Home / ಲೇಖನ / ವಿಜ್ಞಾನ / ಗ್ರೀನ್ ಹೌಸ್ ಎಫೆಕ್ಟ್

ಗ್ರೀನ್ ಹೌಸ್ ಎಫೆಕ್ಟ್

Green House“ಗ್ರೀನ್‌ಹೌಸ್” ಎಂದರೆ “ಹಸಿರುಮನೆ” ಎಂದರ್ಥ.  ಒಂದು ದೊಡ್ಡ ಮನೆಯಾಕಾರದ ಕಟ್ಟಡ ಗಾಜು ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸುತ್ತಾರೆ.  ಈ ಮನೆಯಲ್ಲಿ ಗಾಳಿ, ಉಷ್ಣತೆ, ಇಂಗಾಲದ ಡೈಆಕ್ಸೈಡ್, ತಂಪು ಮುಂತಾದವುಗಳನ್ನು ಅಗತ್ಯವಿದ್ದಷ್ಟು ಪೂರೈಸಿ ಗಿಡಗಳನ್ನು ಬೆಳೆಸುತ್ತಾರೆ.  ಈ ಮನೆ ಸೂರ್ಯನಿಂದ ಬರುವ ಬಿಸಿಲನ್ನು ಹೀರಿಕೊಳ್ಳುತ್ತದೆ, ಆದರೆ ಬಿಡುವುದಿಲ್ಲ.  ಹೀಗಾಗಿ ಇದರಲ್ಲಿನ ಉಷ್ಣತೆ ಹೆಚ್ಚುತ್ತಾ ಹೋಗುತ್ತದೆ.

ನೈಸರ್ಗಿಕ ಹಸಿರುಮನೆ
“ಓಜೋನ್” ಎಂಬುದು ವಾಯುವಿನ ಒಂದು ರೂಪ.  ಇದು ವಾತಾವರಣದ ಹೊರಗಿನ ಅಂದರೆ ನೆಲದಿಂದ ೧೫ ಕಿ.ಮೀ. ಮೇಲೆ ೫೦ ಕಿ.ಮೀ. ವರೆಗಿನ “ಊರ್ಧ್ವಮಂಡಲ” ಎಂಬ ವಿರಳ ಹವಾ ಮಂಡಲದಲ್ಲಿ ತೆಳ್ಳಗೆ ಹಬ್ಬಿದೆ.  ಇದು ಕೇವಲ ಕೆಲವು ಮಿಲಿಮೀಟರ್‌ಗಳಷ್ಟು ದಪ್ಪಗಿರುತ್ತದೆ.  ಬೆಳಕು ಸೂರ್ಯನಿಂದ ಉತ್ಪತ್ತಿಯಾಗಿ ಭೂಮಿಗೆ ಬರುವಾಗ ಅದರೊಂದಿಗೆ ಅನೇಕ ಜೀವಘಾತುಕವಾದ ಅಲ್ಟ್ರಾವಯೊಲೆಟ್ ಕಿರಣಗಳೂ ಉತ್ಪತ್ತಿಯಾಗುತ್ತವೆ.  ಆದರೆ ಈ ಘಾತುಕ ಕಿರಣಗಳನ್ನು ಓಜೋನ್ ಪದರು ಭೂಮಿಗೆ ತಲುಪಲು ಬಿಡದೆ ಚದುರಿ ಹೋಗವಂತೆ ಮಾಡುತ್ತದೆ.  ಇದು ಬಿಸಿಲಿನ ಸುರಕ್ಷಿತ ಭಾಗ ಮಾತ್ರ ತಲುಪುವಂತೆ ಮಾಡುತ್ತದೆ.  ಒಂದು ವೇಳೆ ಆ ಕಿರಣಗಳು ಭೂಮಿಗೆ ಬಂದರೆ ಪ್ರಾಣಿಸಂಕುಲ ಮತ್ತು ಸಸ್ಯಸಂಕುಲಗಳೆರಡಕ್ಕೂ ನಿನಾಶಕಾರಿ.  ಮಾನವರಲ್ಲಿ ಅವು ಚರ್ಮ ರೋಗ, ಅಸ್ತಮಾ, ಗಂಟಲುಬೇನೆ ಮುಂತಾದವುಗಳನ್ನು ಬರಲು ಕಾರಣವಾಗುತ್ತದೆ.  ಹಾಗಾಗಿ “ಓಜೋನ್” ಪದರ ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ರಕ್ಷಾ ಕವಚವಿದ್ದಂತೆ.  ಇದನ್ನು ನಾವು ನೈಸರ್ಗಿಕವಾದ “ಹಸಿರುಮನೆ” ಎಂದು ಕರೆಯಬಹುದು.

ಅಪಾಯದ ಅಂಚಿನಲ್ಲಿ:
ಇತ್ತೀಚಿನ ದಿನಗಳಲ್ಲಿ ಓಜೋನ್ ಬಗ್ಗೆ ಕಳಕಳಿ ಹೆಚ್ಚಿದೆ.  ಇದರ ಬಗ್ಗೆ ದೇಶ-ವಿದೇಶಗಳಲ್ಲಿ ಚರ್ಚೆ ನಡೆಯುತ್ತಿದೆ.  ಕಾರಣ ನಾವು ಮಾನವರು ದಿನದಿಂದ ದಿನಕ್ಕೆ ಹೊಸ ಹೊಸ ವಾಹನಗಳನ್ನು ಅವಿಷ್ಕರಿಸುತ್ತಿದ್ದೇವೆ. ಇವುಗಳಿಂದಲ್ಲದೇ, ವಿಮಾನ, ಹಡಗು ಮತ್ತು ಫ್ಯಾಕ್ಟರಿಗಳು ವಿಸರ್ಜಿಸುವ ಹೊಗೆಯಲ್ಲಿ ನೈಟ್ರಸ್ ಆಕ್ಸೈಡ್ ಮತ್ತು ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ.  ಕಂಪ್ಯೂಟರ್‍ ಮತ್ತು ಸೇಂಚಕ ಬಾಟಲಿಗಳಿಂದ ಸಿ.ಎಫ್.ಸಿ. ಕ್ಲೋರೋ ಪ್ಲೋರೋ ಕಾರ್ಬನ್ ಬಿಡುಗಡೆಯಾಗುತ್ತದೆ.  ಇದು ಓಜೋನ್ ಪದರಕ್ಕೆ ಬಹಳ ಅಪಾಯಕಾರಿ.  ಇವು ಓಜೋನ್ ಪದರವನ್ನು ನುಂಗಬಲ್ಲವು.  ಹೀಗಾಗಿ ಕೆಲವು ಕಡೆ ವಿಶೇಷವಾಗಿ ಧೃವ ಪ್ರದೇಶದ ಮೇಲ್ಗಡೆ ಓಜೋನ್ ವಲಯ ತೆಳ್ಳಗಾಗಿ ಛಿದ್ರ ಛಿದ್ರವಾಗುತ್ತಿದೆ.  ಕಳೆದ ವರ್ಷ ಈ ಓಜೋನ್ ಕಿಂಡಿ ಇಡೀ ಅಮೇರಿಕೆಯಷ್ಟು ದೊಡ್ಡದಾಗಿತ್ತು.

ಇವಲ್ಲದೇ, ಕೋಲ್, ಪೆಟ್ರೋಲಿಯಂಗಳನ್ನು ಉರಿಸುವುದರಿಂದ ಕಾರ್ಬನ್ ಡೈಆಕ್ಸೈಡ್, ಸಲ್ಫರ್‍ ಡೈ ಆಕ್ಸೈಡ್ ಮುಂತಾದವುಗಳು ಬಿಡುಗಡೆಯಾಗುತ್ತವೆ.  ಇವು ಭೂಮಿಯ ಉಷ್ಣತೆಯನ್ನು ಹೆಚ್ಚಿಸುತ್ತವೆ.  ಪ್ರತಿ ವರ್ಷ ೦.೦೫ ಡ್ರಿಗ್ರಿ ಸೆಂಟಿಮೀಟರ್‌ನಷ್ಟು ಭೂಮಿಯ ಉಷ್ಣತೆ ಹೆಚ್ಚುತ್ತಿದೆ.  ಹೀಗಾದಲ್ಲಿ ಸಮುದ್ರದ ನೀರು ಬಿಸಿಯಾಗಿ ಹೆಚ್ಚಾಗುವುದಲ್ಲದೆ ಪೋಲಾರ್‍ ಐಸ್ ಕ್ಯಾಪ್ ಕರಗುತ್ತದೆ.  ಇದರಿಂದ ಸಮುದ್ರದ ನೀರು ಹೆಚ್ಚಾಗುತ್ತದೆ.  ಅದರಿಂದ ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. [ಫ್ಲಡ್ಸ್ ಮತ್ತು ಫಮೈನ್]

ತಪ್ಪಿಸುವ ಬಗೆ:
ಏರ್‌ಕಂಡೀಶನರ್‍, ಕಂಪ್ಯೂಟರ್‍, ರಿಫ್ರಿಜಿರೇಟರ್‍ ಮತ್ತು ಸೇರಿಟ್ ಬಾಟಲಿಗಳಲ್ಲಿ ಸಿ.ಎಫ್.ಸಿ. ಬದಲಾಗಿ ಬೇರೆ ರಾಸಾಯನ ಬಳಸಬೇಕು.  ಓಜೋನ್ ತುಂಬ ಎತ್ತರದಲ್ಲಿ ಇದ್ದರೇ ಮಾತ್ರ ನಮಗೆ ಕ್ಷೇಮ.  ನಮ್ಮ ಉಸಿರಾಟದಲ್ಲಿಯೂ ಕಡಿಮೆ ಇರಬೇಕು.  ಈಗೀಗ ವಾಹನ ಮಾಲಿನ್ಯ ಹೆಚ್ಚಾಗಿರುವುದರಿಂದ ಮಾಮೂಲು ಆಮ್ಲಜನಕವೂ ಓಜೋನ್ ಆಗಿ ರಸ್ತೆ ಮಟ್ಟದಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ.  ಆದ್ದರಿಂದ ಅಸ್ತಮಾ, ಗಂಟಲು ಮತ್ತು ಚರ್ಮದ ಕ್ಯಾನ್ಸರ್‌ಗಳಿಗೆ ತುತ್ತಾಗಬೇಕಾಗುತ್ತದೆ.  ಇದರ ಬಗ್ಗೆ ಎಚ್ಚರ ವಹಿಸಬೇಕಾದುದು ಮತ್ತು ಎಚ್ಚೆತ್ತು ಕೊಳ್ಳಬೇಕಾದುದು ಅತೀ ಅವಶ್ಯ.
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...