ಉದ್ದಕ್ಕ ಅಗಲಕ್ಕ ಲಕಲಕ್ಕ ಚೊಕಚೊಕ್ಕ

ಉದ್ದ ಅಗಲಕ್ಕ ಲಕಲಕ್ಕ ಚೊಕಚೊಕ್ಕ
ನಿನಕಂಡು ಆಗ್ಯಾರೆ ಹುಂಚಿಪಕ್ಕ
ಪಾತರಗಿ ಪಕ್ಕಕ್ಕ ಲಕ್ಕಕ್ಕ ಲಡಿಯಕ್ಕ
ಚಕಚಕ್ಕ ತೂಯ್ಯಾರೆ ರೊಕ್ಕಪಕ್ಕ ||೧||

ನಿನ ಸೆರಗು ಗಗನಕ್ಕ ನಿನ ತುರುಬು ಸಾಗರಕ
ನೀಬಂದಿ ಓಗರಕ ನಗಿಮಾರೆ
ಕಣ್ಣಾಗ ಕಂಡೋರು ಕಣ್ಣಾಗ ಸತ್ತಾರೆ
ನೀಬಂದು ಮುತ್ತಿಟ್ಟಿ ಸುವನಾರೆ ||೨||

ನಿನಕಂಡು ಕುಣಿಯಲ್ಲಿ ನವಿಲಾಗಿ ಎದ್ದಾವೆ
ಹೆಣವೆಲ್ಲ ಹೂಹಣ್ಣು ತೂರ್‍ಯಾವೆ
ಬಾಬಾರೆ ಅಂಗಣಕ ತಾತಾರೆ ರಂಗಣಕ
ಕಲ್ಲಾಗ ಕಾರಂಜಿ ಹಾರ್‍ಯಾವೆ ||೩||

ಹಿತ್ತಲದ ಕಸಬರಗಿ ಕುತನೀಯ ಗಾದ್ಯಾತ
ರತುನದ ಸರವಾತ ಕಾಕುಳ್ಳಾ
ಬಿಡುಬಿಟ್ಟ ಬೀಕಲಾ ಪರದೇಶಿ ಕೋಕಿಲಾ
ಹಾಕೀತ ಹೊಸಸಿಳ್ಳಾ ನಿನಕಂಡಾ ||೪||

ಹೆಂಥ ಸುಂದರಿ ಹೆಣ್ಣಾ ಥಂಡ್ಥಂಡಿ ಈ ಕಣ್ಣಾ
ಮುತ್ತಾಗಿ ನೆತಾರಾ ಹೆಣದಾಳೆ
ಅತ್ತಾರು ಅರವತ್ತು ಉತ್ತಮರು ಸತ್ತಾರೆ
ಸುತ್ತೇಳು ಕೋಟಿಯ ಆಳ್ಯಾಳೆ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ ಶೈಲಿ
Next post ಟ್ಯೂಷನ್

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…