ಭಾರತವಿದು ಭಾರತ
ನಮ್ಮಲ್ಲಿದೆ ಒಮ್ಮತ
ಹಿಂದು, ಮುಸ್ಲಿಮ್, ಕ್ರೈಸ್ತ, ಸಿಖ್
ಎಲ್ಲಾ ಒಂದೆ ಎನ್ನುತ ||

ಸತ್ಯ ಧರ್‍ಮ ತ್ಯಾಗ ಶಾಂತಿ
ನಮಗಿದುವೆ ಸಮ್ಮತ
ವೀರ ಧೀರ ಕಲಿಗಳ ನೆಲೆಬೀಡು ಎನ್ನುತ ||

ಗಂಧ ಕುಸುಮ ಅಂದ ಚೆಂದ
ಪ್ರಕೃತಿ ಚೆಲುವು ಬೀರುತ
ಸುಂದರ ಬನಸಿರಿಯ ಸ್ವರ್ಗವಿದುವೆ ಎನ್ನುತ ||

ಭಾರತಾಂಬೆ ಒಲುಮೆ ನಮಗೆ
ಮಮತೆ ಮಡಿಲು ಎನ್ನುತ
ಮೇರು ಶಿಖರ ಗಿರಿಧಾಮ ಭಾರತ ಕೀರ್‍ತಿ ಮೆರೆಸುತ ||

ಹಿಮಗಿರಿ ಮುಕುಟ ಜಲಧಾರೆ ತರಂಗ
ಸಹ್ಯಾದ್ರಿ ಶೃ೦ಗ ಕಾವೇರಿ ಗಂಗಾ
ಸೂಯ್ಗುಟ್ಟುವ ತಂಗಾಳಿಯ ತನುಮನ ಪುಳಕಿತ ||

ಅನಂತ ಅನಂತವಾಗಿ ತನನ
ತನನ ತಾನವಾಗಿ ಹಾಡಿರಿನ್ನು
ಹೊಗಳುತಾ ಹೊಗಳುತಾ ||
*****