ರಾಘವೇಂದ್ರ ಗದಗ್‌ಕರ್

ರಾಘವೇಂದ್ರ ಗದಗ್‌ಕರ್

ರಾಘವೇಂದ್ರ ಗದಗ್‌ಕರ್ ಅವರು ಬೆಂಗಳೂರಿನಲ್ಲಿ ಹುಟ್ಟಿದವರು ಅಪ್ಪಟ ಕನ್ನಡಿಗರೆಂಬ ಅಭಿಮಾನ.

ಇವರೊಬ್ಬ ವಿಜ್ಞಾನಿ. ರಾಷ್ಟ್ರೀಯ ಅಂತರರಾಷ್ಟ್ರೀಯ ವಿಜ್ಞಾನಿ.

ಭವ್ಯ ಭಾರತದ ಸಮಾಜ ಜೀವ ವಿಜ್ಞಾನಿಯೆಂದೇ ಖ್ಯಾತನಾಮರು.

ಇವರು- ಈಗ ಸದಸ್ಯ ಸೆಂಟರ್‌ ಫಾರ್‌ ಇಕೊಲಾಜಿಕಲ್ ಸೈನ್ಸಸ್ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಪ್ರೊಫೆಸರ್ ಎಂದು ಕಾರ್‍ಯ ನಿರ್ವಹಿಸುತ್ತಿರುವರು.

ಇತ್ತೀಚೆಗೆ ಇವರಿಗೆ ಜರ್ಮನಿಯ ಅತ್ಯುನ್ನತ ನಾಗರಿಕ ಪ್ರಶಸ್ತಿ “ದಿ ಕ್ರಾಸ್ ಆಫ್ ಆರ್ಡರ್ ಆಫ್ ಮೆರಿಟ್” ಅನ್ನು ಗಳಿಸಿದ್ದಾರೆ. ಇದು ಇವರ ಜ್ಞಾನ ವಿಜ್ಞಾನಕ್ಕೆ ಸಂದ ಪ್ರಶಸ್ತಿ ಪುರಸ್ಕಾರವಾಗಿದೆ!

ಇತ್ತೀಚೆಗೆ ಆಗಸ್ಟ್ ೨೦೧೫ ರಲ್ಲಿ ಇವರಿಗೆ ಬೆಂಗಳೂರಿನಲ್ಲಿರುವ ಜರ್ಮನ್ ಕಾನ್ಸುಲೇಟ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದು ಇಡೀ ಕನ್ನಡ ನಾಡಿಗೇ ಸಂದ ಸ್ಥಾನಮಾನವಾಗಿದೆ.

ರಾಘವೇಂದ್ರ ಗದಗ್ ಕರ್‌ ಅವರು ವರ್ತನಾ ಪರಿಸರ ಹಾಗೂ ಸಾಮಾಜಿಕ ಜೀವಶಾಸ್ತ್ರಕ್ಕೆ ನೀಡಿರುವ ಅಮೋಘ ಅಮೂಲ್ಯ ಕೊಡುಗೆಗೆ ಹಾಗೂ ಭವ್ಯ ಭಾರತ ಜರ್ಮನಿಯ ನಡುವೆ ಸಂಶೋಧನಾ ಸಹಕಾರವನ್ನು ಇವರು ಇನ್ನಷ್ಟು ಬಲಪಡಿಸಿರುವುದನ್ನು ಗುರುತರವಾಗಿ ಪರಿಗಣಿಸಿ ಈ ಪ್ರಶಸ್ತಿ ಪುರಸ್ಕಾರವನ್ನು ಕೊಡಮಾಡಿರುವರು.

ಶ್ರೀಯುತರು ಕೀಟ ಸಮಾಜ ವಿಜ್ಞಾನದಲ್ಲೂ ತಜ್ಞರಾಗಿರುವ ಗದಗ್‌ಕರ್ ಅವರು ನ್ಯಾಷನಲ್ ಸೈನ್ಸ್ ಅಕಾಡೆಮಿಯ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಿವರು.

ಇವರ “ಸರ್‍ವೈವಲ್ ಸ್ಟ್ರಾಟಜೀಸ್”- ಪುಸ್ತಕ ಇಂಗ್ಲೀಷ್‌ನಿಂದ ಚೀನಿ ಹಾಗೂ ಕೊರಿಯನ್ ಭಾಷೆಗಳಿಗೆ ಅನುವಾದಗೊಂಡಿರುವುದು.

ಇವರು ಪ್ರತಿನಿತ್ಯ ನಿರಂತರವಾಗಿ ತಮ್ಮ ಕೆಲಸ ಕಾವ್ಯಗಳ ಮಧ್ಯೆ ವಿದ್ಯಾರ್ಥಿಗಳಿಗೆ ಹಾಗೂ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶನ ಮಾಡುತ್ತಾ ವಿಜ್ಞಾನದಲ್ಲಿ ಸುಜ್ಞಾನವನ್ನು ಕಾಣುತ್ತಿರುವರು.

ಮುದ್ದು ಮಕ್ಕಳೆ… ರಾಘವೇಂದ್ರ ಗದಗ್‌ಕರ್‌ ಅವರು ನಿಮಗೆಲ್ಲ ಸ್ಫೂರ್ತಿದಾಯಕ ಚೈತನ್ಯದಾಯಕವಾಗಲಿ ಎಂದು ಈ ಪುಟ್ಟ ಬರಹವಾಗಿದೆ. ನೀವೂ ಈ ನಿಟ್ಟಿನಲ್ಲಿ ಸಾಗಲು ಸಲಹೆ ಮಾಡುವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಕ ಮಹಾದೇವಿಯ ಹಾಡು
Next post ನಿಂತಿವೆ ಬಿಂಬಗಳು

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…