ಆತ್ಮದ ದೃಶ್ಯ

ಮೋಡಗಳೊರಗಿವೆ ನಿರ್ವಾಸಿತವಾದಾಕಾಶದ ಅವಕಾಶದೊಳು
ಆಲಸದಲಿ ದಣಿವಾದವೊಲು
ಗತಿಸಿದ ಕಡಲಿನ ನೆರೆ ತೆರೆ ಅವಲೋಕಿಸಿ ಸುತ್ತಾಡುತ್ತಿವೆ ಖಿನ್ನ
ಉರುಳುರುಳುತ್ತಿವೆ ಅವಸನ್ನ
ಬರಿ ಚಿಂತೆಯೊಳೋ ಕರಿ ಕರೆ ಚಾಚಿದೆ ಶೋಕಾಕುಲತೆಯೆ ಮುಸುಕಿದೊಲು
ವಾಯವ್ಯದ ಉಸಿರಾಟದಲು
ಅಗೊ ಅದರಾಚೆಗೆ ಅಡಕಿಲವಾಗಿವೆ ವಿಷಾದದಲಿ ಹಲ ದಿನ್ನೆಗಳು

ಪ್ರಕೃತಿಯಲ್ಲಿ ಏಕಾಕಿಯಾದ ಆ ಆತ್ಮದ ನಿಸ್ಸಾರಿತ ಭಾವ
ರಿಕ್ತವಾದ ಹುಸಿಪುಸಿ ಜಾವ
ಗರ್ಭಿತಾರ್ಥದಲ್ಲಿ ಕೆತ್ತಿದಂತೆ ಇರೆ ನೆಲದ ಮುಖಕೆ ಮೊಗವಾಡವಿದೆ
ವಿಕಾರದಲಿ ಕೊರೆದಂತೆ ಇದೆ
ಸ್ತಬ್ದ ಮನೋದಯ ಮಾನವ ಹೃದಯ, ಆಧ್ಯಾತ್ಮಿಕ ಅನುರಾಗದಲಿ
ಇದಿರಿಸುತಿದೆ ಸಂಸ್ತ್ಯಾಗದಲಿ
ವಿಜನ ವನದ ಹತ ಪ್ರತೀಕ್ಷೆಯನ್ನೇ ಅನುಕರಿಸುವ ಆಕಾರದಲಿ

ಎತ್ತಿರಿಸದೆ ಅಗೊ ನಿಂತಿದೆ ಕಾದು, ಸಹಸ್ರರಶ್ಮಿಯ ವರಕಾಗಿ
ಬಂಗಾರಕು ನೀಲಿಗು ಆಗಿ
ಸಾಗರ ಗೀತದ ಮಂಥರ ಸುಂದರ ಮಂಗಲಮಯ ಧ್ರುವಪದಗಾನ
ಸುಖಸಂಚಲ ತಾನವಿತಾನ
ಗಭೀರ ತಲದಲಿ ಮಾನವನಾತ್ಮದಿ ದಿವ್ಯಪ್ರಭವಿಸ್ಫೋಟನಕೆ
ಅಂತರ್ಗತ ಉದ್ಘಾಟನಕೆ
ಸ್ವಪ್ರತಿಬಿಂಬವ ಮೂಡಿಸಿದಾಗ ಹಿಗ್ಗಾದೊಲು ದೇವನ ಮನಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊಳಲನುಡಿಸು!
Next post ವಾಗ್ದೇವಿ – ೫೦

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…