ದೇವರು ವರವನು ಕೊಟ್ಟರೂ

ದೇವರು ವರವನು ಕೊಟ್ಟರೂ ನಾನು
ಬೇಡೆನು ಎನನೂ ಸಾಕು ನೀ ನನಗಿನ್ನು|
ಬೇಡುವುದಾದರೆ ಬೇಡುವೆ ದೇವರ
ಸೃಷ್ಟಿಸದಿರುವಂತೆ ನಿನಗಿಂತ
ಬೇರೆ ಯಾವ ಚೆಲುವೆಯನು||

ದೇವರ ವರವನು ಬೇಡುವೆ ನಾನು
ನಿನ್ನಂದವ ನೋಡುತ ಕಾಲ ಕಳೆಯಲು
ಹಗಲು ಸಮಯವ ಹೆಚ್ಚಿಸು ಎಂದು|
ನೀನಿರದ ಇರುಳ ಸಮಯವ ತಗ್ಗಿಸು ಎಂದು
ನೀ ಜೊತೆ ಇರುವ ಒಂದು ದಿನವ
ಒಂದು ವಸಂತವಾಗಿಸುಯೆಂದು ||

ನೀ ಬಾರದ ಆ ದಿನವನು
ಅಮವಾಸೆಯಾಗಿಸು ಎಂದು|
ನೀ ಸಂತೋಷವಾಗಿರುವ ದಿನವೆಲ್ಲವ
ಹುಣ್ಣಿಮೆಯಾಗಿಸು ಎಂದು|
ನೀ ಮರೆಯಾದ ಕ್ಷಣವ
ಮತ್ತೆ ಮರಳಿ ದಯಪಾಲಿಸು ಎಂದು|
ಒಲಿದರಿಂತ ಚೆಲುವೆಯೇ
ಒಲಿಯಬೇಕೆನ್ನ ಮುಂದಿನ ಜನ್ಮಕೆ
ಒಲಿಯದಿದ್ದರೆ ಮುಂದಿನ
ಜನ್ಮವೇತಕೆ ಈ ಜೀವಕೆ?||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಟ್ಯಾಮಿನ್ ಭರಿತ ಚಹಾ!
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೬

ಸಣ್ಣ ಕತೆ

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…