Home / ಲೇಖನ / ವಿಜ್ಞಾನ / ವಿಟ್ಯಾಮಿನ್ ಭರಿತ ಚಹಾ!

ವಿಟ್ಯಾಮಿನ್ ಭರಿತ ಚಹಾ!

ದಿನನಿತ್ಯ ಸೇವಿಸುವ ಪಾನಿಯಗಳಲ್ಲಿ ವಿಟ್ಯಾಮಿನ್‌ಗಳು ಸಮೃದ್ಧವಾಗಿ ಸಿಗುತ್ತವೆ ಎಂದರೆ ಬೇಡವೆನ್ನುವರಾರು? ಕೋಟ್ಯಾಂತರ ಜನರಿಗೆ ಅಗತ್ಯವಿರುವ ಪೌಷ್ಟಿಕತೆಯನ್ನು ಒದಗಿಸುವ ಅತ್ಯಾಧುನಿಕ ತಾಂತ್ರಿಕ ಶೋಧನೆಯೊಂದು ಈ ರೀತಿ ‘ಚಹಾಪೇಯ’ವನ್ನು ತಯಾರಿಸುತ್ತಲಿದೆ.

ದೇಶದ ಅತಿದೊಡ್ಡ ಪ್ಯಾಕೆಟ್ ಟೀ ಕಂಪನಿ ಹಿಂದುಸ್ಥಾನ್ ಲಿವರ್ ಲಿಮಿಟೆಡ್ (H.L.L.) ಇದೀಗ ವಿಟಮಿನ್ ಎ, ಬಿ2 ಮತ್ತು ನಿಯಾಸಿನ್‌ಗಳನ್ನು ಸೇರಿಸಿ ಸಮೃಧಿಗೊಳಿಸಿದ (ಫೋರ್ಟಿಫೈಡ್) ಬ್ರೂಕ್‌ಬಾಂಡ್, ಎ1, ಪವರ್ ಎಂಬ ವಿಟಮಿನ್ ಭರಿತ ಟೀಯನ್ನು ಭಾರತಕ್ಕೆ ಪರಿಚಯಿಸಿದೆ.

ಈ ಟೀ ಅಪಾರವಾದ ನೈಸರ್ಗಿಕ ಆರೋಗ್ಯವನ್ನು ಹೊಂದಿದ್ದು ಬೇರೆ ಯಾವುದೇ ರುಚಿಯನ್ನೂ ನೀಡದೇ ಸಹಜವಾದ ರುಚಿಯನ್ನು ಹೊಂದಿದೆ. ಬ್ರೂಕ್‌ಬಾಂಡ್ ಎ1 ಪವರ್ ಟೀಯನ್ನು ದಿನಕ್ಕೆ ಐದು ಕಪ್ಪನ್ನು ಕುಡಿದರೆ ಶೇ. ೫೦ ರಷ್ಟು ವಿಟ್ಯಾಮಿನ್ ದೊರೆಯುತ್ತದೆ. ಭಾರತದ ಜನಸಂಖ್ಯೆಯಲ್ಲಿ ಶೇ.೫೦ ಕ್ಕೂ ಹೆಚ್ಚು ಜನರಲ್ಲಿ ವಿಟಾಮಿನ್ ಕೊರತೆ ಎದ್ದು ಕಾಣುತ್ತದೆ. ಪ್ರಾಯಶಃ ೧೦ ಜನ ಭಾರತೀಯರಲ್ಲಿ ಕನಿಷ್ಟ ೮ ಜನರಾದರೂ ಟೀ ಕುಡಿಯುವದರಿಂದ ಇವರಿಗೆ ಪೌಷ್ಟಿಕತೆ ಒದಗಿಸಲು ಇರುವ ಅತ್ಯುತ್ತಮ ಮಾರ್ಗವೆಂದರೆ ಈ ಪಾನಿಯವನ್ನು ಸಮೃದ್ಧಗೊಳಿಸುವುದಾಗಿದೆ. ಯಾವುದೇ ಮಾಲ್ವೆಡ್ ಪಾನೀಯದ ಒಂದು ಬಟ್ಟಲಿಗೆ ೬ ರೂ. ಆದರೆ ಎ1 ಪವರ್ ಟೀ ಬೆಲೆ ಸು.M 1.30 ರೂ. ಆಗಿರುವುದರಿಂದ ಎಲ್ಲರ ಕೈಗೆ ಎಟಕುತ್ತದೆ.

ಹಿಂದೂಸ್ಥಾನ್ ಲಿವರ್ ಸಂಶೋಧನಾ ಮತ್ತು ಪ್ರಗತಿಪರ ಕಾರ್ಯವಿಧಾನಗಳ ನಂತರ ಕರ್ನಾಟಕದಲಿ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಮತು ಪೌಷ್ಟಿಕತೆ (ಹೆಲ್ತ್ ಅಂಡ್ ನ್ಯೂಟ್ರಿನ್)ಯ ಕ್ಷೇತ್ರದಲ್ಲಿ ಸ್ವತಂತ್ರ ಸಂಸ್ಥೆಯಾಗಿರುವ ನ್ಯೂಟ್ರಿಷನ್ ಸಿಂಡಿಕೇಟ್ ಈ ಟೀ ಬ್ರಾಂಡನ್ನು ದೃಢೀಕರಿಸಿದೆ. ಈ ಸಂಸ್ಥೆಯ ಅಧ್ಯಕ್ಷರಾದ ಡಾ|| ಕಲ್ಯಾಣ ಬಾಗ್ಯಿಯವರು ಎ1 ಪವರ್ ಪರೀಕ್ಷೆಗೆ ಒಳಪಡಿಸಿದ ವರದಿಗಳನ್ನು ನೋಡಿ ಎ1 ಪವರ್‌ನ ೫ ಬಟ್ಟಲುಗಳು ದಿನಕ್ಕೆ ಅಗತ್ಯವಿರುವ ವಿಟಾಮಿನ್‌ಗಳಲ್ಲಿ ಶೇ. ೫೦ ರಷ್ಟು ಪೂರೈಸುತ್ತದೆಂದು ಹೇಳುತ್ತಾರೆ. ಭಾರತ ದಂತಹ ಜನನಿಬಿಡ ದೇಶದಲ್ಲಿ ಸೂಕ್ಷ್ಮ ಪೋಷಣೆಯ ಕೊರತೆಯನ್ನು ನೀಗಿಸುವ ಪರಿಹಾರೋಪಾಯವೆಂದರೆ ಸಮೃದ್ಧಗೊಳಿಸಿದ ಆಹಾರಗಳು, ಪಾನಿಯಗಳು ಎನ್ನಬಹುದು. ೧೯೯೫ರಲ್ಲಿಭಾರತವು ಅಂಗೀಕರಿಸಿದ ದಿ ನ್ಯಾಶನಲ್ ನ್ಯೂಟ್ರೀಷನ್ ಪ್ಲಾನ್ ಆಪ್ ಆಯಕ್ಷನ್‌ನಲಿ ಪೌಷ್ಟಿಕತೆಯ ಕೊರತೆ ವಿಶೇಷವಾಗಿ ಸೂಕ್ಷ್ಮಪೌಷ್ಟಿಕತೆಯನ್ನು ನಿರ್ಮೂಲನ ಮಾಡಿ ಪೌಷ್ಟಿಕ ಆಹಾರವನ್ನು ಉತ್ತೇಜಿಸಲು ಆಹಾರಗಳನ್ನು ಸಮೃದ್ಧಿಗೊಳಿಸಬೇಕೆಂದು ಹೇಳಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...