Day: January 2, 2021

#ಕವಿತೆ

ಮೋಂಬತ್ತಿ

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಒಂದು ಗಂಟೆ ಪುಟ್ಟ ಕೋಣೆಯ ಬೆಳಗಿದೆ ಗೋಡೆಯ ಮೇಲೆ ಸುಂದರಿಯ ಪಟವಿತ್ತು ಪರಿಶೀಲಿಸಿದೆ ಹೂದಾನಿಯಲ್ಲಿ ತಾಜಾ ಹೂಗುಚ್ಚವಿತ್ತು ಆಘ್ರಾಣಿಸಿದೆ ಮರುಳೆ… ಬೂದಿಯಾಗಿರು ಎಂದು ಬೆಂಬತ್ತಿದ ಪತಂಗಕ್ಕೆ ತಿಳಿಯ ಹೇಳಿದೆ ಮೂಲೆಯಲ್ಲಿ ಮುದುಡಿ ಮಲಗಿದ್ದ ಮುದುಕನ ಮರಣಕ್ಕೂ ಸಾಕ್ಷಿಯಾದೆ ಉರಿದೂ ಉರಿದೆ ಕೊನೆವರೆಗೆ ದೇಹದೊಂದಿಗೆ ಆತ್ಮನೊಂದಿಗೆ. *****

#ಕಾದಂಬರಿ

ಮುಸ್ಸಂಜೆಯ ಮಿಂಚು – ೧

1

ಅಧ್ಯಾಯ ೧ ವಿಲಕ್ಷಣ ಸಂದರ್ಶನ ರಿತು ಲಗುಬಗನೇ ಆವರಣವನ್ನು ದಾಟಿ ಒಳಹೊಕ್ಕಳು. ಸರಿಯಾದ ಸಮಯಕ್ಕೆ ತಲುಪಿದೆ ಎಂಬ ಸಮಾಧಾನದಿಂದ ಸುತ್ತಲೂ ನೋಟಹರಿಸುತ್ತ ಮುಂಭಾಗದಲ್ಲಿಯೇ ಹಾಕಿದ್ದ ಪ್ಲಾಸ್ಟಿಕ್ ಚೆಯರಿನ ಮೇಲೆ ಕುಳಿತುಕೊಂಡಳು. ಹೊರಡುವ ಘಳಿಗೆಯಲ್ಲಿ ಕೈನಿ ಕೈಕೊಟ್ಟಿತ್ತು. ಮತ್ತೆ ಎಲ್ಲಿ ಸಂದರ್ಶನಕ್ಕೆ ತಡವಾಗುವುದೋ ಎಂದು ಆಟೋ ಹಿಡಿದು ಅವಸರವಾಗಿ ತಲುಪಿದ್ದಳು. ಸಂದರ್ಶನಕ್ಕೆ ಇನ್ನೂ ಐದು ನಿಮಿಷ ಬಾಕಿ […]

#ಕವಿತೆ

ನಾನು ಹೆಂಡತಿಯಾಗಲಾರೆ

0
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು:ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ನಾಗರೇಖಾ ಗಾಂವಕರ

ಹೆಣ್ಣಿನ ಕುತ್ತಿಗೆಗೆ ಮಾತ್ರ ತೂಗು ಹಾಕುವ ಗುರುತಿನ ಕಾರ್‍ಡು ನೇಣು ಹಗ್ಗದಂತೆ ಕಾಣಿಸುತ್ತದೆ ನನಗೆ ನಾನು ಹೆಂಡತಿಯಾಗಲಾರೆ. ಸಂಕೇತಗಳ ಬೇಡಿಯನ್ನು ಅಂಗಾಂಗಗಳ ಮೇಲೆಲ್ಲಾ ಹೇರಿ ಕುಂಕುಮವ ನೆತ್ತಿಗೆ ಮೆತ್ತಿ, ಮುತೈದೆ ಮಂಗಳೆ ಎಂದೆಲ್ಲ ಊದುವ ಶಂಖನಾದ ಭಂಡಾರ ಬಳಿದು ಬಲಿಗೆ ಸಿದ್ಧಪಡಿಸಿದ ಯೂಪಸ್ತಂಭದ ಹರಕೆಯ ಕುರಿಯ ನೆನಪು ತರುತ್ತದೆ ನನಗೆ ನಾನು ಹೆಂಡತಿಯಾಗಲಾರೆ. ಅವಕುಂಟನ, ಪರದಾ […]