ಆಕೆ ತಾಪತ್ರಯಗಳನ್ನು ತಾಳಲಾರದೆ ಪರಿಹಾರಕ್ಕಾಗಿ ಒಬ್ಬ ಜ್ಯೋತಿಷಿಯ ಬಳಿ ಹೋದಳು. ಅವಳ ಜಾತಕವನ್ನು ನೋಡಿ “ನಿನ್ನ ಗಂಡನಿಗೆ ಎರಡನೇಯ ಮದುವೆಯ ಯೋಗವಿದೆ” ಎಂದ. ಪರಿಹಾರಕ್ಕೆ ಬಂದ ಅವಳಿಗೆ ಪ್ರಪಾತದಲ್ಲಿ ಬಿದ್ದಂತಾಯಿತು. ಅವಳು ಖಿನ್ನ ಮನಸ್ಕಳಾದಳು. ಗಂಡ ಇದನ್ನು ಅರಿತು ಅವಳನ್ನು ಹೆಚ್ಚು ಪ್ರೀತಿಸತೊಡಗಿದ. ಅದರೂ ಜ್ಯೋತಿಷಿಯ ಮಾತು ಅವಳನ್ನು ದಹಿಸುತಿತ್ತು. ಒಂದು ದಿನ ಅವಳು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಟ್ಟಳು. ಹೆಂಡತಿಗಾಗಿ ಪರಿತಪಿಸಿ ಗಂಡ ಬಾಳು ಪೂರ್‍ತಿ ವಿರಹಿಯಾದ.
*****