” ಮನುಷ್ಯನು ಹುಟ್ಟಬಂದ ಬಳಿಕ ತನ್ನ ಪ್ರವೃತ್ತಿಗನುಸಾರನಾಗಿ ವಿದ್ಯಾಭ್ಯಾಸ ಮಾಡುವನು. ಒಲವಿನ ಉದ್ಯೋಗ ಕೈಕೊಳ್ಳುವನು. ಆತನು ಶಿಲ್ಪಿಯಾಗಬಲ್ಲನು; ಕವಿಯಾಗಬಲ್ಲನು; ವ್ಯಾಪಾರಿಯಾಗಬಲ್ಲನು; ಸಾರ್ವಜನಿಕ ಜೀವನವನ್ನು ನಡೆಯಿಸಬಲ್ಲನು. ಆದರ ಅದರಲ್ಲಿ ಮನುಷ್ಯನು ಪ್ರಗತಿ ಹೊಂದಿದನೆಂದು ಭಾವಿಸುವುದು ಏತರ ಲಿಂದ? ಪ್ರಗತಿಯೆಂದು ಏತಕ್ಕೆ ಅನ್ನಲಾಗುತ್ತದೆ? ನಿಜವಾದ ಪ್ರಗತಿಯ ದಾರಿಯಾವುದು-? ಈ ಎಲ್ಲ ತೊಡಕುಗಳನ್ನು ಬಿಡಿಸಿಕೊಟ್ಟರೆ ಒಳ್ಳೆಯದಾಗುತ್ತದೆ” ಎಂದು ಜೀವಜ೦ಗುಳಿಯು ಪ್ರಾರ್ಥಿಸಿಕೊಂಡಿತು.

ಸಂಗಮಶರಣನು ವಾಡಿಕೆಯುತೆ ಒಂದೆರಡು ನಿಮಿಷ ಅಂತರ್ಮುಖ ನಾಗಿ, ವಿಷಯದೊಂದಿಗೆ ಸಮರಸನಾಗಿ ಅದಾವ ಬಗೆಯಲ್ಲಿ ,ವಿಷಯನನ್ನು ವಿವರಿಸಿದನೆಂದರೆ-
” ಪ್ರಗತಿಯನ್ನು ಅರಿತುಕೊಳ್ಳುವ ಮೊದಲು ನಮ್ಮ ನಿಲವನ್ನು ನಾವು ತಿಳಿದಿರಬೇಕಾಗುತ್ತದೆ. ನಿಂತನಿಲುನ ಮೇಲಿಂದ ಗುರಿಯನ್ನು ನಿಶ್ವಯಿಸಿ ಕೊಳ್ಳಬೇಕಾಗುತ್ತದೆ. ನಿಶ್ಚಿತ ಗುರಿಯೆಡೆಗೆ ಕಣ್ಣಿಟ್ಟು ನೇರವಾಗಿ ಇಲ್ಲವೆ ಅಲ್ಪಸ್ವಲ್ಪ ಸುತ್ತುವರಿದು ನಿರಂತರ ಸಾಗುವುದೇ ಫ್ರಗತಿ.

ನಿಯತಿಯು ಆರಂಭದಲ್ಲಿಯೇ ಒಂದು ಗುರಿಯನ್ನು ತೋರಿಸಿಕೊಟ್ಟಿದ್ದಾಳೆ. ಆ ಅಂತಿಮ ಗುರಿಯನ್ನು ಜೀವನು ತನಗೆ ಒಗ್ಗಬಹುದಾದ ರೀತಿಯಲ್ಲಿ ತಲುಪುವುದಕ್ಕೆ ಪ್ರಯತ್ನಿಸಬೇಕಾಗುತ್ತದೆ. ಗುರಿಯನ್ನು ತೆಲುಪುವ ದಾರಿ, ವೇಗ ಮೊದಲಾದವುಗಳನ್ನು ನಿಶ್ವಯಿಸಿಕೊಳ್ಳುವದಕ್ಕೆ ಜೀವನು ಸ್ಣತಂತ್ರನಿರುತ್ತಾನೆ.

ನಮ್ಮ ಬದುಕಿನ ಮೊಳಕೆಯನ್ನು ನಮ್ಮ ಪ್ರಕೃತಿಯಲ್ಲಿ ಮೊದಲಿಗೆ ಗುರುತಿಸಬೇಕಾಗುತ್ತದೆ. ಪ್ರೀತಿ, ತಿಳುವಳಿಕೆ, ಕಾರ್ಯಪ್ರವೃತ್ತಿ ಈ ಮೂರರಲ್ಲಿ ಯಾವುದು ಮೊಳೆತಿರುವದೋ ಅದನ್ನು ಕಂಡುಕೊಂಡು ಅದನ್ನು ಬೆಳೆಸುತ್ತಲೂ, ಇನ್ನುಳಿದ ಎರಡನ್ನು ಆದಕ್ಕೆ ಹಿನ್ನೆಲೆಯಾಗಿಯೋ ಬೆಂಬಲವಾಗಿಯೋ ಇರಿಸಿಕೊಂಡು ಕೃಷಿಯನ್ನು ಆರಂಭಿಸ- ಬೇಕಾಗುತ್ತದೆ. ಈ ಕೆಲಸದ ಹೊರತು ಜೀವನದಲ್ಲಿ ಬರುವ ಇನ್ನುಳಿದ ಹೋರಾಟಗಳನ್ನೆಲ್ಲ ಆ ಮೊಳಕೆಗೆ ಗಾಳಿ-ನೀರು ಗೊಬ್ಬರಗಳಂತೆ ಬಳಸುತ್ತ ನಿರಂತರನಾಗಿ ಅದರಲ್ಲಿಯೇ ತೊಡಗಿ ನಿಲ್ಲುವದೇ ಯೋಗವೆನಿಸುತ್ತದೆ.

ಅರಿತಾಗಲಿ ಅರಿಯದೆಯಾಗಲಿ ಅದರಲ್ಲಿ ನಾವು ಹೆಜ್ಜೆಯಿಕ್ಕುತ್ತಲೇ ಇದ್ದೇವೆಂಬುದು ಮರೆಯಲಾಗದ ಮಾತು. ಆಹಾರನಿದ್ರೆಗಳಲ್ಲದೆ ಸಂತಾನ ವೃದ್ಧಿಯಲ್ಲಿ ತೊಡಗಿಕೊಂಡಿರುವ ಪ್ರಾಣವೃತ್ತಿಯಿಂದ ಪಾರಾಗಿ, ಬುದ್ದಿಯ
ಬೆಳಕಿನಲ್ಲಿ ನಮ್ಮ ಬಾಳುವೆಯನ್ನು ಬೆಳೆಗಿಸುವ ಎತ್ತುಗಡೆ ಸಾಧಿಸಿದರೆ ನಾವು ನಿಜವಾಗಿ ದುನುಷ್ಯರಾದಂತೆ.

ಮನುಷ್ಯನಾದ ಮೇಲೆ ನಡೆಸುವ ಜೀವನವು ಸಹ ಆದೆಷ್ಟು ಉಚ್ಚ ಮಟ್ಟದ್ದಾಗಿದ್ದರೂ, ಅದು ಕೆಳಗಿನ ಪ್ರಕೃತಿಯ ಜೀವನವೇ ಎನಿಸುತ್ತದೆ. ನಮ್ಮ ಪ್ರೀತಿ, ತಿಳುವಳಿಕೆ, ಕಾರ್ಯಪ್ರವೃತ್ತಿಗಳು ತಾಳಮೇಳದ ಮೇಲೆ ಬಂದರೆ ಕೆಳಪ್ರತಿಯ ಜೀವನದ ತುದಿಯನ್ನೇರಿ ನಿಂತಹಾಗೆ. ಆ ಬಳಿಕ ಮೇಲಿನ ಪ್ರಕೃತಿಯ ಜೀವನಕ್ಕೆ ಬೇಕಾಗುವ ಬೆಳಕು ಅಲ್ಲಿ ಕಾಣಿಸುತ್ತದೆ. ಜೀವವು ಆ ಬೆಳಕಿನಲ್ಲಿ ಮಂಗಲಸ್ನಾನವನ್ನು ಮಾಡಿ ಕಲ್ಯಾಣದೀಕ್ಷೆಗೆ ಬದ್ಧವಾಗುವದು.

ಕಲ್ಯಾಣದೀಕ್ಷೆಯನ್ನು ಪಡೆದ ಬದುಕು ಇನ್ನಾವುದೋ ಮುಹಾಶಕ್ತಿಯ ನೆರವಿನಿಂದ ಉಚ್ಚಬುದ್ದಿಯ ಸತ್ವವುಂಡು ಮಾನವಶ್ರೇಷ್ಠತೆಯನ್ನು ಗಳಿಸುತ್ತದೆ.

ಮಾನವಶ್ರೇಷ್ಠನ ಜ್ಞಾನೇಂದ್ರಿಯಗಳು ಸಾಮಾನ್ಯವಾಗಿ ನಿತ್ಯವೂ ನೋಡುತ್ತಿರುವ ವಸ್ತುಗಳನ್ನು ಇನ್ಯಾವುದೋ ಬಗ್ಗೆಯಲ್ಲಿ ಕಾಣುವದಕ್ಕೆ ಶಕ್ತವಾಗುವವು. ಅವನ ಕಾಣ್ಕೆ, ಅವನ ಅನಿಸಿಕೆ, ಅವನ ಮುಂದುವರಿಕೆಗಳೆಲ್ಲ
ಅಗಾಧವಾದ ರೀತಿಯಲ್ಲಿ ಮಾರ್ಪಡುವವು. ಆ ದಾರಿಯು, ಆ ಹೆಜ್ಜೆಯು ಮನುಷ್ಯನ ಅಂತಿಮಾವಸ್ಥೆಯಾದ ಅತಿಮಾನವದೆಶೆಗೆ ಕೊಂಡೊಯ್ಯುವದು.

ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತಯ್ಯ!
ಬಯಲ ಜೀವನ, ಬಯಲ ಭಾವನೆ
ಬಯಲು ಬಯಲಾದೆ ಗುಹೇಶ್ವರಾ.

ಅದು ಪರ್ವತಶಿಖರದ  ಬಾನುಫ್ರದೇಶದಲ್ಲಿ ನಿರ್ಮಿತವಾದ ಮಹಾಮನೆ. ಆ ಮಹಾಮನೆಗೆ ಹೋಗುಪ ನೇರವಾದ ದಾರಿಯ ಆರಂಭವಾಗುವದು, ಮನದ ಕೊನೆಯ ಮೊನೆಯ ಮೇಲೆ. ಅಲ್ಲಿ ನೆನೆದ ನೆನಹು ಜನನಮರಣಗಳನ್ನು ನಿಲ್ಲಿಸುವದು. ಅಲ್ಲಿ ತಿಳುವಿನ ಬೆಳಕು ಕೋಟಿಸೂರ್ಯರ ಪ್ರಕಾಶಪನ್ನು ಮೀರಿ ನಿಂತಿರುವದು. ಅಲ್ಲಿ ಸ್ವಾನುಭವದ ಉದಯವಾಗುವದು. ಆದರೆ ಜ್ಞಾನಶೂನ್ಯದಲ್ಲಿ ಅಡಗುವದು. ಅದನ್ನು ಬಾಯಿಂದ ಆಡಿ ತೋರಿಸುವುದಾಗಲಿ, ಮಾತಿನಿಂದ    ವಿವರಿಸಿ ತೋರಿಸುವದಾಲಿ  ಅಶಕ್ಯ. ಅದು ಅಷ್ಟೊಂದು ಘನತರವಾಗಿರುತ್ತದೆ. ಅದು ಇಂದ್ರಿಯಜನ್ಯ ಜ್ಞಾನವಲ್ಲ; ಬುದ್ದಿಯ ರಿಂಗಣ ಗುಣಿತವಲ್ಲ; ಅನುಭಾವ, ಆತ್ಮವಿದ್ಯೆ. ಅದು ತಾನಾರೆಂಬುದನ್ನು ತೊರುವದು. ನಿಜದ ನಿಲುವಿನಲ್ಲಿ ನಿಲ್ಲಿಸುವದು. ಶಾಸ್ತ್ರಗಳು ಅದನ್ನು ತಿಳಿಸಲಾರವು. ವ್ಯವಹಾರದ ಮತಿವಂತಿಕೆಯಿಂದ ಅದು ಪ್ರಾಪ್ತವಾಗಲಾರದು.

ಅನುಭಾವವ ನುಡಿವ ಅಣ್ಣಗಳಿರಾ,
ಅನುಭಾವವೆತ್ತ ನೀವೆತ್ತ ಹೋಗಿರಣ್ಣಾ.
ಅನುಭಾವವೆಂಬುದು ಆತ್ಮವಿದ್ಯೆ.
ಅನುಭಾವವೆಂಬುದು ತಾನಾರೆಂಬುದ ತೋರುವದು.
ಅನುಭಾವವೆಂಬುದು ನಿಜನಿವಾಸದಲ್ಲರಿಸುವದು,
ಇಂತಪ್ಪ ಅನುಭಾವದನುವವರಿಯದೆ
ಶಾಸ್ತ್ರಜಾಲದ ಪಸಾರವನಿಕ್ಕಿ
ಕೊಳ್ಳದ ಕೊಡದ ವ್ಯವಹಾರವ ಮಾಡುವ ಅಣ್ಣಗಳಿರಾ,
ನೀವೆತ್ತ ಸ್ವತಂತ್ರಸಿದ್ಧಲಿಂಗೇಶ್ವರನ ಅನುಭಾವವೆತ್ತ
ಹೋಗಿರಣ್ಣ.

ಕಂಗಳ ಮುಂದಿನ ಕಾಮನ ಕೊಂದವನು, ಮನದ ಮುಂದಿನ   ಆಶೆಯ ತಿಂದವನು  ತನ್ನನ್ನು ಅರಿಯಲು ಅರ್ಹನಾಗುತ್ತಾನೆ. ತನ್ನ ಅನುಭಾವವನ್ನು ಅಳವಡಿಸಿಕೊಳ್ಳುವದಕ್ಕೆ ತಕ್ಕವನಾಗುತ್ತಾನೆ. ಆತ್ಮ-ಪರಮಾತ್ಮರ
ಯೋಗವನ್ನು ಅರಿತುಕೊಳ್ಳುವ ಯೋಗ್ಯತೆಯನ್ನು ಪಡೆಯುತ್ತಾನೆ. ಅರಿವು-ಮರವೆಗಳು ನಷ್ಟನಾಗುವದಕ್ಕೆ ಆತ್ಮಕ್ಕೆ ಪರಮಾತ್ಮಯೋಗವು ಅತ್ಯಾವಶ್ಯಕವಾದದ್ದು.

ಯೋಗದಿಂದ ಅರಿವು-ಮರವು ನಷ್ಟವಾಗಿ ಅದರಿಂದ ಮಾಯೆಯ ಮುಸುಕು ಸರಿಯಬೇಕು. ಮಾಯೆ ಹಿಂಗಿದಾಗಲೇ ಹೆಮ್ಮು ಅಳಿಯುವದು ಹಮ್ಮು ಅಳಿಯುವುದೇ  ಜೀವಪರಮೈಕ್ಯವೆನಿಸುತ್ತದೆ.

ಮರಗಿಡ ಬಳ್ಳಿ ಧಾನ್ಯಗಳೆನ್ನದೆ ಸಿಕ್ಕ ಬೆಳಸನ್ನೆಲ್ಲ ತರಿತರಿದು ಶರೀರ ವನ್ನು ಹೊರೆಯುವ ಖಟಾಟೋಪದಿಂದ ತುಸು ಬೇರೆಯಾಗಿ ನಿದ್ರೆ, ಎಚ್ಚರ, ಕನಸುಗಳಲ್ಲೆಲ್ಲ ಮತ್ತೊಂದನ್ನು ಬಗೆಯದೆ, ಕೈಕೊಂಡ ಜೀವನ ಕೃಷಿಯಲ್ಲಿಯೇ ಮುಳುಗಿ ನಿಂತವನೇ ಇಚ್ಛಿತ ಬೆಳಸನ್ನು ತುಂಬಿಕೊಳ್ಳಬಲ್ಲನು. ಬೀಜದಲ್ಲಿಯೇ ಹುದುಗಿಕೊಂಡ ಮರವನ್ನು ಬಯಲಿಗೆಳೆದು ಮುಗಿಲವರೆಗೆ ತಲೆಯತ್ತಿನಿಲ್ಲುವಂತೆ ನೀರೆಯಬೇಕು; ಗಾಳಿ ತೀಡಬೇಕು; ಗೊಬ್ಬರ ಸುರಿಯಬೇಕು.
ವಿಶ್ವದಲ್ಲಿ ಜ್ಞಾನಪ್ರತಿಷ್ಟೆಯ ಮಾಡುತಿಪ್ಪರು,
ಗೋವಿನ ದೇಹದಲ್ಲಿ ಘೃತವಿಪ್ಪುದಯ್ಯ.
ಅದು ಆ ಗೋವಿಗೆ ಪುಷ್ಟಿಯಾಗಲಾರದು.
ಆ ಗೋವ ಪೋಷಿಸಿ, ಹಾಲಕರೆದು, ಕಾಸಿ,
ಹೆಷ್ಘನಿಕ್ಕಿ, ಆ ದಧಿಯ ಮಥನವ ಮಾಡಿ,
ಬೆಣ್ಣೆಯ ತೆಗೆದು, ಆ ನವನೀತ ತುಪ್ಪವ ಕಾಸಿ,
ಆ ಗೋವಿಗೆ ಕುಡಿಸಲಾಗಿ ದಿನದಿನಕ್ಕೆ
ಪುಷ್ಟಿಯಪ್ಪುದು ತಪ್ಪದಯ್ಯ.
ಈ ಪ್ರಕಾರ ಸತ್‌ಕ್ರಿಯೋಪಚಾರವ ಮಾಡಲಾಗಿ
ಜ್ಞಾನವಹುದು.
ಜ್ಞಾನವಾಗಿ ಸಮ್ಯಕ್ ಜ್ಞಾನವಹುದು..
ಸಮ್ಯಕ್ ಜ್ಞಾನವಾಗಿ ಪ್ರಾಣವೇ ಲಿಂಗವಪ್ಪುದು
ತಪ್ಪುದು.
ಸಂದೇಹವಿಲ್ಲವಯ್ಯ, ಮಹಾಲಿಂಗಗುರು ಶಿವ
ಸಿದ್ಧೇಶ್ವರ ಪ್ರಭುವೇ.

ಕೃಷಿಗೆ ತಕ್ಕ ತಿಳುವಳಿಕೆ, ಉಚಿತ ಶ್ರದ್ಧೆಯಿಲ್ಲದೆ ಮುಂದೆ ಸಾಗುವಂತಿಲ್ಲ. ತಿಳುವಳಿಕೆಯಿಲ್ಲದ ಕೃಷಿ ವ್ಯರ್ಥ ಹಳವಂಡ. ಶ್ರದ್ಧೆಯಿಲ್ಲದ ತಿಳುವು ಕೃತಿಗಳು ಯಾಂತ್ರಿಕ ರಚನೆ. ಶ್ರದ್ಧೆ-ತಿಳಿವು-ಕೃತಿಗಳಲ್ಲಿ ಯಾವುದೇ ಒಂದಿದ್ದರಂತೂ ಪ್ರಯೋಜನ ಕಡಿಮೆ. ಮೂರೂ ಬೇಕು, ಅವು ಮೇಳವಿಸಿರಬೇಕು. ಆಕಳಿಂದ ತುಪ್ಪತೆಗೆಯುವ ಎತ್ತುಗಡೆಯನ್ನು ಬಿಟ್ಟು, ಆನೆಯಿಂದ ತುಪ್ಪ ತೆಗೆಯುವ ಹವ್ಯಾಸ ಹಾಸ್ಯಾಸ್ಪದವಾದುದು. ಅದು ಪ್ರಗತಿಗೆ ದಾರಿಯಾಗಲಾರದು,  ಪ್ರಗತಿಪರವಂತೂ ಅಲ್ಲವೇ ಅಲ್ಲ.

ಶ್ರದ್ಧೆಯಕಾಂಡಿಗೆ ತಿಳಿವಾಗಲಿ, ಸತ್‌ಕ್ರಿಯೆಯಾಗಲಿ ಎರಡು ಪಕಳೆಗಳು. ಅವು ಬದುಕಿ ಉಳಿದುಕೊಂಡು ಬೆಳೆಯತೊಡಗುವದೇ ಯೋಗ್ಯ ಪ್ರಗತಿ. ಅಲ್ಲಿಯೇ ನಾವು ಸಫಲತೆಯನ್ನು ಕಾಣಬಹುದು. ಪರಿಪೂರ್ಣತೆಯನ್ನು ಕಾಣಬಹುದು. ಉತ್ತರೋತ್ತರನಾಗಿ ಉದಯೋನ್ಮುಖತೆಯನ್ನೂ ಅಲ್ಲಿ ನಾವು ಧಾರಾಳನಾಗಿ ಕಾಣುವೆವು.

ಜ್ಞಾನದಲ್ಲಿ ಅರಿದರೇನಯ್ಯ, ಸತ್‌ಕ್ರಿಯಾಚಾರಿಯಾಗದನ್ನಕ್ಕರ?
ನೆನೆದ ಮಾತ್ರದಲ್ಲಿ ಕಾಂಬುದೇ ಕಾರ್ಯದಲ್ಲಲ್ಲದೆ?
ಕುರುಡ ಕಾಣಪಥವ, ಹೆಳವ ನಡೆಯಲರಿಯ.
ಒಂದಿಲ್ಲದಿದ್ದರೆ ಒಂದಾಗದು.
ಜ್ಞಾನವಿಲ್ಲದ ಕ್ರಿ ಜಡ; ಕ್ರಿ ಇಲ್ಲದ ಜ್ಞಾನ ಭ್ರಾಂತಿ.
ಇದು ಕಾರಣ ಸಿದ್ಧ ಸೋಮನಾಥನಲ್ಲಿ ಎರಡೂ ಬೇಕು,

ಒಂದು ಬಿಟ್ಟು ಇನ್ನೆರಡು ಹಿಡಿದರಾಗಲಿ, ಎರಡು ಹಿಡಿದು ಇನ್ನೊಂದು ತೊರೆದರಾಗಲಿ ಸಿದ್ದಿಯಿಲ್ಲದಿರುವಂತೆ ಮೂರರಲ್ಲಿ ಒಂದು ಮರೆತರೂ ಇನ್ನೊಂದು ಕುರುಡು. ಇನ್ನೊಂದು ಮರೆತರೆ ಬೇರೊಂದು ಕುಂಟು. ಕ್ರಿಯೆ
ಮರೆತಲ್ಲಿ ಅರಿವು ಹೀನ. ಅರಿವು ಮರೆತಲ್ಲಿ ಜ್ಞಾನ ಹೀನ. ಜ್ಞಾನ ಮರೆತಲ್ಲಿ ಬೆಳಗಿನ ಕಳೆ ಕಾಣೆಯಾಗುವದು. ಕ್ರಿಯೆ ಜ್ಞಾನವುಂಡ ಕೂಸು, ಜ್ಞಾನ ಕ್ರಿಯೆಗೆ ಪ್ರೇರಕ-ಎಂಬುದನ್ನು ಕಂಡರಿಯಲಿಕ್ಕೆ ಸಾಧ್ಯವಿದೆ. ಅವು ಗಟ್ಟಿಗೊಳ್ಳುವದಕ್ಕೆ ಭಕ್ತಿಯ ಬೆಂಬಲ ಮೊದಲುಬೇಕು.

ಅಹುದಹುದು, ಭಕ್ತಿಭಾವದ ಭಜನೆ ಎಂತೆಂತಿಹುದೊ?
ಅಂತರಂಗದ ಅರಿವಿಂಗೆ ಆಚಾರವೇ ಕಾಯ.
ಆಚಾರಕಾಯವಿಲ್ಲದಡೆ ಅರಿವಿಂಗೆ ಆಶ್ರಯವಿಲ್ಲ.
ಅರಿವು ಆಚಾರದಲ್ಲಿ ಸಮವೇದಿಸಿದ ಲಿಂಗೈಕ್ಯನ
ಕ್ರಿಯಬದ್ದನೆಂದು ನುಡಿದರೆ ಪಂಚಮಹಾಪಾತಕ,
ನಿನ್ನ ಅರಿವಿಂಗೆ ಅಚ್ಚಾಗಿ, ಆಚಾರಕ್ಕೆ ಆಳಾಗಿ
ನಿಮ್ಮ ಗುಹೇಶ್ವರನು ನಿನ್ನ ಕೈವಶಕ್ಕೆ ಒಳಗಾಗನು.
ನಿನ್ನ ಸುಖಸಮಾಧಿಯ ತೋರಬಾರಾ ಸಿದ್ದರಾಮಯ್ಯ.

ಪ್ರಗಾಥವಾದ ಏಕಾಗ್ರತೆಯಾಗಲಿ, ಆಳವಾದ ಧ್ಯಾನನಾಗಲಿ ಅದೆಷ್ಟು ಪ್ರಬಲಸಾಧನನಾಗಿದ್ದರೂ ಅದು ಜ್ಞಾನ-ಭಕ್ತಿ-ಕ್ರಿಯೆಗಳ ಮುಪ್ಪರಿಗೆ ಮೆರುಗುಕೊಡಬಲ್ಲದೇ ಹೊರತು, ಪರಿವೂರ್ಣ ಫಲದಾಯಕವಾಗಲರಿಯದು. ದೇಹ-ಪ್ರಾಣ-ಮನಗಳೆಂಬ ಪ್ರಕೃತಿಯಲ್ಲೆಲ್ಲ ಪರಿಪೂರ್ಣತೆಯನ್ನು ತಂದು ಕೊಳ್ಳುವುದೇ ಪ್ರಗತಿಯ ಮುಖ್ಯಲಕ್ಷಣವಾಗಿರುವದರಿಂದ ಧ್ಯಾನವು ತಿಳುವಿಗೆ ಹೊಳವು ನೀಡಿದ ಮಾತ್ರಕ್ಕೆ ಸರ್ವಜ್ಞಾನವೇ ಪ್ರಾಪ್ತವಾಗಲಾರದು. ಪ್ರಾಣಕ್ಕೆ ತಾಳ ಕಲಿಸಿದ ಮಾತ್ರಕ್ಕೆ ಅದರ ಸರ್ವ ಚಲನವಲನಗಳನ್ನು ಸಂಯಮಿಸುವ ಶಕ್ತಿಯನ್ನು ಅನುಗ್ರಹಿಸಲಾರದು.

ಅದರಂತೆ ಜಪತಪಗಳು ಎಷ್ಟೇ ಫಲಕಾರಿಯಾಗಿದ್ದರೂ ಸಂಪೂರ್ಣ ಪ್ರಕೃತಿಯನ್ನು ನಿರ್ಮಾಣಗೊಳಿಸಲಾರವು. ಪ್ರಕೃತಿಯ ನಿರ್ಮಾಣಕ್ಕೆ ಗಟ್ಟಿತನವನ್ನೋ ಮೃದುತ್ವವನ್ನೋ ಜಪ-ತಪಗಳು ಅವಕ್ಯಕವಾದ ಸಾಮಗ್ರಿಗಳನ್ನು ಒದಗಿಸಬಹುದು.

ಧ್ಯಾನ ಆಧ್ಯಾತ್ಮಿಕರಲ್ಲಿ ಕಂಡೆನೆಂಬುದು
ಜೀವನಲ್ಲದೆ ಪರಮನಲ್ಲ.
ಜಪತಪ ನೇಮ ನಿತ್ಯಂಗಳಿಂದ ಕಂಡೆನೆಂಬುದು
ಪ್ರಕೃತಿಯಲ್ಲದೆ ಚಿತ್ತವಲ್ಲ.
ಭಾದದಿಂದ ಪ್ರಮಾಣಿಸುವುದೇ ಏಕರೂಪ-
ಗುಹೇಶ್ವರಲಿಂಗವು ತಾನೇ.

ಇನ್ನು ರವಿ ಕಾಣಲಾರದ್ದನ್ನು ಕಾಣಬೇಕೆಂಬ ಕವಿಯ ಹಂಬಲವಾಗಲಿ, ವಿದ್ಯಾವಿಹೀನತೆಯ ಪಶುತ್ವವನ್ನು ಮೀರಿ ಮಾನವ ವರ್ಗದಲ್ಲಿ ನಿಲ್ಲಬೇಕೆನ್ನುವ ವಿದ್ಯಾಸಾಧಕರ ಪರಿಶ್ರಮವಾಗಲಿ, ಪವನಸಾಧಕರು ಆಶಿಸುವ ಅಗಾಧಮಹಿ
ಮೆಯ ದಣಿವಾಟವಾಗಲಿ, ಜೀವಿಯನ್ನು ಒಂದು ನಿಲುವಿನವರೆಗೆ ತಂದಿಳಿಸುವ ವಾಹನಗಳೇನೋ ಅಹುದು, ಅದರಲ್ಲಿಯೂ ಪ್ರಗತಿಯ ಒಂದು ಹೆಜ್ಜೆಯನ್ನು ಕಾಣಬಹುದು. ಪ್ರಗತಿಯ ಹೋರಾಟದ ಒಂದು ರೀತಿಯನ್ನು ಕಾಣ
ಬಹುದು. ಆದರೆ ಅದೇ ಪ್ರಗತಿಯೆನಿಸಲಾರದು.

ಕವಿಗೆ ಕೀರ್ತಿಯು ಎತ್ತಿ ನಿಲ್ಲಿಸಬಹುದು; ಪಂಡಿತನಿಗೆ ಸನ್ಮಾನವು ಸಾರ್ಥಕತೆಯಂತೆ ಒಂದಿಷ್ಟು ಕಾಣಿಸಿಕೊಳ್ಳ- ಬಹುದು. ಕವಿಯ ಪ್ರತಿಭೆಯನ್ನು ರೇಖಿಸಿಕೊಳ್ಳುವದಕ್ಕೆ ಇತಿಹಾಸದ ಓಲೆಗಳಲ್ಲಿ ಒಂದಿಷ್ಟು ಸ್ಥಳ ದೊರೆಯಬಹುದು. ತನ್ನ ವಾಚಕರಿಗೆ ತಾನುಂಡ ಇಲ್ಲವೆ, ತಾನುಣ್ಣಬೇಕೆಂದಿರುವ ಆನಂದದ ಒಂದು ಚೂರು ನೀಡಲು ಶಕ್ತನಾಗಬಹುದು. ಕವಿಯ ಅಥವಾ ಪಂಡಿತನ ಹುಟ್ಟುಬಡತನವು ಅಡಗಿಹೋಗಬಹುದು. ರಾಜಸಭೆಯಲ್ಲಿ ಎತ್ತರದ ಗದ್ದುಗೆಯನ್ನು ಏರಿ ಕುಳ್ಳಿರಬಹುದು. ನಾಡಿಗೊಂದು ಭೂಷಣವುಂಟಾಗಬಹುದು; ನುಡಿಗೊಂದು ಶೋಭೆಯುಂಟಾಗಬಹುದು. ಅವನ ಯಶಸ್ಸನ್ನು ಕಂಡ ಅನೇಕ ಜೀವಿಗಳಿಗೆ ಆ ಹಾದಿ ಆದರ್ಶವೂ ಎನಿಸಬಹುದು. ಬಹುಜನರಿಗೆ ಬಹುಕಾಲದ ಘನಕಲ್ಯಾಣದನ್ನು ಸಾಧಿಸಿಕೊಡವದು ಸಣ್ಣಕೆಲಸದಲ್ಲ. ಅದು ಸಣ್ಣಜೀವಿಯಿಂದ ಸಾಧಿಸತಕ್ಕ ಕೆಲಸವೂ ಅಲ್ಲ. ಆದರೆ ಪ್ರಗತಿಯ ದಾರಿಯಲ್ಲಿ ಕೊನೆಯಘಟ್ಟವು ದೂರವೇ ಉಳಿದಿರುವದನ್ನು ಬಗೆದಂದರೆ, ಅದೂ ಒಂದು ಸಾಧನವೆನಿಸ- ಬಹುದಾದರೂ ಒಂದೇ ಒಂದು ಸಾಧನವೇನೂ ಅಲ್ಲ.

ಕವಿಸಾಧಕರೆಲ್ಲರೂ ಕಳವಳಿಸಿ ಕೆಟ್ಟರು.
ವಿದ್ಯಾ ಸಾಧಕರೆಲ್ಲರೂ ಬುದ್ಧಿಹೀನರಾದರು.
ಪವನಸಾಧಕರೆಲ್ಲರೂ ಹದ್ದುಕಾಗಿಗಳಾದರು.
ಜಲಸಾಧಕರೆಲ್ಲರೂ ಕಪ್ಪೆ ಮೀನುಗಳಾದರು.
ಅನ್ನಸಾಧಕರೆಲ್ಲರೂ ಭೂತಪ್ರಾಣಿಗಳಾದರು.
ಬಸವಣ್ಣ ಸದ್ಗುರುಸಾಧಕರಾಗಿ ಸ್ವಯಂಲಿಂಗವಾದ
ಕಾಣಾ ಗುಹೇಶ್ವರಾ.

ಕೀರ್ತಿಕರವಾದ ಕವಿಕಾರ್ಯವಾಗಲಿ, ವಿಜಯಸಾಧಕವಾದ ಪಂಡಿತನ ಪರಿಶ್ರಮವಾಗಲಿ, ಪರಿವೂರ್ಣದೆಶೆಯತ್ತ ಕರೆದೊಯ್ಯುವದಕ್ಕೆ ಸಮರ್ಥವಾಗಲಿಲ್ಲ. ಪವನಸಾಧಕರೂ ಜಲಸಾಧಕರೂ, ಅನ್ನಸಾಥಕರೂ ನಡೆಸುವ
ಘೋರಪರಿಶ್ರಮವು ಹಾವಾಡಿಗನು ನಿರ್ಮಿಸಿದ ಮಾವಿನಮರದಂತೆ ಅಸಾರ್ಥಕವಾಗುತ್ತದೆ. ಸದ್ಗುರುಸಾಧಕನಾಗಿ  ಸ್ವಯಲಿಂಗವಾಗುವುದೇ ಪರಮಾದರ್ಶವೆಂದೂ ಅದನ್ನು ಸಾಧಿಸುವದಕ್ಕೆ ಯೋಗ್ಯಪರಿಶ್ರಮಪಡುವುದೇ ಸಾರ್ಥಕ
ಜೀವನವೆಂದೂ, ಆ ದಾರಿಯಲ್ಲಿ ಹೆಚ್ಚು ನಡೆಯಲಿ ಕಡಿಮೆ ನಡೆಯಲಿ ಅದೇ ನಿಜವಾದ  ಪ್ರಗತಿಯೆಂದು ತಿಳಿದಂತಾಯಿತು.

ಅಂದಮೇಲೆ ತಡವೇಕೆ?
ಎಂತಕ್ಕೆ, ಎತಂಕ್ಕೆ?
ಹಡೆದ ಕಾಯ ಬೀಯವಾಗದ ಮುನ್ನ, ಅಟ್ಟುಣ್ಣುವೋ.
ಬೆರಣಿಯುಳ್ಳಲ್ಲಿ ಹೊತ್ತುಹೋಗದ ಮುನ್ನ ಅಟ್ಟುಣ್ಣುವೋ.
ಮರಳಿ ಭವಕ್ಕೆ ಬಹೆ, ಬಾರದಿಹೆ;
ಕರ್ತೃ ಕೂಡಲಸಂಗಂಗೆ ಶರಣೆನ್ನವೋ.

ಈ ಪ್ರಗತಿಯು ಸತ್ತಬಳಿಕ ಸಿಗುವ ಜೀವವಿಮೆಯ ದ್ರವ್ಯವಲ್ಲ. ದುಡಿಯ ದಿದ್ದರೂ ಉಡಿಯಲ್ಲಿ ಬೀಳುವ ಧರ್ಮಾರ್ಥ ಭಿಕ್ಷೆಯಲ್ಲ. ಪ್ರಗತಿಯೆಂದರೆ ಸಾವಿನ ಕಡೆಗೆ ಹೊರಟ ಬಾಳನ್ನು ಅಮರತೆಯ ಕಡೆಗೆ ಕರೆದೊಯ್ಯುವ ಕೈಕೋಲು. ಪ್ರಗತಿಯೆಂದರೆ, ನೋವಿನ ನೆನಹುಗಳನ್ನು ಆನಂದದಿಂದ ಲಹರಿ ಗಳನ್ನಾಗಿಸುವ ಅಕ್ಕರೆಯ ಸಂಗೀತ. ಅದು ಸಾವಿಲ್ಲದ ಕೇಡಿಲ್ಲದ ಗಂಡ ನೊಡನೆ ಸ೦ಧಿಸುವ ಮದುವೆ. ಮುಗಿತಾಯದ ಸಂಸಾರವನ್ನು ಮುಗಿಯುವ ಮುನ್ನವೇ ಮುಗಿಯಿಲ್ಲದ ಸಂಸಾರದಲ್ಲಿ ತಂದು ನಿಲ್ಲಿಸುನ ಹದವೇ ಪ್ರಗತಿಯೆನಿಸುತ್ತದೆ. ಪ್ರಗತಿಯೇ ನಿಜವಾದ ಗತಿ-ಸುಗತಿ.”

ಜಗದೀಶ್ವರಿಯಾದ ಪಾರ್ವತೀಮಾತೆಯು ತನ್ನ ಅತುಲನೀಯನಾದ ಒಂದು ಮಾತಿನಿಂದ ಈ ನಿಷಯವನ್ನು ಮುಕ್ತಾಯಗೊಳಿಸಿದ್ದು ಹೇಗೆಂದರೆ-
“ಮಾನವ ಜೀವನದಲ್ಲಿ ನಿಲ್ಲಿಸಿ, ದೇವಜೀವನದ ಕಡೆಗೆ ಕೈಮಾಡಿ ತೋರಿಸುವದೇ ಫ್ರಗತಿ. ಪ್ರಗತಿಗೆ ಬಡತನ-ಸಿರಿವಂತಿಕೆಗಳಿರುವದಿಲ್ಲ. ಅದು ವೈಭವದ ಶಿಶು. ಸೌಂದರ್ಯದ ಹಸುಳೆ. ಅದನ್ನು ಪಡೆಯಬೇಕೆಂದೇ ಜೀವರು ಜೀವನವನ್ನು ಪಡೆದಿದ್ಧಾರೆ. ಈಸಿ ಗೆಲ್ಲುವ ಬಂಟನಿಗೇ ಪ್ರಗತಿ ಸಾಧ್ಯ. ಹೋರಿಗೆಲ್ಲುವ ಯೋಧನಿಗೇ ಪ್ರಗತಿಸಾಧ್ಯ. ಅವನು ಉನ್ನತಿಯ ಮಾರ್ಗದಲ್ಲಿ ಒಂದೊಂದು ಅಡಿಯನ್ನೂ ಗೆಲ್ಲನಿಂತ ಅಜೇಯನು. ಗೆಲ್ಲದೆ ಒಂದಡಿಯೂ ತನ್ನದಲ್ಲವೆಂದು ಪ್ರಗತಿಪಥದ ಪಯಣಿಗನ ಹೂಣಿಕೆಯಿರಬೇಕಾಗಿದೆ.”

***

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)