Novel

#ಕಾದಂಬರಿ

ಮುಸ್ಸಂಜೆಯ ಮಿಂಚು – ೧

1

ಅಧ್ಯಾಯ ೧ ವಿಲಕ್ಷಣ ಸಂದರ್ಶನ ರಿತು ಲಗುಬಗನೇ ಆವರಣವನ್ನು ದಾಟಿ ಒಳಹೊಕ್ಕಳು. ಸರಿಯಾದ ಸಮಯಕ್ಕೆ ತಲುಪಿದೆ ಎಂಬ ಸಮಾಧಾನದಿಂದ ಸುತ್ತಲೂ ನೋಟಹರಿಸುತ್ತ ಮುಂಭಾಗದಲ್ಲಿಯೇ ಹಾಕಿದ್ದ ಪ್ಲಾಸ್ಟಿಕ್ ಚೆಯರಿನ ಮೇಲೆ ಕುಳಿತುಕೊಂಡಳು. ಹೊರಡುವ ಘಳಿಗೆಯಲ್ಲಿ ಕೈನಿ ಕೈಕೊಟ್ಟಿತ್ತು. ಮತ್ತೆ ಎಲ್ಲಿ ಸಂದರ್ಶನಕ್ಕೆ ತಡವಾಗುವುದೋ ಎಂದು ಆಟೋ ಹಿಡಿದು ಅವಸರವಾಗಿ ತಲುಪಿದ್ದಳು. ಸಂದರ್ಶನಕ್ಕೆ ಇನ್ನೂ ಐದು ನಿಮಿಷ ಬಾಕಿ […]

#ಕಾದಂಬರಿ

ವಿಜಯ ವಿಲಾಸ – ತೃತೀಯ ತರಂಗ

0

ಬೆಳಗಾಯಿತು. ದಿನರಾಜನಾದ ಪ್ರಭಾಕರನು ತನ್ನ ಸಹಸ್ರಕಿರಣಗಳಿಂದ ಲೋಕಕ್ಕೆ ಆನಂದವನ್ನುಂಟುಮಾಡಿ ದಿಕ್ತಟಗಳನ್ನು ಬೆಳಗಲಾರಂಭಿಸಿದನು. ಜಯಶಾಲಿಯಾಗಿ ರತ್ನ ಬಾಣವನ್ನು ಪಡೆಯಬೇಕೆಂಬ ಕುತೂಹಲದಿಂದಿದ್ದ ವಿಜಯನು ಎದ್ದು ಎಂದಿನಂತೆ ತಾಯಿಯಂತಃಪುರಕ್ಕೆ ಬಂದು ನೋಡಲು, ಅಲ್ಲಿ ಆಕೆ ಇರಲಿಲ್ಲ. ಆಶ್ಚರ್ಯದಿಂದ ವಿಚಾರಿಸುವಲ್ಲಿ, ರಾತ್ರಿ ನಡೆದ ಸಂಗತಿಯು ಅಲ್ಲಿದ್ದ ಚೇಟಿಯರಿಂದ ತಿಳಿಯಬಂತು. ತನ್ನ ತಾಯಿಯು ದುರಾಚಾರಿಣಿಯೆಂದು ರಾಜನು ಆಕೆಯನ್ನು ಕಾರಾಗೃಹದಲ್ಲಿಟ್ಟಿರುವನೆಂಬ ವಾರ್ತೆಯನ್ನು ಕೇಳಿದಕೂಡಲೆ ವಿಜಯನ […]

#ಕಾದಂಬರಿ

ವಿಜಯ ವಿಲಾಸ – ದ್ವಿತೀಯ ತರಂಗ

0

ಇತ್ತಲಾ ವೇದವತೀ ನಗರದಲ್ಲಿ ರಾಜನು ತಪಸ್ಸಿಗೆ ಹೋದುದು ಮೊದಲಾಗಿ ಪರಮ ಪತಿವ್ರತೆಯಾದ ಶೀಲವತಿಯು ತನ್ನ ಪತಿಗೆ ಯಾವಾಗಲೂ ಶುಭವನ್ನೇ ಬಯಸುತ್ತ, ಆತನು ಯತ್ನಿಸಿದ್ದ ಕಾರ್ಯದಲ್ಲಿ ಜಯಶಾಲಿಯಾಗಿ ಇರುವಂತೆ ಅನುಗ್ರಹಿಸಲು ತ್ರಿಕಾಲದಲ್ಲಿಯೂ ಸರ್ವಮಂಗಳೆಯನ್ನಾರಾಧಿಸುತ್ತ, ಪತಿಯ ಆಗಮವನ್ನು ಅತಿ ಕುತೂಹಲದಿಂದ ನಿರೀಕ್ಷಿಸಿಕೊಂಡು ನಿಯಮನಿರತೆಯಾಗಿ ಕಾಲವನ್ನು ಕಳೆಯುತ್ತಿದ್ದಳು. ವಿಜಯ ವಿದ್ಯಾಧರಿಯರು, ತಮ್ಮ ವಿವಾಹ ಮಂಗಳವ ನೆರವೇರಲು ವಿಳಂಬವಾದುದಕ್ಕಾಗಿ ವಿರಹವ್ಯಧೆಯಿಂದ ದಿನದಿನಕ್ಕೆ […]

#ಕಾದಂಬರಿ

ವಿಜಯ ವಿಲಾಸ – ಪ್ರಥಮ ತರಂಗ

0

ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ ತೇಜೋಮಯನಾದ ಮಾರ್ತಾಂಡನು ಉದಯಿಸಿ ಲೋಕಕ್ಕೆ ಆನಂದವನ್ನುಂಟುಮಾಡಿದನು. ಇಂತಹ ಶುಭ ಸಮಯದಲ್ಲಿ ರಾಣಿಯಾದ ಶೀಲವತೀದೇವಿಯು ಪ್ರಭಾಕರನಂತೆ ಪ್ರಭಾಮಯನಾದ ಪುತ್ರರತ್ನವನ್ನು ಪ್ರಸವಿಸಿದಳು. ಪುತ್ರೋದಯ ವಾರ್ತೆಯನ್ನು ಚೇಟಿಯ ಮುಖದಿಂದ ಕೇಳಿದ ಚಂದ್ರಸೇನರಾಯನ ಆನಂದ […]

#ಕಾದಂಬರಿ

ಶಬರಿ – ೧೮

0

ತಿಮ್ಮರಾಯಿ ಒಬ್ಬನೇ ಕೂತಿದ್ದ. ಕಾಂಡ ಕೊಂಬೆಗಳಿಲ್ಲದ ಬುಡಗಳು-ರುಂಡ ಮುಂಡಗಳಿಲ್ಲದ ಪಾದಗಳು! ಅವನ್ನೂ ಎತ್ತಿ ಹಾಕುತ್ತಾರೆ. ಮಟ್ಟಸ ಮಾಡುತ್ತಾರೆ. ಇಷ್ಟು ಸಲೀಸಾಗಿ ಶಬರಿಯೊಳಗಿನ ಹೂಸ ಜೀವವನ್ನು ತೆಗೆಯಲಾದೀತೆ? ಸೂರ್ಯ ಬರದಿದ್ದರೆ ಹೂಸ ಜೀವದ ಗತಿ? ಶಬರಿಯ ಗತಿ? ಈಗ ಎಲ್ಲ ಅಲ್ಲೋಲ-ಕಲ್ಲೋಲ-ಬಂಡಬಿದ್ದ ಬಾವಿ! ಕಪಿಲೆಯ ಬಾನಿ ನೀರಿಗೆ ಇಳಿದೀತೆ? ನೀರು ತುಂಬಿಕೊಂಡು ಮೇಲೇರೀತೆ? ಕಾಲುವೆ ತುಂಬ ನೀರು […]

#ಕಾದಂಬರಿ

ಶಬರಿ – ೧೭

0

ಶಬರಿಗೆ ಒಂದೊಂದು ಮರವನ್ನೂ ತಬ್ಬಿಕೊಳ್ಳಬೇಕನ್ನಿಸಿತು. ಹತ್ತಾರು ಮರಗಳನ್ನು ತಬ್ಬಿಕೊಂಡಳು. ಒಂದು ಮರದ ಹತ್ತಿರ ತಬ್ಬಿ ನಿಂತುಬಿಟ್ಟಳು. ಬಿಟ್ಟು ಕೂಡಲಾರೆನೆಂಬ ಭಾವ. ಮುಚ್ಚಿದ ಕಣ್ಣೊಳಗೆ ಮೂಡಿನಿಂತ ಸೂರ್ಯ ಚೈತನ್ಯ. “ಏಯ್ ಶಬರಿ” ತಿರುಗಿ ನೋಡಿದಳು; ಗಡಸು ದನಿಯಲ್ಲಿ ಗದರಿದ ಗೂಳಿ. ಹೆಡೆಯೆತ್ತಿ ನಿಂತ ಒಡೆಯ. “ಮರ ಯಾಕ್ ಅಂಗ್ ತಬ್ಕಂಡ್ ನಿಂತ್ಕಬ್ತೀಯ. ಎದ್ರಿಗ್ ನಾನ್ ಇಲ್ವ?” ಶಬರಿಗೆ […]

#ಕಾದಂಬರಿ

ಶಬರಿ – ೧೬

0

ಎಲ್ಲವನ್ನು ನೆನಪಿಸಿಕೊಳ್ಳುತ್ತ ಹುಚ್ಚೀರನೂಂದಿಗೆ ಕೂತಿದ್ದ ಶಬರಿಯ ಕಿವಿಯಲ್ಲಿ ಅದೇ ಹಾಡು ಮಾರ್ದನಿಗೊಳ್ಳತೂಡಗಿತು. “ಈ ಭೂಮಿ ನಮ್ಮದು…” ಎಂಥ ಸನ್ನಿವೇಶವದು! ಈಗಲು ಕಣ್ಣಿಗೆ ಕಟ್ಟಿದಂತಿದೆ. ಮತ್ತೆ ಬಂದೇಬರ್‍ತೇನೆ ಎಂದಿದ್ದ ಸೂರ್ಯ ಬರಲೇ ಇಲ್ಲ. ಅಪ್ಪ ಹೇಳುತ್ತಲೇ ಇದ್ದ “ಬಂದೇ ಕಣವ್ವ. ಎಲ್ಲಾದ್ಕು ಕಾಯ್ಬೇಕು ಕಣವ್ವ, ಒಳ್ಳೇದಕ್ಕೆ ಜಾಸ್ತಿ ಕಾಯ್ಬೇಕು”- ಅಪ್ಪ ಹೀಗೆ ಹೇಳುತ್ತಲೆ ಹೋಗಿಬಿಟ್ಟ- ಮತ್ತೆ ತಿರುಗಿಬಾರದ […]

#ಕಾದಂಬರಿ

ಶಬರಿ – ೧೫

0

ಹೋರಾಟದೊಳಗೊಂದು ಒಂಟಿತನ; ಕ್ರಿಯೆಯೆ ತಾಯ್ತನ; ತಾಯ್ತನಕ್ಕೆ ಕರುಳುಂಟು; ಕರುಳು ಕೊರಳಾದಾಗ ಅರ್ಥವುಂಟು; ಅಂತಃಕರಣ ಆಕ್ರೋಶವಾದಾಗ ಆಳವುಂಟು. ಕೊರಳು ಕರುಳನ್ನು ನುಂಗಿದರೆ? ಸಂಕಟವಿಲ್ಲದ ಸಿಟ್ಟು ಅಟ್ಟ ಏರಿದರೆ? -ಶಾಲೆಯೊಳಗೆ ಕೂತ ಸೂರ್ಯನ ಒಳಗೊಂದು ಕಡೆಗೋಲು. ಬೆಳಗ್ಗೆ ಎದ್ದವನೆ ಬಂದು ಕೂತಿದ್ದ. ಮುಖ್ಯಘಟ್ಟಕ್ಕೆ ಬಂದು ತಲುಪುತ್ತಿರುವ ಬಳವಣಿಗೆಗಳನ್ನು ಒಂದೊಂದಾಗಿ ತುಂಬಿಕೊಳ್ಳುತ್ತ, ತರ್ಕಿಸುತ್ತ ತತ್ವವಾಗುತ್ತ, ನಿರೀಕ್ಷೆಯ ನೋಟದಲ್ಲಿ ಶಾಲೆಯನ್ನೊಮ್ಮೆ ಅವಲೋಕಿಸಿದ. […]

#ಕಾದಂಬರಿ

ಶಬರಿ – ೧೪

0

ಸೂರ್ಯ ಮಲಗಿರಲಿಲ್ಲ. ಕೈಯ್ಯಲ್ಲಿ ಪುಸ್ತಕ, ಪಕ್ಕದಲ್ಲಿ ಬಗಲುಚೀಲ, ಚಿಂತೆಯ ಮುಖ. “ಸೂರ್ಯ”,-ಶಬರಿ ಮಾತನಾಡಿಸಿದಳು. ಸೂರ್ಯ ತಲೆಯತ್ತಿ ನೋಡಿದ. “ಬಾ, ಶಬರಿ” ಎಂದ. ಶಬರಿ ಬಂದು ಕೂತಳು. ಮೆಲ್ಲಗೆ ಆತನ ಕೈ ಹಿಡಿದುಕೊಂಡಳು. “ನಿಮ್ಮವ್ವನ್ನ ಒಂದ್‍ ಕಿತ ಇಲ್ಲಿಗ್ ಕರ್‍ಕಂಡ್ ಬಾ.” ಸೂರ್ಯ ಮೌನವಾಗಿ ಶಬರಿಯ ಕೈಯನ್ನು ಒತ್ತಿ ಹಿಡಿದ. “ನಂಗಂತೂ ಅವ್ವ ಇಲ್ಲ. ನಿಂಗಾನ ಐತಲ್ಲ. […]

#ಕಾದಂಬರಿ

ಶಬರಿ – ೧೩

0

ಮದುವೆಗೆ ದಿನ ನಿಗದಿಯಾಯಿತು. ವಿಶೇಷ ಸಿದ್ಧತಯೇನೂ ಇರಲಿಲ್ಲ. ಎಲ್ಲ ಸರಳವಾಗಿ ಆಗಬೇಕೆಂಬುದು ಸೂರ್ಯನ ಅಭಿಪ್ರಾಯ. ಅದಕ್ಕೆ ಎಲ್ಲರ ಒಪ್ಪಿಗೆ. ನವಾಬ-ಗೌರಿಯ ಮನದಾಳದಲ್ಲಿ ಹೊಸ ಹೂದೋಟ. ಆದರೆ ಯಾರೂ ರಾತ್ರಿ ಶಾಲೆಗೆ ತಪ್ಪಿಸಿಕೊಳ್ಳಲಿಲ್ಲ-ಮದುವೆಯ ನಪದಲ್ಲಿ. ಈ ಮದುವೆಯ ಪ್ರಕರಣ ಹಟ್ಟಿಯನ್ನು ಗಟ್ಟಿಯಾಗಿಸಿತ್ತು. ಪೂಜಾರಪ್ಪ ಮಾತ್ರ ಸಂತೋಷ-ಸಂಕಟಗಳ ವ್ಯತ್ಯಾಸ ಗೊತ್ತಾಗದಂಥ ಅನುಭವದಲ್ಲಿ ಬೆಟ್ಟ, ಗುಡ್ಡ, ತೋಪುಗಳಲ್ಲಿ ಅಲೆದಾಡುತ್ತಿದ್ದ. ಈತನ […]