನಂತೆ ಮನೆಗೆ ಹೋಗುವವರು ಇಬೊಹುದೂಂತ ತಿಳ್ಕೊಂಡು ಅವನು ತಿರುಗಿ ನೋಡೋದಕ್ಕೆ ಹೋಗ್ಲಿಲ್ಲ. ಅಷ್ಟರೊಳಗೆ ಹಿಂಬದಿಯಿಂದ ತಲೆಗೆ ಪೆಟ್ಟು ಬಿದ್ದು ಪ್ರಜ್ಞೆ ಕಳ್ಕೊಂಡ. ಹೊಡೆದವರು ಯಾರೂಂತ ಅವನಿಗೆ ಗೊತ್ತಾಗ್ಲಿಲ್ಲ ಅಂದಳು.

ಮಗಳ ಮಾತು ಕೇಳಿ ಲೀಲಾವತಿಯ ಎದೆಬಡಿತ ಮತ್ತಷ್ಟು ಹೆಚ್ಚಾಯಿತು. ಗಂಡನ ಮೇಲಿದ್ದ ಸಂಶಯ ಆಕೆಯಲ್ಲಿ ಮತ್ತಷ್ಟು ಬಲವಾಯಿತು. ಅಭಿಮನ್ಯುವಿಗೆ ಇಬ್ಬರು ಸೇರಿಕೊಂಡು ಹೊಡೆದಿದ್ದಾರೆ ಅಂದ ಮೇಲೆ ಅದು ತನ್ನ ಗಂಡ ಹಾಗೂ ಮಗನೇ ಇರಬಹುದು. ಅಭಿಮನ್ಯುವಿನ ಹತ್ಯೆಗೆ ಯತ್ನಿಸಿದ ಮರು ದಿನ ಅಪ್ಪ, ಮಗನ ಮೊಗದಲ್ಲಿ ಎಂದಿನ ಉತ್ಸಾಹ ಕಾಣಲಿಲ್ಲ. ಏನೋ ತಪ್ಪು ಮಾಡಿದವರಂತೆ ಚಡಪಡಿಸುತ್ತಾ ಇದ್ದರು. ಇದ್ದಕ್ಕಿದ್ದಂತೆ ಪ್ರೀಮತ್ ಬೆಂಗಳೂರು ಸೇರಿಕೊಂಡ. ಅಪ್ಪ, ಮಗ ಇಬ್ಬರು ಸೇರಿಕೊಂಡು ಕೊಲೆಯ ಸಂಚು ರೂಪಿಸಿರಬಹುದಾ? ಮತ್ತೆ ಮನದೊಳಗೆ ಸಂಶಯ ನುಸುಳಿಕೊಂಡಿತು. ಯಾವುದಕ್ಕೂ ಮುನ್ನಚ್ಚರಿಕೆಯಾಗಿ ಈ ವಿಚಾರವನ್ನು ಮಗಳಿಗೆ ತಿಳಿಸುವುದು ಒಳ್ಳೆಯದೆಂದು ನಿರ್ಧರಿಸಿದರು.

ಅಕ್ಷರ, ನಿನ್ಗೆ ಈ ವಿಚಾರ ಹೇಗೆ ಹೇಳ್ಬೇಕೂಂತ ತೋಚುತ್ತಿಲ್ಲ. ಅಭಿಮನ್ಯುವಿಗೆ ಏಟು ಬಿದ್ದ ಮರು ದಿನ ಪ್ರೀತಮ್ ಮನೆ ಬಿಟ್ಟು ಹೊರಟು ಹೋದ. ನಿಮ್ಮಪ್ಪ, ಅಣ್ಣ ಇಬ್ರೂ ಕೂಡ ಅಭಿಮನ್ಯುವಿಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿದ ಮರುದಿನ ತುಂಬಾ ಆತಂಕದಲ್ಲಿ ಇದ್ದಂತೆ ಕಾಣ್ತಾ ಇದ್ರು. ಅಭಿಮನ್ಯು ಮನೆಗೆ ಬಂದು ಹೋದಲ್ಲಿಂದ ಸುಮಾರು ಒಂದೂವರೆ ತಿಂಗಳು ಒಂದು ರಾತ್ರಿಯೂ ಕೂಡ ತಪ್ಪಿಸದೆ ಇಬ್ಬರು ಹೊರಗೆ ಹೋಗಿ ಹತ್ತು, ಹನ್ನೊಂದು ಗಂಟೆಗೆ ಮನೆಗೆ ಬತಾ ಇದ್ರು. ಕೇಳಿದ್ದಕ್ಕೆ ನನ್ನನ್ನೇ ಗದರಿಸಿದರು. ಅಭಿಮನ್ಯುವನ್ನು ಮುಗಿಸಲು ಅಪ್ಪ, ಮಗ ಸೇಕೊಂಡು ಅವತ್ತು ರಾತ್ರಿ ಹಲ್ಲೆ ನಡೆಸಿರಬಹುದಾ? ಎಂಬ ಸಂಶಯ ಕಾಡುತ್ತಾ ಇದೆ. ಆದರೆ, ನಿಮ್ಮಪ್ಪನ ಈ ಬಗ್ಗೆ ವಿಚಾರಿಸಿದಾಗ ನನ್ಗೇನು ಗೊತ್ತಿಲ್ಲ ಅಂತ ಹೇಳ್ತಾ ಇದ್ದಾರೆ. ಒಂದೊಂದು ಸಲ ಅವರು ಅಂತಹ ಕೆಲಸ ಮಾಡೋದಕ್ಕೆ ಸಾಧ್ಯ ಇಲ್ಲ ಅಂತ ಅನ್ನಿಸ್ತದೆ. ಆದರೆ, ಅಭಿಮನ್ಯುವಿಗೆ ಏಟು ಬಿದ್ದ ನಂತರದ ದಿನಗಳಿಂದ ಅವರ ವರ್ತನೆಯಲ್ಲಿ ಸಾಕಷ್ಟು ಬದಲಾಗಿದೆ. ಅದಕ್ಕೆ ನನ್ಗೆ ಸಂಶಯ ಮೂಡ್ತಾ ಇದೆ. ಒಂದ್ವೇಳೆ ಅಪ್ಪ ಈ ಕೃತ್ಯ ಮಾಡದೆ ಇದ್ರೂ ಬೇರೆ ಯಾರಾದರೂ ಮಾಡಿರಬಹುದಾ? ಅಂತ ಕಂಡು ಹಿಡಿಯಬೇಕು. ಇಲ್ಲದಿದ್ದರೆ ಮುಂದೆ ಅಭಿಮನ್ಯುವಿನ ಜೀವಕ್ಕೆ ಅಪಾಯ ಇದೆ. ನೀನು ಯಾವುದಕ್ಕೂ ಒಂದ್ಸಲ ಅಭಿಮನ್ಯುವಿಗೆ ಯಾರಾದರು ಶತ್ರುಗಳು ಇದ್ದಾರಾ? ಅಂತ ವಿಚಾರಿಸಿ ನೋಡು. ಆದರೆ, ನಾನು ಹೇಳಿದ ವಿಚಾರವನ್ನ ಯಾರಿಗೂ ಹೇಳೋದಕ್ಕೆ ಮಾತ್ರ ಹೋಗ್ಬೇಡ ಎಂದು ಮೆಲುದನಿಯಲ್ಲಿ ಎಲ್ಲವನ್ನೂ ಹೇಳಿ ಮುಗಿಸಿ ಕಳವಳಗೊಂಡು ಮಗಳಿಗೆ ಬಾಯಿ ಬಿಡದಂತೆ ಎಚ್ಚರಿಸಿದರು.

ನೀನೇನು ಭಯ ಪಟ್ಕೋಬೇಡ ಅಮ್ಮ. ಸ್ವಲ್ಪ ದಿನ ಕಳೆದ ನಂತರ ಎಲ್ಲಾ ಸತ್ಯ ಹೊರಗೆ ಬರುತ್ತೆ. ಸುಮ್ನೆ ಯಾಕೆ ಅಪ್ಪನ ಬಗ್ಗೆ ಸಂಶಯ ಪಡ್ಬೇಕು? ಇವತ್ತು ಅಭಿಮನ್ಯುವನ್ನು ನೋಡೋದಕ್ಕೆ ಅವರು ಕೂಡ ಆಸ್ಪತ್ರೆಗೆ ಬಂದಿದ್ರು. ಶೀಘ್ರ ಗುಣಮುಖವಾಗುವಂತೆ ಹಾರೈಸಿದ್ದಾರೆ. ಅಪ್ಪ ಅಂತಹ ಕೆಲಸಕ್ಕೆ ಕೈ ಹಾಕೋದಿಲ್ಲ. ಹೆಚ್ಚೆಂದರೆ ಗದರಿಸುವ ಕೆಲಸ ಮಾತ್ರ ಮಾಡ್ತಾರೆ ಅಷ್ಟೆ. ಬೇರೆ ಯಾರಾದ್ರು ಮಾಡಿಬೊಹುದು. ಯಾವುದಕ್ಕೂ ಅಭಿಮನ್ಯು ಗುಣಮುಖವಾಗಲಿ. ನಂತರ ಅವನೊಂದಿಗೆ ಕೂತು ಮಾತಾಡಿದ್ರೆ ಎಲ್ಲಾ ವಿಚಾರ ಗೊತ್ತಾಗುತ್ತೆ ಅಂದಳು.

ನಿನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡಿದ್ರೆ ನನ್ಗೆ ಭಯ ಆಗ್ತಾ ಇದೆ. ಅಭಿಮನ್ಯುವಿಗೆ ರಾತ್ರಿ ಹೊತ್ತಲ್ಲಿ ತಿರುಗಾಡ್ಬೇಡ ಅಂತ ಹೇಳು. ಜನ ಸರಿ ಇಲ್ಲ ಲೀಲಾವತಿ ಮಗಳ ಭವಿಷ್ಯದ ಬಗ್ಗೆ ಮರುಗಿದರು. ಅಮ್ಮನ ಮಾತು ಕೇಳಿ ಅಕ್ಷರಳ ಮನದಲ್ಲಿ ಹಲವಾರು ಸಂಶಯಗಳು, ಆತಂಕಗಳು ಒಟ್ಟಿಗೆ ಎದುರಾದವು.

ಅಪ್ಪ ಅಭಿಮನ್ಯುವನ್ನು ಕೊಲ್ಲೋದಕ್ಕೆ ಪ್ರಯತ್ನ ಪಟ್ಟರಾ? ಅಭಿಮನ್ಯುವಿಗೆ ಏಟು ಬಿದ್ದ ಮರುದಿನ ಅಪ್ಪ ಆಸ್ಪತ್ರೆ ಕಡೆಗೆ ತಲೆ ಹಾಕಿ ನೋಡಲಿಲ್ಲ. ನಾನು ಬಂದ ವಿಚಾರ ಯಾರಿಂದಲೋ ತಿಳಿದು ಆಸ್ಪತ್ರೆಗೆ ಬಂದರು. ಆಸ್ಪತ್ರೆಗೆ ಬಂದರು ಕೂಡ ನೇರವಾಗಿ.

ಅಭಿಮನ್ಯುವಿನ ಬಳಿ ಬರಲಿಲ್ಲ. ನನ್ನಿಂದ ಎಲ್ಲಾ ವಿಷಯ ತಿಳ್ಕೊಂಡ ನಂತರ ತಾನೇ ಒಳಗೆ ಬಂದದ್ದು? ಅಮ್ಮ ಹೇಳ್ತಾ ಇರೋ ಮಾತು ಕೇಳಿದರೆ ನಿಜ ಇರಬಹುದು ಅನ್ನಿಸ್ತಾ ಇದೆ. ಆದರೆ, ಒಂದೆಡೆ ಅಪ್ಪ ನಮ್ಮಿಬ್ಬರನ್ನ ಮದುವೆ ಮಾಡಿಸೋದಕ್ಕೆ ತುಂಬಾ ಆಸಕ್ತಿ ತೋರಿಸುತ್ತಿದ್ದಾರೆ. ಅಪ್ಪ ನಮ್ಮಿಬ್ಬರಿಗೆ ಮದುವೆ ಮಾಡಿಸಿಕೊಡುವ ಮಾತುಗಳನ್ನಾಡಿ ನಂಬಿಸಿ ಮೋಸ ಮಾಡೋದಕ್ಕೆ ಹೊರಟ್ಟಿದ್ದಾರಾ? ಎಂಬ ಪ್ರಶ್ನೆಗಳು ಮನದೊಳಗೆ ಉದಯಿಸಿದಾಗ ಛೇ., ಛೇ.., ಅಪ್ಪ ಅಂತಹ ಮನುಷ್ಯ ಅಲ್ಲ ಎಂದು ತನಗೆ ತಾನೇ ಹೇಳಿಕೊಂಡಳಾದರೂ ಅಪ್ಪನ ಮೇಲೆ ಒಂದು ಹದ್ದಿನ ಕಣ್ಣು ಇಡುವುದು ಒಳ್ಳೆಯದೆಂದು ತೀರ್ಮಾನಿಸಿದಳು.
* * *

ಅಭಿಮನ್ಯು ಸುಮಾರು ಎರಡು ತಿಂಗಳ ಬಳಿಕ ಎದ್ದು ಓಡಾಡುವ ಸ್ಥಿತಿಗೆ ತಲುಪಿದ. ಈ ನಡುವೆ ಅಕ್ಷರ ಆಗಿಂದಾಗೆ ಅಭಿಮನ್ಯುವನ್ನು ಭೇಟಿಯಾಗುತ್ತಲೇ ಇದ್ದಳು. ವಿರೋಧಿಸುವ ಧೈರ್ಯ ಮಾತ್ರ ರಾಜಶೇಖರ್ ತೋರಲಿಲ್ಲ. ವಿರೋಧ ವ್ಯಕ್ತ ಪಡಿಸಿದರೆ ಅಭಿಮನ್ಯುವಿನ ಕೊಲೆಗೆ ತಾನು ಹಾಗೂ ಮಗ ಸೇರಿಕೊಂಡು ನಡೆಸಿದ ಸಂಚು ಬಯಲಿಗೆ ಬರೋದಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ ಎಂದು ತಿಳಿದು ಅಕ್ಷರ-ಅಭಿಮನ್ಯುವಿನ ಭೇಟಿಗೆ ಯಾವುದೇ ತಕರಾರು ಎತ್ತಲು ಮುಂದಾಗಲಿಲ್ಲ.

ಮಗಳನ್ನು ಅಭಿಮನ್ಯು ಮದುವೆಯಾಗುವ ವಿಚಾರ ನೆನೆಸಿಕೊಂಡಾಗ ರಾಜಶೇಖರ್ ರಕ್ತ ಕುದಿಯುತಿತ್ತು. ಈ ಸಂಬಂಧವನ್ನ ಕೊನೆಗಾಣಿಸುವುದಾದರೂ ಹೇಗೆ? ಎಂಬ ಚಿಂತೆ ಕಾಡತೊಡಗಿತು. ಎರಡು ತಿಂಗಳ ಅವಧಿಯಲ್ಲಿ ಅಕ್ಷರ ಮನೆಗೆ ಭೇಟಿ ನೀಡಿದ್ದಕ್ಕಿಂತ ಹೆಚ್ಚಾಗಿ ಅಭಿಮನ್ಯುವಿನ ಮನೆಗೆ ಭೇಟಿ ನೀಡಿದ್ದೇ ಹೆಚ್ಚು. ಕೆಲವೊಮ್ಮೆ ಅಭಿಮನ್ಯುವನ್ನು ಭೇಟಿಯಾಗಿ, ಅವನೊಂದಿಗೆ ಕೆಲಹೊತ್ತು ಕಳೆದು ಸೀದ ಮೈಸೂರಿಗೆ ಹೊರಟು ಹೋಗುತ್ತಿದ್ದಳು. ಮನೆ ಕಡೆಗೆ ತಲೆ ಹಾಕಿ ನೋಡುವ ಗೋಚಿಗೆ ಹೋಗುತ್ತಿರಲಿಲ್ಲ.

ಏನೋ ಮಾಡಲು ಹೋಗಿ ಇನ್ನೇನೋ ಆಗಿ ಹೋಯ್ತಲ್ಲ? ಎಂದು ರಾಜಶೇಖರ್ ಕೈ ಹಿಸುಕಿಕೊಂಡರು. ಮಗಳಿಗೆ ಹೊಡೆದು ಬಡಿದು ಹೇಗೋ ನಿಖಿಲ್ ಜೊತೆ ಮದ್ವೆ ಮಾಡಿ ಕಳುಹಿಸಬಹುದಿತ್ತು. ಆದರೆ, ಅಭಿಮನ್ಯುವಿಗೆ ಕೊಟ್ಟು ಮದ್ವೆ ಮಾಡಿಸಿ ಕೊಡುತ್ತೇವೆಂದು ಮಾತುಕೊಟ್ಟಿದ್ದೇ ದೊಡ್ಡ ತಪ್ಪಾಯ್ತು. ಮೊದ್ಲೆಲ್ಲ ಮಗಳು ಅಭಿಮನ್ಯುವನ್ನು ಇಷ್ಟೊಂದು ಧೈರ್ಯದಲ್ಲಿ ಭೇಟಿಯಾಗ್ತಾ ಇಲಿಲ್ಲ. ಈಗ ನೋಡಿದ್ರೆ ಮನೆಗೂ ಬಾರದೆ ಅಭಿಮನ್ಯುವಿನ ಮನೆಯಲ್ಲೇ ಕಾಲ ಕಳೆಯೋದಕ್ಕೆ ಪ್ರಾರಂಭ ಮಾಡಿಬಿಟ್ಟಿದ್ದಾಳೆ. ವಿರೋಧ ಮಾಡಲು ಇದು ಸೂಕ್ತ ಸಮಯವಲ್ಲ. ಜನ ಬಾಯಿಗೆ ಬಂದಂಗೆ ಮಾತಾಡಿಕೊಳ್ಳುವ ಮೊದಲು ಏನಾದರೊಂದು ಮಾಡಬೇಕು ಅಂದುಕೊಂಡರು.
* * *

ಬೆಂಗಳೂರಿನಿಂದ ಮತ್ತೆ ಮಗನನ್ನು ಕರೆಯಿಸಿಕೊಂಡ ರಾಜಶೇಖರ್ ಎರಡನೇ ಬಾರಿ ಅಭಿಮನ್ಯುವನ್ನು ಬೇಟೆಯಾಡಿ ಮುಗಿಸುವುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಹಾಳಾದ ಆ ಹುಡುಗನ ಆಯುಷ್ಯ ಎಷ್ಟೊಂದು ಗಟ್ಟಿಯಾಗಿದೆ ನೋಡು. ಸತ್ತೇ ಹೋದ ಅಂತ ಬಿಟ್ಟು ಬಂದೊ. ಆದ್ರೆ ಬದುಕಿಬಿಟ್ಟ. ಇದೀಗ ಮೊದ್ಲಿಗಿಂತ ಲವಲವಿಕೆಯಿಂದ ಒಡಾಡ್ತಾ ಇದ್ದಾನೆ. ಕಳೆದ ಸಲ ಏನೋ ಅವನ ಅದೃಷ್ಟ ಚೆನ್ನಾಗಿಯೇ ಇತ್ತು. ಬಚಾವಾಗಿ ಬಿಟ್ಟ. ಆದರೆ, ಈ ಸಲ ಹಾಗೆ ಆಗೋದಕ್ಕೆ ಬಿಡ್ಬಾದು. ಈಗಾಗ್ಲೇ ನಿಮ್ಮಮ್ಮ ನನ್ನ ಮೇಲೆ ಸಂಶಯಗೊಂಡಿದ್ದಾಳೆ. ಇನ್ನು ನಾವಿಬ್ರು ಸೇಕೊಂಡು ಈ ಕೆಲ್ಸ ಮಾಡಿ ಮುಗಿಸೋದಕ್ಕೆ ಸಾಧ್ಯ ಇಲ್ಲ. ನೀನು ಕಳೆದ ಸಲ ಹೇಳ್ದ ಹಾಗೆ ಈ ಕೆಲ್ಸವನ್ನ ಬೆಂಗಳೂರಿನ ಯಾವುದಾದ್ರೂ ಸುಫಾರಿ ಕಿಲ್ಲಸ್‌ಗೆ ವಹಿಸೋದು ಒಳ್ಳೆಯದ್ದು. ನೀನೇನಂತಿಯ? ಮಗನನ್ನು ಕೇಳಿದರು ರಾಜಶೇಖರ್.

ಆ ಸಣ್ಣ ಹುಡುಗನ ಕೊಲ್ಲೋದಕ್ಕೆ ಎಷ್ಟು ಹೊತ್ತು ಬೇಕು ಹೇಳಿ? ನಿಮ್ಮ ಆತುರದಿಂದ ಅವನು ಬದುಕುಳಿದ. ತಲೆ ಚೂರು ಚೂರಾಗುವ ಹಾಗೆ ಬಾರಿಸ್ಬೇಕಾಗಿತ್ತು. ಈ ಸಲ ದೊಣ್ಣೆ ತಗೊಂಡು ತಲೆಗೆ ಹೊಡೆಯೋದು ಬೇಡ. ಕೋವಿ ತಗೊಂಡು ಗುಂಡಿಕ್ಕಿ ಸಾಯಿಸಿ ಬಿಡುವ. ಒಂದೇ ಏಟು. ಉಸಿರು ಬಿಟ್ಟು ತೆಗೆದುಕೊಳ್ಳುವುದಕ್ಕೂ ಅಲ್ಲಿ ಅವಕಾಶ ಇರೋದಿಲ್ಲ. ನೀವು ಮನೆಯಲ್ಲಿ ಹಾಯಾಗಿರಿ. ಆ ಜವಾಬ್ದಾರಿಯನ್ನ ನಾನೇ ನಿಭಾಯಿಸ್ತೇನೆ ಪ್ರೀತಮ್ ಧೈರ್ಯದಿಂದ ಅಭಿಮನ್ಯುವನ್ನು ಹತ್ಯೆಗೈಯುವ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾದ.

ಪ್ರೀತಮ್‌ನ ಮಾತು ಕೇಳಿ ರಾಜಶೇಖರ್ ಕಳವಳಗೊಂಡರು. ಕಳೆದ ಬಾರಿ ಹತ್ಯೆಗೆ ಯತ್ನಿಸಿದ ವಿಚಾರ ಪತ್ನಿಗೆ ಅಲ್ಪ ಸ್ವಲ್ಪ ಗೊತ್ತಾಗಿದೆ. ಇನ್ನು ದಿನಾ ರಾತ್ರಿ ಹೊರಗೆ ಹೋಗುವುದಕ್ಕೆ ಪ್ರಾರಂಭ ಮಾಡಿದರೆ ಅವಳೇ ನಮ್ಮನ್ನ ಕಂಬಿ ಎಣಿಸುವ ಹಾಗೆ ಮಾಡಿ ಬಿಡುತ್ತಾಳೆ ಅಂದುಕೊಂಡು ಆತಂಕಕ್ಕೆ ಒಳಗಾದರು.
ಆ ಹುಡುಗನ ಕೊಲ್ಲೋದು ನೀನಂದುಕೊಂಡಷ್ಟು ಸುಲಭವಲ್ಲ. ಮೊದಲಾಗಿದ್ರೆ ರಾತ್ರಿ ಹೊರಗೆ ಹೋಗುವಾಗ ನಿಮ್ಮಮ್ಮನಿಗೆ ಯಾವುದೇ ಸಂಶಯ ಇಲಿಲ್ಲ. ಆದರೆ, ಅಭಿಮನ್ಯುವಿನ ತಲೆಗೆ ಪೆಟ್ಟು ಬಿದ್ದ ನಂತರ ಅದು ನಾವಿಬ್ರು ಸೇಕೊಂಡು ಮಾಡಿದ ಕೆಲಸ ಅಂತ ತಿಳ್ಕೊಂಡು ನನ್ನೊಂದಿಗೆ ಬಾಯಿ ಬಡ್ಕೊಂಡಿದ್ದಳು. ಅವಳ ಬಾಯಿ ಮುಚ್ಚಿಸುವಷ್ಟರಲ್ಲಿ ನನ್ಗೆ ಸಾಕುಸಾಕಾಗಿ ಹೋಯ್ತು. ಮತ್ತೆ ಸಮಸ್ಯೆಯ ಸುಳಿಯಲಿ ಸಿಲುಕಿಕೊಳ್ಳುವುದು ಬೇಡ. ಆ ಜವಾಬ್ದಾರಿಯನ್ನ ಯಾರಿಗಾದ್ರೂ ವಹಿಸಿಕೊಡು ವುದೇ ವಾಸಿ. ಒಂದಷ್ಟು ಹಣ ಖರ್ಚಾದ್ರೂ ಪವಾಗಿಲ್ಲ.

ನೀವಂದುಕೊಂಡಂತೆ ಆಗ್ಲಿ ಅಪ್ಪ. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡ್ತೇನೆ. ರಜೆ ಮುಗಿಸಿಕೊಂಡು ಬೆಂಗಳೂರಿಗೆ ಹೋದ ನಂತರ ಅಲ್ಲಿಂದ ಸುಫಾರಿ ಕಿಲ್ಲಸ್‌ಗಳನ್ನ ಕಳುಹಿಸಿಕೊಡ್ತೇನೆ. ಅವರಿಗೆ ಉಳಿದುಕೊಳ್ಳೋದಕ್ಕೆ ಯಾವುದಾದರೊಂದು ಲಾಡ್ಜ್ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿಕೊಂಡ ಪ್ರೀತಮ್.

ದೂರದಲ್ಲಿ ನಿಂತಿದ್ದ ಲೀಲಾವತಿ ಎಲ್ಲವನ್ನೂ ಕಿವಿಗೊಟ್ಟು ಕದ್ದಾಲಿಸುತ್ತಿದ್ದರು. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಅಭಿಮನ್ಯು ಹೆಚ್ಚು ದಿನ ಬದುಕುಳಿಯುವುದಿಲ್ಲ. ಪಾಪ, ಬಡ ಹುಡುಗ. ಏನು ತಪ್ಪು ಮಾಡಿದ ಅಂತ ಇಂತಹ ಘೋರ ಶಿಕ್ಷೆ ಕೊಡ್ತಾ ಇದ್ದಾರೆ? ತಪ್ಪು ಅವನೊಬ್ಬನೇ ಮಾಡಿರೋದಕ್ಕೆ ಸಾಧ್ಯವಿಲ್ಲ. ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಆಗೋದು. ತಪ್ಪು ಮಗಳದ್ದೂ ಇದೆ. ಅವಳಿಗೆ ಶಿಕ್ಷೆ ನೀಡೋದು ಬಿಟ್ಟು ಪಾಪದ ಹುಡುಗನ ಪ್ರಾಣ ತೆಗೆಯಲು ಹೊರಟಿದ್ದಾರೆ. ಇಂತಹ ಅಯೋಗ್ಯನೊಂದಿಗೆ ಇನ್ನು ಜೀವನ ನಡೆಸುವುದಾದರೂ ಹೇಗೆ? ದೇವರೇ ಆದಷ್ಟು ಬೇಗ ನನ್ನ ಇಲ್ಲಿಂದ ಕರೆದೊಯ್ದು ಬಿಡು. ನನ್ಗಂತೂ ಸಾಕಾಗಿ ಹೋಗಿದೆ ಈ ಜೀವನ ಎಂದು ಮನದಲ್ಲಿ ಅಂದುಕೊಂಡ ಲೀಲಾವತಿ ಕಣ್ಣೀರಿನ ಕಡಲಾದರು.

ಮನೆಯಂಗಳದಲ್ಲಿ ಅಭಿಮನ್ಯುವಿನ ಹತ್ಯೆಗೆ ಸಂಚು ರೂಪಿಸಿ ಮನೆಯೊಳಗೆ ಪ್ರವೇಶಿಸಿದ ಇಬ್ಬರು ಬೇರೊಂದು ವಿಚಾರದ ಬಗ್ಗೆ ಚರ್ಚೆಯಲ್ಲಿ ತೊಡಗಿದರು. ರಾಜಶೇಖರ್ ಬಳಿ ಎಂದಿನಂತೆ ಸಹಜವಾಗಿ ತೆರಳಿದ ಲೀಲಾವತಿ ರೀ.. ತವರು ಮನೆಗೆ ಹೋಗದೆ ತುಂಬಾ ವರ್ಷ ಆಯ್ತು. ನಾಳೆ ಹೋಗಿ ಒಂದು ದಿನ ಇದ್ದು ಬತೇನೆ. ವಿನಯವಾಗಿ ಕೇಳಿಕೊಂಡರು.

ಒಂದು ದಿನ ಏನು ಒಂದುವಾರ ಬೇಕಾದ್ರೂ ಇದ್ದು ಬಾ. ನಂದೇನು ಅಭ್ಯಂತರವಿಲ್ಲ. ನೀನು ತವರು ಮನೆಗೆ ಹೋಗದೆ ಐದಾರು ವರ್ಷಗಳೇ ಕಳೆದಿಬೇಕು. ಹೋಗಿ ಬಾ. ಮನೆಯಲ್ಲಿ ಎಲ್ಲರನ್ನ ಕೇಳ್ದೆ ಅಂತ ಹೇಳು ಎಂದು ಲೀಲಾವತಿಯ ಕೋರಿಕೆಗೆ ಒಪ್ಪಿಗೆ ಸೂಚಿಸಿದರು.

ಪತ್ನಿ ಮನೆಯಲ್ಲಿ ಇಲ್ಲದಿದ್ದರೆ ಅಭಿಮನ್ಯುವಿನ ಕೊಲೆಗೆ ಬೇಕಾದ ಸಂಚು ರೂಪಿಸಲು ಸಹಕಾರಿಯಾಗುತ್ತದೆ ಎಂದು ತಿಳಿದು ಹರ್ಷಿತರಾದ ರಾಜಶೇಖರ್ ಪತ್ನಿಯ ತವರು ಮನೆ ಭೇಟಿ ಕಾಯಕ್ರಮಕ್ಕೆ ಹಸಿರುನಿಶಾನೆ ತೋರಿದರು. ಸದ್ಯ ಹೋಗೋದಕ್ಕೆ ಅವಕಾಶ ಮಾಡಿಕೊಟ್ಟರಲ್ಲ ಎಂದು ಲೀಲಾವತಿ ಹರ್ಷಿತರಾದರು.
* * *

ಅಭಿಮನ್ಯುವಿನ ಹತ್ಯೆಗೆ ಗಂಡ, ಮಗ ಸೇರಿಕೊಂಡು ಎರಡನೇ ಬಾರಿಗೆ ಸಂಚು ರೂಪಿಸುತ್ತಿರುವ ವಿಚಾರವನ್ನು ಮಗಳಿಗೆ ತಿಳಿಸಿ ಅಭಿಮನ್ಯುವಿನ ಪ್ರಾಣ ಉಳಿಸಬೇಕೆಂದು ನಿರ್ಧರಿಸಿದ ಲೀಲಾವತಿ ಗಂಡನಿಗೆ ತವರು ಮನೆಗೆ ಹೋಗಿ ಬರುತ್ತೇನೆಂದು ಸುಳ್ಳು ಹೇಳಿ ನೇರವಾಗಿ ಮೈಸೂರಿನ ಕಡೆಗೆ ತಾವೇ ಕಾರನ್ನು ಚಾಲಿಸುತ್ತಾ ತೆರಳಿದರು.

ಮೈಸೂರಿಗೆ ತಲುಪಿದೊಡನೆ ಮಗಳನ್ನು ಹಾಸ್ಟೆಲ್‌ಗೆ ಕರೆಯಿಸಿಕೊಂಡ ಲೀಲಾವತಿ ಮಗಳನ್ನು ತಬ್ಬಿಕೊಂಡು ಅತ್ತುಬಿಟ್ಟರು. ನೀನು ಕಲ್ಪನೆ ಮಾಡಿಕೊಂಡಂತೆ ಅಭಿಮನ್ಯು ಜೊತೆ ಇನ್ನು ಮುಂದೆ ಸುಂದರವಾದ ಬದುಕು ಕಟ್ಟಿಕೊಳ್ಳೋದಕ್ಕೆ ಸಾಧ್ಯವಿಲ್ಲ ಅಕ್ಷರ. ಎಲ್ಲಾ ಮುಗಿದೋಯ್ತು… ಎಂದು ಗೋಳಾಡಿದರು.

ಅಮ್ಮನನ್ನು ಸಮಾಧಾನ ಪಡಿಸಿದ ಅಕ್ಷರ, ಅಂತಹ ಆಗಬಾರದ ಅನುಹುತ ಏನಾಗಿದೆ? ಯಾಕಾಗಿ ಇಷ್ಟೊಂದು ಗೋಳಾಡ್ತಾ ಇದ್ದೀರ? ಕೇಳಿದಳು.

ಅಕ್ಷರ, ನೀನು ಅಭಿಮನ್ಯುವನ್ನು ಮರೆತು ಬಿಡೋದೇ ವಾಸಿ. ನೀನಂದುಕೊಂಡಂತೆ ಬೇರೆ ಯಾರೋ ಅಭಿಮನ್ಯುವನ್ನು ಕೊಲ್ಲೋದಕ್ಕೆ ನೋಡ್ಲಿಲ್ಲ. ನಿಮ್ಮಪ್ಪ, ಅಣ್ಣ ಇಬ್ರು ಸೇಕೊಂಡು ಆ ಕೆಲಸ ಮಾಡಿದ್ರು. ಈಗ ಯಾವುದೇ ವಿಚಾರ ಗೊತ್ತಿಲ್ಲದವರ ಹಾಗೆ ನಾಟಕ ಆಡ್ತಾ ಇದ್ದಾರೆ. ಅಭಿಮನ್ಯುವಿಗೆ ಎಚ್ಚರದಿಂದ ಇರೋದಕ್ಕೆ ಹೇಳು. ನೀನು ಪ್ರೀತಿ ಮಾಡೋದನ್ನ ಮುಂದು ವರೆಸಿದರೆ ಅಭಿಮನ್ಯು ಹೆಚ್ಚು ಕಾಲ ಬದುಕುಳಿಯುವ ಭರವಸೆ ನನ್ಗೆ ಇಲ್ಲ. ನಿನ್ನ ಪ್ರೀತಿಯಿಂದಾಗಿ ಅನ್ಯಾಯವಾಗಿ ಆ ಬಡ ಹುಡುಗನ ಜೀವ ತೆಗೆದು ಬಿಡ್ತಾರೆ, ಆ ಪಾಪಿಗಳು. ದಯವಿಟ್ಟು ಅಭಿಮನ್ಯುವನ್ನು ಮರೆತು ಬಿಡು ಮಗಳ ಬಳಿ ಕೈ ಮುಗಿದು ಕೇಳಿಕೊಂಡರು.

ಬರಸಿಡಿಲು ಬಡಿದಂತೆ ಒಂದೆರಡು ನಿಮಿಷಗಳ ಕಾಲ ಮಾತು ಹೊರಡದೆ ಕಲ್ಲಾಗಿ ಹೋದ ಅಕ್ಷರಳ ಕಣ್ಗಳಿಂದ ಕಣ್ಣೀರ ಧಾರೆ ಹರಿಯಲು ಪ್ರಾರಂಭಿಸಿತು. ಅಮ್ಮ…, ಅಭಿಮನ್ಯುವನ್ನು ನನ್ನಿಂದ ಮರೆಯೋದಕ್ಕೆ ಸಾಧ್ಯವಿದೆಯಾ? ಕೇಳಿದಳು.

ಇನ್ನೇನು ಮಾಡೋದಕ್ಕೆ ಸಾಧ್ಯ ಹೇಳು ನನ್ನ ಕಂದ. ನನ್ಗೆ ತೋಚಿದ್ದನ್ನ ನಾನು ಹೇಳ್ದೆ. ನನ್ಗೂ ಈ ಬದುಕು ಸಾಕಾಗಿ ಹೋಗಿದೆ. ನಿಮ್ಮಪ್ಪನೊಂದಿಗೆ ಜೀವನ ನಡೆಸಿದ್ದು ಸಾಕೆನ್ನಿಸ್ತಾ ಇದೆ. ಅಭಿಮನ್ಯು ತುಂಬಾ ಒಳ್ಳೆಯ ಹುಡುಗ. ಅವನಿಗೆ ಈ ವಿಚಾರ ಗೊತ್ತಾದ್ರೆ ತುಂಬಾ ನೊಂದುಕೊಳ್ತಾನೆ. ಏನ್ಮಾಡೋದಕ್ಕೆ ಸಾಧ್ಯ ಹೇಳು? ಜೀವನದಲ್ಲಿ ಒಂದನ್ನ ಪಡೆದುಕೊಳ್ಳುವಾಗ ಮತ್ತೊಂದನ್ನ ಕಳೆದುಕೊಳ್ಬೇಕು. ಒಂದ್ವೇಳೆ ಅಭಿಮನ್ಯುವನ್ನು ಪಡೆದುಕೊಳ್ಳಲೇಬೇಕೂಂತ ನೀನು ಹಟ ಹಿಡಿದು ಕೂತ್ಕೊಂಡ್ರೆ ಅಭಿಮನ್ಯು ಪ್ರಾಣ ಕಳೆದುಕೊಳ್ಬೇಕಾಗುತ್ತೆ. ಪ್ರೀತಿಗಿಂತ ಜೀವ ಮುಖ್ಯ ಅಂಥ ನನಗನ್ನಿಸ್ತಾ ಇದೆ. ಜೀವ ಕಳೆದುಕೊಂಡು ಸಾಧಿಸುವಂತಹದ್ದು ಏನೂ ಇಲ್ಲ. ನೀನು ಅಭಿಮನ್ಯುವನ್ನು ದೈಹಿಕವಾಗಿ ಕಳೆದುಕೊಳ್ಳಬಹುದು. ಆದರೆ, ಮಾನಸಿಕವಾಗಿ ಅಭಿಮನ್ಯುವನ್ನು ನಿನ್ನಿಂದ ದೂರ ಸರಿಸಲು ಯಾರಿಂದಲೂ ಸಾಧ್ಯವಿಲ್ಲ. ಇನ್ನು ನಿನ್ಗೆ ಅಭಿಮನ್ಯುವನ್ನು ಮನಸ್ಸಿನಲ್ಲಿ ಮಾತ್ರ ಪ್ರೀತಿಸೋದಕ್ಕೆ, ಪೂಜಿಸೋದಕ್ಕೆ ಸಾಧ್ಯ. ಎಂದುಹೇಳಿ ಕಣ್ಣೀರು ಸುರಿಸಿದರು.

ಅಕ್ಷರ ಅಮ್ಮನ ಮಾತು ಕೇಳಿ ಕುಸಿದು ಬಿದ್ದಳು. ಲೀಲಾವತಿ ಆತಂಕಗೊಂಡು ಪಕ್ಕದಲ್ಲಿಯೇ ಇದ್ದ ನೀರಿನ ಬಾಟಲಿಯಿಂದ ಮಗಳ ಮುಖಕ್ಕೆ ನೀರು ಚಿಮುಕಿಸಿ ಎಬ್ಬಿಸಿ ತನ್ನ ಮಡಿಲಲ್ಲಿ ಮಲಗಿಸಿಕೊಂಡು ಅಕ್ಕರೆಯಿಂದ ತಲೆಯನ್ನು ತಡವಿದರು. ಕೆಲವು ನಿಮಿಷಗಳ ಬಳಿಕ ಸುಧಾರಿಸಿಕೊಂಡ ಅಕ್ಷರ ಮುಂದೇನು? ಎಂಬ ಚಿಂತೆಗೆ ಬಿದ್ದಳು. ಕಣ್ಗಳಿಂದ ಜಲಪಾತದಂತೆ ಕಣ್ಣೀರಧಾರೆ ಹರಿಯಲು ಪ್ರಾರಂಭಿಸಿತು.

ಉಸಿರಾಡುತ್ತಿರುವುದೇ ಆ ಒಂದು ನಿರ್ಮಲವಾದ ಪ್ರೀತಿಯನ್ನು ಪಡೆಯುದಕೋಸ್ಕರ. ಆ ಪ್ರೀತಿನೇ ಇಲ್ಲ ಅಂದ ಮೇಲೆ ಬದುಕಿದ್ದೇನು ಪ್ರಯೋಜನ? ಕುಟುಂಬದ ಗೌರವ ಉಳಿಯಬೇಕೆಂಬ ಒಂದೇ ಉದ್ದೇಶಕ್ಕೆ ತಾನೇ ಅಪ್ಪ ಇಂಥಹ ಹೀನ ಕೃತ್ಯಕ್ಕೆ ಕೈ ಹಾಕುತ್ತಾ ಇರೋದು. ನಾನೆ ಇಲ್ಲವಾದರೆ…? ಅದೇ ಸರಿಯಾದ ಮಾರ್ಗ. ಇನ್ನು ಬದುಕಿದ್ದು ಪ್ರಯೋಜನವಿಲ್ಲ ಅಂದುಕೊಂಡಳು. ಆದರೆ, ಕೆಲವು ನಿಮಿಷ ಕೂತು ಆಲೋಚಿಸಿದಾಗ ನಾನು ಸತ್ತರೆ ಅಭಿಮನ್ಯು ಬದುಕುಳಿಯುತ್ತಾನಾ? ನಾನಿಲ್ಲ ಅಂದಮೇಲೆ ಅವನು ಖಂಡಿತ ಬದುಕುಳಿಯುವುದಿಲ್ಲ. ನನ್ನ ಈ ಬದುಕು ನಾಶವಾದರೂ ಚಿಂತೆ ಇಲ್ಲ. ಅವನ ಬದುಕು ಸುಂದರವಾಗಿ ಅರಳಬೇಕು. ಅದಕ್ಕಾಗಿ ಪ್ರೀತಿಯನ್ನು ತ್ಯಾಗ ಮಾಡಲೇ ಬೇಕು. ಎಂದು ತೀರ್ಮಾನಿಸಿದಳು.

ಇಷ್ಟೊಂದು ವರ್ಷ ಪ್ರೀತಿಯ ಸವಿಯನ್ನು ಉಣಬಡಿಸಿ ಇದೀಗ ಏಕಾ‌ಏಕಿ ಇನ್ನು ಮುಂದೆ ನಿನ್ನ ಪ್ರೀತಿ ಮಾಡೋದಕ್ಕೆ ಸಾಧ್ಯವಿಲ್ಲವೆಂದು ಹೇಳಿದರೆ ಅಭಿಮನ್ಯುವಿಗೆ ತಾನು ವಿಷ ಉಣಿಸಿದಂತಾಗುವುದಿಲ್ಲವೇ? ನನ್ನ ಬಗ್ಗೆ ಅಭಿಮನ್ಯು ಅದೆಷ್ಟು ಅಸಹ್ಯ ಪಟ್ಟುಕೊಳ್ಳೋದಿಲ್ಲ? ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು ಅಪ್ಪನ ಆಸೆಯಂತೆ ಹೊಸ ಸಂಬಂಧ ಬೆಳೆಸೋದಕ್ಕೆ ತನ್ನಿಂದ ಸಾಧ್ಯವಿದೆಯಾ? ಅಭಿಮನ್ಯುವಿನ ಹೊರತಾಗಿ ಮತ್ತೊಬ್ಬ ಪುರುಷನನ್ನು ತನ್ನ ಹೃದಯಲ್ಲಿ ತಂದು ಕೂರಿಸಿಕೊಳ್ಳೋದಕ್ಕೆ ಸಾಧ್ಯವಿದೆಯಾ? ನಾನೆಂತಾ ಪಾಪಿ. ಈ ಜಗತ್ತಿನಲ್ಲಿ ನನ್ನಷ್ಟು ನತದೃಷ್ಟ ಹೆಣ್ಣು ಮತ್ತೊಬ್ಬಳಿಲ್ಲ. ನಾನೇನು ಪಾಪ ಮಾಡಿದೆ? ನಾನ್ಯಾರಿಗೆ ದ್ರೋಹ ಮಾಡಿದೆ? ನಂಬಿದ ದೇವರು ನನಗೆ ಕೊನೆಗೆ ಕೈ ಕೊಟ್ಟು ಬಿಟ್ಟ. ಅವನು ಪೂಜೆಗೆ ಅರ್ಹನಲ್ಲ. ಇನ್ನು ಮುಂದೆ ದೇವರಿಗೆ ಪೂಜೆ ಸಲ್ಲಿಸಿ ಪ್ರಯೋಜನವಿಲ್ಲ. ಅಭಿಮನ್ಯು ಇನ್ನೆಂದೂ ತನ್ನವನಾಗಲು ಸಾಧ್ಯವಿಲ್ಲ. ಅವನನ್ನೇ ದೇವರೆಂದು ಪೂಜಿಸುತ್ತೇನೆ. ನನಗದಷ್ಟೇ ಸಾಕು ಅಂದುಕೊಂಡು ಕಣ್ಣೀರು ಸುರಿಸಿದಳು.

ಕಣ್ಣೀರು ಒರೆಸಿಕೊಂಡ ಅಕ್ಷರ ಆಯ್ತು, ಅಮ್ಮ, ನೀವಂದುಕೊಂಡಂತೆ ಆಗಲಿ. ಆ ದೇವರು ನನ್ನ ಹಣೆಬರಹ ಚೆನ್ನಾಗಿ ಬರೆದಿಲ್ಲ ಅಂತ ಕಾಣುತ್ತೆ. ಸಣ್ಣ ವಯಸ್ಸಿನಿಂದಲೂ ಕೂಡ ನಾನು ತುಂಬಾ ಇಷ್ಟಪಟ್ಟದ್ದು ಯಾವುದು ಕೂಡ ನನ್ಗೆ ಸಿಕ್ಕಿಲ್ಲ. ದೇವರು ಈಗ ನನ್ನ ಪ್ರೀತಿ ಕಸಿದುಕೊಳ್ಳೋದಕ್ಕೆ ನೋಡ್ತಾ ಇದ್ದಾನೆ. ನನ್ನ ಹಣೆಬರಹನೇ ಅಂಥದ್ದು. ಇನ್ನು ಯಾರನ್ನ ದೂರಿ ಏನು ಪ್ರಯೋಜನ ಹೇಳಿ? ಅಪ್ಪ ನಮ್ಮಿಬ್ಬರನ್ನ ದೂರ ಮಾಡಿ ಅದೇನು ಸಾಧಿಸಬೇಕೂಂತ ಇದ್ದಾರೋ ಸಾಧಿಸಲಿ. ಅವರಿಗೆ ಅವರ ಶ್ರೀಮಂತಿಕೆ, ಗೌರವ ಹಾಳಾಗಬಾರದು. ಅದು ಬಿಟ್ಟರೆ ಬೇರೊಂದು ಪ್ರಪಂಚ ಅವರಿಗೆ ಗೊತ್ತಿಲ್ಲ. ಈ ಪ್ರೀತಿ, ವಿಶ್ವಾಸ ಅವರಿಗೆ ಬೇಕಾಗಿಲ್ಲ. ಅಂಥವರೊಂದಿಗೆ ವಾದಮಾಡಿ ಗೆಲ್ಲೋದಕ್ಕೆ ಸಾಧ್ಯ ಇಲ್ಲ. ನೀವೇನು ಚಿಂತೆ ಮಾಡ್ಕೋಬೇಡಿ. ಇದು ನನ್ನ ಹಣೆಬರಹ ಅಂತ ತಿಳ್ಕೊಂಡು ಎಲ್ಲವನ್ನೂ ಅನುಭವಿಸುತ್ತೇನೆ. ನನ್ನಿಂದಾಗಿ ಅಭಿಮನ್ಯುವಿನ ಬದುಕು ಹಾಳಾಗ ಬಾರದು. ನಾನು ಸತ್ತು ಹೋದರೆ ಯಾರಿಗೂ ಯಾವುದೇ ರೀತಿಯ ನಷ್ಟವಾಗೋದಿಲ್ಲ. ಆದರೆ, ಅಭಿಮನ್ಯುವಿಗೆ ಏನಾದರು ಆದರೆ ಅವರ ಅಮ್ಮನಿಗ್ಯಾರು ದಿಕ್ಕು? ಅಭಿಮನ್ಯುವಿನ ದುಡಿಮೆಯಲ್ಲಿಯೇ ಅವರಮ್ಮ ಜೀವನ ಸಾಗಿಸ್ತಾ ಇದ್ದಾರೆ. ಅಭಿಮನ್ಯು ಇಲ್ಲದಿದ್ದರೆ ಅವರು ಖಂಡಿತ ಬದುಕುಳಿಯುವುದಿಲ್ಲ. ಅಭಿಮನ್ಯುವಿನ ಒಳಿತಿಗೋಸ್ಕರ ನನ್ನ ಆಸೆ, ಆಕಾಂಕ್ಷೆಗಳನ್ನೆಲ್ಲ ಮೂಟೆ ಕಟ್ಟಿ ಇಟ್ಟುಬಿಡ್ತೇನೆ ಸಂಕಲ್ಪ ಕೈಗೊಂಡಂತೆ ಹೇಳಿದಳು ಅಕ್ಷರ. ರಾತ್ರಿ ಮಗಳೊಂದಿಗೆ ಹಾಸ್ಟೇಲ್‌ನಲ್ಲಿಯೇ ಕಳೆದ ಲೀಲಾವತಿ ಬೆಳಗ್ಗಿನ ಜಾವ ದುಃಖದೊಂದಿಗೆ ಮನೆಗೆ ಹಿಂತಿರುಗಿದರು.

ಅಕ್ಷರ ಅಭಿಮನ್ಯುವಿನ ಬಗ್ಗೆ ಯೋಚಿಸಿ ಯೋಚಿಸಿ ದುಃಖದ ಕಡಲಿನಲ್ಲಿ ಆಗಿಂದಾಗೆ ಮುಳುಗಿ ಮೇಲೇಳುತ್ತಿದ್ದಳು. ಕಣ್ಣೀರು ಬರಿದಾಗುವಷ್ಟು ಅತ್ತು ಬಿಟ್ಟಳು. ಕೊಠಡಿಯಲ್ಲಿದ್ದ ದೇವರ ಫೋಟಗಳನ್ನು ಎತ್ತಿ ಕಸದ ಬುಟ್ಟಿಗೆ ಹಾಕಿದಳು.

ಇನ್ನು ದೇವರನ್ನು ಪೂಜಿಸಿ ಏನು ಪ್ರಯೋಜನ? ಎಂದು ಸಿಡುಕಿದಳು.

ಕಸದ ಬುಟ್ಟಿಯಲ್ಲಿ ಬಿದ್ದಿದ್ದ ದೇವರ ಫೋಟವನ್ನು ನೋಡುತ್ತಾ ನಾನು ನಿನ್ಗೆ ಅವತ್ತೇ ಹೇಳಿಲ್ವ? ಅಭಿಮನ್ಯು ಎಲ್ಲಾದ್ರು ನನ್ಗೆ ಸಿಗದೆ ಹೋದ್ರೆ ನಿನ್ನ ಪೂಜಿಸೋದಿಲ್ಲ ಅಂತ. ನನ್ನ ಮಾತು ಕೇಳಿಸಿಕೊಂಡ್ರೂ ಕೂಡ ನೀನು ಮತ್ತೆ ನಮ್ಮಿಬ್ಬರನ್ನ ದೂರ ಮಾಡ್ತಾ ಇದ್ದೀಯ. ಇದು ನಿನ್ಗೆ ಸರಿ ಅನ್ನಿಸ್ತಾ ಇದೆಯಾ? ನೀನು ನನ್ನ ಅಪ್ಪನಂತೆ ತುಂಬಾ ಕ್ರೂರಿ. ಅದೆಷ್ಟು ನಿರ್ದಯವಾಗಿ ಅಭಿಮನ್ಯು ನನ್ನಿಂದ ದೂರವಾಗುವಂತೆಮಾಡಿ ಮೌನವಾಗಿ ಕೂತುಬಿಟ್ಟೆ. ಇನ್ನೆಂದು ನನ್ನಿಂದ ಪೂಜೆ ಸ್ವೀಕಾರ ಮಾಡೋದಕ್ಕೆ ನಿನ್ಗೆ ಯಾವುದೇ ಅರ್ಹತೆ ಇಲ್ಲ. ನಾನು ಹಾಳಾಗಿ ಹೋಗ್ತೇನೆ. ಅದನ್ನ ನೋಡಿ ಸಂತೃಪ್ತಿ ಪಟ್ಕೋ ಎಂದು ದೇವರೊಂದಿಗೆ ರೇಗಾಡಿದಳು.

ಅಕ್ಷರ ದಿನನಿತ್ಯ ದೇವರಿಗೆ ಪೂಜೆ ಸಲ್ಲಿಸಿ, ಅಭಿಮನ್ಯುವಿನೊಂದಿಗೆ ಮುಂದಿನ ವೈವಾಹಿಕ ಜೀವನದ ಬಗ್ಗೆ ಗಂಟೆ ಗಟ್ಟಲೇ ಮಾತನಾಡಿ ಆ ಸಂತೋಷದಲ್ಲಿಯೇ ವೈವಾಹಿಕ ಜೀವನದ ಬಗ್ಗೆ ಕನಸು ಕಾಣುತ್ತಾ ಮಲಗಿ ಸುಖನಿದ್ರೆ ಮಾಡುತ್ತಿದ್ದ ಬೆಡ್‌ರೂಂನಲ್ಲಿ ಆಕೆ ಕಣ್ಣೀರು ಸುರಿಸುತ್ತಾ ಕುಳಿತುಬಿಟ್ಟಳು. ತಡರಾತ್ರಿಯವರೆಗೂ ನಿದ್ರೆ ಬಳಿಗೆ ಸುಳಿಯಲಿಲ್ಲ. ಅಭಿಮನ್ಯು ಇನ್ನು ಮುಂದೆ ತನ್ನವನಾಗೋದಕ್ಕೆ ಸಾಧ್ಯವಿಲ್ಲ ಎಂಬ ಮಾತು ಆಕೆಯನ್ನು ಬಹುವಾಗಿ ಕಾಡತೊಡಗಿತು. ಜೊತೆಗೆ ತಾನಿನ್ನು ಏಕಾಂಗಿ ಎಂಬ ಭಾವನೆ ಬಲವಾಗುತ್ತಾ ಹೋಯಿತು. ಊಟಿಗೆ ತೆರಳಿ ಅಭಿಮನ್ಯುವಿನೊಂದಿಗೆ ಕಳೆದ ಆರು ರಾತ್ರಿಗಳನ್ನು ಹೊರತು ಪಡಿಸಿದರೆ ಅಭಿಮನ್ಯುವಿನೊಂದಿಗೆ ಯಾವತ್ತೂ ಅಕ್ಷರ ರಾತ್ರಿಯನ್ನು ಕಳೆದಿರಲಿಲ್ಲ. ಪ್ರೀತಿಸಿದ ದಿನಗಳಿಂದ ಹಿಡಿದು ಇಲ್ಲಿಯವರೆಗೆ ಅದೆಷ್ಟೋ ರಾತ್ರಿಗಳನ್ನು ಕಳೆದಿದ್ದಾಳೆ. ಆ ರಾತ್ರಿಗಳಲ್ಲಿ ತಾನೊಬ್ಬಳೇ ಇದ್ದರೂ ಕೂಡ ಅಭಿಮನ್ಯು ಜೊತೆಗಿದ್ದು ಜೋಗುಳ ಹಾಡಿ ಮಲಗಿಸುತ್ತಿದ್ದ ಅನುಭವ ಆಕೆಗಾಗುತಿತ್ತು. ಆದರೆ, ಇಂದು ತಾನು ಏಕಾಂಗಿ, ಮುಂದೆಯೂ ಏಕಾಂಗಿ ಎಂಬ ಭಾವನೆ ಮೊಳಕೆಯೊಡೆದು ಆಕೆಯ ನೆಮ್ಮದಿಯನ್ನು ಕಸಿದುಕೊಂಡಿತು. ರಾತ್ರಿಪೂರ ಅಭಿಮನ್ಯುವಿನ ಕನವರಿಕೆಯಲ್ಲಿ ಕಳೆದ ಅಕ್ಷರ ಬೆಳಗ್ಗಿನ ಜಾವ ಸ್ವಲ್ಪ ಹೊತ್ತು ನಿದ್ರೆಗೆ ಜಾರಿದಳು. ಆದರೂ ಬೇಗನೇ ಎಚ್ಚರವಾಯಿತು. ಆಕೆಯ ಬದುಕಿನಲ್ಲಿ ನೆಮ್ಮದಿ ಎಂಬುದು ಹೊರಟು ಹೋಯಿತು.
* * *

ಮೈಸೂರಿನಿಂದ ಹೊರಟು ನೇರ ಅಭಿಮನ್ಯುವಿನ ಬಳಿಗೆ ತೆರಳಿದ ಅಕ್ಷರ ತನ್ನ ನೋವೆಲ್ಲವನ್ನು ನುಂಗಿಕೊಂಡು ಅಭಿಮನ್ಯುವಿನ ಕಡೆಗೊಮ್ಮೆ ನೋಡಿ ನೇರವಾಗಿ ವಿಷಯಕ್ಕೆ ಬಂದಳು. ಇನ್ನೆಂದೂ ಕೂಡ ನಿನ್ನ ಪ್ರೀತಿಸೋದಕ್ಕೆ ಸಾಧ್ಯವಿಲ್ಲ ಅಭಿ. ಮನಸ್ಸು ಮುರಿದು ಹೋಗಿದೆ. ಪ್ರೀತಿ ಎಷ್ಟು ಸುಂದರ ಅಂದುಕೊಂಡಿದ್ದೇನೋ ಅಷ್ಟೇ ಕಠೋರ ಅನ್ನುವ ಅನುಭವ ಈಗ ಆಗುತ್ತಿದೆ. ಇನ್ನೆಂದೂ ನಿನ್ನವಳಾಗಲು ನನ್ನಿಂದ ಸಾಧ್ಯವಿಲ್ಲ. ಐ ~ಆಮ್ ವೆರಿ ಸಾರಿ. ನನ್ನ ಕನವರಿಕೆಯಲ್ಲಿಯೇ ಕಾಲ ಕಳೀಬೇಡ. ನಿನ್ನದೇ ಆದ ಒಂದು ಸುಂದರ ಬದುಕು ಕಟ್ಟಿಕೋ. ಅಂದ ಅಕ್ಷರ ಉಕ್ಕಿ ಬರುತ್ತಿದ್ದ ದುಃಖವನ್ನು ಅದುಮಿಟ್ಟುಕೊಳ್ಳಲು ಪ್ರಯತ್ನಿಸಿದಳು.

ಇವಳ ತಲೆಹರಟೆ ಸಾಮಾನ್ಯವಾಗಿ ಇದ್ದದೇ ಎಂದು ತಿಳಿದ ಅಭಿಮನ್ಯು ಆಯ್ತು ಅದಕ್ಕೇನಂತೆ. ನೀನಲ್ಲದೆ ಇದ್ದರೆ ಮತ್ತೊಬ್ಬಳು ತಮಾಷೆಯಾಗಿ ಉತ್ತರ ನೀಡಿದ. ಅಭಿಮನ್ಯು ಎಲ್ಲಾ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳುವ ಮನುಷ್ಯ. ತನ್ನ ಹತ್ಯೆಗೆ ಯತ್ನಿಸಿದ ವಿಚಾರವನ್ನೇ ಲಘುವಾಗಿ ತೆಗೆದುಕೊಂಡವನು. ಹತ್ಯೆಗೆ ಯಾರು ಪ್ರಯತ್ನ ಮಾಡಿದರು ಎಂದು ಒಂದು ದಿನ ಕೂಡ ಕೂತು ಯೋಚನೆ ಮಾಡಿದವನಲ್ಲ. ಎದುರಿಗೆ ಸಿಕ್ಕವರೊಂದಿಗೆ ನಗುಮೊಗದಿಂದಲೇ ಮಾತಾಡಿಸುತ್ತಿದ್ದ. ಇಂತಹ ವ್ಯಕ್ತಿಗೆ ಪ್ರೀತಿಯನ್ನು ತಿರಸ್ಕರಿಸುವ ವಿಚಾರ ಮನಮುಟ್ಟುವಂತೆ ಹೇಳುವುದಾದರೂ ಹೇಗೆ? ಎಂಬ ಚಿಂತೆಗೆ ಬಿದ್ದಳು.

ಅಭಿ, ನಾನು ತಮಾಷೆ ಮಾಡ್ತಾ ಇಲ್ಲ. ಇನ್ನು ಮುಂದೆ ನಿನ್ನ ಪ್ರೀತಿ ಮಾಡೋದಕ್ಕೆ ನನ್ನಿಂದ ಸಾಧ್ಯ ಇಲ್ಲ. ನೀನು ಹೇಗೆ ನನ್ಗೆ ಮುಖ್ಯನೋ ಹಾಗೆ ನನ್ನ ಕುಟುಂಬ ಕೂಡ. ಅವರನ್ನ ಅಗಲಿ ನನ್ನಿಂದ ಇರೋದಕ್ಕೆ ಸಾಧ್ಯ ಇಲ್ಲ. ಅಪ್ಪ ತೋರ್ಪಡಿಕೆಗೋಸ್ಕರ ನಮ್ಮಿಬ್ಬರನ್ನ ಒಂದು ಮಾಡುವ ನಾಟಕವಾಡ್ತಾ ಇದ್ದಾರೆ. ಅವರ ಮನಸ್ಸಿನಲ್ಲಿ ಬೇರ್ಪಡಿಸುವ ಉದ್ದೇಶ ಮಾತ್ರ ಇದೆ. ಒಂದ್ವೇಳೆ ಅವರು ನೋಡಿದ ಹುಡುಗನೊಂದಿಗೆ ನಾನು ಮದ್ವೆ ಮಾಡಿಕೊಳ್ಳದೆ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆವೊಡ್ಡುತ್ತಿದ್ದಾರೆ. ನಾನೇನ್ಮಾಡ್ಲಿ ಯಾರೊಬ್ಬರನ್ನೂ ಕಳೆದುಕೊಂಡು ಬದುಕಿರೋದಕ್ಕೆ ನನ್ನಿಂದ ಸಾಧ್ಯ ಇಲ್ಲ ಸತ್ಯಾಂಶದ ಜೊತೆಗೆ ಸ್ವಲ್ಪ ಸುಳ್ಳನ್ನೂ ಕೂಡ ಬೆರೆಸಿದ ಅಕ್ಷರ ಅಭಿಮನ್ಯುವಿನ ಪ್ರೀತಿಗೆ ವಿದಾಯ ಹೇಳಲು ತೀರ್ಮಾನಿಸಿದಳು.

ಆಕೆಯ ಮಾತು ಕೇಳಿ ಆಘಾತಕ್ಕೆ ಒಳಗಾದ ಅಭಿಮನ್ಯು ಆಕೆಯ ಮೊಗವನ್ನೇ ಆಶ್ಚರ್ಯದಿಂದ ನೋಡುತ್ತಾ ನಿಂತುಬಿಟ್ಟ. ಆಕೆಯಿಂದ ಮತ್ತೆ ಮಾತು ಹೊರಡದೆ ಇದ್ದಾಗ ಮಾತು ಪ್ರಾರಂಭಿಸಿದ.

ಹಾಗಾದ್ರೆ ಇಷ್ಟು ವರ್ಷ ತೋರಿದ ಪ್ರೀತಿ ಕೇವಲ ನಾಟಕವಾ? ಬಿಡುವಿನ ವೇಳೆಯಲ್ಲಿ ಸಮಯ ಕಳೆಯೋದಕ್ಕೆ ನಾನು ನಿನ್ಗೆ ಬೇಕಾಗಿತ್ತು. ಇವತ್ತು ಬೇಡವಾಗಿದ್ದೇನೆ. ಬಡವರ ಬದುಕಿನಲ್ಲಿ ಆಟವಾಡುವುದೆಂದರೆ ಶ್ರೀಮಂತರಿಗೆ ಏನೋ ಒಂಥರಾ ಆನಂದ. ಇಷ್ಟು ದಿನ ನಿನ್ನ ಆಟದ ಬೊಂಬೆಯಾದೆ. ಇವತ್ತು ಬೇಡ ಅಂತ ಎತ್ತಿ ಎಸೆಯೋದಕ್ಕೆ ನೋಡ್ತಾ ಇದ್ದೀಯ. ಏನ್ಮಾಡೋದಕ್ಕೆ ಸಾಧ್ಯ ಹೇಳು? ಬಡವರ ಹಣೆಬರಹವೇ ಇಷ್ಟು. ಆದರೆ, ಒಂದು ಮಾತು ಚೆನ್ನಾಗಿ ನೆನಪಿಟ್ಟುಕೋ. ನಿನ್ನಷ್ಟು ದೊಡ್ಡ ಶ್ರೀಮಂತಿಕೆಯ ಬದುಕು ನನ್ನಿಂದ ನಡೆಸೋದಕ್ಕೆ ಸಾಧ್ಯವಿಲ್ಲ. ಆದರೆ, ನಿನಗಿಂತ ಸುಂದರವಾದ ಬದುಕು ನಡೆಸ್ತೇನೆ. ಆ ಭರವಸೆ ನನ್ಗೆ ಇದೆ. ದಯವಿಟ್ಟು ನನ್ನ ಕಣ್ಣ ಮುಂದೆ ನಿಲ್ಬೇಡ. ಹೊರಟು ಹೋಗು ಅರಚಿಕೊಂಡ.

ನೀನು ಸುಂದರವಾದ ಬದುಕು ನಡೆಸಬೇಕು ಅಭಿ, ಅದೇ ನನ್ನ ಆಸೆ. ಅಭಿಮನ್ಯುವಿಗೆ ಮಗಳನ್ನು ಕೊಟ್ಟು ಮದ್ವೆ ಮಾಡದೆ ದೊಡ್ಡ ತಪ್ಪು ಮಾಡಿಬಿಟ್ಟೆ ಅಂಥ ನಮ್ಮಪ್ಪ ಅಂದುಕೊಳ್ಳುವಷ್ಟು ಸುಂದರವಾಗಿ ನೀನು ಬದುಕು ನಡೆಸ್ಬೇಕು. ಆ ನಿನ್ನ ಸುಂದರ ವಾದ ಬದುಕನ್ನು ಕಣ್ತುಂಬ ನೋಡಿ ಸಂತೋಷ ಪಡ್ತೇನೆ. ನಗದಷ್ಟೇ ಸಾಕು. ಈ ಜಗತ್ತಿನಲ್ಲಿ ನಿನ್ನಷ್ಟು ಪ್ರೀತಿಸುವವನು ನನ್ಗೆ ಎಲ್ಲಿಯೂ ಸಿಗೋದಕ್ಕೆ ಸಾಧ್ಯವಿಲ್ಲ. ಆದರೆ ಆ ಪ್ರೀತಿಯನ್ನ ಸ್ವೀಕಾರ ಮಾಡೋದಕ್ಕೆ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದೇನೆ. ಮನೆಯಲ್ಲಿ ವಿರೋಧ ಇರುವಾಗ ಮದುವೆಯಾಗುವುದಾದರೂ ಹೇಗೆ? ಒಂದ್ವೇಳೆ ಮದುವೆಯಾದರೂ ನಮ್ಮನ್ನ ನೆಮ್ಮದಿಯಾಗಿ ಇರೋದಕ್ಕೆ ಬಿಡೋದಿಲ್ಲ. ದಯವಿಟ್ಟು ಅರ್ಥ ಮಾಡ್ಕೊಂಡು ನನ್ನ ಕಳುಹಿಸಿಕೊಡು. ನಿನ್ಗೆ ನನ್ನ ಮಾತು ದುಃಖ ತರಿಸುತ್ತದೆ ಎಂಬ ಅರಿವು ನನ್ಗೆ ಇದೆ. ಆದರೆ, ನಾನು ಈಗ ಅಸಹಾಯಕಳು. ನಾನು ನಿನ್ನ ದೈಹಿಕವಾಗಿ ತೊರೆದು ಹೋಗ್ತಾ ಇಬೊಹುದು. ಆದರೆ, ಮಾನಸಿಕವಾಗಿ ಎಂದೆಂದಿಗೂ ನಿನ್ನವಳೇ. ನೀನೇ ನನ್ನ ಮೊದಲನೇ ಗಂಡ. ಇನ್ನು ಮುಂದೆ ಬೇರೊಬ್ಬನೊಂದಿಗೆ ನಡೆಯಲಿರುವ ಮದ್ವೆ ಅದು ನನ್ನ ಪಾಲಿಗೆ ಎರಡನೇ ಮದ್ವೆ. ಈಗಾಗಲೇ ನಾನು ನಿನ್ನ ಮನಸ್ಸಿನಲ್ಲಿಯೇ ಮದ್ವೆಯಾಗಿ ಬಿಟ್ಟಿದ್ದೇನೆ ಅಭಿ, ನನ್ನ ಬೇರೆಯವರಿಗೆ ಕೊಟ್ಟು ಮದ್ವೆ ಮಾಡಿ ಅದೇನು ಸಾಧಿಸಬೇಕೂಂತ ಇದ್ದಾರೋ ಸಾಧಿಸಲಿ ದುಃಖವನ್ನು ಹೆಚ್ಚು ಹೊತ್ತು ತಡೆದಿಟ್ಟುಕೊಳ್ಳಲಾರದೆ ಬಿಕ್ಕಳಿಸಿ ಅತ್ತುಬಿಟ್ಟಳು.

ಹುಡುಗರ ಮನಸ್ಸನ್ನು ಗೆಲ್ಲೋದಕ್ಕೆ ಹುಡುಗಿಯರು ಸಾಮಾನ್ಯವಾಗಿ ಅನುಸರಿಸುವ ಸುಲಭ ವಿಧಾನವೇ ಕಣ್ಣೀರು! ಆ ಕಣ್ಣೀರಿನಲ್ಲಿ ಹುಡುಗರನ್ನು ಕರಗಿಸುವ ಕಲೆ ಅವರಿಗೆ ಕರತಲಾಮಲಕ. ಈಕೆ ಇಂದು ತನ್ನ ತೊರೆದು ಬೇರೊಬ್ಬನೊಂದಿಗೆ ಬದುಕು ಕಟ್ಟಿಕೊಳ್ಳಲು ಹೊರಟು ನಿಂತಿದ್ದಾಳೆ. ಇತ್ತ ತನ್ನ ಮನಸ್ಸಿಗೂ ನೋವಾಗಬಾರದು. ಅತ್ತ ಅವಳ ಆಸೆಯೂ ಈಡೇರಬೇಕು. ಅದಕೋಸ್ಕರ ಕಣ್ಣೀರು ಸುರಿಸುತ್ತಿದ್ದಾಳೆ. ಇವಳ ಕಣ್ಣೀರಿಗೆ ಇನ್ನೆಲ್ಲಿದೆ ಬೆಲೆ? ಅಂದುಕೊಂಡ ಅಭಿಮನ್ಯುವಿಗೆ ಅಕ್ಷರ ಮನದೊಳಗೆ ಅನುಭವಿಸುತ್ತಿರುವ ನೋವಿನ ವಿಚಾರ ತಿಳಿಯಲಿಲ್ಲ. ಎಲ್ಲಾ ನೋವನ್ನು ನುಂಗಿಕೊಂಡು ಅಭಿಮನ್ಯುವಿನ ಬದುಕು ಸುಂದರವಾಗಬೇಕೆಂದು ಪ್ರೀತಿಯನ್ನೇ ತ್ಯಾಗ ಮಾಡಲು ಹೊರಟು ನಿಂತಿರುವ ವಿಚಾರ ಅಭಿಮನ್ಯುಗಾದರೂ ಗೊತ್ತಾಗಲು ಹೇಗೆ ಸಾಧ್ಯ?

ಬಹುಶಃ ಈ ಬಡವನನ್ನ ಮದ್ವೆಯಾಗಿ ದೈಹಿಕ ಸುಖದ ಹೊರತಾಗಿ ಮತ್ತೇನು ಸುಖ ಕಾಣಲು ಸಾಧ್ಯ? ಅಂತ ನೀನು ಅಂದುಕೊಂಡಿರಬಹುದು. ಅದು ಸತ್ಯವೂ ಕೂಡ. ಸುಖದ ಸುಪ್ಪತ್ತಿಗೆಯಲ್ಲಿ ನಿನ್ನ ಮೆರೆಸೋದಕ್ಕೆ ನಾನು ಶ್ರೀಮಂತನಲ್ಲವಲ್ಲ! ನೀನು ನನ್ನವಳಾದರೆ ಮೊಗೆದಷ್ಟು ತೀರದ ಪ್ರೀತಿಯನ್ನು ಕೊಡುತ್ತಿದ್ದೆ. ನೀನು ಹೇಳಿದ ಹಾಗೆ ಈ ಪ್ರಪಂಚದಲ್ಲಿ ನನ್ನಷ್ಟು ನಿನ್ನ ಪ್ರೀತಿಸುವ ಒಂದೇ ಒಂದು ಜೀವ ಹುಡುಕಿದರೂ ಸಿಗೋದಿಲ್ಲ. ಶ್ರೀಮಂತಿಕೆಯಲ್ಲಿ ಮೆರೆಯೋದು ಮಾತ್ರ ಜೀವನವಲ್ಲ. ಹಾಗೊಂದು ವೇಳೆ ಆ ಮಾತು ಸತ್ಯವಾಗಿದ್ದರೆ ಪ್ರಪಂಚದಲ್ಲಿರುವ ಬಡವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿತ್ತು. ಬದುಕಿದಷ್ಟು ದಿನ ನಮ್ಮಲ್ಲಿರುವ ಪ್ರೀತಿಯನ್ನ ಮತ್ತೊಬ್ಬರಲ್ಲಿ ಹಂಚಿಕೊಂಡು ಬಾಳಬೇಕು. ಆ ಮೂಲಕ ಬದುಕಿನಲ್ಲಿ ಸಾರ್ಥಕತೆ ಕಾಣಬೇಕೇ ಹೊರತು ಹಣದಿಂದಲ್ಲ. ನಿನ್ನ ತೀರ್ಮಾನದ ಹಿಂದೆ ಮನೆಯವರದ್ದೇನು ತಪ್ಪಿಲ್ಲ. ಅವರು ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕರ್ತವ್ಯ ಮರೆತವಳು ನೀನು. ಪ್ರೀತಿಯ ಅಂತಿಮ ಘಟ್ಟ ಮದುವೆ. ಮದ್ವೆಯಾಗಿ ಇಬ್ಬರು ಸುಖವಾಗಿ ಬಾಳಬೇಕೆಂಬ ಕರ್ತವ್ಯ ಮರೆತು ಕೂತಿರುವವಳು ನೀನು. ಮರೆಯದೆ ಇದ್ದರೂ ಮರೆತವಳಂತೆ ನಟಿಸೋದಕ್ಕೆ ಪ್ರಾರಂಭ ಮಾಡಿದ್ದೀಯ. ಕರ್ತವ್ಯ ಮರೆತವಳೊಂದಿಗೆ ಮತ್ತೆ ಪ್ರೀತಿಗಾಗಿ ಹಂಬಲಿಸುವಷ್ಟು ಹುಚ್ಚ ನಾನಲ್ಲ. ನೀನು ಯಾರನ್ನ ಬೇಕಾದ್ರೂ ಮದ್ವೆಯಾಗು. ನಂದೇನು ಅಭ್ಯಂತರ ಇಲ್ಲ ಮನಸ್ಸು ಗಟ್ಟಿಮಾಡಿಕೊಂಡು ತನ್ನ ನಿರ್ಧಾರ ಪ್ರಕಟಿಸಿದ ಅಭಿಮನ್ಯು ಆಕೆಯ ಮುಖ ಕೂಡ ನೋಡಲು ಇಷ್ಟಪಡದೆ ವಿರುದ್ಧ ದಿಕ್ಕಿನ ಕಡೆಗೆ ಮುಖ ತಿರುಗಿಸಿಕೊಂಡ.

ಅಭಿ, ನೀನಂದುಕೊಂಡಷ್ಟು ಕ್ರೂರಿ ನಾನಲ್ಲ ಕಣೋ. ನಾನು ನಿನ್ನ ತೊರೆದು ಹೋಗುತ್ತಿರುವುದಕ್ಕೆ ಬಲವಾದ ಕಾರಣಗಳಿವೆ. ಆದರೆ, ಅದೆಲ್ಲವನ್ನೂ ಹೇಳಿಕೊಳ್ಳೋದಕ್ಕೆ ನನ್ನಿಂದ ಸಾಧ್ಯ ಇಲ್ಲ. ಅದನ್ನ ಕೇಳುವ ಮನಸ್ಸು ಮಾಡ್ಬೇಡ. ಆ ವಿಚಾರವೇನಿದ್ದರೂ ನನ್ನಲ್ಲೇ ಕೊನೆಗೊಳ್ಳಬೇಕು. ದಯವಿಟ್ಟು ನನ್ನ ತಿರಸ್ಕಾರದಿಂದ ಮಾತ್ರ ನೋಡ್ಬೇಡ. ನನ್ನ ಪ್ರೀತಿ ಈ ಕ್ಷಣದ ವರೆಗೂ ನಿರ್ಮಲ ವಾಗಿದೆ. ಆದರೆ, ಆ ಪ್ರೀತಿಯನ್ನ ಪಡೆದುಕೊಳ್ಳುವಷ್ಟು ಭಾಗ್ಯವಂತಳು ನಾನಲ್ಲ ಅಭಿಮನ್ಯುವಿಗೆ ವಿಷಯ ಅರ್ಥಮಾಡಿಸುವು ದರಲ್ಲಿ ಸೋತು ನೋವು ತಾಳಲಾರದೆ ಗೋಳಾಡಿದಳು.

ಕಣ್ಣೀರು ಸುರಿಸುತ್ತಾ ನೆಲದಲ್ಲಿ ಬಿದ್ದುಕೊಂಡಿದ್ದ ಆಕೆಯನ್ನು ಎಬ್ಬಿಸಿ ಸಾಂತ್ವನದ ಮಾತು ಆಡಬೇಕೆಂದು ಅಭಿಮನ್ಯುವಿಗೆ ಅನ್ನಿಸಲಿಲ್ಲ. ಆಕೆ ತನ್ನವಳಲ್ಲ ಎಂಬ ಭಾವನೆ ಅವನ ಮನದಲ್ಲಿ ಬೇರೂರಲು ಪ್ರಾರಂಭಿಸಿತು. ನಿಜವಾದ ನೋವು ಅನುಭವಿಸುತ್ತಿರುವವನು ತಾನು. ಪ್ರೀತಿಯನ್ನು ಕಸದಬುಟ್ಟಿಗೆ ಎಸೆದು ಹೊರಟು ನಿಂತವಳಿಗಿಂತ ದುಃಖ ತನ್ನಲ್ಲಿ ತುಂಬಿಕೊಂಡಿದೆ. ಎಷ್ಟು ಗೋಳಾಡುತ್ತಾಳೋ ಗೋಳಾಡಲಿ. ಇನ್ನು ಆಕೆಗೋಸ್ಕರ ತನ್ನ ಮನ ಮಿಡಿಯಬಾರದೆಂದು ನಿರ್ಧರಿಸಿದ.
ಜೇಬನೊಮ್ಮೆ ತಡಕಾಡಿದ. ಕೀಸೆಯಲ್ಲೊಂದು ಸಿಗರೇಟ್ ಉಳಿದುಕೊಂಡಿತ್ತು. ಸಿಗರೇಟ್‌ಗೆ ಬೆಂಕಿ ತಾಕಿಸಿ ಮೂಲೆಯಲ್ಲಿ ನಿಂತು ದುಃಖಿತನಾಗಿ ಸೇದತೊಡಗಿದ. ಇನ್ನುಮುಂದೆ ಸಿಗರೇಟ್‌ವೊಂದೇ ನನ್ನ ಸಂಗಾತಿ. ಅದೆಷ್ಟು ಹುಡುಗಿಯರು ನನ್ನ ಬದುಕಿನಲ್ಲಿ ಬಂದು ಹೋಗಿಲ್ಲ..!? ರಾತ್ರಿ ಕಾಣುವ ಮಿಂಚು ಹುಳಗಳ ಹಾಗೆ. ಬೆಳಗಾಗುವುದರೊಳಗೆ ಎಲ್ಲರೂ ದೂರಾ.. ದೂರ… ಈಕೆಯೂ ಕೂಡ ಒಂದು ಮಿಂಚು ಹುಳು. ಮಿಂಚಿ ಮರೆಯಾಗಲು ಅಣಿಯಾಗುತ್ತಿದ್ದಾಳೆ. ಹಾಳಾದ ಹುಡುಗಿಯರು. ಪ್ರೀತಿ ಎಂಬ ಪದದ ಅರ್ಥವನ್ನೇ ನಾಶ ಮಾಡಲೆಂದೇ ಹುಟ್ಟಿದ್ದಾರೋ ಏನೋ? ಅಂದುಕೊಂಡ.

ಅಭಿಮನ್ಯುವಿನಲ್ಲಿ ಕ್ಷಣಮಾತ್ರದಲ್ಲಿ ಆಗುತ್ತಿರುವ ಬದಲಾವಣೆ ಕಂಡ ಅಕ್ಷರ ಕಂಗಾಲಾದಳು. ಅಭಿಮನ್ಯುವಿಗೆ ಸಿಗರೇಟ್ ಸೇದುವ ಚಟ ಇರುವುದು ಆಕೆಗೆ ಗೊತ್ತೇ ಇರಲಿಲ್ಲ. ನೋವು ಮರೆಸಲು ಒಂದು ಪೆಗ್ಗ್ ಏರಿಸಿದರೂ ಆಕೆ ಅಷ್ಟೊಂದು ಚಿಂತೆಗೀಡಾಗುತ್ತಿರಲಿಲ್ಲ. ಅದು ಅವನಿಗೆ ಮೊದಲಿನಿಂದಲೂ ಅಂಟಿಕೊಂಡಿರುವ ಚಟ. ನೋವು ಮರೆಸಲು ಸಿಗರೇಟ್ ಚಟಕ್ಕೆ ಬೀಳುತ್ತಿದ್ದಾನೆ. ಅಗಲಿಕೆಯ ನೋವು ಅವನಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಾಧಿಸುತ್ತದೆ ಎಂದು ತಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ತಾನು ಬಿಟ್ಟು ಹೋದರೆ ಮತ್ತೆ ದುಶ್ಚಟಗಳ ದಾಸನಾಗಿ ಬಿಡುತ್ತಾನೋ ಏನೋ ಎಂಬ ಭಯ ಆಕೆಯಲ್ಲಿ ಕಾಡಲು ಪ್ರಾರಂಭಿಸಿತು.

ಅಭಿಮನ್ಯುವಿನ ಮನದೊಳಗಿರುವ ನೋವು ತನ್ನ ನೋವಿಗಿಂತ ತೀವ್ರವಾಗಿದೆ. ಅವನ ನೋವು ಮರೆಸೋದಕ್ಕೆ ತನ್ನಿಂದ ಮಾತ್ರ ಸಾಧ್ಯ. ಆದರೆ, ಅಂತಹ ಯೋಗ್ಯತೆಯನ್ನು ಅವನ ಮುಂದೆ ಈಗತಾನೆ ಕಳೆದುಕೊಂಡು ನಿಂತಿದ್ದೇನೆ. ಅವನನ್ನ ಹೇಗೆ ಸಂತೈಸಲಿ? ಎಂದು ಬಿಕ್ಕಳಿಸಿ ಅಳುತ್ತಾ ಅಭಿಮನ್ಯುವಿನೆಡೆಗೆ ಬಂದು ಸಿಗರೇಟ್ ಕಿತ್ತೆಸೆದಳು. ನನ್ಗೋಸ್ಕರ ಈ ಸಿಗರೇಟಿನಂತೆ ನಿನ್ನ ದೇಹವನ್ನ ಸುಟ್ಟುಕೊಳ್ಬೇಡ. ಈ ಪಾಪಿಗೋಸ್ಕರ ಕಣ್ಣೀರು ಸುರಿಸ್ಬೇಡ ಅಭಿ, ನೀನ್ಯಾವತ್ತೂ ಚೆನ್ನಾಗಿಬೇಕು. ಅದೊಂದೇ ನನ್ನ ಆಸೆ. ನಿನ್ನ ಮನಸ್ಸು ಹಗುರವಾಗುವಷ್ಟು ನನ್ನ ನಿಂದಿಸಿ ಬಿಡು. ಬೇಕಿದ್ದಲ್ಲಿ ಮನಸೋ‌ಇಚ್ಚೆ ಥಳಿಸಿ ಬಿಡು. ಆದರೆ, ನನಗೋಸ್ಕರ ನಿನ್ನ ಬದುಕು ಹಾಳು ಮಾಡಿಕೊಳ್ಬೇಡ ಅಭಿಮನ್ಯುವಿನ ಕಾಲಿಗೆ ಬಿದ್ದು ಬೇಡಿಕೊಂಡಳು.

ಆಕೆಯ ದುಃಖವನ್ನು ಕಂಡು ಅಭಿಮನ್ಯು ಕಣ್ಣೀರ ಕಡಲಾದ. ಒಂದು ಮೂಲೆಯಲ್ಲಿ ಕೂತು ಮನಸ್ಸು ಹಗುರವಾಗುವಷ್ಟು ಅತ್ತುಬಿಟ್ಟ. ಅಭಿಮನ್ಯುವನ್ನು ಮೇಲೆಬ್ಬಿಸಿ ಆಲಂಗಿಸಿಕೊಂಡು ತಾನೂ ಕೂಡ ಅತ್ತು ಮನಸ್ಸು ಹಗುರ ಮಾಡಿಕೊಳ್ಳಲು ಪ್ರಯತ್ನಿಸಿದಳು. ಮೊದಲೆಲ್ಲ ಅಪ್ಪುಗೆಯಲ್ಲಿ ಒಂದು ಬಿಡಿಸಲಾರದ ಪ್ರೀತಿಯ ಉನ್ಮಾದತೆ ಇತ್ತು. ಆದರೆ, ಇಂದು ಆ ಅಪ್ಪುಗೆಯಲ್ಲಿ ಅಗಲಿಕೆಯ ನೋವು ತುಂಬಿಕೊಂಡಿತು. ಇದು ನಮ್ಮಿಬ್ಬರ ಕಡೆಯ ಅಪ್ಪುಗೆ ಇರಬಹುದೇನೋ ಎಂದು ಅಕ್ಷರ ಅಭಿಮನ್ಯುವನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿಕೊಂಡು ಕಣ್ಣೀರು ಸುರಿಸಿದಳು.

ಅಭಿ, ನಾನು ತುಂಬಾ ಪಾಪಿ ಕಣೋ. ನಿನ್ಗೆ ತುಂಬಾ ದೊಡ್ಡ ಮೋಸ ಮಾಡುವ ಮನಸ್ಸು ಮಾಡಿದ್ದೇನೆ. ಇಷ್ಟಾದರೂ ನಿನ್ನ ಮೇಲೆ ಇಟ್ಟಿರುವ ಪ್ರೀತಿ ಒಂದು ಚೂರು ಕೂಡ ಕಡಿಮೆಯಾಗಿಲ್ಲ. ಮೊದಲಿಗಿಂತ ಹೆಚ್ಚು ಪ್ರೀತಿ ಇದೆ. ಈ ಕ್ಷಣದಲ್ಲಿಯೂ ಕೂಡ ನಾನು ನಿನ್ನವಳಾಗಿಯೇ ಇರಬೇಕೆಂದು ಮನಸ್ಸು ಹಂಬಲಿಸುತ್ತಿದೆ. ಐ ಲವ್ ಯೂ ಅಭಿ ಎಂದು ಮತ್ತೆ ಆಲಂಗಿಸಿ ಕೊಂಡು ಚುಂಬಿಸಿದಳು.

ದೇಹದ ಕೊನೆಯುಸಿರಿರುವವರೆಗೂ ನಿನ್ನ ಪ್ರೀತಿ ಮಾಡ್ತಾನೇ ಇತೇನೆ ಅಭಿ, ಆದರೆ, ನಿನ್ನೊಂದಿಗೆ ಜೀವನ ನಡೆಸೋದಕ್ಕೆ ನಾನು ಪುಣ್ಯ ಮಾಡಿಲ್ಲ. ಹೋದ ಜನ್ಮದಲ್ಲಿ ಏನೋ ಪಾಪ ಮಾಡಿಬೇಕು. ಅದಕ್ಕೆ ಈ ಜನ್ಮದಲ್ಲಿ ಬಯಸಿದ್ದು ಒಂದೂ ಸಿಗುತ್ತಿಲ್ಲ. ಕೊನೆಯದಾಗಿ ಈ ಪಾಪಿಯನ್ನ ಕ್ಷಮಿಸಿದ್ದೀನಿ ಅಂತ ಒಂದು ಮಾತು ಹೇಳಿಬಿಡು ಅಭಿ, ನಾನು ಹೊರಟು ಹೋಗ್ತೇನೆ ವಿನಯವಾಗಿ ಕೇಳಿಕೊಂಡಳು.

ಅಭಿಮನ್ಯುವಿನ ಕಣ್ಗಳಿಂದ ಮಳೆನಿಂತು ಹೋದ ಮೇಲೆ ಮರದ ಎಲೆಗಳಿಂದ ತೊಟ್ಟಿಕ್ಕುವ ಹನಿಗಳಂತೆ ಒಂದೊಂದಾಗಿ ಕಣ್ಣೀರು ತೊಟ್ಟಿಕ್ಕುತ್ತಿದ್ದವು. ಕಣ್ಣೀರ ಹನಿಗಳು ಕೆನ್ನೆಯಿಂದ ಕೆಳಗಿಳಿದು ಆಕೆಯ ಬೆನ್ನು ತೊಯ್ದು ಹೋಯಿತು. ಮಾತನಾಡುವ ಉತ್ಸಾಹ ಹುದುಗಿ ಹೋಯಿತು. ಮಾತಾಡುವುದಕ್ಕೇನು ಉಳಿದಿದೆ ಅಲ್ಲಿ? ಅಗಲಿಕೆಯ ನೋವು ಮಾತ್ರ ಉಳಿದುಕೊಂಡಿದೆಯಷ್ಟೆ. ಬಹುಶಃ ಇದು ನಮ್ಮಿಬ್ಬರ ಕೊನೆಯ ಭೇಟಿ ಇರಬಹುದು. ಇನ್ನೆಂದು ಮುಕ್ತವಾಗಿ ಮಾತಾಡಿಕೊಳ್ಳಲು ಸಾಧ್ಯವಿಲ್ಲ. ಇನ್ನೆಂದು ನನ್ನ ಅಕ್ಷರ ತನಗೆ ಸಿಗುವುದಿಲ್ಲ. ಹೊರಡುವ ಮುನ್ನ ಆಡಬೇಕಾಗಿರುವ ಮಾತುಗಳನ್ನೆಲ್ಲ ಆಡಿ ಮುಗಿಸಿ ಬಿಡುವ ಅಂದುಕೊಂಡ.

ಮನದೊಳಗೆ ಅಷ್ಟೊಂದು ಪ್ರೀತಿ ತುಂಬಿಟ್ಟುಕೊಂಡಿದ್ದರೂ ಅಗಲಿ ಹೋಗುವ ಮಾತೇಕೆ? ನನ್ನೊಂದಿಗೆ ಜೀವನ ನಡೆಸೋದಕ್ಕೆ ನಿನ್ಗೆ ಇಷ್ಟ ಇಲ್ವ? ನನ್ನ ಜೀವನದಲ್ಲಿ ಬಂದು ಹೋದ ಹುಡುಗಿಯರಿಗೆ ಲೆಕ್ಕವಿಲ್ಲ. ಆದರೆ, ನೀನು ಕೊಟ್ಟಷ್ಟು ಪ್ರೀತಿ ಬೇರೆ ಯಾರಿಂದಲೂ ಸಿಗಲಿಲ್ಲ ಅಕ್ಷರ. ಅದಕೋಸ್ಕರ ನಿನ್ನ ಅಗಲಿಕೆ ಭರಿಸಲಾಗದಷ್ಟು ದುಃಖ ಹೊತ್ತು ತರುತ್ತಿದೆ. ಒಂದೇ ಒಂದು ಸಲ ಮನಸ್ಸು ಬದಲಾಯಿಸಿಕೊ, ಜೀವನಪರ್ಯಂತ ಸುಖವಾಗಿರಬಹುದು. ನಿಮ್ಮಪ್ಪ ಕೂಡಿಟ್ಟಿರುವಷ್ಟು ಆಸ್ತಿ ಸಂಪಾದಿಸಲು ನನ್ನಿಂದ ಸಾಧ್ಯವಿಲ್ಲ. ಆದರೆ, ನಿಮ್ಮಪ್ಪ ನೋಡಿ ಮದುವೆ ಮಾಡುವ ಹುಡುಗನಿಗಿಂತ ಹೆಚ್ಚಿನ ಪ್ರೀತಿಯನ್ನ ನಾನು ಕೊಡ್ತೇನೆ. ನಿನ್ಗೆ ಯಾವುದೇ ರೀತಿಯ ಕಷ್ಟಗಳನ್ನ ಕೊಡದೆ ಅವನಿಗಿಂತ ಚೆನ್ನಾಗಿ ನೋಡಿಕೊಳ್ತೇನೆ. ದಯವಿಟ್ಟು ನನ್ನ ಅರ್ಥ ಮಾಡ್ಕೋ. ಬಿಟ್ಟು ಹೋಗ್ತೇನೆ ಅಂತ ಮಾತ್ರ ಹೇಳ್ಬೇಡ ಆಕೆಯಲ್ಲಿ ಕೈ ಮುಗಿದು ಕೇಳಿಕೊಂಡ.

ಬಿಟ್ಟು ಹೋಗುವ ಮನಸ್ಸು ನನ್ಗೂ ಕೂಡ ಇಲ್ಲ ಅಭಿ. ಆದರೆ, ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ನಿನ್ನೊಂದಿಗೆ ಇಷ್ಟು ವರ್ಷಗಳ ಕಾಲ ಕಳೆದ ಮಧುರ ನೆನಪುಗಳಷ್ಟೇ ಸಾಕು. ಆ ನೆನಪಿನಲ್ಲಿಯೇ ಬದುಕು ಸವೆಸಿ ಬಿಡ್ತೇನೆ. ಎಷ್ಟೂಂತ ಅಪ್ಪನೊಂದಿಗೆ ಬಡಿದಾಡೋದಕ್ಕೆ ಸಾಧ್ಯ ಹೇಳು? ಕಟುಕನೆದುರು ಕರುಣೆಯ ಭಿಕ್ಷೆ ಕೇಳೋದಕ್ಕೆ ಸಾಧ್ಯವಿಲ್ಲ. ಅಪ್ಪ ಪ್ರೀತಿಯ ವಿಚಾರದಲ್ಲಿ ಕಟುಕ. ಆ ಮನುಷ್ಯನ ಎದುರು ಪ್ರೀತಿಯ ಭಿಕ್ಷೆ ಕೇಳೋದು ವ್ಯರ್ಥ ಕಸರತ್ತು ಅಷ್ಟೆ.

ಯಾರಿಗೋ ಹೆದರಿ ಈ ಪ್ರೀತಿಯನ್ನ ಇಲ್ಲಿಗೇ ಕೊನೆಗಾಣಿಸಬೇಕಾ…? ಇಲ್ಲಿ ನಮ್ಗೆ ಬದುಕು ನಡೆಸೋದಕ್ಕೆ ಸಾಧ್ಯವಿಲ್ಲ ಅನ್ನುವುದಾದರೆ ಬೇರೆಲ್ಲಾದರೂ ದೂರ ಹೊರಟು ಹೋಗುವ. ಅಲ್ಲಿ ಯಾರ ತಂಟೆತಕರಾರು ಇರೋದಿಲ್ಲ. ನಮ್ಮದೇ ಆದ ಒಂದು ಸುಂದರ ಬದುಕು ಕಟ್ಟಿಕೊಳ್ಳಬಹುದು. ಬದುಕಿದ್ದಷ್ಟು ದಿನ ಇತ್ತ ತಲೆ ಹಾಕಿ ನೋಡದಿದ್ದರೆ ಆಯ್ತು. ನೀನು ಅದಕ್ಕೆ ಮನಸ್ಸು ಮಾಡಬೇಕಷ್ಟೆ ಆಕೆಯ ಎರಡು ಭುಜ ಹಿಡಿದು ಅಲುಗಿಸಿ ತನ್ನ ನಿರ್ಧಾರಕ್ಕೆ ಒಪ್ಪಿಕೊಳ್ಳುವಂತೆ ಬಲವಂತ ಪಡಿಸಿದ.

ಅಭಿಮನ್ಯುವನ್ನು ತೊರೆಯುವ ನಿರ್ಧಾರವನ್ನು ಆಕೆ ಕೈಗೊಂಡು ಹಲವು ಗಂಟೆಗಳು ಸರಿದು ಹೋಗಿತ್ತು. ಪ್ರೀತಿಗೆ ಮಂಗಳ ಹಾಡಿದರೆ ಮಾತ್ರ ಅಭಿಮನ್ಯುವಿನ ಬದುಕು ಸುಂದರವಾಗಿ ಅರಳಲು ಸಾಧ್ಯ ಎಂದು ತಿಳಿದೊಡನೆ ಪ್ರೀತಿಗೊಂದು ಇತಿಶ್ರೀ ಹಾಡಲು ನಿರ್ಧರಿಸಿದಳು. ತಾನು ಕೈಗೊಂಡ ನಿರ್ಧಾರ ಸರಿಯಾಗಿಯೇ ಇದೆ ಎಂದು ಆಗಿಂದಾಗೆ ತನಗೆ ತಾನೇ ಹೇಳಿಕೊಂಡು ಮನಸ್ಸನ್ನು ಗಟ್ಟಿಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದಳು.

ಅಭಿಮನ್ಯುವಿನೊಂದಿಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರೂ ಕೂಡ ಪ್ರೀತಿಯನ್ನು ತೊರೆಯಲು ನಿಖರವಾದ ಕಾರಣ ವನ್ನು ಮಾತ್ರ ಆಕೆ ಬಿಚ್ಚಿಡುವ ಮನಸ್ಸು ತೋರಲಿಲ್ಲ. ಅಭಿಮನ್ಯುವಿನ ಬದುಕು ತನ್ನಿಂದಾಗಿ ನಾಶವಾಗಬಾರದು. ಅದಕೋಸ್ಕರ ಅಗಲಿಕೆ ಅನಿವಾರ್ಯ ಎಂದು ತೀರ್ಮಾನಿಸಿದಳು.

ಪಡೆದುಕೊಂಡ ಪ್ರೀತಿಯನ್ನು ಕಳೆದುಕೊಳ್ತಾ ಇದ್ದೇನೆ ಅಭಿ, ಇದರಲ್ಲಿ ನಿನ್ನದೇನು ತಪ್ಪಿಲ್ಲ. ತಪ್ಪೆಲ್ಲವೂ ನನ್ನದೇ. ಪ್ರೀತಿಯನ್ನು ಇಲ್ಲಿಗೆ ಕೊನೆಗಾಣಿಸಿ ಹೊರಟು ನಿಂತಿದ್ದೇನೆ. ನನ್ನ ಬಗ್ಗೆ ನೀನು ಎಷ್ಟೇ ಬೈದುಕೊಂಡರೂ ನಾನು ಚಿಂತೆ ಮಾಡೋದಿಲ್ಲ. ಸಂತೋಷದಿಂದ ಸ್ವೀಕಾರ ಮಾಡ್ತೇನೆ. ಪ್ರೀತಿ ಎಂಬ ಎರಡಕ್ಷರದ ನಿಜವಾದ ಅರ್ಥ ಗೊತ್ತಾಗಿದ್ದೇ ನಿನ್ನ ಪ್ರೀತಿಸಲು ಪ್ರಾರಂಭ ಮಾಡಿದ್ದಲ್ಲಿಂದ. ದೇಹದಲ್ಲಿ ಉಸಿರಿರುವವರೆಗೂ ನಿನ್ನ ಪ್ರೀತಿ ಮಾಡ್ತಾನೇ ಇತೇನೆ. ಮನದಲ್ಲಿ ಸದಾ ಪೂಜಿಸುತ್ತಿರುತ್ತೇನೆ. ಈ ಹೃದಯ ನಿನಗೊಬ್ಬನಿಗೆ ಮಾತ್ರ ಮೀಸಲು ಅಭಿ, ನಿನಗೊಬ್ಬನಿಗೆ ಮಾತ್ರ… ಹೊರಡುವ ಮುನ್ನ ನನ್ನನ್ನೊಮ್ಮೆ ಕ್ಷಮಿಸಿದ್ದೀನಿ ಅಂತ ಹೇಳಿ ಬಿಡು ಅಭಿ. ಅದೊಂದೇ ನನ್ನ ಕಟ್ಟಕಡೆಯ ವಿನಂತಿ ಕಂಬನಿ ಸುರಿಸುತ್ತಾ ಕೈ ಮುಗಿದು ಕೇಳಿಕೊಂಡ ಅಕ್ಷರಳನ್ನು ಬರಸೆಳೆದು ಅಪ್ಪಿಕೊಂಡು ಪ್ರೀತಿಯಿಂದ ಚುಂಬಿಸಿದ ಅಭಿಮನ್ಯು ಕ್ಷಮಿಸುವಂತ ತಪ್ಪೇನು ಮಾಡಿಲ್ಲ ಬಿಡು ಎಂದು ಸಂತೈಸಿದ.

ಒಲ್ಲದ ಮನಸ್ಸಿನಿಂದ ಮತ್ತೊಬ್ಬನೊಂದಿಗೆ ಮದ್ವೆಯಾಗೋದಕ್ಕೆ ಮನಸ್ಸು ಸಿದ್ಧವಾಗುತ್ತಾ ಇದೆ. ಒಂದ್ವೇಳೆ ನಾವಿಬ್ರು ಪ್ರೀತಿಸಿದ ವಿಚಾರ ಮದ್ವೆಯಾದ ನಂತರ ಗಂಡನಿಗೇನಾದರು ಗೊತ್ತಾದ್ರೆ ಏನ್ಮಾಡ್ಲಿ ಅಭಿ? ಅವನು ನನ್ನ ಸುಮ್ನೆ ಬಿಡ್ತಾನಾ? ನಿನ್ನಂತೆ ಕ್ಷಮಿಸುವ ದೊಡ್ಡ ಗುಣ ಅವನಲ್ಲಿರೋದಕ್ಕೆ ಸಾಧ್ಯವಿಲ್ಲ. ಹಾಗೊಂದು ವೇಳೆ ನನ್ನ ಬದುಕು ನಾಶವಾಗಿ ಹೋದರೆ ಮನೆಯಲ್ಲಂತು ನನ್ನ ಸ್ವೀಕಾರ ಮಾಡೋದಿಲ್ಲ. ಆಗ ನಾನೊಬ್ಬಳು ಅನಾಥೆ. ಯಾಕಾದ್ರೂ ನನ್ಗೆ ದೇವರು ಇಂಥ ಒಂದು ಬದುಕು ಕೊಟ್ಟಿದ್ದಾನೆ ಎಂದು ಗೋಳಾಡಿದಳು.

ಮುಂದೆ ನಡೆಯುವ ವಿಚಾರದ ಬಗ್ಗೆ ಈಗ್ಲೇ ಏನೇನೋ ಕಲ್ಪನೆ ಮಾಡ್ಕೊಂಡು ಅಳ್ತಾ ಕೂಬೇಡ. ಹಾಗೊಂದ್ವೇಳೆ ಏನಾದರು ಆದ್ರೆ ನೀನು ಮನೆಯ ಹಾದಿ ತುಳಿಬೇಡ. ನೇರ ನನ್ನೆಡೆಗೆ ಬಂದ್ಬಿಡು. ನಿನಗೋಸ್ಕರ ಈ ಹೃದಯ ಸದಾ ಕಾಯುತ್ತಿರುತ್ತೆ. ಹುಚ್ಚು ಕಲ್ಪನೆಗೆ ಕಡಿವಾಣ ಹಾಕು. ಒಂದೆರಡು ದಿನ ಒಬ್ಬಳೇ ಕೂತು ಯೋಚನೆ ಮಾಡಿದರೆ ಮನಸ್ಸು ಹಗುರವಾಗ್ಬೊಹುದು. ಆಗ ಒಂದು ಒಳ್ಳೆಯ ನಿರ್ಧಾರ ಕೈಗೊಳ್ಬೊಹುದು. ಆಗಲೂ ಕೂಡ ನಾವಿಬ್ರು ಒಂದಾಗೋದಕ್ಕೆ ಸಾಧ್ಯವಿಲ್ಲ ಅಂತ ನಿನಗನ್ನಿಸಿದ್ರೆ ನೀನು ನಿನ್ನ ಹಾದಿ ತುಳಿಯಬಹುದು. ನಾನು ಯಾವತ್ತೂ ನಿನ್ನ ಹಾದಿಗೆ ಅಡ್ಡಬರೋದಿಲ್ಲ ಎಂದು ಹೇಳಿ ಕಣ್ಣೀರು ಸುರಿಸುತ್ತಾ ಕುಳಿತ ಅಭಿಮನ್ಯುವನ್ನು ಸಂತೈಸಿದ ಅಕ್ಷರ ತಾನೂ ಕೂಡ ಕಣ್ಣೀರು ಸುರಿಸುತ್ತಲೇ ಮನೆಯ ಕಡೆಗೆ ಆಟೋ ಏರಿ ತೆರಳಿದಳು.

ಮನೆಗೆ ತೆರಳಿ ಬೆಡ್‌ರೂಂನೊಳಗೆ ಸೇರಿಕೊಂಡು ಮನಸೋ‌ಇಚ್ಚೆ ಅತ್ತು ಬಿಟ್ಟಳು. ಪ್ರತಿಯೊಂದು ಕಣ್ಣೀರ ಹನಿಯಲ್ಲಿಯೂ ಕೂಡ ಪ್ರೀತಿಯ ನೆನಪುಗಳು ಇದ್ದವು. ಎಷ್ಟೇ ಕಣ್ಣೀರು ಸುರಿಸಿದರೂ ಮನಸ್ಸು ಹಗುರವಾಗಲಿಲ್ಲ. ಇಂತಹ ಬದುಕನ್ನು ಆ ದೇವರು ಏತಕ್ಕೆ ಕೊಟ್ಟನೋ? ಮನಸ್ಸು ಒಬ್ಬನಿಗೆ ಮುಡಿಪಾಗಿಟ್ಟು, ದೇಹವನ್ನು ಮತ್ತೊಬ್ಬನಿಗೆ ಅರ್ಪಿಸಿಕೊಳ್ಳುವಂತಹ ಸ್ಥಿತಿಗೆ ದೇವರು ತಂದು ನಿಲ್ಲಿಸಿಬಿಟ್ಟನಲ್ಲ! ಅವನೆಂತ ಕ್ರೂರಿ ಇರಬೊಹುದು. ಅಭಿಮನ್ಯುವಿನೊಂದಿಗೆ ಕಳೆದ ಪ್ರತಿಯೊಂದು ಕ್ಷಣಗಳಲ್ಲೂ ಕೂಡ ಪ್ರೀತಿಯ ಅಮೃತ ಸ್ಪರ್ಶವಿತ್ತು. ಆರು ರಾತ್ರಿಗಳನ್ನು ಒಂದೇ ಮಂಚದಲ್ಲಿ ಕಳೆದರೂ ಒಂದು ದಿನವೂ ಮೈ ಮರೆಯಲಿಲ್ಲ. ಅಂತಹ ದೃಢ ಮನಸ್ಸು ಪ್ರೀತಿಯನ್ನು ದೇವರೆಂದು ತಿಳಿದು ಪೂಜಿಸುವ ಪ್ರೇಮಿಯಲ್ಲಿ ಮಾತ್ರ ಕಾಣಲು ಸಾಧ್ಯ. ಹಾಗಾಗಿ ಅಭಿಮನ್ಯು ತನ್ನ ಪಾಲಿಗೆ ದೇವರ ಪ್ರತಿರೂಪ ಅಂದುಕೊಂಡಳು.

ಅಭಿಮನ್ಯುವನ್ನು ಮನದಿಂದ ಕಿತ್ತೊಗೆಯಲು ಆಕೆಯ ಬಳಿ ಕಾರಣಗಳೇ ಇರಲಿಲ್ಲ. ಅಭಿಮನ್ಯುವಿನೆಡೆಗೊಂದು ತಿರಸ್ಕಾರದ ನೋಟ ಬೀರಿ ಈ ಪ್ರೀತಿಗೆ ಮಂಗಳ ಹಾಡುವ ಸಮಯ ಬಂದಾಯಿತು. ಇನ್ನು ನಿನ್ನ ಹಾದಿ ನಿನಗೆ, ನನ್ನ ಹಾದಿ ನನಗೆ ಎಂದು ಅಭಿಮನ್ಯುವಿಗೆ ಹೇಳಿ ಬರಬೇಕೆಂದು ತೀರ್ಮಾನಿಸಿ ಮೈಸೂರಿನಿಂದ ನೇರ ಮಡಿಕೇರಿಗೆ ಆಗಮಿಸಿ ಅಭಿಮನ್ಯುವನ್ನು ಭೇಟಿಯಾದ ಅಕ್ಷರ, ಅಭಿಮನ್ಯುವಿನ ಮೊಗವನ್ನು ಕಂಡೊಡನೆ ಅವನ ನಿರ್ಮಲವಾದ ಪ್ರೀತಿಯಲ್ಲಿ ಕರಗಿಹೋದಳು. ಅಷ್ಟೊಂದು ನಿರ್ದಯವಾಗಿ ಹೇಳಲು ಆಕೆಯಿಂದ ಸಾಧ್ಯವಾಗಲಿಲ್ಲ. ಹಾಗಂತ ಎಲ್ಲಾ ಸತ್ಯವನ್ನು ಅವನೆದುರು ತೆರೆದಿಡಲೂ ಸಾಧ್ಯವಾಗಲಿಲ್ಲ. ಆಡಿದ ಕೆಲವೊಂದು ಮಾತುಗಳು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಇತ್ತು. ಅಭಿಮನ್ಯುವಿನ ಮನದಲ್ಲಿ ಪ್ರೀತಿಯ ಬಗ್ಗೆ ದ್ವೇಷ ಹುಟ್ಟಿಸಲು ಹೊರಟವಳು ಅವನ ಹೃದಯಲ್ಲಿ ಉರಿಯುತ್ತಿದ್ದ ಪ್ರೀತಿಯ ದೀಪ ನಂದದಂತೆ ಎಣ್ಣೆ ಸುರಿದು ಬಂದಳು. ನಿರ್ಮಲವಾದ ಪ್ರೀತಿಯಲ್ಲಿ ಅಷ್ಟೊಂದು ತೀವ್ರತೆಯಿಂದ ಕೂಡಿದ ತಿರಸ್ಕಾರದ ಮಾತು ಹೊರ ಹೊಮ್ಮುವುದಾದರೂ ಹೇಗೆ? ಆಕೆ ಅಭಿಮನ್ಯುವಿನ ಪ್ರೀತಿಯ ಎದುರು ಕರಗಿಹೋದಳು. ತಿರಸ್ಕಾರದ ಮಾತುಗಳನ್ನಾಡುವ ಬದಲು ಕಣ್ಣೀರ ಧಾರೆ ಹರಿಸಿದಳು. ಆಕೆಯ ಕಣ್ಣೀರಧಾರೆ ಅಭಿಮನ್ಯುವಿನ ಮನದಲ್ಲಿ ಆಕೆಯ ಬಗ್ಗೆ ಮತ್ತಷ್ಟು ಪ್ರೀತಿ ಹುಟ್ಟಿ ಕೊಳ್ಳುವಂತೆ ಮಾಡಿತೇ ವಿನಃ ದ್ವೇಷವನ್ನಲ್ಲ. ಬಹುಶಃ ಅಕ್ಷರ ಯಾವುದೋ ಒತ್ತಡಕ್ಕೆ ಸಿಲುಕಿಕೊಂಡಿದ್ದಾಳೆ. ಇಲ್ಲದಿದ್ದರೆ ಇಂತಹ ಒಂದು ಕಠೋರ ನಿರ್ಧಾರ ಹೊರ ಹೊಮ್ಮಲು ಆಕೆಯಿಂದ ಸಾಧ್ಯವಿರಲಿಲ್ಲ. ಬರಿದಾಗಷ್ಟು ಪ್ರೀತಿ ಆಕೆಯಲ್ಲಿದೆ. ಅದೆಲ್ಲವನ್ನೂ ಉಣಬಡಿಸುವ ಹಂಬಲ ಆಕೆಯಲ್ಲಿದೆ. ಆದರೆ, ಆಕೆಯ ಜೀವನದಲ್ಲಿ ವಿಧಿ ಆಟವಾಡತೊಡಗಿದೆ. ಇಂದಲ್ಲದಿದ್ದರೂ ನಾಳೆಯಾದರೂ ಆಕೆ ಬಂದೇ ಬರುತ್ತಾಳೆ. ನನ್ನಾಕೆ ನನ್ನನಗಲಿ ಹೋಗುವ ಅಂತಿಮ ನಿರ್ಧಾರ ಕೈಗೊಳ್ಳೋದಿಲ್ಲ. ಅದೆಷ್ಟು ವರ್ಷಗಳು ಸರಿದರೂ ಸರಿಯೇ ಆಕೆಯ ಹಾದಿಗಾಗಿಯೇ ಕಾಯಬೇಕೆಂಬ ನಿರ್ಧಾರ ಅಭಿಮನ್ಯುವಿನಲ್ಲಿ ದೃಢವಾಯಿತು.
* * *

ಕಾಫಿ ಎಸ್ಟೇಟ್‌ನಿಂದ ಕೆಲಸ ಮುಗಿಸಿ ಮನೆಗೆ ಬಂದ ರಾಜಶೇಖರ್‌ಗೆ ಮಗಳು ಯಾವುದೇ ಮಾಹಿತಿ ನೀಡದೆ ಮನೆಗೆ ಬಂದಿರುವುದನ್ನು ಕಂಡು ಆಶ್ಚರ್ಯವಾಯಿತು. ಅಪ್ಪನ ಬಳಿ ತೆರಳಿದ ಅಕ್ಷರ ಅಪ್ಪ.., ನಿಮ್ಮೊಂದಿಗೆ ಸ್ವಲ್ಪ ಹೊತ್ತು ಮಾತಾಡ್ಬೇಕು ಅಂದಳು.

ಆಕೆಯ ಮೊಗದಲ್ಲಿ ಎಂದಿನಂತೆ ಗೆಲುವಿರಲಿಲ್ಲ. ದುಃಖದ ಮಡುವಿನಲ್ಲಿ ಮುಳುಗಿಹೋಗಿದ್ದಾಳೆಂಬ ವಿಚಾರವನ್ನು ತಿಳಿದು ಕೊಳ್ಳಲು ಆಕೆಯ ಮೊಗವನ್ನೊಮ್ಮೆ ನೋಡಿದರೆ ಸಾಕು. ತಲೆಗೂದಲು ಕೆದರಿಕೊಂಡಿದ್ದವು. ಕಣ್ಣೀರು ಸುರಿಸಿ ಕೆಂಪಾಗಿದ್ದ ಆಕೆಯ ಕಣ್ಗಳು ಸಂಜೆ ಹೊತ್ತು ಮುಳುಗುವ ಸೂರ್ಯನಷ್ಟೇ ಕೆಂಪಾಗಿದ್ದವು. ಮಗಳ ಸ್ಥಿತಿ ಕಂಡು ಕಳವಳಗೊಂಡ ರಾಜಶೇಖರ್.

ಯಾಕೆ ಅಕ್ಷರ ಒಂಥರಾ ಡಲ್ಲಾಗಿದ್ದೀಯ? ಮೈಗೆ ಹುಷಾರಿಲ್ವ? ಕೇಳಿದರು.

ದೇಹ ಚೆನ್ನಾಗಿಯೇ ಇದೆ ಅಪ್ಪ, ಮನಸ್ಸು ಹಾಳಾಗಿ ಹೋಗಿದೆ.

ಮನಸ್ಸು ಹಾಳುಮಾಡಿಕೊಳ್ಳುವಂತದ್ದೇನಾಗಿದೆ ನಿನ್ಗೆ? ನಿನ್ನ ಆಸೆಯಂತೆ ಇನ್ನೇನು ಒಂದೆರಡು ತಿಂಗಳೊಳಗೆ ಅಭಿಮನ್ಯು ಜೊತೆ ಮದ್ವೆಮಾಡಿ ಮುಗಿಸಿಬಿಡ್ತೇವೆ. ಇಂಥಹ ಸಂತೋಷದ ಸಮಯದಲ್ಲಿಯೂ ಕೂಡ ನೀನು ಇಷ್ಟೊಂದು ದುಃಖದಲ್ಲಿ ಮುಳುಗಿ ಹೋಗಿದ್ದೀಯಲ್ಲ. ಏನಾಯಿತು ನಿನ್ಗೆ?

ಇಷ್ಟು ದಿನ ನಿಮ್ಮನ್ನ ಅರ್ಥ ಮಾಡಿಕೊಳ್ಳದೆ ನಿಮ್ಮ ಮನಸ್ಸು ನೋಯಿಸಿಬಿಟ್ಟೆ. ಇನ್ನೆಂದೂ ನಿಮ್ಮ ಮನಸ್ಸು ನೋಯಿಸುವ ಕೆಲಸ ಮಾಡೋದಿಲ್ಲ. ನನ್ಗೆ ಬೇಡವಾಗಿತ್ತು ಈ ಪ್ರೀತಿ. ಗೊತ್ತಿಲ್ಲದೆ ಪ್ರೀತಿಯ ಬಲೆಯೊಳಗೆ ಬಿದ್ದುಬಿಟ್ಟೆ. ಅದೇ ಪ್ರಪಂಚ ಅಂತ ತಿಳ್ಕೊಂಡು ಇಷ್ಟು ವರ್ಷ ಕಳೆದೆ. ಆದರೆ, ಬದುಕಿನ ವಾಸ್ತಾವ ಪರಿಸ್ಥಿತಿ ಈಗ ಅರ್ಥವಾಗ್ತಾ ಇದೆ. ನೀವಂದುಕೊಂಡದ್ದೇ ಸರಿ. ಆಸ್ತಿ, ಅಂತಸ್ತು ಇಲ್ಲದಿದ್ದರೆ ಈ ಸಮಾಜದಲ್ಲಿ ಯಾರಿಗೆ ತಾನೆ ಗೌರವ ಸಿಗೋದಕ್ಕೆ ಸಾಧ್ಯ ಹೇಳಿ? ಅಭಿಮನ್ಯು ವೊಬ್ಬ ಬಡವ. ಅವನು ದುಡಿಯುತ್ತಿರುವ ಹಣದಲ್ಲಿ ಅವನ ಜೀವನವನ್ನೇ ಸಾಗಿಸಲು ಅವನಿಂದ ಸಾಧ್ಯವಾಗ್ತಾ ಇಲ್ಲ. ಅವನೊಂದಿಗೆ ಮದ್ವೆಯಾದರೆ ನನ್ನ ಬದುಕು ಸುಂದರವಾಗಿರೋದಕ್ಕೆ ಸಾಧ್ಯವಿಲ್ಲ. ಹಾಗಾಗಿ ಪ್ರೀತಿಯನ್ನು ತಿರಸ್ಕರಿಸಿ ಬಂದು ಬಿಟ್ಟೆ. ಇನ್ನೆಂದೂ ಅಭಿಮನ್ಯುವನ್ನು ಕಣ್ಣೆತ್ತಿ ನೋಡೋದಿಲ್ಲ. ನಿಖಿಲ್ ಜೊತೆ ಮದ್ವೆಯಾಗಿ ಹಾಯಾಗಿ ಇದ್ದುಬಿಡ್ತೇನೆ. ಆದಷ್ಟು ಬೇಗ ಮದ್ವೆ ಮಾಡಿ ಮುಗಿಸಿ ಬಿಡಿ ಯಾವುದೇ ಅಳುಕಿಲ್ಲದೆ ಹೇಳಿದಳು.

ಮಗಳ ಮಾತುಕೇಳಿ ರಾಜಶೇಖರ್‌ಗೆ ಆಶ್ಚರ್ಯದ ಜೊತೆಗೆ ಹಾಲು ಕುಡಿದಷ್ಟು ಸಂತೋಷವೂ ಕೂಡ ಆಯ್ತು. ಮಗಳ ಮನಸ್ಸು ಬದಲಾಯಿಸೋದಕ್ಕೆ ಸಾಕಷ್ಟು ಕಸರತ್ತು ನಡೆಸಿದರೂ ತನ್ನಿಂದ ಸಾಧ್ಯವಾಗಲಿಲ್ಲ. ಆದರೆ, ಇಂದು ಆಕೆಯೇ ತನ್ನ ಮನಸ್ಸು ಬದಲಾಯಿಸಿಕೊಂಡಿದ್ದಾಳೆ. ಅಂದು ಆಕೆಗೆ ಸ್ವಲ್ಪ ಸಮಯಾವಕಾಶ ನೀಡಿದ್ದರೆ ಬದಲಾಗುತ್ತಿದ್ದಳೋ ಏನೋ? ಆದರೆ, ನಾನೇ ಆತುರ ಬಿದ್ದ ಆಂಜನೇಯನ ತರ ಅವಳಿಗೆ ಕೊಡಬಾರದ ಕಷ್ಟಕೊಟ್ಟು ಬಿಟ್ಟೆ, ಆಡಬಾರದ ಮಾತು ಆಡಿಬಿಟ್ಟೆ. ಕೊನೆಗೆ ಪಾಪದ ಹುಡುಗನ ಜೀವ ಬಲಿ ತೆಗೆದುಕೊಳ್ಳಲೂ ಹಿಂದೆ ಮುಂದೆ ನೋಡಲಿಲ್ಲ. ಪ್ರೀತಿಯ ಗುಂಗಿನಲ್ಲಿರುವವರಿಗೆ ಯಾವುದೇ ಒಳ್ಳೆಯ ಮಾತುಗಳನ್ನಾಡಿದರೂ ಉಪಯೋಗವಿಲ್ಲ. ಕೋಣನ ಮುಂದೆ ಕಿನ್ನಾರಿ ನುಡಿಸಿದಂತೆ. ಅವರಿಗೆ ನೈಜಸ್ಥಿತಿ ಅರಿವಾಗಿ ಅವರೇ ಬದಲಾಗಬೇಕಷ್ಟೆ, ಯಾರಿಂದಲೂ ಬದಲಾಯಿಸೋದಕ್ಕೆ ಸಾಧ್ಯವಿಲ್ಲ. ಮಗಳಿಗೆ ಈಗ ಬದುಕಿನ ವಾಸ್ತವತೆ ಅರ್ಥವಾಗಿದೆ. ನನಗಷ್ಟೇ ಸಾಕು ಅಂದುಕೊಂಡರು.

ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡಿದವನನ್ನ ಏಕಾ‌ಏಕಿ ಮರೆಯೋದಕ್ಕೆ ನಿನ್ನಂದ ಸಾಧ್ಯವಿದೆಯಾ? ಕೇಳಿದರು ರಾಜಶೇಖರ್.

ಪ್ರೀತಿಗಿಂತ ನನ್ಗೆ ಬದುಕು ಮುಖ್ಯ. ಅದಕ್ಕೆ ಈ ನಿರ್ಧಾರ. ಕೆಲವೊಂದು ಸಲ ಒಂದನ್ನು ಪಡೆದುಕೊಳ್ಳಬೇಕಾದರೆ ಮತ್ತೊಂದನ್ನು ಕಳೆದುಕೊಳ್ಳಬೇಕಾಗುತ್ತೆ. ಅಭಿಮನ್ಯುವನ್ನು ಕಳೆದುಕೊಳ್ಳುವ ವಿಚಾರದಲ್ಲಿ ನನಗ್ಯಾವ ದುಃಖವೂ ಇಲ್ಲ. ಸಂತೋಷವೂ ಇಲ್ಲ ಅಂದ ಅಕ್ಷರ ಮುಂದಿನ ಮಾತಿಗೆ ಅವಕಾಶ ನೀಡದೆ ಬೆಡ್‌ರೂಂ ಕಡೆಗೆ ನಡೆದಳು.

ಆಕೆಯ ತೀರ್ಮಾನದ ಹಿಂದೆ ಅಗಾಧವಾದ ದುಃಖ ಅಡಗಿ ಕುಳಿತಿದೆ ಎಂಬುದರ ಅರಿವು ಲೀಲಾವತಿಯ ಹೊರತಾಗಿ ಬೇರಾರಿಗೂ ತಿಳಿದಿಲ್ಲ. ದೂರದಲ್ಲಿ ನಿಂತು ಮಗಳ ಮಾತು ಆಲಿಸುತ್ತಿದ್ದ ಲೀಲಾವತಿ ದುಃಖದಲ್ಲಿ ಮಡುವಿನಲ್ಲಿ ಮುಳುಗಿ ದರು. ಕನಸುಗಳನ್ನೆಲ್ಲ ಕೊಂದು ಅದಕ್ಕೊಂದು ಸಮಾಧಿ ಕಟ್ಟಿ ಆ ಸಮಾಧಿಯ ಮೇಲೆ ಮದುವೆಯ ಮಂಟಪ ನಿರ್ಮಿಸಲು ಸಿದ್ಧವಾಗಿ ನಿಂತಳು. ಆ ಕನಸುಗಳ ಸಾವಿನಿಂದ ಆದ ದುಃಖ ಭರಿಸಲಾಗದಷ್ಟಿತ್ತು. ಆದರೆ, ಅದನ್ನೆಲ್ಲ ಬಹಿರಂಗವಾಗಿ ತೋರ್ಪಡಿಸಿಕೊಳ್ಳಲು ಸಾಧ್ಯವಿಲ್ಲದೆ ನೋವನ್ನೆಲ್ಲ ನುಂಗಿಕೊಂಡು ಹೊರಗೆ ಮುಗುಳ್ನಗೆ ಬೀರುವ ಪ್ರಯತ್ನ ಮಾಡುತ್ತಿದ್ದಳು.
* * *

ಮಗಳ ಮಾತು ರಾಜಶೇಖರ್‌ಗೆ ಬೆಟ್ಟದಷ್ಟು ಸಂತೋಷವನ್ನು ಹೊತ್ತು ತಂದಂತಾಯಿತು. ಇನ್ನು ತಡ ಮಾಡುವುದು ಬೇಡ ಆದಷ್ಟು ಬೇಗ ಮದುವೆ ಮಾಡಿ ಮುಗಿಸಿ ಬಿಡುವುದು ಒಳ್ಳೆಯದೆಂದು ನಿರ್ಧರಿಸಿದ ರಾಜಶೇಖರ್ ನೇರ ನಂದ ಕುಮಾರ್ ಮನೆಗೆ ತೆರಳಿದರು. ಒಂದು ಮಾತೂ ಕೂಡ ಹೇಳದ ದಿಢೀರಾಗಿ ಮನೆಗೆ ಆಗಮಿಸಿದ ರಾಜಶೇಖರ್‌ನನ್ನು ಕಂಡ ನಂದಕುಮಾರ್‌ಗೆ ಆಶ್ಚರ್ಯದ ಜೊತೆಗೆ ಸಂತಸ ಕೂಡ ಉಂಟಾಯಿತು.

ಏನ್ ರಾಜು, ಹೇಗಿದ್ದೀಯೋ? ಎಂದು ಯೋಗಕ್ಷೇಮ ವಿಚಾರಿಸಿದ ನಂದಕುಮಾರ್, ರಾಜಶೇಖರ್‌ನನ್ನು ಮನೆಯೊಳಗೆ ಕರೆದೊಯ್ದರು. ಭಾಗ್ಯವತಿ, ನಿಖಿಲ್, ರಾಜಶೇಖರ್‌ಗೆ ನಮಸ್ಕರಿಸಿ ಯೋಗಕ್ಷೇಮ ವಿಚಾರಿಸಿದರು.

ಏನ್ ದಿಢೀರಾಗಿ ಇತ್ತ ಕಡೆ ಕೇಳಿದರು ನಂದಕುಮಾರ್.

ಅದೇ…, ಮಗಳ ಮದ್ವೆ ವಿಚಾರ ಮಾತಾಡಿ ಹೋಗೋಣ ಅಂತ ಬಂದೆ. ಮದ್ವೆಯನ್ನ ಆದಷ್ಟು ಬೇಗ ಮಾಡಿ ಮುಗಿಸಿಬಿಡುವ ಅಂತ ಮನೆಯಲ್ಲಿ ತೀರ್ಮಾನ ಮಾಡಿದ್ದೀವಿ. ಅಕ್ಷರ ಕೂಡ ತುದಿಗಾಲಲ್ಲಿ ನಿಂತಿದ್ದಾಳೆ. ನೀವು ಮನಸ್ಸು ಮಾಡಿದ್ರೆ ಒಂದೆರಡು ತಿಂಗಳಲ್ಲೇ ಮದ್ವೆ ಮಾಡಿ ಮುಗಿಸಿ ಬಿಡ್ಬೊಹುದು. ಉತ್ಸಾಹದಿಂದ ಹೇಳಿದರು ರಾಜಶೇಖರ್.

ಇವತ್ತಾದ್ರೆ ಇವತ್ತೇ ಮುಗಿಸಿ ಬಿಡುವ. ನಂದೇನು ಅಭ್ಯಂತರ ಇಲ್ಲ. ಆದರೆ, ಮಗ ಒಂದು ವರ್ಷ ಮದ್ವೆನೇ ಬೇಡ ಅಂತ ಹೇಳ್ತಾ ಇದ್ದಾನೆ. ಏನ್ಮಾಡೋದು…? ಅಂದ ನಂದಕುಮಾರ್ ಮಗನ ಕಡೆಗೆ ತಿರುಗಿ ನೀನೇನಂತಿಯ ನಿಖಿಲ್? ಈ ವರ್ಷ ಮದ್ವೆ ಮಾಡೋದಕ್ಕೆ ನಿನ್ಗೆ ಒಪ್ಪಿಗೆ ಇದೆಯಾ? ಕೇಳಿದರು.

ನಿಖಿಲ್‌ಗೆ ಆದ ಸಂತೋಷ ಅಷ್ಟಿಷ್ಟಲ್ಲ. ಆದರೆ, ಸಂತೋಷವನ್ನು ತೋರ್ಪಡಿಸಿಕೊಳ್ಳಲು ಮುಂದಾಗದೆ ಹಿರಿಯರೆಲ್ಲ ಮದ್ವೆ ಬಗ್ಗೆ ಒಂದೇ ಮನಸ್ಸಿನಲ್ಲಿರುವಾಗ ನಾನೊಬ್ಬ ಮಾತ್ರ ಬೇಡ ಅನ್ನೋದಕ್ಕೆ ನನ್ಗೆ ಮನಸ್ಸಾಗ್ತಾ ಇಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಅಕ್ಷರ ಆದಷ್ಟು ಬೇಗ ಮದ್ವೆ ಆಗ್ಬೇಕೂಂತ ತೀರ್ಮಾನ ಮಾಡಿದ್ದಾಳೆ ಅಂದ್ಮೇಲೆ ನಾನು ಕೂಡ ಮದ್ವೆಯಾಗೋದಕ್ಕೆ ತಯಾರಾಗಿದ್ದೇನೆ. ತುಂಬಾ ಸಂತೋಷದಿಂದ ಮದುವೆಗೆ ಒಪ್ಪಿಗೆ ಸೂಚಿಸಿ ಮನದೊಳಗೆ ಅಕ್ಷರಳನ್ನು ಬರಮಾಡಿಕೊಂಡು ಕಲ್ಪನೆಯಲ್ಲಿ ವಿಹರಿಸತೊಡಗಿದ.

ತುಂಬಾ ಸಂತೋಷ ಆಯ್ತು, ಅಂದಹಾಗೆ ಹುಡುಗಿಯನ್ನ ನೋಡ್ಲಿಕ್ಕೆ ಯಾವಾಗ ಬರ್ತ್ತೀರಾ? ಆತುರದಿಂದ ಕೇಳಿದರು ರಾಜಶೇಖರ್.

ಮುಂದಿನ ವಾರನೇ ಬಂದು ಬಿಡ್ತೇವೆ. ಮುಂದಿನ ತಿಂಗಳು ನಿಶ್ಚಿತಾರ್ಥ ಇಟ್ಟುಕೊಳ್ಳುವ ಅಂದರು ನಂದಕುಮಾರ್.

ಅಂದುಕೊಂಡ ಕಾರ್ಯ ಸುಸೂತ್ರವಾಗಿ ನೆರವೇರಿದ ಸಂತಸದಲ್ಲಿ ರಾಜಶೇಖರ್ ನಂದಕುಮಾರ್ ಮನೆಯಿಂದ ನಿರ್ಗಮಿಸಿ ದರು. ಸದ್ಯ ಕೊನೆಗೂ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡರಲ್ಲ ಎಂದು ರಾಜಶೇಖರ್ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇದುವರೆಗೆ ಮಗಳು ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಳು. ಆತಂಕದಲ್ಲಿ ಮದುವೆ ಮಾಡುವ ಪರಿಸ್ಥಿತಿ ಇತ್ತು. ಆದರೆ, ಈಗ ಆಕೆಯೇ ಮದುವೆಗೆ ಒಪ್ಪಿಕೊಂಡಿದ್ದಾಳೆ. ಯಾವುದೇ ಆತಂಕ ಇಲ್ಲದೆ ಅದ್ಧೂರಿಯಾಗಿ ಮದುವೆ ಮಾಡಿ ಮುಗಿಸಿಬಿಡಬಹು ದೆಂದು ಮನದಲ್ಲಿಯೇ ಲೆಕ್ಕಾಚಾರ ಹಾಕಿದರು.

ಒಂದುವಾರ ಕಳೆದ ನಂತರ ನಂದಕುಮಾರ್ ಬಂಧುಬಳಗದೊಂದಿಗೆ ಹುಡುಗಿಯನ್ನು ನೋಡಲು ಆಗಮಿಸಿದರು. ಹಸಿರುಡುಗೆ ತೊಟ್ಟ ಅಕ್ಷರ ತುಂಬಾ ಸುಂದರವಾಗಿ ಕಾಣುತ್ತಿದ್ದಳು. ಆದರೆ, ದುಃಖದಲ್ಲಿ ಕಣ್ಗಳು ಮಾತ್ರ ಕೆಂಪಾಗಿದ್ದವು. ದುಃಖವನ್ನು ತೋರ್ಪಡಿಸಿಕೊಳ್ಳದೆ ಮುಗುಳ್ನಗೆ ಬೀರುತ್ತ ಎಲ್ಲರಿಗೂ ಕಾಫಿ ನೀಡಿದಳು. ನಂದಕುಮಾರ್ ಬಂಧು ಬಳಗದವರಿಗೆ ಹುಡುಗಿಯನ್ನು ನೋಡಿ ತುಂಬಾ ಸಂತೋಷವಾಯಿತು. ನಿಖಿಲ್‌ಗೆ ಒಳ್ಳೆಯ ಜೋಡಿ ಎಂದು ಎಲ್ಲರು ಹಾಡಿ ಹೊಗಳಿದ್ದೇ ಹೊಗಳಿದ್ದು.

ತಿಂಗಳು ಸರಿದು ಹೋದಂತೆ ವಿವಾಹ ನಿಶ್ಚಿತಾರ್ಥವೂ ಸದ್ದಿಲ್ಲದೆ ನಡೆಯಿತು. ನಿಶ್ಚಿತಾರ್ಥಕ್ಕೆ ಹೆಚ್ಚೇನು ಜನರನ್ನು ಆಹ್ವಾನಿಸಿರಲಿಲ್ಲ. ತಮ್ಮ ಸಂಬಂಧಿಕರು, ಸ್ನೇಹಿತರಿಗೆ ಮಾತ್ರ ಆಮಂತ್ರಣ ನೀಡಿದ್ದರು. ರಾಜಶೇಖರ್ ಅಂದುಕೊಂಡ ಕಾರ್ಯವೆಲ್ಲ ನೆರವೇರಿದ ಸಂಭ್ರಮದಲ್ಲಿ ಪಾದರಸದಂತೆ ಓಡಾಡಿಕೊಂಡು ಬಂದವರನ್ನು ಸ್ವಾಗತಿಸುವುದರಿಂದ ಹಿಡಿದು ಅಡುಗೆ ಕೋಣೆಗೆ ಹೋಗಿ ಸಾಂಬಾರಿಗೆ ಉಪ್ಪು, ಉಳಿ, ಖಾರ ಏನಾದರು ಹೆಚ್ಚು ಕಡಿಮೆ ಆಗಿದೆಯೇ? ಎಂಬಲ್ಲಿಯವರೆಗೆ ಎಲ್ಲ ಕೆಲಸದ ಮೇಲೂ ಕಣ್ಣಾಡಿಸಿದರು. ಆದರೆ, ಪಾದರಸದಂತೆ ಓಡಾಡುತ್ತಿದ್ದ ಲೀಲಾವತಿ ಮಗಳಿಗೆ ಒದಗಿದ ದುರ್ಗತಿ ಕಂಡು ಚಿಂತೆಯಲ್ಲಿ ಮುಳುಗಿ ಮಂಕಾಗಿ ಹೋದರು. ಎಲ್ಲರೂ ನಿಶ್ಚಿತಾರ್ಥದ ಸಂಭ್ರಮದಲ್ಲಿ ಮುಳುಗಿದ್ದರು. ಆದರೆ, ಲೀಲಾವತಿ, ಅಕ್ಷರ ಎಂಬ ಎರಡು ಜೀವಗಳು ಮಾತ್ರ ದುಃಖದಲ್ಲಿ ಮುಳುಗಿದ್ದವು. ಆದರೂ ತೋರ್ಪಡಿಕೆಗೆ ಯಾರಾದರು ನಕ್ಕಾಗ ಪ್ರತಿಯಾಗಿ ನಗುತ್ತಿದ್ದರು.

ನಿಶ್ಚಿತಾರ್ಥಕ್ಕೆ ಬಂದವರೆಲ್ಲ ಗಂಡು-ಹೆಣ್ಣಿನ ಜೋಡಿ ನೋಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ತುಂಬಾ ಚನ್ನಾಗಿದೆ ಜೋಡಿ ಎಂದು ಪರಸ್ಪರ ಆಡಿ ಹೊಗಳುತ್ತಿದ್ದ್ದ ಮಾತು ಲೀಲಾವತಿಯ ಕಿವಿಗೆ ಬಿದ್ದು ಏನ್ ಚಂದನೋ ಏನೋ? ಮಗಳು ಪಡಬಾರದ ಕಷ್ಟ ಪಡ್ತಾ ಇದ್ದಾಳೆ. ಇದೇ ಜಾಗದಲ್ಲಿ ನಿಖಿಲ್ ಬದಲಾಗಿ ಅಭಿಮನ್ಯು ಇದ್ದಿದ್ದರೆ ಮಗಳು ಅದೆಷ್ಟೊಂದು ಸಂತೋಷದಲ್ಲಿರುತ್ತಿದ್ದಳು. ಎಂದು ಮಗಳ ಬಗ್ಗೆ ನೆನೆದುಕೊಂಡು ದುಃಖಿತರಾದರು.

ಮೂರು ತಿಂಗಳ ನಂತರ ವಿವಾಹ ನಡೆಸಲು ಗುರು ಹಿರಿಯರೆಲ್ಲ ಸೇರಿ ತೀರ್ಮಾನಿಸಿದರು. ಅದಕ್ಕಾಗಿ ಒಳ್ಳೆಯ ದಿನವನ್ನು ಗೊತ್ತು ಪಡಿಸಿದರು. ಮೂರು ತಿಂಗಳ ಬಳಿಕ ಮದುವೆ ಎಂಬ ವಿಚಾರ ಅಂತಿಮಗೊಂಡ ಬಳಿಕ ನಿಖಿಲ್ ಬೇಸರಗೊಂಡ. ಸ್ವಲ್ಪ ಬೇಗ ಮದ್ವೆ ಇಟ್ಕೋ ಬಾರದಿತ್ತಾ? ಎಂಬುದು ಅವನ ಬೇಸರಕ್ಕೆ ಕಾರಣ. ಆದಷ್ಟು ಬೇಗ ಅಕ್ಷರ ತನ್ನವಳಾದರೆ ಸಾಕು ಎಂದು ಜಪಿಸುತ್ತಿದ್ದ ನಿಖಿಲ್‌ಗೆ ಮೂರು ತಿಂಗಳು ಮೂರು ವರ್ಷ ಎದುರಿಗೆ ಬಂದು ನಿಂತಂತಾಯಿತು. ಆ ಮೂರು ತಿಂಗಳನ್ನು ಕಳೆಯುವುದಾದರೂ ಹೇಗೆ? ಮನೆಯವರಿಗೆ ಬುದ್ಧಿ ಇಲ್ಲ. ಆದಷ್ಟು ಬೇಗ ಮದ್ವೆ ಮಾಡಿ ಮುಗಿಸಿ ಬಿಟ್ಟಿದ್ದರೆ ಏನಾಗುತ್ತಿತ್ತು? ಎಂದು ತನ್ನೊಳಗೆ ತಾನೇ ಗೊಣಗಿಕೊಂಡ.
* * *

ನಿಶ್ಚಿತಾರ್ಥ ಮುಗಿದು ಹಲವು ದಿನಗಳು ಉರುಳಿದವು. ನಿಖಿಲ್‌ಗೆ ಹೆಚ್ಚು ದಿನ ತಡೆದುಕೊಂಡಿರಲು ಸಾಧ್ಯವಾಗಲಿಲ್ಲ. ಆಕೆಯ ಮೊಗವನ್ನೊಮ್ಮೆ ನೋಡಿ, ಮನಬಿಚ್ಚಿ ಮಾತಾಡಬೇಕೆಂದು ಅನ್ನಿಸಿದಾಗಲೆಲ್ಲ ಚಡಪಡಿಸ ತೊಡಗಿದ. ಅನೇಕ ರಾತ್ರಿಗಳನ್ನು ನಿದ್ರೆ ಇಲ್ಲದೆ ಆಕೆಯ ಕನವರಿಕೆಯಲ್ಲಿಯೇ ಕಾಲ ಕಳೆಯತೊಡಗಿದ. ಅದೊಂದು ದಿನ ನಾಚಿಕೆಯನ್ನೆಲ್ಲ ಬಿದಿಗಿಟ್ಟು ಆಕೆಯ ಮನೆಗೆ ಭೇಟಿಕೊಟ್ಟು ಆಕೆಯೊಂದಿಗೆ ಒಂದಿಷ್ಟು ಹೊತ್ತು ಕಳೆದು ಬಂದ. ನಂತರ ಅವನಿಗದು ನಿತ್ಯದ ಕಾಯಕವಾಯಿತು. ದಿನನಿತ್ಯ ಅಕ್ಷರಳ ಮನೆಗೆ ಭೇಟಿ ಕೊಡುವುದು, ಆಕೆಯೊಂದಿಗೆ ಹರಟೆಯಲ್ಲಿ ತೊಡಗುವುದು ಸಾಮಾನ್ಯವಾಯಿತು. ಆದರೆ, ನಿಖಿಲ್ ಅಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳುವ ವ್ಯಕ್ತಿಯಲ್ಲ. ಹೇಗಾದರು ಮಾಡಿ ಅವಳನ್ನು ಹೊರಗೆ ಕರೆದೊಯ್ದು ಒಂದಷ್ಟು ಹೊತ್ತು ಹರಟೆ ಹೊಡೆಯಬೇಕು, ಮನಬಿಚ್ಚಿ ಮಾತಾಡಬೇಕೆಂದು ತೀರ್ಮಾನಿಸಿ ಅದೊಂದು ದಿನ ಧೈರ್ಯಮಾಡಿ ಮಾವನ ಒಪ್ಪಿಗೆ ಪಡೆದು ಅಕ್ಷರಳನ್ನು ರಾಜಾಸೀಟ್‌ಗೆ ಕಾರಿನಲ್ಲಿ ಕರೆದೊಯ್ದ.

ಇಳಿ ಸಂಜೆಯ ಹೊತ್ತಿನಲ್ಲಿ ರಾಜಾಸೀಟ್ ಉದ್ಯಾನವನದಲ್ಲಿ ಇಬ್ಬರು ಕುಳಿತು ಪ್ರಕೃತಿ ಸೌಂದರ್ಯ ಸವಿದರು. ಆಹ್ಲಾದಕರ ತಂಗಾಳಿ ಮೈಸೋಕುತಿತ್ತು. ಉದ್ಯಾನವನದ ಅಲ್ಲಲ್ಲಿ ಪ್ರೇಮಿಗಳು ಒಬ್ಬರನ್ನೊಬ್ಬರು ಕೈ ಕೈ ಹಿಡಿದುಕೊಂಡು ಪ್ರಪಂಚವನ್ನೇ ಮರೆತು ಉತ್ಸಾಹದಿಂದ ಓಡಾಡುತ್ತಿದ್ದರು.

ನಿಖಿಲ್ ಅಕ್ಷರಳನ್ನು ತೋಳಲ್ಲಿ ಬಳಸಿಕೊಂಡು ಏನಾದರು ಮಾತಾಡು… ಎಂದು ಕೇಳಿಕೊಂಡ. ಮಾತಾಡುವ ಉತ್ಸಾಹ ಆಕೆಯಲ್ಲಿ ಇರಲಿಲ್ಲ. ಮಾತಾಡುವುದಕ್ಕೇನು ಉಳಿದಿದೆ? ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಭಿಮನ್ಯುವಿನ ಜೀವ ಉಳಿಸಲು,

ಅಪ್ಪನ ಮನಸ್ಸು ಸಂತೃಪ್ತಿ ಪಡಿಸುವುದಕೋಸ್ಕರ ಮದುವೆ ಎಂಬ ಬಂಧನದಲ್ಲಿ ಬಂಧಿಯಾಗಲು ಅಣಿಯಾಗುತ್ತಿರುವವಳಲ್ಲಿ ಮಾತು ಹುಟ್ಟಿಕೊಳ್ಳುವುದಾದರೂ ಹೇಗೆ? ನಿಖಿಲ್ ಜಾಗದಲ್ಲಿ ಅಭಿಮನ್ಯು ಇದ್ದಿದ್ದರೆ ಬಾಯಿಗೆ ವಿರಾಮ ನೀಡದೆ ಮಾತಾಡುತ್ತಿದ್ದಳು. ಆದರೆ, ನಿಶ್ಚಿತಾರ್ಥವಾದರೂ ಕೂಡ ನಿಖಿಲ್ ತನ್ನವನ್ನಲ್ಲ ಎಂದು ಆಕೆಗೆ ಅನ್ನಿಸತೊಡಗಿತು. ಪರಪುರುಷನೊಂದಿಗೆ ಬಂದು ಕುಳಿತುಕೊಂಡಿದ್ದೇನೆ ಅಂದುಕೊಂಡು ಮಾತು ಹೊರಡಲಿಲ್ಲ.

ಮೌನವಾಗಿದ್ದ ಅಕ್ಷರಳನ್ನು ನೋಡಿದ ನಿಖಿಲ್, ಇನ್ನೂ ಯಾಕೆ ನಾಚ್ಕೋತ್ತಿಯ!? ಇನ್ನೇನು ಮುಂದಿನ ತಿಂಗಳು ನಮ್ಮಿಬ್ಬರಿಗೆ ಮದ್ವೆ. ಇಲ್ಲಿ ಯಾರಾದ್ರೂ ನೋಡಿಬಿಡುತ್ತಾರೆಂದು ಭಯ ಪಡ್ಬೇಡ. ಎಷ್ಟೇ ಆದ್ರೂ ನಾನು ನಿನ್ನ ಗಂಡ ಆಗುವವನು. ನನ್ನೊಂದಿಗೆ ಮಾತಾಡ್ಲಿಕ್ಕೆ ಯಾಕೆ ಸಂಕೋಚ ಪಡ್ತಿಯ? ಕೇಳಿದ.

ಅಕ್ಷರ ಮೌನಿಯಾದಳು. ಏನು ಮಾತಾಡಬೇಕೆಂದು ಆಕೆಗೆ ತೋಚಲಿಲ್ಲ. ಆಕೆ ಅಭಿಮನ್ಯುವಿನ ಕನವರಿಕೆಯಲ್ಲಿ ವಿಹರಿಸ ತೊಡಗಿದಳು. ಎಷ್ಟೊಂದು ಸುಂದರವಾಗಿತ್ತಲ್ಲ ಆ ದಿನಗಳು? ನಾಲ್ಕೈದು ವರ್ಷ ನಾಲ್ಕು ನಿಮಿಷಗಳ ಹಾಗೆ ಕಳೆದು ಹೋದವು. ಇನ್ನೆಂದೂ ಅಂಥಹ ಸಂತಸದ ದಿನಗಳು ತನ್ನ ಜೀವನದಲ್ಲಿ ಬರಲಾರದು. ಪಾಪ ಅಭಿಮನ್ಯು. ಅದೆಷ್ಟು ನೊಂದುಕೊಂಡಿತಾನೋ ಏನೋ? ಅಭಿಮನ್ಯುವನ್ನು ನೋಡದೆ, ಒಂದು ಮಾತೂ ಕೂಡ ಆಡದೆ ಒಂದೂವರೆ ತಿಂಗಳನ್ನು ಹೇಗೆ ಕಳೆಯೋದಕ್ಕೆ ತನ್ನಿಂದ ಸಾಧ್ಯವಾಯ್ತು? ಅಭಿಮನ್ಯುವಿನೊಂದಿಗೆ ಒಂದು ದಿನ ಕೂಡ ಮಾತಾಡದೆ ಇದ್ದರೆ ಹೊಟ್ಟೆಗೆ ಅನ್ನ ಸೇರುತ್ತಿರಲಿಲ್ಲ. ಆದರೆ, ಇದೀಗ ಒಂದೂವರೆ ತಿಂಗಳನ್ನು ಯಾವುದೇ ಸದ್ದುಗದ್ದಲವಿಲ್ಲದೆ ಕಳೆದುಬಿಟ್ಟೆನಲ್ಲ? ಗೋವಾಕ್ಕೆ ಸ್ನೇಹಿತರೊಂದಿಗೆ ಎರಡೇ ಎರಡು ದಿನ ಹೋಗಿ ಬತೇನೆ ಅಂತ ಅಭಿಮನ್ಯು ಗೋಗರೆದುಕೊಂಡಾಗ ತಾನು ಹೋಗಲು ಅವಕಾಶ ಕೊಡಲಿಲ್ಲ. ಒಂದು ದಿನ ಕೂಡ ಅಭಿಮನ್ಯುವನ್ನು ಬಿಟ್ಟು ಇರುವ ಶಕ್ತಿ ತನಗಿರಲಿಲ್ಲ. ಆದರೆ, ಇಂದು ಅವನ್ನನೇ ತೊರೆದು ಬಂದು ಮನಸ್ಸಿಗೆ ಹಿಡಿಸದವನ ತೋಳಲ್ಲಿ ಬಂಧಿಯಾಗಿ ಕುಳಿತುಕೊಳ್ಳುವ ಪರಿಸ್ಥಿತಿಯನ್ನು ದೇವರು ನಿರ್ಮಾಣ ಮಾಡಿಬಿಟ್ಟನಲ್ಲ? ನಾನೇನು ಪಾಪ ಮಾಡಿದೆ ಅಂತ ನನಗೀಕೆ ಶಿಕ್ಷೆ? ಎಂದು ಮತ್ತೆ ಮತ್ತೆ ಪ್ರಶ್ನಿಸಿಕೊಂಡು ದುಃಖಿತಳಾದಳು.

ಅಕ್ಷರಳನ್ನು ತನ್ನ ತೋಳಿನಿಂದ ಬಳಸಿಕೊಂಡು ನಿಖಿಲ್ ರಾಜಾಸೀಟ್ ಮುಂಭಾಗದ ಪ್ರಕೃತಿ ಸೊಬಗನ್ನು ಸವಿಯತೊಡಗಿದ. ಅಭಿಮನ್ಯುವಿನ ಕನವರಿಕೆಯಿಂದ ಹೊರ ಬಂದ ಅಕ್ಷರ, ತೋಳಿಂದ ತನ್ನನ್ನು ಬಳಸಿಕೊಂಡಿರುವ ನಿಖಿಲ್‌ನನ್ನು ಕಂಡು ತುಂಬಾ ಅಸಹ್ಯ ಪಟ್ಟುಕೊಂಡಳು.

ನಿಖಿಲ್…, ನನ್ಗೆ ಇದೆಲ್ಲ ಹಿಡಿಸೋದಿಲ್ಲ. ದೂರ ಕೂತ್ಕೋ ಅಂದು ಬಿಟ್ಟಳು.

ನಿಖಿಲ್‌ಗೆ ಕೋಪ ನೆತ್ತಿಗೇರಿತ್ತಾದರೂ ಸಹಿಸಿಕೊಂಡ. ಮದುವೆಗೂ ಮುಂಚೆ ಯಾಕೆ ಜಗಳವೆಂದು ತನಗೆ ತಾನೇ ಸಮಾಧಾನ ಹೇಳಿಕೊಂಡ. ಅಕ್ಷರ, ನೀನು ಯಾಕೆ ನನ್ನೊಂದಿಗೆ ಹೀಗೆ ನಡ್ಕೊತ್ತಾ ಇದ್ದೀಯ? ನನ್ನ ನಿನ್ಗೆ ಇಷ್ಟ ಇಲ್ವ? ಅಪ್ಪ, ಅಮ್ಮನ ಒತ್ತಾಯಕ್ಕೆ ಮಣಿದು ನನ್ನ ಮದ್ವೆಯಾಗ್ತಾ ಇದ್ದೀಯ? ಆಕೆಯೆಡೆಗೆ ಒಂದು ಸಂಶಯದ ನೋಟ ಬೀರಿ ಕೇಳಿದ.

ನಿನ್ನ ಮದ್ವೆಯಾಗೋದಕ್ಕೆ ನನ್ಗೆ ಯಾರೂ ಒತ್ತಡ ಹೇಲಿಲ್ಲ. ನನ್ಗೆ ಇಷ್ಟ ಆಯ್ತು. ಅದಕ್ಕೆ ಮದ್ವೆ ಮಾಡ್ಕೋತ್ತಾ ಇದ್ದೇನೆ. ನನ್ಗೆ ಈ ತರ ತೋಳಲ್ಲಿ ಬಳಸಿಕೊಳ್ಳೋದು ಇಷ್ಟ ಇಲ್ಲ. ಹುಟ್ಟಿದಲ್ಲಿಂದ ಹುಡುಗಿಯರನ್ನೇ ನೋಡ್ಲಿಲ್ವ? ಮದ್ವೆಗೂ ಮುಂಚೆ ಎಲ್ಲ ಮಾಡಿ ಮುಗಿಸಿ ಬಿಡುವ ಆತುರ ತೋತಾ ಇದ್ದೀಯ. ನನ್ಗೆ ಹೇಸಿಗೆಯಾಗ್ತಾ ಇದೆ ಮುಖಕ್ಕೆ ಹೊಡೆದವಳಂತೆ ಹೇಳಿಬಿಟ್ಟಳು.

ಇಷ್ಟೆಲ್ಲ ಮಾತು ಕೇಳಿ ಇಲ್ಲಿ ಹೆಚ್ಚು ಸಮಯ ಕಳೆಯೋದು ಸರಿಯಲ್ಲವೆಂದು ನಿರ್ಧರಿಸಿದ ನಿಖಿಲ್ ಅಕ್ಷರಳನ್ನು ಕರೆದೊಯ್ದು ಮನೆಗೆ ಬಿಟ್ಟು ತೆರಳಿದ. ಮನೆಗೆ ಬಂದ ನಂತರ ಆಕೆಯಲ್ಲಿ ತಳಮಳ ಪ್ರಾರಂಭವಾಯಿತು. ರಾಜಾಸೀಟ್‌ನಲ್ಲಿ ತಾನಾಡಿದ ಮಾತನ್ನು ಎಲ್ಲಾದರು ಅಪ್ಪನಿಗೆ ನಿಖಿಲ್ ಹೇಳಿಬಿಟ್ಟರೇನು ಗತಿ ಎಂದು ಆತಂಕಗೊಂಡಳು. ನಿಖಿಲ್ ಸರಿಯಾಗಿಯೇ ನಡೆದುಕೊಂಡ. ಪ್ರತಿಯೊಬ್ಬ ಗಂಡಸು ಕೂಡ ತನ್ನ ಪ್ರೇಯಸ್ಸಿಯನ್ನು, ಹೆಂಡ್ತಿಯನ್ನು ತೋಳತೆಕ್ಕೆಯಲ್ಲಿ ಬಂಧಿಸಿಕೊಳ್ಳಲು ಆಸೆ ಪಡೋದು ಸಹಜ. ಆದರೆ, ತನ್ನ ಹೃದಯದಲ್ಲಿ ನಿಖಿಲ್‌ಗೆ ಸ್ಥಾನ ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಅಂತಹ ಒಂದು ಮಾತು ಆಡಿಬಿಟ್ಟೆ ಎಂದು ಆಕೆಗೆ ಅನ್ನಿಸಿತು.
* * *

ಎರಡೂವರೆ ವರ್ಷಗಳ ಕಾಲ ಅಭಿಮನ್ಯುವಿನ ತೋಳ ತೆಕ್ಕೆಯಲ್ಲಿ ಬಂಧಿಯಾಗಿ, ಮುಂದಿನ ವೈವಾಹಿಕ ಜೀವನದ ಬಗ್ಗೆ ಕಲ್ಪನೆಯ ಸಾಮ್ರಾಜ್ಯ ಕಟ್ಟಿಕೊಂಡು ಆ ಕಲ್ಪನೆಗಳನ್ನೆಲ್ಲ ಅವನೆದುರು ತೆರೆದಿಡುತ್ತಿದ್ದ ಅಕ್ಷರ ಇಂದು ಅದೇ ರಾಜಾಸೀಟ್‌ನ ಕಲ್ಲುಹಾಸಿನ ಬೆಂಚಿಯ ಮೇಲೆ ಕುಳಿತು ನಿಖಿಲ್‌ನ ತೋಳ ತೆಕ್ಕೆಯಲ್ಲಿ ಬಂಧಿಯಾಗಿರುವುದನ್ನು ಕಂಡು ಅಭಿಮನ್ಯುವಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಆಕೆಯ ನೆನಪುಗಳು ಹೆಚ್ಚಾಗಿ ಉಳಿದುಕೊಂಡಿರುವ ರಾಜಾಸೀಟ್‌ನಲ್ಲಿ ಆಕೆಯ ನೆನಪುಗಳನ್ನೆಲ್ಲ ಕೊಂದು ಬಿಡಬೇಕೆಂದು ನಿರ್ಧರಿಸಿದ ಅಭಿಮನ್ಯು ದಿನನಿತ್ಯ ತಪ್ಪದೆ ರಾಜಾಸೀಟ್‌ಗೆ ಭೇಟಿ ನೀಡಿ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ. ಇನ್ನೆಂದೂ ಕೂಡ ಅಕೆಯ ಮುಖ ನೋಡಬಾರದೆಂದು ನಿರ್ಧರಿಸಿದ. ಆದರೆ, ಆಕೆಯ ಮುಖ ನೋಡಿ ಮನಸ್ಸು ಮತ್ತೆ ಪ್ರೀತಿಯ ಕಡೆಗೆ ವಾಲತೊಡಗಿತು. ಆದರೆ, ಆಕೆ ಮತ್ತೊಬ್ಬ ಪುರುಷನ ತೋಳ ತೆಕ್ಕೆಯಲ್ಲಿ ಬಂಧಿಯಾಗಿರುವುದನ್ನು ಕಂಡು ಅಭಿಮನ್ಯು ತುಂಬಾ ಅಸಹ್ಯಪಟ್ಟುಕೊಂಡು ಆಕೆಯನ್ನು ಶಪಿಸುತ್ತಾ ನೇರವಾಗಿ ಬಾರ್ ಕಡೆಗೆ ನಡಿಗೆ ಹಾಕಿದ.

ಬಾರ್‌ವೊಳಗಿನ ಮಂದ ಬೆಳಕಿನ ಅಡಿಯಲ್ಲಿ ಒಬ್ಬೊಂಟಿಯಾಗಿ ಕುಳಿತು ಆಕೆಯನ್ನು ನೆನೆಯುತ್ತಾ ಒಂದರ ಮೇಲೊಂದರಂತೆ ಪೆಗ್ ಏರಿಸಿದ. ದುಃಖ ಮರೆಸಲು ಕುಡಿಯಬೇಕೆಂದು ಬಾರ್‌ಗೆ ತೆರಳಿದ್ದನಾದರೂ ಕುಡಿದಷ್ಟು ಆಕೆಯ ನೆನಪುಗಳೇ ಹೆಚ್ಚಾಗುತ್ತಿದ್ದವು.

ಒಂದೊಂದು ಸಲ ಆಕೆ ತನ್ನವಳಾಗಬೇಕೆಂದು, ಮರುಕ್ಷಣದಲ್ಲಿ ನಿಲುವು ಬದಲಾಗಿ ಯಾವನದೋ ತೋಳಿನಲ್ಲಿ ಬಂಧಿಯಾದವಳನ್ನ ನಾನೇಕೆ ತನ್ನವಳಾಗಬೇಕೂಂತ ಬಯಸಬೇಕು ಎಂದು ತಿಳಿದು ಆಕೆಯನ್ನು ಶಪಿಸತೊಡಗಿದ. ಅವಳೇನು ತ್ರಿಪುರ ಸುಂದರಿಯಾ? ಅವಳಷ್ಟೇ ಸುಂದರವಾದ, ಅವಳಿಗಿಂತ ಹೃದಯ ವೈಶಾಲ್ಯತೆ ಇರುವ ಹುಡುಗಿ ಈ ಜಗತ್ತಿನಲ್ಲಿ ಇಲ್ವ…? ಸತ್ತ ಮಗುವಿನ ಜಾತಕ ನೊಡಿ ಏನು ಸುಖ? ಸಾಯೋದಕ್ಕಿಂತ ಮೊದ್ಲು ನೋಡಿದ್ರೆ ಏನಾದರು ಉಪಯೋಗ ಆಗ್ತಾ ಇತ್ತು. ಈಗ ಅಕ್ಷರ ನನ್ನ ಪಾಲಿಗೆ ಸತ್ತು ಹೋಗಿದ್ದಾಳೆ. ಅವಳನ್ನ ನೆನೆದು ಮನಸ್ಸನ್ನೇಕೆ ಹಾಳು ಮಾಡಿಕೊಳ್ಬೇಕು. ಇನ್ನೇನಿದ್ದರೂ ಮುಂದೆ ಬರುವವಳಿಗೋಸ್ಕರ ನಾನು ಚಿಂತೆ ಮಾಡ್ಬೇಕು. ಹೊರಟು ಹೋದವಳ ಬಗ್ಗೆ ಚಿಂತೆ ಮಾಡಿ ಏನು ಸುಖ? ಛೇ.., ಎಲ್ರೂ ಒಂದೇ. ಹಾಳಾದ ಹುಡುಗಿಯರು. ಯಾರ ಬಗ್ಗೆ ಯೋಚನೆ ಮಾಡಿದ್ರೂ ಏನು ಸುಖ ಇಲ್ಲ. ಮುಂದೆ ಬರುವವಳೂ ಇದೇ ರೀತಿ ಇರುತ್ತಾಳೆ. ಎಷ್ಟೇ ಆದರೂ ಹೆಣ್ಣು ಜಾತಿ ಅಲ್ವ? ಕೈ ಕೊಡೋದೇ ಅವರಿಗೆ ಕಾಯಕ ಅಕ್ಷರ ಪ್ರೀತಿಯನ್ನು ತ್ಯಜಿಸಿ ಹೋದ ದುಃಖದಲ್ಲಿ ಕುಡಿದು, ಕುಡಿದು ಸುಸ್ತಾಗಿ ತೊದಲುತ್ತಾ ಹುಡುಗಿಯರ ವಿರುದ್ಧ ಧ್ವೇಷಕಾರಿದ.

ಪ್ರೀತಿಸೋ ಸಂದರ್ಭ ಎಂತಹಾ ಬಣ್ಣ, ಬಣ್ಣದ ಮಾತುಗಳನ್ನ ಆಡಿಲ್ಲ ಅವಳು. ಪ್ರೀತಿಯ ಬಗ್ಗೆ ಸುಂದರವಾದ ಕನಸುಗಳನ್ನ ಬಿತ್ತಿ ಜೀವನ ಪರ್ಯಂತ ನನ್ನ ಬಗ್ಗೆ ಕನಸು ಕಾಣುತ್ತಲೇ ಇರು ಅಂತ ಹೇಳಿ ಹೊರಟು ಬಿಟ್ಟಳಲ್ಲ ಹಾಳಾದವಳು. ಅಮ್ಮ ಆಗಿಂದಾಗೆ ಹೇಳ್ತನೇ ಇದ್ರು. ದೊಡ್ಡವರ ಸಹವಾಸ ಮಾಡ್ಬೇಡ ಅಂತ. ನಾನೇ ಕೇಳ್ಲಿಲ್ಲ. ಪ್ರೀತಿ ಮಾಡ್ಬಿಟ್ಟೆ. ಈಗ ಒಂದೊಂದಾಗಿ ಎಲ್ಲವನ್ನು ಅನುಭವಿಸ್ತಾ ಇದ್ದೇನೆ. ನನ್ಗಿದು ಬೇಕಾಗಿತ್ತು. ಜೀವನದಲ್ಲಿ ಒಂದು ಒಳ್ಳೆಯ ದಾರಿಯನ್ನೇನೋ ತೋರಿಸಿಕೊಟ್ಟಳು. ಅದಕೋಸ್ಕರ ಅವಳನ್ನ ಜೀವನ ಪರ್ಯಂತ ನೆನಸಿಕೊಳ್ಳಲೇ ಬೇಕು. ಆದರೆ, ಅದೇ ವೇಳೆ ಪ್ರೀತಿಯ ದಾರಿ ಕೂಡ ತೋರಿಸಿಕೊಟ್ಟು ಹಾಳಾಗಿ ಹೋಗು ಅಂತ ಹೊರಟು ಹೋದ್ಲು. ನಾನು ಹಾಳಾಗಿ ಹೋಗ್ತಿನಿ. ನೀನು ಮಾತ್ರ ಸುಖವಾಗಿರು ಅಕ್ಷರಳನ್ನು ನಿಂದಿಸುತ್ತಾ, ಒಂದೊಂದು ಪೆಗ್ಗ್ ಏರಿಸುತ್ತಾ ನೋವು ಮರೆಯಲು ಪ್ರಯತ್ನಿಸುತ್ತಿದ್ದ. ಬಾರ್‌ವೊಳಗಿದ್ದ ಜನರೆಲ್ಲ ಅಭಿಮನ್ಯುವನ್ನು ನೋಡುತ್ತಾ, ಪಿಸುಗುಟ್ಟಿ ಮಾತಾಡಿಕೊಂಡು ನಗುತ್ತಿದ್ದರು. ಕತ್ತಲಾಗುತ್ತಿದ್ದಂತೆ ಅಭಿಮನ್ಯು ಮೆಲ್ಲನೆ ಎದ್ದು ಮನೆಯ ಕಡೆಗೆ ಭಾರವಾದ ಮನಸ್ಸಿನೊಂದಿಗೆ ನಡೆದ.
* * *

ಅಕ್ಷರ-ನಿಖಿಲ್‌ನ ಮದುವೆಗೆ ಒಂದು ತಿಂಗಳು ಮಾತ್ರ ಬಾಕಿ ಉಳಿದುಕೊಂಡಿತ್ತು. ಉಭಯ ಕಡೆಯಲ್ಲೂ ಮದುವೆಗೆ ಸಿದ್ಧತೆ ಭರದಿಂದ ಸಾಗಿತು. ಅಕ್ಷರ ಮದುವೆಯ ಆಹ್ವಾನ ಪತ್ರವನ್ನು ಸ್ನೇಹಿತರಿಗೆಲ್ಲ ಹಂಚಿ ಬಂದಳು. ಅಭಿಮನ್ಯುವನ್ನು ನೋಡದೆ, ಒಂದು ಮಾತೂ ಕೂಡ ಆಡದೆ ಸುಮಾರು ಎರಡು ತಿಂಗಳು ಸರಿದಿತ್ತು. ಸ್ನೇಹಿತರಿಗೆ ಮದುವೆ ಕಾಗದ ಕೊಡುವ ನೆಪದಲ್ಲಿ ಅಭಿಮನ್ಯುವನ್ನೊಮ್ಮೆ ನೋಡಿ ಮಾತಾಡಿ ಬರುವ ಹಂಬಲದೊಂದಿಗೆ ಹೊರಟು ನಿಂತಳು. ಭಯ, ಸಂಕೋಚದೊಂದಿಗೆ ಅಭಿಮನ್ಯುವಿನ ಟೂರಿಸ್ಟ್ ಇನ್‌ಫಾಮೇಷನ್ ಸೆಂಟರ್ ಕಚೇರಿ ಒಳಗೆ ಕಾಲಿಟ್ಟಳು. ಅಭಿಮನ್ಯು ಆಕೆಯನ್ನು ನೋಡಿ ಸುಮ್ಮನಾದ. ಆಕೆಯೊಂದಿಗೆ ಮಾತಾಡುವುದಕ್ಕೇನು ಉಳಿದಿದೆ? ಪುನಃ ಮನಸ್ಸನ್ನು ಮತ್ತಷ್ಟು ಹಾಳು ಮಾಡಿ ಹೋಗಲು ಬಂದಿದ್ದಾಳೆಂದು ಮನದೊಳಗೆ ಗೊಣಗಿಕೊಂಡ.

ಅಭಿ, ನನ್ಮೇಲೆ ಕೋಪನಾ? ಕೇಳಿದಳು.

ಹಾಗೇನು ಇಲ್ಲ. ಬಂದ ವಿಷಯ ಏನೂಂತ ಮೊದ್ಲು ಹೇಳು.

ಯಾಕೆ, ನಾನು ಬಬಾದ್ರಿತ್ತಾ? ಮದ್ವೆ ಕಾಗದ ಕೊಟ್ಟು ಹೋಗುವ ಅಂತ ಬಂದೆ ಎಂದು ಅಭಿಮನ್ಯುವಿನ ಕೈಗೆ ಮದುವೆ ಕಾಗದ ಇಟ್ಟು ದಯವಿಟ್ಟು ಬಬೇಕು ಎಂದು ಕೇಳಿಕೊಂಡಳು.

ಯಾಕೆ ನನ್ಗೆ ಸುಮ್ನೆ ಮದ್ವೆ ಕಾಗದ ಕೊಟ್ಟು ಒಂದು ಕಾಗದವನ್ನ ವೇಸ್ಟ್ ಮಾಡ್ಕೊತ್ತಿಯ. ಅದನ್ನ ಬೇರೆಯಾರಿಗಾದರು ಕೊಟ್ಟರೆ ಮದ್ವೆಗೆ ಬಂದು ಆಶೀರ್ವಾದ ಮಾಡಿ ಹೋಗ್ತಾರೆ. ನನ್ಗೆ ಕೊಟ್ಟರೆ ಆ ಕಾಗದ ಸುಮ್ನೆ ವೇಸ್ಟ್ ಆಗುತ್ತೆ ಅಷ್ಟೆ. ಇಷ್ಟವಿಲ್ಲದ ಜಾಗಕ್ಕೆ ನಾನೆಂದೂ ಹೋಗೋದಿಲ್ಲ. ನೀನಿನ್ನು ಹೊರಡ್ಬೊಹುದು. ಅಂದ ಅಭಿಮನ್ಯು ಆಕೆಯನ್ನು ನೋಡದೆ ಕೆಲಸದಲ್ಲಿ ತಲ್ಲೀನನಾದ.

ಅಭಿ, ನೀನು ನನ್ನ ಮೇಲೆ ಇಟ್ಟಿರುವ ಪ್ರೀತಿ ಇಷ್ಟೇನಾ…? ನೋವಿನಿಂದ ಕೇಳಿದಳು.

ಒಹೋ… ನೀನೇನು ನನ್ಮೇಲೆ ತುಂಬಾ ಪ್ರೀತಿ ಇಟ್ಕೊಂಡಿದ್ದೀಯ ಅಲ್ವ? ನಾನೇನು ನಿನ್ನ ಪ್ರೀತಿ ಮಾಡು ಅಂತ ಕೇಳಿದ್ನಾ? ಇಲ್ವಲ್ಲ? ನೀನೆ ತಾನೇ ಪ್ರೀತಿ ಮಾಡು ಅಂತ ಹಟ ಹಿಡ್ದು ನನ್ನ ಪ್ರೀತಿ ಮಾಡೋ ಹಾಗೆ ಮಾಡಿದ್ದು. ಕೊನೆಗೆ ಆ ಪ್ರೀತಿಗೆ ತಿಲಾಂಜಲಿ ಇಟ್ಟವಳೂ ನೀನೆ ತಾನೇ? ಪ್ರೀತಿಯೇ ಬೇಡ ಅಂತ ತಿರಸ್ಕಾರ ಮಾಡಿ ಹೊರಟವಳಿಗೆ ಪ್ರೀತಿಯ ಬಗ್ಗೆ ಮಾತಾಡುವ ಹಕ್ಕು ಇಲ್ಲ. ದಯವಿಟ್ಟು ಹೊರಟು ಹೋಗು. ನಿನ್ನ ಮುಖ ನೋಡೋದಕ್ಕೆ ನನ್ಗೆ ಅಸಹ್ಯ ಅನ್ನಿಸ್ತಾ ಇದೆ. ಇಲ್ಲಿದ್ದುಕೊಂಡು ಮತ್ತಷ್ಟು ಹಿಂಸೆ ಕೊಡ್ಬೇಡ. ನನ್ನ ಒಬ್ಬೊಂಟಿಯಾಗಿ ಇರೋದಕ್ಕೆ ಬಿಟ್ಬಿಡು ಕೈ ಮುಗಿದು ಕೇಳಿಕೊಂಡ.

ಅಭಿಮನ್ಯುವಿನ ಕೋಪಕಂಡು ಹೆದರಿಕೊಂಡ ಅಕ್ಷರ ಕಣ್ಣೀರು ಒರೆಸಿಕೊಳ್ಳುತ್ತಾ ನಿರ್ಗಮಿಸಿದಳು. ವಾಸ್ತವ ವಿಚಾರ ಅವನಿಗೇನು ಗೊತ್ತು? ಎಲ್ಲವನ್ನು ಹೇಳಿಕೊಂಡಿದ್ದರೆ ಅವನಿಗೆ ಇನ್ನೂ ನನ್ನ ಮೇಲೆ ಪ್ರೀತಿ ಇತಾ ಇತ್ತು. ತಪ್ಪೆಲ್ಲ ನನ್ನದೇ. ಇಂದಲ್ಲದಿದ್ದರೂ ನಾಳೆಯಾದರೂ ಅಭಿಮನ್ಯುವಿನ ಎದುರು ಸತ್ಯದ ವಿಚಾರ ತೆರೆದಿಡಬೇಕು ಎದು ನಿರ್ಧರಿಸಿದಳು.

ಅಕ್ಷರ ಮನೆ ತಲುಪುವಷ್ಟರೊಳಗೆ ನಿಖಿಲ್ ಮನೆಯಲ್ಲಿ ಹಾಜರಾಗಿದ್ದ. ಮನೆಗೆ ಕಾಲಿಟ್ಟವಳನ್ನು ಹಾಗೆಯೇ ಕಾರಿನಲ್ಲಿ ಕೂರಿಸಿಕೊಂಡು ರಾಜಾಸೀಟ್ ಕಡೆಗೆ ಕರೆದೊಯ್ದ. ಆಕೆಯ ಕೈಗಳನ್ನು ಹಿಡಿದುಕೊಂಡು ರಾಜಾಸೀಟ್ ಉದ್ಯಾನವನದೆಲ್ಲೆಡೆ ಸುತ್ತಾಡಿದ. ಆಕೆ ಬೊಂಬೆಯಂತೆ ಅವನ ಹಿಂದೆ ಹೆಜ್ಜೆ ಹಾಕುತ್ತಿದ್ದಳು. ರಾಜಾಸೀಟ್‌ನ ಪ್ರತಿಯೊಂದು ಗಿಡ ಮರಗಳಿಗೂ ಕೂಡ ಗೊತ್ತು ಅಕ್ಷರ-ಅಭಿಮನ್ಯುವಿನ ಪ್ರೀತಿ. ಪ್ರಪಂಚವನ್ನೇ ಮರೆತು ಪ್ರೀತಿಯಲ್ಲಿ ಮುಳುಗಿದ ಜಾಗವದು. ಸುತ್ತಮುತ್ತಲಿನ ಪರಿಸರದ ಯಾವುದೇ ಕಡೆ ಕಣ್ಣಾಡಿಸಿದರೂ ಅಭಿಮನ್ಯುವಿನ ನೆನಪು ಹಸಿರಾಗಿತ್ತು. ಆಕೆಯ ಕಣ್ಗಳಿಂದ ಎರಡು ಹನಿ ಕಣ್ಣೀರು ತೊಟ್ಟಿಕ್ಕಿತು. ನಿಖಿಲ್ ಹಿಡಿದುಕೊಂಡಿದ್ದ ಕೈಯನ್ನು ಬಿಡಿಸಿಕೊಂಡಳು.

ಏನ್ ಚಿಕ್ಕಮಕ್ಕಳ ತರ ಕೈ ಹಿಡ್ಕೊಂಡು ಕಕೊಂಡೋಗ್ತಾ ಇದ್ದೀಯ? ನೀನು ಮುಂದೆ ನಡಿ ನಾನು ಹಿಂದೆ ಬತೇನೆ ಅಂದಳು.

ಸರಿ ಬಿಡು ಅಂದ ನಿಖಿಲ್ ರಾಜಾಸೀಟ್ ಮುಂಭಾಗದ ಕಲ್ಲುಹಾಸಿನ ಬೆಂಚಿನ ಕಡೆಗೆ ತೆರಳಿ ಕುಳಿತುಕೊಂಡ. ಅಕ್ಷರ ಅವನ ಪಕ್ಕದಲ್ಲಿಯೇ ಬಂದು ಕುಳಿತುಕೊಂಡಳು. ನಿಖಿಲ್ ಕಡೆಗೊಮ್ಮೆ ನೋಡಿದ ಅಕ್ಷರ ನಿಖಿಲ್, ನೀನು ಇದುವರೆಗೆ ಯಾವುದೇ ಹುಡುಗಿಯನ್ನ ಪ್ರೀತಿ ಮಾಡ್ಲಿಲ್ವ? ಕೇಳಿದಳು.

….. ಮುಂದುವರೆಯುವುದು
ಕಾದಂಬರಿ ಪುಟ ೧೭೧-೧೯೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೭೩
Next post ಎಡಿ ಒಯ್ಯುನು ಬಾರೆ ದೇವರಿಗೆ

ಸಣ್ಣ ಕತೆ

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಗ್ರಹಕಥಾ

  [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys