ರಸದ ರುಚಿಯಿಂ ರೂಪ ಶುಚಿಯಿಂ

ರಸದ ರುಚಿಯಿಂ ರೂಪ ಶುಚಿಯಿಂ ಏರು ಎತ್ತರ ಬಿತ್ತರ ಗಾನ ಮಾನಸ ಗಗನ ಹಂಸೆಯ ಆಗು ಅರುಹಿಗೆ ಹತ್ತರ ||೧|| ಗಗನ ಬಾಗಿಲ ಮುಗಿಲ ಬೀಗವ ಮಿಂಚು ಫಳಫಳ ತೆರೆಯಲಿ ಬಿಸಿಲ ಭೀತಿಯ ಹಕ್ಕಿ ಕಂಠವ ಮಳೆಯು ಗುಳುಗುಳು ನಗಿಸಲಿ ||೨|| ಬಿಲ್ವ ಬಳುವಲ ಮಲೆಯು ಬೆಳವಳ ಹಸಿರು ಸೀರೆಯ ನೇಯಲಿ ಹೂವು ಹೂವಿಗೆ ಕಣ್ಣು ಕೂವಿಸಿ ಬಣ್ಣ ರೂಪಿಸಿ ತುಂಬಲಿ ||೩|| ಡೋರೆ ಹುಣಿಸೆಯ ತಿನ್ನು ತಾರೈ ರುಚಿಯ ನೀರಲ ಗೊಂಚಲಂ ನೋಡು ಬೆಡಗಿನ ಕಾಡು…

ರಸದ ರುಚಿಯಿಂ ರೂಪ ಶುಚಿಯಿಂ
ಏರು ಎತ್ತರ ಬಿತ್ತರ
ಗಾನ ಮಾನಸ ಗಗನ ಹಂಸೆಯ
ಆಗು ಅರುಹಿಗೆ ಹತ್ತರ ||೧||

ಗಗನ ಬಾಗಿಲ ಮುಗಿಲ ಬೀಗವ
ಮಿಂಚು ಫಳಫಳ ತೆರೆಯಲಿ
ಬಿಸಿಲ ಭೀತಿಯ ಹಕ್ಕಿ ಕಂಠವ
ಮಳೆಯು ಗುಳುಗುಳು ನಗಿಸಲಿ ||೨||

ಬಿಲ್ವ ಬಳುವಲ ಮಲೆಯು ಬೆಳವಳ
ಹಸಿರು ಸೀರೆಯ ನೇಯಲಿ
ಹೂವು ಹೂವಿಗೆ ಕಣ್ಣು ಕೂವಿಸಿ
ಬಣ್ಣ ರೂಪಿಸಿ ತುಂಬಲಿ ||೩||

ಡೋರೆ ಹುಣಿಸೆಯ ತಿನ್ನು ತಾರೈ
ರುಚಿಯ ನೀರಲ ಗೊಂಚಲಂ
ನೋಡು ಬೆಡಗಿನ ಕಾಡು ಮೇಡೈ
ಸೀಪು ಮಾವಿನ ರಸಫಲಂ ||೪||
*****