ಕಾಮನ ಬಿಲ್ಲು ಹಿಡಿಯಲಾಗದ ನೋವು
ನೀನು ಮುಂಜಾನೆ ಕಿರಣಗಳ ಹೊತ್ತು ತಂದಾಗ,
ಕರಗಿತು ನದಿಯಾಗಿ ಅದ್ಭುತ ಸೌಂದರ್ಯವತಿ.
ನನ್ನೊಳಗಿಳಿದ ಜ್ಞಾನ, ಬೆಳಕಿನ ಹಣತೆ
ಮತ್ತೆ ಹೂವರಳಿದೆ ದಿನವೆಲ್ಲಾ ಘಮ ಘಮ.
ಮಡಿಕೆಯಲ್ಲಿ ತುಂಬಿಟ್ಟ ನೀರು ತಣ್ಣಗೆ ಆಗಿ
ಗದ್ದೆಯ ತುಂಬೆಲ್ಲಾ ಹಸಿರು ಹರಿದ ಕ್ಷಣ,
ನಿನ್ನ ಸ್ಪರ್ಶ ನೆನೆಪಿದೆ ಚೆನ್ನಾಗಿ ಮತ್ತು ಮಿಂಚುಳಿ
ನೀಲಿ ಹರಿಡಿದ ಆಕಾಶವ ಸ್ಪರ್ಶಿಸಿದೆ. ಹೊಳೆಯುತ್ತಿದೆ
ಕತ್ತಲೆ ಬೇರೂರಿದ ಮನದ ತುಂಬ ಚೆಂದಿರನ ಬೆಳಕು.
ಮನದ ತುಂಬ ನಿನ್ನೊಲವಿನ ಮಂದಹಾಸ ಅರಳಿ
ಹಿಂಬಾಲಿಸಿವೆ ಸುಂದರ ಕನಸುಗಳು, ಆಕಾಶ
ಮಲ್ಲಿಗೆ ಅರಳುತ್ತಿವೆ. ಸಂಜೆ ತುಂಬ ಹಕ್ಕಿಗಳ
ರಾಗಗಳು ಹರಡಿ ಸಾವಿರ ಕವನಗಳ ಬೇರು,
ಮೌನದಲಿ ಹೊಸ ಪ್ರತಿಮೆಗಳ ಹುಡುಕಾಟದ ಮೆರವಣಿಗೆ.
ಮುನಿಸಿಕೊಂಡ ಅಕ್ಷರಗಳು ಮತ್ತೆ ನಿನ್ನಿಂದ ವಾಪಸ್ಸು
ನನ್ನ ಮನೆಯ ಬಾಗಿಲಿಗೆ ಬಂದು ನಿಂತುಕೊಂಡಿವೆ.
ಸುರಿವ ಚಳಿಯಲಿ ದುಂಬಿಗಳ ಹಾರಾಟ, ಹೂಗಳಲಿ
ಎಂದೂ ಮುಗಿಯದ ಹಾಡು ಪೋಣಿಸುತ್ತಿದ್ದೇನೆ.
ಒಂದು ಹೂವಿನ ಸರ, ಈ ಸಂಜೆ ನಿನಗಾಗಿ ಕಾದಿದೆ.
*****