ಚಿತ್ರ: ಜುವಾನ್ ಟೊರ್‍ಟೊಲ
ಚಿತ್ರ: ಜುವಾನ್ ಟೊರ್‍ಟೊಲ

ಹೊಗೆ ಸೊಪ್ಪು ಒಂದು ವಿಷ ಪದಾರ್ಥ.  ಅದರ ಗಿಡ ಸುಮಾರು ಎರಡರಿಂದ ಎರಡೂವರೆ ಅಡಿ ಎತ್ತರವಾಗಿರುತ್ತದೆ.  ಅದರೆಲೆಗಳು ಅರಿಸಿನ ಬಣ್ಣದ್ದಿರುತ್ತವೆ.  ಇವೇ ಎಲೆಗಳನ್ನು ಒಣಗಿಸಿ, ಸೇವಿಸಲು, ಸೇದಲು ಉಪಯೋಗಿಸುತ್ತಾರೆ.  ತಂಬಾಕಿನಲ್ಲಿ ಯ್ಯಾವ್ಯಾವ ವಿಷಪದಾರ್ಥ ಅಡಗಿವೆಯೆಂಬುದು ಕೆಳಗೆ ಕೊಡಲಾಗಿದೆ:

೧. ನಿಕೋಟಿನ್ – ಎಂಬ ವಿಷಪದಾರ್ಥ.
೨. ಟಾರ್‍ – ಪಪ್ಪುಸವನ್ನು ಕರ್‍ರಗೆ ಮಾಡುವಂತಹದು.
೩. ಅಮೋನಿಯ
೪. ಫಾಮಾಲ್ಡಿಹೈಡ್
೫. ಹೈಡ್ರೋಜನ್ ಸೈನೈಡ್ – ವಿಷಕಾರಿ ಹೊಗೆ
೬. ಹೈಡ್ರೋಜನ್ ಸೈನೈಡ್ – ವಿಷಕಾರಿ ಹೊಗೆ
೭. ಕಾರ್ಬನ್ ಮೊನಾಕ್ಸೈಡ್ – ವಿಷಕಾರಿ ಹೊಗೆ
೮. ಆರ್ಸೆನಿಕ್ – ವಿಷಕಾರಿ ವಸ್ತು

ಪರಿಣಾಮಗಳು ಮತ್ತು ಅಂಕಿ ಸಂಖ್ಯೆಗಳು:
೧. ಗಂಟಲು, ಶ್ವಾಸಕೋಶ ಮತ್ತು ಪುಪ್ಪಸಗಳಿಗೆ ಬಾವು ಬರುವುದು.  ಪುಪ್ಪುಸದಲ್ಲಿರುವ ರಕ್ತದೊಂದಿಗೆ ಹೊಗೆ ಸೊಪ್ಪಿನ ವಿಷ ಸೇರುತ್ತದೆ.

೨. ಪುಪ್ಪುಸಗಳಿಗೆ ಅಪಾಯ ಉಂಟಾಗಿ ಕೆಮ್ಮು ಮತ್ತು ಕಾಲಾಂತರದಲ್ಲಿ ದಮ್ಮು ಬರುತ್ತದೆ.

೩. ಹಸಿವು ಮಂದವಾಗುವುದು ಮತ್ತು ಹೃದಯದ ಹಾರುವಿಕೆ.

೪. ಪುಪ್ಪುಸ ಕ್ಯಾನ್ಸರ್‍.

೫. ಪ್ರತಿವರ್ಷ ಭಾರತದಲ್ಲಿ ೧ ಮಿಲಿಯನ್ ಜನ ಕ್ಯಾನ್ಸರ್‌ನಿಂದ ಸಾಯುತ್ತಾರೆ.  ಇದರ ಮೂರನೆ ಒಂದು ಅಂಶದಷ್ಟು ಜನ ತಂಬಾಕು ಸೇವನೆಯಿಂದಲೇ ಪ್ರಾಣ ಕಳೆದುಕೊಳ್ಳುತ್ತಾರೆ.

೬. ಪ್ರತಿವರ್ಷ ತಂಬಾಕು ಸೇವನೆಯಿಂದ ೨.೫ ಮಿಲಿಯನ್ ಜನ ಪ್ರಾಣ ಕಳೆದುಕೊಳ್ಳುತ್ತಾರೆ.

೭. ಪ್ರತಿವರ್ಷ ಸಿಗರೇಟ್ ಸೇವನೆಯಿಂದ ೬೦೦,೦೦೦ ಜನ ಶ್ವಾಸಕೋಶ ಕ್ಯಾನ್ಸರ್‍ ನಿಂದ ಬಳಲುತ್ತಾರೆ. ತಂಬಾಕು ಸೇವನೆಯಿಂದ ಜಗತ್ತಿನಲ್ಲಿ ಪ್ರತಿ ೧೩ ಸೆಕೆಂಡಿಗೊಮ್ಮೆ ಒಂದು ಸಾವು ಸಂಭವಿಸುತ್ತದೆ;  ಪ್ರತಿ ವರ್ಷ ಆಸ್ಟ್ರೀಲಿಯಾದಲ್ಲಿಯೆ ೨೩,೦೦೦ ಜನ ತಂಬಾಕು ಸೇವನೆಯಿಂದ ವಿವಿಧ ರೋಗಗಳಿಗೆ ಬಲಿಯಾಗುತ್ತಾರೆ.

೮. ಕೇವಲ ಒಂದೇ ಒಂದು ಸಿಗರೇಟು ಸೇದಿದರೆ ನಿಮ್ಮ ಆಯುಷ್ಯದಲ್ಲಿ ೫ ನಿಮಿಷ ಕಡಿಮೆಯಾಯಿತೆಂದೇ ತಿಳಿದುಕೊಳ್ಳಿ.

೯. ೧೭ನೆಯ ಶತಮಾನದ ಶುರುವಿನಲ್ಲಿ ಭಾರತಕ್ಕೆ ಪರಿಚಯಿಸಿದ ಫೋರ್ಜುಗೀಸರು ಪೋರ್ಚುಗೀಸರು – ತಂಬಾಕು – ಈಗ ದೇಶದ ಕೆಲವೇ ಕೆಲವು ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ.  ತಂಬಾಕು ಕಾರ್ಖಾನೆಗಳಿಂದ ಭಾರತದಲ್ಲಿ ಸುಮಾರು ೭೦೦,೦೦೦ ಒಕ್ಕಲಿಗರು ಮತ್ತು ೨ ಮಿಲಿಯನ್ ಕೆಲಸಗಾರರು ಕೆಲಸ ಮಾಡುವುದರಲ್ಲಿ ನಿರತರಾಗಿದ್ದಾರೆ.  ಭಾರತೀಯ ತಂಬಾಕನ್ನು ಜಗತ್ತಿನ ಸುಮಾರು ೫೦ ದೇಶಗಳಿಗೆ ರಫ್ತು ಮಾಡಲಾಗುತ್ತದೆ.  ಜಪಾನ್, ರಶಿಯಾ, ಅಮೇರಿಕಾ, ಇಜಿಪ್ಟ್, ಬಲ್ಗೇರಿಯಾ ಮುಂತಾದ ದೇಶಗಳು ಇದರಿಂದ ಹೊರತಲ್ಲ.

೧೦. ಅಮೇರಿಕದಲ್ಲಿ ಒಬ್ಬ ಮನುಷ್ಯ ಪ್ರತಿವರ್ಷ ಸೇದುವಿಕೆಯಿಂದ ೩೦೦ ರಿಂದ ೬೦೦ ಡಾಲರ್‍ ಹಣ ಕಳೆದುಕೊಳ್ಳುತ್ತಾನೆ. [೯೧೧,೦೦೦ ಸಿಗರೇಟುಗಳು].

೧೧. ಪ್ರತಿ ದಿನ ಇಡೀ ಜಗತ್ತಿನಲ್ಲಿ ಸೇದುವ ಜನ ೪,೦೦೦ ಬಿಲಿಯನ್ ಸಿಗರೇಟ್‌ಗಾಗಿ ೮೫ ರಿಂದ ೧೦೦ ಮಿಲಿಯನ್ ಹಣ ಹಾಳು ಮಾಡುತ್ತಾರೆ;

೧೨. ದಿನಂಪ್ರತಿ ಭಾರತೀಯರು ಸೇದುವ ಸಿಗರೇಟ್‌ಗಳನ್ನು ಸಾಲಾಗಿ ಜೋಡಿಸಿಟ್ಟರೆ ಬೊಂಬಾಯಿಯಿಂದ ಲಂಡನ್‌ದವರೆಗೆ ಮುಟ್ಟುತ್ತದೆ;

೧೩. ಇಡೀ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಸಿಗರೇಟೆಂದರೆ ‘ಸಿಗಾರ್‍ ಕಾರ್ಖಾನೆ’ಯ ಬ್ರಾಂಡ್.  ಇದು ಲಾಸ್ ಪಾಮಾಸ್‌ದಲ್ಲಿದೆ.  ಇದರ ಉದ್ದ ೧ ಅಡಿ, ಪ್ರತಿಯೊಂದು ಸಿಗರೇಟಿನ ದರ ೨೭೦ ರೂಪಾಯಿಗಳು.

೧೪. ಅತಿ ಉದ್ದ ಸಿಗರೇಟು ೧೧ ಅಂಗುಲದ “ಹೆಡ್‌ಪ್ಲೇಸ್” ಹೆಸರಿನವು, ಹಾಗೂ ಅತಿ ಚಿಕ್ಕ ಸಿಗರೇಟುಗಳು “ಲಿಲಿಪುಟ್” ಉದ್ದ ಕೇವಲ ೧/೪ ಅಂಗುಲ ಮಾತ್ರ.

೧೫. ಚೈನಾ ದೇಶದಲ್ಲಿ ೧೯೮೭ರಲ್ಲಿ ಸಿಗರೇಟ್ ಸೇವನೆಯಿಂದ ಒಂದು ದೊಡ್ಡ ಅನಾಹುತವಾಯಿತು.  ೨೫ದಿನ ಬೆಂಕಿ ಆರಲಿಲ್ಲ, ೪೦೦ ಜನ ಸತ್ತರು/ಗಾಯಗೊಂಡರು, ೫೬,೦೦೦ ಜನ ಮನೆಮಠ ಕಳೆದುಕೊಂಡರು ಮತ್ತು ೧.೩ ಮಿಲಿಯನ್ ಹೆಕ್ಟೆರ್‍ ಭೂಮಿ ನಾಶವಾಯಿತು.

ಸೇದುವಿಕೆಗೆ ಮೂಲ ಕಾರಣಗಳು-
ಸುಮಾರು ೮೫% ಗಂಡಸರು ೨೦ ವರ್ಷಕ್ಕಿಂತ ಮೊದಲೇ ಸೇದಲು ಕಲಿತರೆ, ಹೆಂಗಸರು ೩೦ ವರ್ಷದ ಮೊದಲು.  ಗಂಡಸಿನ ಸ್ವಾತಂತ್ರ್‍ಯ ಮತ್ತು ಮೋಜಿಗೆ ಅಥವಾ ಆಗ್ರಹಕ್ಕೆ ಸೇದಲು ಕಲಿತರೆ ಹೆಂಗಸರು ಸೇದಿದರೆ ತಾವು ಆಕರ್ಷಕರಾಗಿ ಕಾಣಿಸುತ್ತೇವೆಯೆಂದು ತಿಳಿದು.

ಸೇದುವುದನ್ನು ಬಿಡುವುದು ಸಾಧ್ಯವೇ?

೧೦೦ಕ್ಕೆ ೯೦ಕ್ಕಿಂತಲೂ ಹೆಚ್ಚಿನ ಜನ ಸೇದುವುದು ಬಿಡುವುದು ಅಸಾಧ್ಯವೆಂದೇ ಹೇಳುತ್ತಾರೆ.  ಆದರೆ ಧೃಡಸಂಕಲ್ಪ ಮಾಡಿ ನಿಶ್ಚಲ ಮನಸ್ಸಿನಿಂದ ಪ್ರಯತ್ನಿಸಿದರೆ ಏಕೆ ಸಾಧ್ಯವಿಲ್ಲ?  ಸಿಗರೇಟು ಸೇದುವವರು ಕೆಳಗೆ ಕೊಟ್ಟಿರುವ ವಿಧಾನಗಳನ್ನು ಅನುಸರಿಸಿ, ಈ ಚಟದಿಂದ ದೂರಾಗಬೇಕು:

೧. ಕಡ್ಡಿಪೆಟ್ಟಿಗೆ, ಆಷ್ ಟ್ರೇ ಮತ್ತು ಸಿಗರೇಟುಗಳನ್ನು ಕಣ್ಣಿಗೆ ಬೀಳದಂತೆ ದೂರ ಇಡಿ.

೨. ಸೇದುವವರೊಂದಿಗೆ ಕಲೆಯಬೇಡಿ.

೩. ಸೇದಬೇಕೆಂದು ಮನಸ್ಸಾದಾಗ ಹಣ್ಣು, ಶೇಂಗಾ ಹೀಗೆ ಏನಾದರೂ ತಿನ್ನಿರಿ.

೪. ಚಹದ ಮತ್ತು ಊಟವಾದ ನಂತರ ಸೇದದಂತೆ ಎಚ್ಚರದಿಂದಿರಿ.

೫. ಸೇದುವುದನ್ನು ನೆನಪಿಗೆ ಬರದಂತೆ ಬೇರೆ ಕೆಲಸದಲ್ಲಿ ತೊಡಗಿರಿ.

ಹೊಗೆಸೊಪ್ಪಿನ ಎಲೆಗಳನ್ನು ಪ್ರಾಣಿಗಳು ಸಹ ಮುಟ್ಟುವುದಿಲ್ಲ.  ಅದರಿಂದಾಗುವ ಅಪಾಯವನ್ನು ತಿಳಿದೂ ನೀವು ಸೇದುವುದನ್ನು ಮುಂದುವರೆಸಿದರೆ ಹೇಗೆ?  ಈಗಲಾದರೂ ಬಿಟ್ಟು ಬಿಡಿ;  ನೀವು ಈ ಚಟದಿಂದ ದೂರಾದರೆ:

೧. ಪ್ರತಿಯೊಂದು ಸಿಗರೇಟಿನಿಂದಾಗಿ ೪ ರಿಂದ ೫ ನಿಮಿಷಗಳ ಆಯುಷ್ಯ ಹೆಚ್ಚಾಗುತ್ತದೆ.

೨. ನೀವು ದಿನಕ್ಕೆ ೨೦ ಸಿಗರೇಟು ಸೇದುತ್ತಿದ್ದರೆ ಪ್ರತಿ ವರ್ಷ ೪೦೦೦ ರೂಪಾಯಿ ಉಳಿಸುತ್ತೀರಿ.

೩. ಆರೋಗ್ಯವಂತರಾಗಿರುತ್ತೀರಿ, ಉಲ್ಲಾಸಭರಿತರಾಗಿರುತ್ತೀರಿ.
*****