ಗಾಳಿ ಪ್ರಾಣವಾಯು ಉಸಿರಾಟಕ್ಕೆ ಅಗತ್ಯವಾದ ವಸ್ತು. ಆದರೆ ಗಾಳಿಯಿಂದ ಕುಡಿಯುವ ನೀರನ್ನು ತಯಾರಿಸಬಹುದೆಂದು ಸಿಂಗಪುರಿನ ಹೈಪ್ಲಕ್ಸ್ ಎಂಬ ಸಂಸ್ಥೆ ಎಕ್ಯೋಸಸ್, ಎಂಬ ಸಲಕರಣೆಯ ಸಹಾಯದಿಂದ ಗಾಳಿಯಲ್ಲಿರುವ ನೀರಿನ ಆವಿಯನ್ನು ತಂಪುಗೂಳಿಸಿ ದ್ರವೀಕರಿಸಿ ನೀರನ್ನಾಗಿ ಪರಿವರ್‍ತಿಸಲಾಗುತ್ತದೆ. ಈ ನೀರನ್ನು ಒಂದು ಪರದೆಯ (ಮೆಂಬ್ರೆನ್) ಮೂಲಕ ಹಾಯಿಸಿ ಅಲ್ಟ್ರಾವೈಯೋಲೆಟ್ ಕಿರಣಗಳಿಗೆ ಗುರಿಪಡಿಸಲಾಗುತ್ತದೆ. ಈ ರೀತಿ ಸಂಸ್ಕರಣೆಗೊಂಡ ನೀರು ಅತ್ಯಂತ ಸ್ವಚ್ಛ ಮತ್ತು ಕುಡಿಯಲಿಕ್ಕೆ ಯೋಗ್ಯವಾಗಿದೆ. ಈ ರೀತಿಯ ಸಲಕರಣೆಗಳನ್ನು (D.Y.S) ಕುಡಿಯುವ ನೀರು ಸಿಗದೆ ಇರುವ ಸ್ಥಳಗಳಲ್ಲಿ ಬಳಸಲಾಗುತ್ತದೆ. ಮತ್ತು ಸಮುದ್ರದ ಮಧ್ಯೆ ಬಹಳ ದಿನಗಳವರೆಗೆ ಚಲಿಸುವ ಹಡಗುಗಳಲ್ಲಿ ಬಳೆಸಬಹುದಾಗಿದೆ. ಈ ಸಲಕರಣೆ ಮತ್ತು ವಿಧಾನಗಳನ್ನು ಮೂಲತಃ ಅಮೇರಿಕೆಯ ಏರ್ ಟು ವಾಟರ್ ಎಂಬ ಸಂಸ್ಥೆ ವಿಕಸನಗೊಳಿಸಲು ಪೇಟೆಂಟ್ ಹೊಂದಿದ್ದು ಕಾರ್‍ಯೋನ್ಮಖಗೊಂಡಿದೆ.
*****
