ಅವಳಿಗೆ ಬೇರೆ ಕೆಲಸವಿರಲಿಲ್ಲ. ತನ್ನ ಗೆಳತಿಯರ ಗಂಡಂದಿರನ್ನು ಗಡಸು, ಕುಡುಕ, ಮೋಸಗಾರ, ನಿರ್‍ದಯಿ, ಕಪಟಿ ಎಂದು ಹೇಳಿ ಲೇಬಲ್ ಹಚ್ಚುತ್ತಿದ್ದಳು. ಅವಳ ಗಂಡನ ಬಗ್ಗೆ ಯಾರಾದರು ಟಿಕೀಸಿದರೆ ಒಡನೆ “ನನ್ನ ಗಂಡ ಹೇಗಿದ್ದರೇನು? ನೀವು ಏನು ಹೇಳಬೇಡಿ” ಎಂದು ಗಂಡನನ್ನು ಪುಷ್ಟೀಕರಿಸುತಿದ್ದಳು. ಮನೆಗೆ ಬಂದ ಮೇಲೆ ಅವಳ ರಾಗ ಬೇರೆಯಾಗುತಿತ್ತು. “ಬೇರೆಯವರ ಗಂಡಂದಿರು ಚಿನ್ನದಂತವರು. ನಿಮ್ಮ ಹಾಗೆ ಅಲ್ಲ” ಎನ್ನುತ್ತಿದ್ದಳು. ಗೆಳತಿಯರು ಇವಳು ಏಕೆ ಹೀಗೆ? ಎಂದಾಗ- ಅವಳು ಹಾಗೆ, “ಅದು ಅವಳ ಜೀವನ ಶೈಲಿ.”
*****