ಮುಕ್ತಿ ಮಾರ್‍ಗದತ್ತ

ಲೋಕಾಂತ ಎನಗೆ ಬೇಡ ಬೇಕು ಏಕಾಂತ
ಧ್ಯಾನ ಎನಗೆಬೇಕು ಕಾಣುವೆ ರಜನಿಕಾಂತ
ಕಾಮ ಕಾಂಚನಗಳ ಬೇಡ ಮತ್ತೆ ವಿಷಯ ಸುಖ
ಇಹಸುಖಗಳಲಿ ಬರೀ ಕಾಣುವೆ ದುಃಖ

ಜೀವನವೊಂದು ಹೋರಾಟ ಬರಿ ಯುದ್ಧ
ಇಂದ್ರಿಯಗಳೊಂದಿಗೆ ಕಾದಿದೆ ದ್ವಂದಯುದ್ಧ
ಕನಸುಗಳೇ ವಾಸ್ತವ ಮರೆಸುವ ಹಾಗೆ
ಅಸತ್ಯವೇ ಸತ್ಯವನ್ನು ಹೊಸಕಿ ಹಾಗುವ ಹಾಗೆ

ಯಾರ ಮುಂದೆ ಹೇಳಲಿ ಈ ನನ್ನ ಅಳಲು
ನನ್ನ ಅಂತರಂಗವನ್ನು ನಶಿಸಬೇಡಿ ಭಾವಗಳೇ
ನಾನು ನನ್ನವನನ್ನು ಕಾಣುವಂತೆ ನೀವು
ಸಹಕರಿಸಿ ನಿತ್ಯವೂ ನನ್ನ ನೇಮಗಳೇ

ಹೌದು ಕಳೆದಿಲ್ಲವೇ ಬಾಳು ನಾ ನಿಮ್ಮೊಂದಿಗೆ
ನಿಮ್ಮ ಭೋಗಲಾಲಸೆಗಳಿಗೆ ತೃಪ್ತಿಸಲಿಲ್ಲವೆ!
ಇನ್ನೂ ನಾಳಿನ ಬದುಕು ನನ್ನದಾಗಿರಲಿ
ಮಾಣಿಕ್ಯ ವಿಠಲನಾಗಿ ಪಾದವಿಡಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೫೦
Next post ಭಾರತವಿದು ಭಾರತ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

cheap jordans|wholesale air max|wholesale jordans|wholesale jewelry|wholesale jerseys