Home / Kasturi Bayari

Browsing Tag: Kasturi Bayari

ಪ್ರೀತಿಯ ಗೆಳೆಯಾ, ಕಾರ್‍ತೀಕದ ಕಪ್ಪು ಸಂಜೆಯಲ್ಲಿ ನಮ್ಮೂರ ಎಲ್ಲಾ ಪುರಾತನ ದೇವಾಲಯಗಳಲ್ಲಿ ಹಣತೆ ಹಚ್ಚಿದ್ದಾರೆ. ನಮ್ಮೂರ ಕೋಟೆ ಕೊತ್ತಲಗಳ ಮೇಲೂ ದೀಪಗಳ ಪಣತಿಗಳನ್ನು ಹಚ್ಚಿಡುತ್ತಾರೆ. ಹೊಲದ ತುಂಬೆಲ್ಲಾ ಹಳದಿ ಸೂಸುವ ಸೇವಂತಿಗೆ, ಸೂರ್‍ಯಕಾಂತಿ, ...

ಈಗ ಆಗ ಹಗಲು ಇರುಳು ಒಂದೊಂದು ಮುಖ ಚಹರೆ, ಬೀದಿಯ ರಚ್ಚೆಯ ಮಾತುಗಳು, ಘಟಿತ ಚರಿತ್ರೆಯ ಸಾಲುಗಳು, ಒಳ ಹೊರಗೆ ಗೊತ್ತಿಲ್ಲದ ಗೊಂದಲ. ಕತ್ತಲೆಯೊಳಗೆ ಬೆಳಕ ಕಿರಣಗಳು, ತಾನು ತನ್ನದೆಂಬ ಮೋಹ ಕಳಚಿದ ಅನುಭವ ಮಂಟಪದ ಅಕ್ಕ ಆಲಿಸಿದಳು. ನಿರ್ಣಯವಿಲ್ಲದ ನಿರ...

ಆದಿ ಅನಾದಿ ಇಲ್ಲದ ಬಟ್ಟ ಬಯಲಿನ ಹೂವಿನ ಕಂಪನ ನೀರಿನ ಕಂಪನ ಮನಸ್ಸಿನ ಕಂಪನ ದೇಹದ ಕಂಪನ ಎಲ್ಲವನ್ನೂ ಸಮೀಕರಿಸಿ, ಉಂಟು ಇಲ್ಲ ಎಂಬವರ ಲೆಕ್ಕಕ್ಕೆ ಚುಕ್ತಾ ಮಾಡುವ ಮಿಂಚು ಕತ್ತಲೆಗಳ ನಡುವೆ ಸೆಳೆವ ಹೊಸ ಪದ ಪ್ರಯೋಗ ಗುಹೇಶ್ವರ. ದೇಶ ಕಾಲಗಳ ಇತಿಹಾಸದ ...

ಈ ಹುಡಿಯ ಗೂಡಿನೊಳಗೆ ರಕ್ತ ಮಾಂಸ ಹೂವ ಮಿಡಿಯು ಕಾಲ ಕಾಲಕೆ ನೆರದು, ಅರಳಿ ಮಿಂದ ಘಮ ಮನದ ಘನ ಎಲ್ಲಾ ಮುಖದಲಿ ಗುಹೇಶ್ವರನ ನೆರಳು. ಮನಸಿನಲಿ ಮಹಾಲಿಂಗದ ಬೆಳಕು ಅರಳಿತು ಆಳಕ್ಕಿದರೆ ಕ್ಯಾದಿಗೆಯ ಘಮ ಸೊಂಪನ್ನು ಕಂಡವರಿಲ್ಲ ಅನುಭವಿಸಿದವರು ಚಿಹ್ನೆಯಲಿ...

ಕೆಂಪು ನಿಯಾನ್ ಲೈಟಿನ ಬೆಳಕಲ್ಲಿ ಕರೀ ರಸ್ತೆ ಮೈ ಕಾಯಿಸಿಕೊಂಡು ಉದ್ದುದ್ದ ಹರಿದ ರಾತ್ರಿ, ರಸ್ತೆಯ ತುದಿಯ ಮರದ ನೆರಳು ದೂರದಿಂದ ಭೀಮಾಕೃತಿ. ಮುರಿದ ಒಣಗಿದ ಬಾಳೆಯಲೆಯಂತೆ, ಅಲ್ಲಲ್ಲಿ ಚದುರಿದ ಕಸಗಳು ಮೆಲ್ಲಗೆ ಬೀಸುವ ಗಾಳಿಗೆ ಅತ್ತಿಂದಿತ್ತ ಚಲಿಸ...

ನಿನ್ನ ಶಬ್ದ ಜಾಲದಲ್ಲಿ ಸಿಲುಕಿರುವೆ ನಾ, ಧೋ ಎಂಬ ಸುರಿವ ಮಳೆಗೆ ಮುಖ ಒಡ್ಡಿ ಈ ಬಯಲಲಿ ಹಾಗೆ ಸುಮ್ಮನೆ ಅಲೆಯುತ್ತಿರುವೆ. ಚಳಿ ನನ್ನ ನರನಾಡಿಗಳಲಿ ಇಳಿದು ರಕ್ತ ಹೆಪ್ಪುಗಟ್ಟಿದ ಈ ಅಲೆದಾಟ ಮತ್ತು ನಭದಲ್ಲಿ ಹಾರುತ್ತಿದೆ ತಲೆಯತ್ತಿ ಒಂಟಿ ಹಕ್ಕಿ, ನ...

ಎಲ್ಲಿಯದೋ ಒಂದು ಧ್ವನಿ ಅನುರಣುಸುತ್ತಿದೆ, ಎದೆಯ ಆಳದಲಿ ನಿತ್ಯ ನೂತನದ ತಂಗಾಳಿಯ ಅಲೆಗಳು ಅಪ್ಪಳಿಸಿವೆ ನದಿಯ ದಂಡೆಯಲಿ. ಕೇದಿಗೆ ಅರಳಿ ಘಮ್ಮೆಂದು ಸೂಸಿದ ಪರಿಮಳ ಎಲ್ಲೆಲ್ಲೂ ಹರಡಿ ನದಿಗುಂಟ ಹರಿದು ಮೂರು ಸಂಜೆಯ ಹೊತ್ತು ನೀಲಾಂಜನದ ಬೆಳಕು ಹರಡಿದ ...

ನನ್ನ ಕಹಿ ಅನುಭವಗಳು ದ್ರಾಕ್ಷಿ ರಸದ ಹುಳಿಯಂತೆ ಲೊಳೆಗುಟ್ಟಿದಾಗ ನೀನು ಮೆಲ್ಲನೆ ಇಬ್ಬನಿ ಹನಿ ಬೆರೆಸಿ, ತುಸು ಕಬ್ಬುರಸ ಸೇರಿಸಿ ತಿಳಿಯಾದ ಪಾನಕ ಮಾಡಿದ ಇರುಳು. ಮರುದಿವಸ ಬಾಲಸೂರ್ಯನ ಹೊಂಗಿರಣಗಳು ಸೋಕಿ ಆಕಾಶದ ತುಂಬೆಲ್ಲಾ ಹಕ್ಕಿಗಳ ಹಾರಾಟ ನನ್ನ...

ನೆಲದಡಿಯಲಿ ಮಲಗಿದ ಪ್ರೀತಿ ಆತ್ಮಗಳು ಉಸಿರಾಡುತ್ತವೆ, ಮಂಜು ಹನಿಗಳ ಮಧುರ ತಣ್ಣನೆಯ ಸ್ಪರ್ಶದಲಿ ಎಲೆಯ ಮರೆಯ ನಿಧಾನದ ಗಾಳಿ ಸವರಿ ತೇಲಿ ಹೋಗುತ್ತವೆ, ಪರಿತ್ಯಕ್ತ ಎಲ್ಲಾ ಮನಸ್ಸುಗಳ ಮೂಲೆಯಲಿ ಲೋಕದ ಬೆಳಕು. ಎರೆಮಣ್ಣಿನಲಿ ಮುಸುಕಿನ ಗುದ್ದಾಟ ಮತ್ತೆ...

ಬಲೆಯಲಿ ಸಿಕ್ಕ ಮೀನಿನಂತೆ ನಾನೀಗ ಒದ್ದಾಡುತ್ತಿರುವೆ ನಿನ್ನ ಪ್ರೇಮದ ಸೆಳತದಲಿ. ಸರಳುಗಳಾಚೆಯ ಬೆಳಕು ಗೋಡೆಯ ಮೇಲೆ ಹರಡಿ ಹಾಸಿವೆ ನೆರಳುಗಳು ಬಿತ್ತಿಯಲಿ. ನನ್ನ ಈ ಪ್ರೇಮದ ಅಲಾಪ ಗೀತೆಗಳ ಪ್ರೀತಿ ಸಂಜೆ ಬೆಳ್ಳಕ್ಕಿಗಳು ನಿನ್ನ ನೆತ್ತಿಗೆ ಸವರುತ್ತವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...