ಹೊಲದ ತುಂಬೆಲ್ಲಗರಿಕೆ, ಕಲ್ಲು ನಿರುಪಯುಕ್ತ ಏನೂ ಬೆಳೆಯಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ರೈತರಿಗೆ ಇದೀಗ ಹೂಸ ‘ಕ್ಷ’ ಕಿರಣವೊಂದು ಮೂಡಿ ಬಂದಿದೆ. ಕ್ಷಾರಯುಕ್ತ ಅಥವಾ ಅಯೋಗ್ಯ ಎನ್ನುವ ಭೂಮಿಯಲ್ಲಿ ಫಲವತ್ತಾಗಿ ಸಮೃದ್ಧಿವಾಗಿ ಬೆಳೆಬರುವುದೆಂದರೆ ಬೇಡವೆಂದವರಾರು? ಇಂಥಹ ಬರಡು ಭೂಮಿಯನ್ನು ಸಂಪದ್ಭರಿತ ಗೊಳಿಸುವಲ್ಲಿ ಪ್ರಯತ್ನ ಪೂರ್ವಕವಾಗಿ ಶೋಧನೆ ನಡಿಸಿ ಫಲಕಂಡರು. ಉತ್ತರ ಪ್ರದೇಶದ ಕಬ್ಬು ಸಂಶೋಧನಾ ಮಂಡಳಿಯ ವಿಜ್ಞಾನಿಗಳು. ಸಕ್ಕರೆ ಕಾರ್ಖಾನೆಗಳಲ್ಲಿತಯಾರಾಗುವ ಅದರ ಕೊಳೆಯನ್ನು ಜೈವಿಕ ಕಾರ್ಬೋನಿಕ್ ಗೊಬ್ಬರವಾಗಿ ಪರಿವರ್ತಿಸಿ ಗದ್ದೆಹೊಲಗಳಿಗೆ ಹಾಕಿದರೆ ಸಾಕು. ಬಂಜರುತನ ಕಳೆದುಕೊಂಡು ಫಲವತ್ತೆಗೊಳ್ಳುತ್ತದೆ. ಸಕ್ಕರೆಯ ಕೊಳೆಯಲ್ಲಿ ರಾಸಾಯನಿಕ ಕ್ರಿಯೆ ಹೊಂದಿ ಶೇ. ೩೪ ಜೈವಿಕ್ ಕಾರ್ಬನ್, ಶೇ. ೧.೬೩ ನೆಟ್ರೋಜಿನ್ ಶೇ. ೨.೫೨ ಪಾಸ್ಫೇಟ್, ಶೇ. ೦.೫೫ ಪೋಟ್ಯಾಶ್, ಶೇ ೪.೭೪ ಕ್ಯಾಲ್ಸಿಯಂ ಆಕ್ಸೈಡ್ ಅಲ್ಲದೆ ಕಬ್ಬಿಣ ಮ್ಯಾಂಗನೀಸ್ ಮತ್ತು ಜಿಂಕ್ ಸಹ ಅಡಕವಾಗಿರುತ್ತದೆ.

ಈ ಸಕ್ಕರೆಯ ಕೊಳೆಯಲ್ಲಿರುವ ಜೈವಿಕ ಕಾರ್ಬನನ್ನು ಗೊಬ್ಬರವಾಗಿ ಉಪಯೋಗಿಸುವುದರಿಂದ ಭೂಮಿಯ ಭೌತಿಕ ಸ್ವರೂಪವು, ಜಲರಕ್ಷಣೆಯ ಸಾಮರ್ಥ್ಯ ಹಾಗೂ ಫಲವತ್ತತೆಯಲ್ಲಿ ಅಭಿವೃದ್ದಿ ಆಗುವುದು ಮತ್ತು ಜಮೀನಿನೊಳಗೆ ವಾಯುವಿನ ಸುಗಮ ಚಲನವಲನಕ್ಕೂ ಅನುಕೂಲವಾಗುವುದು. ಇದರ ಬಳಕೆಯ ಕುರಿತು ವಿಜ್ಞಾನಿಗಳು ರೈತರಿಗೆ ಒಂದು ಎಚ್ಚರಿಕೆಯನ್ನು ನೀಡುತ್ತಾರೆ. ಇದನ್ನು ನೇರವಾಗಿ ಹೊಲದಲ್ಲಿ ಹಾಕದೇ ಸಗಣಿ, ಸೊಪ್ಪು, ಕಸಕಡ್ಡಿ ಒಂದಿಷ್ಟು ಪಾಸ್ಫೇಟ್ ಹಾಗೂ ಜೀವಾಣು ಪಲ್ಪರ್ ಸೇರಿಸಿ ಕನಿಷ್ಟ ೯೦ ದಿನಗಳವರೆಗೆ ಕೊಳೆಯಿಸಿ ನಂತರವೇ ಗದ್ದೆಗಳಲ್ಲಿ ಪ್ರಯೋಗಿಸಬೇಕು. ಇದರಂತೆ ಒದಗಿಸಿದಲ್ಲಿ ಬಂಜರು ಭೂಮಿಯನ್ನು ಫಲವತ್ತತೆಯನ್ನಾಗಿ ಪರಿವರ್ತಿಸಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಉತ್ತರ ಪ್ರದೇಶದಲ್ಲಿ ಕಂಡು ಹಿಡಿದ ಈ ನಾಡಿನಲ್ಲಿ೩೨ ಲಕ್ಷ ರೈತರು ೨೦ ಲಕ್ಷ ಹೆಕ್ಟೇರುಗಳಲ್ಲಿ ಇದನ್ನು ಹಾಕಿ ಕೃಷಿ ಮಾಡುತ್ತಿದ್ದಾರೆ.
*****