ಇದುವರೆಗೆ ಪೈಬರ್ ಮತ್ತು ಪ್ಲಾಸ್ಟಿಕ್‌ನ ಫೋನ್‌ಗಳು ಚಾಲ್ತಿಯಲ್ಲಿದ್ದವು. ಇದರಲ್ಲಿ ವಿದ್ಯುತ್ ಸರ್ಕ್ಯುಟ್ ಅಪಾಯ ಮತ್ತು ವಿದ್ಯುಶಾಖ ಹೊಡೆಯುವುದು ಆಗುತ್ತಿತ್ತು ಈದೀಗ ಗಂಟೆ ಬಾರಿಸುವ ಮರದ ಟೆಲಿಫೋನ್‌ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕೆಕ್ಕರ ಗ್ರಾಮದ ಉದ್ಯಮಿ ಕೃಷ್ಣಭಟ್ ಅವರು ತಯಾರಿಸಿದ್ದಾರೆ. ಇದು ಇಂದಿನ ತಾಂತ್ರಿಕ ಯುಗದಲ್ಲಿ ಟೆಲಿಫೋನ್ ಜಗತ್ತಿಗೆ ಪೈಪೋಟಿ ನಡೆಸುತ್ತದೆ. ‘ಉಡ್‌ಬೆಲ್’ ಎಂದು ಕರೆಯುವ ಇದನ್ನು ಕೃಷ್ಣಭಟ್ ಅವರು ಆಕರ್ಷಕವಾಗಿ ತಯಾರಿಸಿದ್ದು ಎಲ್ಲಕಾಲದಲ್ಲಿಯೂ ಇದರೊಳಗಿನ ಇಲೆಕ್ಟ್ರಾನಿಕ್ಸ್ ಪದಾರ್ಥಗಳು ಸುರಕ್ಷಿತವಾಗಿ ಕಾರ್ಯಶೀಲಗೊಳ್ಳುತ್ತವೆ ಎಂದು ತಯಾರಕರ ಅಭಿಪ್ರಾಯ. ಒಳ್ಳೆಯ ‘ಧ್ವನಿತರಂಗ’ ಮಾಡವುದಲ್ಲದೇ ಯಾವುದೇ ವಿಧದ ಶಾಖಗಳು ಇಲ್ಲದೇ ಅಂದದ ಮನೆಗಳಿಗೊಂದು ಕಲಾಕೃತಿಯಂತಾಗುತ್ತದೆ.
ಈ ದೂರವಾಣಿಯನ್ನು ಬೀಟೆ ಮತ್ತು ತೇಗದ ಮರದಿಂದ ತಯಾರಿಸಲಾಗಿದ್ದು ಈ ಮಾದರಿಯನ್ನು ಪೇಟೆಂಟ್ ಮಾಡಿಸುವ ಪ್ರಯತ್ನ ಸಾಗಿದೆ. ತಿಂಗಳಿಗೆ ಒಂದೂವರೆ ಸಾವಿರೆದಷ್ಟು ಸೆಟ್‌ಗಳನ್ನು ನಿರ್ಮಿಸುವ ಘಟಕವನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಎರಡು ಮಾದರಿಯಲ್ಲಿ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಮುಂದೆ ಇದೇ ರೀತಿಯಾಗಿ ಕಾರ್ಡ್‌ಲೆಸ್ ಮತ್ತು ಮೊಬೈಲ್ ಫೋನ್‌ಗಳನ್ನು ಸಹ ತಯಾರಿಸುವ ಯೋಜನೆ ಹೊಂದಲಾಗಿದೆ. ಎಂದು ತಯಾರಕರು ತಿಳಿಸುತ್ತಾರೆ.
******
- ಬರಲಿವೆ ಮಾತನಾಡುವ ಕಂಪ್ಯೂಟರ್ಗಳು - January 11, 2021
- ಬರಡು ನೆಲವನ್ನು ಖಸುಗೊಳಿಸುವ ಶೋಧನೆ - December 28, 2020
- ಅಂಗೈ ಆಳತೆಯೆ ವಿಮಾನಗಳು! - December 14, 2020