ಮಹಾಮಾರಿ ರೋಗ – ಏಡ್ಸ್

ಮಹಾಮಾರಿ ರೋಗ – ಏಡ್ಸ್

Aidsಏಡ್ಸ್ ವೈರಸ್

ಏಡ್ಸ್ ಪಸರಿಸಿ ವರ್ಷಗಳೇ ಸಂದರೂ ಅದಕ್ಕೆ ಕಾರಣವಾದ ವೈರಸ್ಸ್ ಬಗ್ಗೆ ತಿಳಿದಿದ್ದಿಲ್ಲ.  ಅಥವಾ ಏ ಆರ ಯು ಮುಂತಾದ ವೈರಸ್‌ಗಳು ಏಡ್ಸ್‌ಗೆ ಕಾರಣವೆಂದು ತಿಳಿಯಲಾಗಿತ್ತು.  ಆದರೆ ಪ್ಯಾಶ್ಚರ್‍ ಇನ್ಸ್‌ಟಿಟ್ಯೂಟ ಪ್ಯಾರಿಸ್‌ನ ತಜ್ಞರಾದ ಪ್ರೊ. ಎಲ್. ಮೊಂಟೆಗ್ನೇರ್‍ ಮತ್ತು ಸಹಪಾಠಿಗಳು ೧೯೮೩ ರಲ್ಲಿ ಏಡ್ಸ್‌ಗೆ ಕಾರಣವೆಂದು ತೋರಿಸಿಕೊಟ್ಟರು.  ಎಚ್.ಅಯ್.ವಿ ಯಲ್ಲಿ ಎಚ್.ಅಯ್.ವಿ-೨ ಎಂದು ಎರಡು ಪ್ರಕಾರಗಳಿವೆ.  ಅದರ ಆಕಾರ ಹೀಗಿದೆ.

ಏಡ್ಸ್‌ಗೆ ಮದ್ದು?
ಏಡ್ಸ್‌ ರೋಗಕ್ಕೆ ಇದೂವರೆಗೆ ಯಾವುದೇ ಬಗೆಯ ಚಿಕಿತ್ಸೆ ಅಥವಾ ಮದ್ದು ಲಭ್ಯವಾಗಿಲ್ಲ.  ಅದುದರಿಂದ ಅದೊಂದು ಮಾರಕ ರೋಗವೇ ಸರಿ, ಕೆಲವು ವಾರಗಳ ಹಿಂದೆ ಕರ್ನಾಟಕದ ಒಬ್ಬ ಆರ್ಯುವೇದ ತಜ್ಞರು ತಾನು ಏಡ್ಸ್‌ಗೆ ಮದ್ದು ಕಂಡುಹಿಡಿದುದ್ದಾಗಿಯೂ ಹಾಗೂ ಅದರಿಂದ ಗೋವೆಯಲ್ಲಿ ಇಬ್ಬರು ಏಡ್ಸ್‌ ರೋಗಿಯನ್ನು ಗುಣಪಡಿಸಿದುದ್ದಾಗಿಯೂ ತಿಳಿಸಿದ್ದಾರೆ.  ಆದರೆ ಆನಂತರದ ವರದಿಗಳು ಲಭ್ಯವಾಗಿಲ್ಲ.

ಫ್ರೆಂಚ್ ವಿಜ್ಞಾನಿಗಳ ಪ್ರಕಾರ ಹಲಸಿನ ಹಣ್ಣು ಏಡ್ಸ್‌ಗೆ ಮದ್ದು.  ಅದರಲ್ಲಿರುವ “ಜಾಕಾಲಿನ್” ಎಂಬ ವಸ್ತುವೇ ಇದಕ್ಕೆ ಕಾರಣವೆಂದು ತೋರಿಸಿದ್ದಾರೆ.

ಇಂದು ಜಗತ್ತಿನಾದ್ಯಂತ ವಿಜ್ಞಾನಿಗಳ ಏಡ್ಸ್‌ಗೆ ಮದ್ದು ಕಂಡು ಹಿಡಿದು ಜಗತ್ಪ್ರಸಿದ್ದರಾಗಲು ಹಗಲಿರುಳು ಶ್ರಮಿಸುತ್ತಿದ್ದಾರೆ.  ಈ ಹಿಂದೆ ಅಜೈಡೋಥೈ ಮಡಾನ್, ರೈಬಾವೈರಿನ್, ಸುರಾಮಿನ್, ಹೆಚ್.ಪಿ.ಎ-೨೩ ಮುಂತಾದ ಔಷಧಿಗಳನ್ನು ಪರೀಕ್ಷಿಸಿಯಾಗಿದೆ.  ಆದರೆ ಇವೆಲ್ಲರಲ್ಲಿ “ಅಜೈಡೋಥ್ಯೆ ಮಿಥಾನ್” ಎಂಬ ಔಷಧಿಯೊಂದೇ ಏಡ್ಸ್ ರೋಗಿಗೆ ಆಶಾಕಿರಣವಾಗಿದೆ.  ಇದು ಏಡ್ಸ್ ರೋಗಿಯ ಆಯುಷ್ಯವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸುವುದರೊಂದಿಗೆ ವೈರಸ್‌ ಅನ್ನು ಸ್ವಲ್ಪ ಮಂದಗತಿಯನ್ನಾಗಿ ಮಾಡುತ್ತದೆ.  ಆದರೆ ಇದರ ಸೇವನೆಯಿಂದ ಇತರೆ ಕೆಟ್ಟ ಪರಿಣಾಮ ಎಂಬುದು ಅಲ್ಲಗಳೆಯುವಂತಿಲ್ಲ.

ನೆನಪಿರಲಿ

* ಏಡ್ಸ್ ರೋಗವು ಸ್ತ್ರೀ-ಪುರುಷರ ಇಂದ್ರಿಯ ಸಂಬಂಧದಿಂದ ಹರಡುವುದೇ ವಿನಹ ಆಕಸ್ಮಿಕವಾಗಿ ಅಲ್ಲ.

* ಏಡ್ಸ್ ರೋಗವು – ರೋಗಿಯ ಹತ್ತಿರ ಕುಳಿತರೆ ಸ್ಪರ್ಶದಿಂದ, ರೋಗಿಯು ಸೀನಿದರೆ ಅಥವಾ ಕೆಮ್ಮಿದರೆ, ರೋಗಿಯ ಬಟ್ಟೆ ಬರೆ ಉಪಯೋಗಿಸಿದರೆ, ಸೊಳ್ಳೆ ತಿಗಣೆಗಳಿಂದ, ರೋಗಿಯೊಂದಿಗೆ ಒಂದೇ ತಾಟಿನಲ್ಲಿ ಊಟ ಮಾಡುವುದರಿಂದ ಅಥವಾ ಒಂದೇ ಗ್ಲಾಸಿನಲ್ಲಿ ನೀರು ಕುಡಿಯುವುದರಿಂದ, ರೋಗಿಯೊಂದಿಗೆ ಚುಂಬಿಸುವುದರಿಂದ ಅಥವಾ ಕೈಕುಲುಕುವುದರಿಂದ ಹರಡುವುದಿಲ್ಲ.

* ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈವರೆಗೆ ಜಗತ್ತಿನಲ್ಲಿ ೨.೫ ಮಿಲಿಯನ್ ಜನ ಏಡ್ಸ್‌ಗೆ ಬಲಿಯಾಗಿದ್ದಾರೆ.  ೧೩ ಮಿಲಿಯನ್ ಜನ ಸೋಂಕಿಗೆ ಒಳಗಾಗಿದ್ದಾರೆ.  ಪ್ರತಿ ವರ್ಷ ಏಡ್ಸ್‌ನಿಂದ ೧ ಲಕ್ಷ ಸಾವು ವಿಶ್ವದಲ್ಲಿ ಪ್ರತಿ ೯ ನಿಮಿಷಕ್ಕೆ ಒಂದು ಏಡ್ಸ್ ಬಲಿ ಮತ್ತು ಪ್ರತಿ ೧೩ ಸೆಕೆಂಡಿಗೆ ಒಬ್ಬರಂತೆ ಹೆಚ್. ಐ. ವಿ. ಪಸರಿಸುತ್ತದೆ.

* ಏಡ್ಸ್ ರೋಗ ಹರಡಿದೆ ಎಂದು ತಿಳಿಯುವುದು ಕಷ್ಟ.  ಏಕೆಂದರೆ ಅದರ ಗುಣಲಕ್ಷಣಗಳು ಕಾಣಿಸಿಕೊಳ್ಳಲು ಬಹಳ ದಿನಗಳು ಬೇಕು [೬ ತಿಂಗಳಿನಿಂದ ೩ ವರ್ಷದವರೆಗೆ!]

* ಏಡ್ಸ್ ಸೋಂಕು ತಗುಲಿತೆಂದರೆ “ಸಾವು ಎಂಬ ಊರಿಗೆ ಓಪನ್ ಟಿಕೆಟ್ ರಿಸರ್ವ ಮಾಡಿಸಿದಂತೆಯೇ” ಸರಿ.  ಏಡ್ಸ್ ವೈರಸ್ ಹೊಕ್ಕ ದೇಹ ಮಾರಿ ಹೊಕ್ಕ ಮನೆಯಂತೆ ನಿರ್ನಾಮವಾಗುತ್ತದೆ!

* ಏಡ್ಸ್ ವೈರಸ್ ತುಂಬ ದುರ್ಬಲ!  ಆದರೆ ಒಮ್ಮೆ ಅದು ದೇಹದ ಒಳಹೊಕ್ಕರೆ ಅದರಷ್ಟು ಬಲಶಾಲಿಯಾದುದು ಯಾವುದೂ ಇಲ್ಲ!!

* ರೋಗ ತಗುಲಿದೆಯೆಂಬ ಸಂದೇಹವಾದರೆ ಕೂಡಲೆ ವೈದ್ಯರನ್ನು ಸಂಪರ್ಕಿಸಬೇಕು.

೧೯೮೧ರ ಜೂನ್ ತಿಂಗಳಲ್ಲಿ ಲಾಸ ಎಂಜಲೀಸ್‌ನ ರೋಗ ತಡೆಗಟ್ಟುವಿಕೆ ಕೇಂದ್ರ ಐದು ಜನ ತರುಣರು ನ್ಯೂಮೋನಿಯಾ ಪೀಡಿತರಾಗಿ ಸೇರ್ಪಡೆಯಾದರು.  ಇವರಲ್ಲಿ ಇಬ್ಬರು ಮೃತರಾದರು.  ಉಳಿದ ರೋಗಿಗಳನ್ನು ಪರೀಕ್ಷಿಸಿ ಅಧ್ಯಯನ ಮಾಡಿದಾಗ ತಿಳಿಯಿತು, ಅವರು ‘ಏಡ್ಸ್’ ಎಂಬ ಭಯಂಕರ ರೋಗದಿಂದ ಬಳಲುತ್ತಿದ್ದಾರೆಂದು.  ಹೀಗೆ ಜಗತ್ತಿನಲ್ಲಿ ಮೊಟ್ಟಮೊದಲು ಏಡ್ಸ್ ರೋಗವು ಮೈಖೆಲ್ ಗ್ಯಾಟ್ಲೀಡ್ ಎಂಬವನಲ್ಲಿ ಕಾಣಿಸಿಕೊಂಡಿತು.  ‘ಏಡ್ಸ್’ ಎನ್ನುವುದು ‘ಅಕ್ವೈರ್‍ಡ್ ಇಮ್ಯೂನೋ ಡೆಫಿಸಿಯೆನ್ಸಿ ಸಿಂಡ್ರೋಮ್’ ಸಂಕ್ಷಿಪ್ತ ರೂಪ.

ಮೊಟ್ಟ ಮೊದಲು ಏಡ್ಸ್ ರೋಗವು ಅಮೇರಿಕೆಯಲ್ಲಿ ಕಾಣಿಸಿಕೊಂಡು ಅಲ್ಲಿ ಶೇ.೭೦ರಷ್ಟು ರೋಗದ ವರದಿಯಿದ್ದರೂ ಇಂದು ಏಡ್ಸ್ ಜಗತ್ತಿನ ೧೦೦ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಪಸರಿಸಿದೆ.  ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಯೂರೋಪ್, ದ.ಆಫ್ರಿಕಾ, ಮುಂತಾದ ದೇಶಗಳಲ್ಲಿ ಪ್ರಭಲವಾಗಿದೆ.  ಈ ದೇಶಗಳಲ್ಲಿ ಏಡ್ಸ್ ಇಷ್ಟು ಪ್ರಬಲವಾಗಿರಲು ಕಾರಣ ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ೪೦ರಿಂದ ೭೦ರಷ್ಟು ಜನ ಸಲಿಂಗಕಾಮಿಗಳಾಗಿದ್ದರಿಂದ!

ಇನ್ನು ಭಾರತದ ಬಗ್ಗೆ ಹೇಳಬೇಕೆಂದರೆ, ಭಾರತದಲ್ಲಿ ಮೊಟ್ಟಮೊದಲು ಏಡ್ಸ್ ರೋಗವು ೧೯೮೬ರ ಮೇ ತಿಂಗಳಲ್ಲಿ ಕಾಣಿಸಿಕೊಂಡಿತು.  ಸ್ಥಳ ಪೂನಾದ ರಾಷ್ಟ್ರೀಯ ವೈರಸ್ ಸಂಶೋಧನಾ ಕೇಂದ್ರದಲ್ಲಿ.  ರೋಗಿ ಒಬ್ಬ ಮಧ್ಯವಯಸ್ಕ.  ಆತನಿಗೆ ರೋಗ ತಗಲುವ ಕಾರಣ ಆತ ಅಮೇರಿಕಾದಲ್ಲಿದ್ದಾಗ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಬೇರೊಬ್ಬನಿಂದ ರಕ್ತವನ್ನು ದಾನವಾಗಿ ಪಡೆದಿದ್ದರಿಂದ.  ಜೀವ ಉಳಿಸಿದ ರಕ್ತ ಜೀವ ಕಸಿದುಕೊಳ್ಳಬೇಕೆ?  ಒಂದು ವರದಿಯ ಪ್ರಕಾರ ೧೯೯೪ರ ಫೆಬ್ರವರಿ ಕೊನೆಯಲ್ಲಿ ಭಾರತದಲ್ಲಿರುವ ಏಡ್ಸ್ ರೋಗಿಗಳ ಸಂಖ್ಯೆ ೭೧೯ ಇದರಲ್ಲಿ ಗಂಡಸರು ೫೫೧ ಮತ್ತು ೧೬೧ ಮತ್ತು ೨೦ ಲಕ್ಷಜನ ಸೋಂಕಿಗೆ ತುತ್ತಾಗಿದ್ದಾರೆ.

ದೇಶಕ್ಕೆ ರಕ್ಷಣಾ ವ್ಯವಸ್ಥೆ ಎಷ್ಟು ಅಗತ್ಯವೋ ದೇಹಕ್ಕೂ, ಅಷ್ಟೆ ಅಗತ್ಯ, ಅವಶ್ಯ.  ಆದರೆ ದೇಹವನ್ನು ಹೊಕ್ಕ ಏಡ್ಸ್ ಸೋಂಕು, ದೇಹವನ್ನುಕಾಪಾಡುವ ಸ್ವಾಭಾವಿಕ ರಕ್ಷಣಾ ವ್ಯವಸ್ಥೆಯನ್ನು ಚೂರುಚೂರು ಮಾಡಿಬಿಡುತ್ತದೆ!  ಆಗ ದೇಹವು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ.  ನಿಜವಾದ ಅರ್ಥದಲ್ಲಿ ಹೇಳಬೇಕೆಂದರೆ ದೇಹದ ರೋಗ ನಿರೋಧಕ ಶಕ್ತಿಯನ್ನು ಇತರೆ ರೋಗಗಳಿಗೆ ಬಾಗಿಲು ತೆರೆದು ಸ್ವಾಗತಿಸುವುದು ಏಡ್ಸ್ ಸೋಂಕಿನ ಮುಖ್ಯ ಕೆಲಸ! ಆಗ ಏಡ್ಸ್ ರೋಗಿಯು ಕ್ಯಾನ್ಸರ್‍, ನ್ಯುಮೋನಿಯಾಗಳಂತಹ ಭಯಂಕರ ರೋಗಗಳಿಗೆ ಬಲಿಯಾಗಿ ಸಾಯುತ್ತಾನೆ.  ಹಾಗಾಗಿ ಏಡ್ಸ್ ಎಂಬ ಮಾರಕ ರೋಗದ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯವಾಗಿದೆ.

ರೋಗ ಹರಡುವಿಕೆ:

ಮುಖ್ಯವಾಗಿ ಇದು ಅನೈತಿಕ ಲೈಂಗಿಕ ಸಂಪರ್ಕ, ಸೋಂಕಿರುವ ರಕ್ತ ಮತ್ತು ಸೋಂಕಿರುವ ವ್ಯಕ್ತಿಗೆ ನೀಡಿದ ಚುಚ್ಚುಮದ್ದು ಸೂಜಿಯ ಮೂಲಕ ಹರಡುತ್ತದೆ.  ಏಡ್ಸ್ ರೋಗ ಹರಡಿಸುವರಾರೆಂದರೆ:
೧. ಸಲಿಂಗ ಕಾಮಿಗಳು.
೨. ಸ್ವೇಚ್ಫಾಚಾರಿಯಾದ ಲೈಂಗಿಕ ಜೀವನ ನಡೆಸುವರು.
೩. ಮಾದಕ ವಸ್ತು ಸೇವಿಸುವವರು.
೪. ರೋಗ ಹೊಂದಿದ ತಾಯಂದಿರಿಂದ ಜನ್ಮಪಡೆದ ನವಜಾತ ಶಿಶುಗಳು.
೫. ರಕ್ತದಲ್ಲಿ ಸೋಂಕನ್ನು ಹೊಂದಿರುವವರು
೬. ಚುಚ್ಚುಮದ್ದುಗಳನ್ನು ಸರಿಯಾಗಿ ಪರಿಷ್ಕರಿಸದೇ ಉಪಯೋಗಿಸಿದವು.
೭. ಉಭಯಲಿಂಗಕಾಮಿಗಳು.

ರೋಗ ಬಲಿಯುವ ಅವಧಿ:

ಏಡ್ಸ್ ರೋಗವು ಬಲಿಯುವ ಅವಧಿ ೬ ತಿಂಗಳಿಂದ ೫ ವರ್ಷದವರೆಗಿರುತ್ತದೆ. ಮಕ್ಕಳಲ್ಲಿ ಇದರ ಅವಧಿ ೧೨ ತಿಂಗಳುಗಳು ಮತ್ತು ತರುಣರಲ್ಲಿ ೨೯ ತಿಂಗಳುಗಳು.

ಸಾಮಾನ್ಯ ರೋಗ ಲಕ್ಷಣಗಳು:
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ
೧. ಬಿಟ್ಟು ಬಿಟ್ಟು ಬರುವ ಅಥವಾ ನಿಲ್ಲದಿರುವ ಜ್ವರ.
೨. ತಿಂಗಳಾದರೂ ನಿಲ್ಲದಿರುವ ಬೇಧಿ.
೩. ರಾತ್ರಿ ಬೆವರುವುದು, ತಲೆ ನೋವು ಇತ್ಯಾದಿ.
೪. ಬಾಯಿ ಮತ್ತು ಅನ್ನನಾಳಗಳಲ್ಲಿ ಹುಣ್ಣಾಗುವಿಕೆ
೫. ಸದಾ ಕೆಮ್ಮು, ಚರ್ಮ ಊತ ಇತ್ಯಾದಿ.

ವ್ಯವಸ್ಥಿತ ರೋಗ ಲಕ್ಷಣಗಳು:
೧. ನ್ಯೂಮೋನಿಯಾ.
೨. ಕಡಿಮೆ ಗಾತ್ರದ ಭೇದಿ, ಹೊಟ್ಟೆ ನೋವು.
೩. ತಲೆ ನೋವು ಸೆಳೆತ, ಉದ್ರೇಕ ಹಾಗು ವ್ಯಕ್ತಿತ್ವ ಕಳೆದುಕೊಳ್ಳುವಿಕೆ.

ರೋಗ ತಡೆಗಟ್ಟುವಿಕೆ:

ಏಡ್ಸ್ ರೋಗ ತಡೆಯಲು ಇದುವರೆಗೆ ಯಾವುದೇ ಬಗೆಯ ಲಸಿಕೆ ಅಥವಾ ಔಷಧಿ ಲಭ್ಯವಾಗಿಲ್ಲ.  ಹಾಗಾಗಿ ಏಡ್ಸ್ ಒಂದು ಮಾರಕ ರೋಗವೆನಿಸಿದೆ.  ಅಂದರೆ ಒಂದೆ ಒಂದು ಉಪಾಯವೆಂದರೆ ರೋಗ ಬರದಂತೆ ನೋಡಿಕೊಳ್ಳುವುದು.  ಈ ಕೆಳಗಿನ ಉಪಾಯ ದಿಂದ ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕು.

೧. ವೈಕಲ್ಪಕ ಲೈಂಗಿಕ ಜೀವನ ನಡೆಸದಿರುವುದು.
೨. ಮಾದಕ ದ್ರವ್ಯಗಳನ್ನು ಸೇವಿಸದಿರುವುದು.
೩. ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವಾಗ ಸೂಜಿ ಮತ್ತು ಸಿರೆಂಜುಗಳನ್ನು ಸಂಸ್ಕರಿಸಿದ ನಂತರವೇ ಬಳಸುವುದು.
೪. ನಿರೋಧ್ ಮತ್ತಿತರ ಸಾಂಪ್ರಾದಾಯಿಕ ಗರ್ಭನಿರೋಧಕಗಳನ್ನು ಬಳಸುವುದು ಮತ್ತು
೪. ಬೇರೆಯವರು ಉಪಯೋಗಿಸಿದ ರೇಜರ್‍ ಅನ್ನು ಉಪಯೋಗಿಸದಿರುವುದು.

ಬಗೆಹರಿಯದ ಸಮಸ್ಯೆ:
ಈವರೆಗೆ ಏಡ್ಸ್ ರೋಗವು ಆಫ್ರಿಕಾದ ಹಸಿರು ಮಂಗಗಳಿಂದ ಹರಡಿದೆಯೆಂದು ತಿಳಿಯಲಾಗಿತ್ತು.  ಈ ಸಿದ್ಧಾಂತವನ್ನು ಪ್ರತಿಪಾದಿಸಿ ತೋರಿಸಿದವರು ಅಮೇರಿಕದ ವಿಜ್ಞಾನಿಗಳಾದ ಫಿಲಿಸ್ ಕಂಕಿ ಮತ್ತು ಮ್ಯಕ್ಸ್ ಏಸೆಕ್ಸ್‌ರವರು.  ಆದರೆ ಈಗ ಅವರು ತಮ್ಮ ಈ ಸಿದ್ಧಾಂತ ತಪ್ಪು ಮತ್ತು ವೈದ್ಯಕೀಯ ಜಗತ್ತಿನಲ್ಲಿ ತಪ್ಪು ಕಲ್ಪನೆ ಉಂಟುಮಾಡಿದುದು ಎಂದು ಒಪ್ಪಿಕೊಂಡಿದ್ದಾರೆ.  ಪ್ರಯೋಗಗಳನ್ನು ನಡೆಸುವ ಕಾಲದಲ್ಲಿ ತಾವು ಎಡವಿದ್ದೂ ಮತ್ತು ಏಡ್ಸ್ ರೋಗ ಹರಡುವುದಕ್ಕೂ ಆಫ್ರಿಕಾದ ಹಸಿರು ಮಂಗಗಳಿಗೂ ಯಾವುದೇ ಬಗೆಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಈಗ ಎಲ್ಲರ ಮುಂದೆ ಒಂದು ಬಗೆಹರಿಯಲಾರದ ಪ್ರಶ್ನೆ ಎದ್ದುನಿಂತಿದೆ.  ಅದು ಏಡ್ಸ್ ರೋಗ ಹರಡಿದ್ದು ಮೊಟ್ಟ ಮೊದಲು ಎಲ್ಲಿಂದ ಎಂಬುದು! ಈ ಪ್ರಶ್ನೆಗೆ ನಿಮ್ಮಲ್ಲೇನಾದರೂ ಉತ್ತರ ಇದೆಯೇ?

ಕೊನೆಯ ಮಾತು:

ಏಡ್ಸ್ ಒಂದು ಮಹಾಮಾರಿ ರೋಗ.  ಪಾಶ್ಚಾತ್ಯರು ಮಿತಿಮೀರಿದ ಸ್ವಚ್ಫಂದ ಬದುಕಿಗೆ ರೋಸಿ ಪ್ರಕೃತಿ ನೀಡಿದ ಶಾಪ ‘ಏಡ್ಸ್’ ರೋಗ ಇದು ಸಾವಿನ ಪ್ರತಿರೂಪ. ಅದು ವಾಸಿಯಾಗುವುದೇ ಇಲ್ಲ! ಹಾಗಾಗಿ ಅದು ಬರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿಯೇ ಪ್ರತಿವರ್ಷ ಡಿಸೆಂಬರ್‍ ೧ ರಂದು “ವಿಶ್ವ ಏಡ್ಸ್ ದಿನಾಚರಣೆ” ಎಂದು ಆಚರಿಸಲಾಗುತ್ತಿದೆ.  ಈ ಕುರಿತು ಎಲ್ಲರಲ್ಲಿ ಎಚ್ಚರಿಕೆ, ತಿಳಿವಳಿಕೆ ಮೂಡಿಸಿ ಏಡ್ಸ್ ತಡೆಗಟ್ಟಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಣಕು ನೋಟ
Next post ಸೊಳ್ಳೆ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys