Home / ಲೇಖನ / ವಿಜ್ಞಾನ / ಬೇಕಾದ ಬಣ್ಣಬಣ್ಣದ ಹೂಗಳನ್ನು, ಹತ್ತಿಯನ್ನು ಸೃಷ್ಟಿಸುವ ತಂತ್ರಜ್ಞಾನ

ಬೇಕಾದ ಬಣ್ಣಬಣ್ಣದ ಹೂಗಳನ್ನು, ಹತ್ತಿಯನ್ನು ಸೃಷ್ಟಿಸುವ ತಂತ್ರಜ್ಞಾನ

ಸಾಮಾನ್ಯವಾಗಿ ಇದುವರೆಗೆ ಗುಲಾಬಿ ಹೂಗಳನ್ನು, ಕೆಂಪು, ನೆರಳೆ, ಹಳದಿ ಬಣ್ಣಗಳಲಿ ಕಾಣುತ್ತ ಬಂದಿದ್ದೇವೆ. ಹಾಗೆ ಹತ್ತಿಯನ್ನು ಸಹ ಶ್ವೇತ ವರ್ಣದಲ್ಲಿ ಕಾಣುತ್ತ ಬಂದಿದ್ದೇವೆ. ಆದರೆ ನಮಗಿಷ್ಟವಾದ ಬಣ್ಣಗಳಲ್ಲಿ ಹೂವು ಹತ್ತಿಯನ್ನು ಜೈವಿಕ ತಂತ್ರಜ್ಞಾನದಿಂದ ಪಡೆಯಬಹುದೆಂದು ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ. ಬೇವಿನ ಮರದಲ್ಲಿ ಮಾವನ್ನು, ಮಾವಿನಮರದಲ್ಲಿ ಬೇವನ್ನು ಹೀಗೆ ಹಣ್ಣುಗಳ ಜಾತಿಗಳನ್ನು ವಿಭಿನ್ನ ಜಾತಿಯ ಮರಗಳಲ್ಲಿ ಪಡೆಯಬಹುದೆಂಬುವುದು ಆಶ್ಚರ್ಯ. ಆದರೆ ಈ ಕಲ್ಪನೆಗಳೆಲ್ಲ ಸತ್ಯವಾಗುತ್ತಲಿವೆ. ಸೃಷ್ಟಿ ಸಹಸ ಕ್ರಿಯೆಗೆ ಜೈವಿಕ ಸಂಚಲನದಿಂದ ಹೀಗೆಲ್ಲ ಮಾಡಬಹುದೆಂದು ವಿಜ್ಞಾನಿಗಳು ಕಂಡು ಹಿಡಿಯುತ್ತಲೇ ಇದ್ದಾರೆ.

ಹಳದಿ, ಕೆಂಪು, ನೆರಳೆ ಗುಲಾಬಿ ಹೂಗಳು ನಿಸರ್ಗದಲ್ಲಿವೆ. ಇವುಗಳನ್ನು ನಮಗಿಷ್ಟ ಬಂದ ಬಣ್ಣಗಳಲ್ಲಿ ಬೆಳೆಯಲು ಹಾಲೆಂಡಿನಲ್ಲಿ ಸಂಶೋಧನೆಗಳು ನಡೆಯುತ್ತಲಿವೆ. ಸೂಕ್ತ ಬಣ್ಣದ ವಂಶಾಣುಗಳನ್ನು ಇತರೆಹೂಗಳಿಂದ ತೆಗೆದು ಇತರ ಹೂಗಳಿಗೆ ಸಂಯೋಜನೆ ಮಾಡಿದರಾಯಿತು. ಈವರೆಗೆ ಅಸಾಧ್ಯವೆನಿಸಿದ ಜೆರ್ಮೇನಿಯಂ ಲೋಹದ ಇಟ್ಟಿಗೆ ಕೆಂಪು ವರ್ಣವನ್ನು ಸೃಷ್ಟಿಸುವುದು ಅಸಾಧ್ಯವೆಂದು ತಿಳಿಯಲಾಗಿತ್ತು ಮೆಕ್ಕೆ ಜೋಳದ ಬಣ್ಣದ ವಂಶಾಣುವನ್ನು ಗುಲಾಬಿ ತಳಿಗೆ ವರ್ಗಾಯಿಸಿ ಈಗ ಆವರ್ಣದ ಗುಲಾಬಿಯನ್ನು ಬೆಳೆಯಲಾಗಿದೆ. ಈ ಬಣ್ಣಗಳಲ್ಲದೇ ನಿಸರ್ಗದ ಇತರೇ ವಿನ್ಯಾಸಗಳನ್ನು ಹೂಗಳಲ್ಲಿ ಮೂಡಿಸುವ ಪ್ರಯತ್ನಗಳು ನಡೆದಿವೆ. ನಮಗೆಲ್ಲ ತಿಳಿದಿರುವಂತೆ ನೀಲಿ ಹತ್ತಿಯನ್ನು ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ. ಇತರೆ ವರ್ಣದ ಹತ್ತಿಯನ್ನು ಬೆಳೆಯಲು ಸಾಧ್ಯವಾದರೆ ಬೇರೆ ಬಣ್ಣಗಳನ್ನು ಹತ್ತಿಗೆ ಸೇರಿಸಿ ಬಣ್ಣ ಬಣ್ಣದ ಬಟ್ಟೆಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಹೊಡೆತಬೀಳಬಹುದು. ಈ ಕೈಗಾರಿಕೆಯಲ್ಲಿ ಬಳೆಸುತ್ತಿರುವ ಸೀಸ ಲೋಹ ಮೂಲದ ವರ್ಣದ್ರವ್ಯಗಳು ವಿಷಕಾರಕವೆನಿಸಿದ್ದು ಕಾರ್ಮಿಕರ ಮತ್ತು ಕೈಗಾರಿಕಾ ವರ್ಜೋಜಲ ಹರಿವ ನೀರಿಗೆ ಸೀಸವನ್ನು ಸೇರಿಸಿ ನೀರಿನಲ್ಲಿರುವ ಪ್ರಾಣಿಗಳಿಗೆ ಹಾಗೂ ಅದನ್ನು ಸೇವಿಸುವ ಪ್ರಾಣಿಗಳಿಗೆ ಅಪಾಯಕಾರಿಯೆಂದು ಸಾಬೀತಾಗಿದೆ. ಇಂಥಹ ಹೊಸ ಸಂಶೋಧನೆಗಳು ಕೈಗಾರಿಕಾ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದಲ್ಲದೇ ಪರಿಸರಮಾಲಿನ್ಯ ತಡೆಯುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಈಗಾಗಲೇ ನಿಸರ್ಗಲ್ಲಿರುವ ಸುಗಂಧ ಪುಪ್ಪಗಳು, ಹಣ್ಣುಗಳು, ತರಕಾರಿಗಳು ನಿಸರ್ಗದ ಮಿಲಿಯಾಂತರ ವರ್ಷಗಳ ವಿಕಾಸದಿಂದ ಸೃಷ್ಟಿಯಾಗಿವೆ. ನಿಸರ್ಗದ ಮೂಲವನ್ನೂ ಅರಿತು ಅದರ ತಂತ್ರವನ್ನು ಮನುಷ್ಯನ ಜೈವಿಕ ತಂತ್ರಜ್ಞಾನದಲ್ಲಿ ಬಳಸಿ ಆಕ್ರಿಯೆಗೆ ಬೇಕಾಗುವ ಮಿಲಿಯಾಂತರ ವರ್ಷಗಳ ಬದಲು ಒಂದೆರೆಡು ವರ್ಷಗಳಲ್ಲಿಯೇ ಅದನ್ನು ಸಾಧಿಸಬಹುದು. ಇದರಿಂದಾಗಿ ವಿಕಾಸವನ್ನು ವೇಗಗೊಳಿಸುವ ಪ್ರಯತ್ನದಲ್ಲಿ ಜೈವಿಕ ತಂತ್ರಜ್ಞಾನ ಪ್ರಮುಖ ಪಾತ್ರವನ್ನೂ ವಹಿಸುತ್ತದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...