Home / Simpi Linganna. article

Browsing Tag: Simpi Linganna. article

ಜೀವಜಂಗುಳಿಯು ಇಷ್ಟು ಹೊತ್ತಿನವರೆಗೆ ಎಲ್ಲವನ್ನೂ ಕೇಳಿಕೊಂಡು, ಸೈವೆರದಾಗಿ ಸಂಗಮಶರಣನನ್ನು, ಮಹಾಜನನಿಯನ್ನೂ ಕಣ್ತುಂಬ ಮನ ತುಂಬ ನೋಡಿ ನೋಡಿ, ” ಧನ್ಯ! ಧನ್ಯ!! ” ಎಂದು ಉದ್ಗರಿಸಿತು. ತಾನು ಕೇಳಿದ ವಿಚಾರಗಳಲ್ಲಿ ಒಂದೊ೦ದನ್ನು ನೆನೆ...

“ಸಾಮಾನ್ಯ ಜೀವನವನ್ನು ಸಾಗಿಸುವದಕ್ಕೇ ಜೀವಿಗಳೆಲ್ಲರೂ ಭಾರ ತಾಳಲಾರದೆ ಬಾಗಿ, ಬಸವಳಿದು ಏದುತ್ತಿರುವಾಗ ನಿಚ್ಚಶಿವರಾತ್ರಿಯಂಥ ಉಚ್ಚ ಜೀವನಕ್ಕೆ ಕೈಯೊಡ್ಡುವದು ಎಲ್ಲರಿಗೂ  ಸಾಧ್ಯವೇ? ಅದು ಸಾಮಾನ್ಯರ ತುತ್ತಲ್ಲ. ಅದನ್ನು ಸಾಮಾನ್ಯರು ಆಶಿಸುವ...

“ಜಗಜ್ಜನನಿಯು, ಭಕ್ತಿಯ ಪರಮಾವಸ್ಥೆಯನ್ನು ಪಡೆದು ಮಾನವನು ಪರಮಾತ್ಮನ ದಿವ್ಯೋಪಕರಣವಾಗಿ ಬಿಡುವ ಅಂತಿಮ ಸ್ಥಿತಿಯನ್ನು ತಿಳಿಸಿದರು. ಆ ವಿಷಯವು ಅತ್ಯಂತ ಆಕರ್ಷಕವೂ ಕುತೂಹಲಜನಕವೂ ಆಗಿರುವದರಿಂದ ಅದನ್ನು ಸಾದ್ಯಂತವಾಗಿ ತಿಳಕೊಳ್ಳುವ ಬಯಕೆಯುಂಟ...

ನಿತ್ಯಜೀವನದ ಸಾಮಾನ್ಯಸಾಗಾಟದ ಬೇಸರಿಕೆಯನ್ನು ಕಳೆಯುವದಕ್ಕೆ ಆಗಾಗ ಹಬ್ಬ-ಹುಣ್ಣಿವೆಗಳೂ, ಉತ್ಸವಾಮೋದಗಳೂ ಬರುತ್ತಿರುತ್ತವೆ. ಆದರೆ ನಿಜವಾಗಿಯೂ ಅವುಗಳಿಂದ ಬೇಸರ ಕಳೆಯವದೆಂದು ನಮಗೆ ತೋರುವದಿಲ್ಲ. ಹಬ್ಬದ ಉಬ್ಬು ಎಲ್ಲರಿಗೂ ಬರಲಾರದು. ಸಾಮಾನ್ಯರಿಗೆ...

” ಮಾನವೇಚ್ಛೆಯನ್ನು ಹೋಗಲಾಡಿಸಿ ಪರಮೇಚ್ಛೆಯನ್ನು ಅನುಸರಿಸುವದೆಂದರೇನು ? ಅದನ್ನು ಸಾಧಿಸುವ ಬಗೆ ಯಾವುದು? ಪರಮೇಚ್ಛೆಯನ್ನು ಅನುಸರಿಸುವಾಗ ಉಂಟಾಗುವ ಎಡರುಗಳು ಯಾವವು? ಆ ಎಡರುಗಳನ್ನು ತೊಡೆದುಹಾಕಿದರೆ ಆಗುವ ಸುಗಮದಾರಿಯ ಲಕ್ಷಣಗಳೇನು ?- ಈ...

” ಜಗತ್ತಿನ ಜೀವನದಲ್ಲಿ  ನುಗ್ಗಾಟ-ಜಗ್ಗಾಟಗಳು ಅನಿವಾರ್ಯವಾಗಿವೆಯೆಂದೂ, ತೂರಾಟ-ಹೋರಾಟಗಳು ತಪ್ಪಲಾರವೆಂದೂ  ತಿಳಿಯಿತು. ಮೇಲಾಟವಿಲ್ಲದೆ  ಜೀವ ಉಳಿಸಿಕೊಳ್ಳುವದೇ ಕಠಿಣವೆಂದೂ  ಮನವರಿಕೆಯಾಯಿತು. ಮಥನವಿಲ್ಲದೆ ಯಾವ  ನಿಷ್ಟತ್ತಿಯೂ  ಸಾಧ್ಯವಿ...

” ಮನುಷ್ಯನು ಹುಟ್ಟಬಂದ ಬಳಿಕ ತನ್ನ ಪ್ರವೃತ್ತಿಗನುಸಾರನಾಗಿ ವಿದ್ಯಾಭ್ಯಾಸ ಮಾಡುವನು. ಒಲವಿನ ಉದ್ಯೋಗ ಕೈಕೊಳ್ಳುವನು. ಆತನು ಶಿಲ್ಪಿಯಾಗಬಲ್ಲನು; ಕವಿಯಾಗಬಲ್ಲನು; ವ್ಯಾಪಾರಿಯಾಗಬಲ್ಲನು; ಸಾರ್ವಜನಿಕ ಜೀವನವನ್ನು ನಡೆಯಿಸಬಲ್ಲನು. ಆದರ ಅದರಲ...

“ಹೆಣ್ಣು ಹೊನ್ನು ಮಣ್ಣುಗಳ ಬಗ್ಗೆ ಬಹಳ ಎಚ್ಚರಿಕೆಯೆಂದು ಹಿರಿಯರು ಹೇಳಿದ್ದು ಕಂಡುಬರುತ್ತದೆ. ಆದರೆ ಆ ಮೂರರಲ್ಲಿ ಹೆಣ್ಣು ಮಾಯೆಯೆಂದು ಬಹುಶಃ ಗಂಡಿಗೆ ಹೇಳಿದಂತಿದೆ. ಆದರೆ  ಗಂಡಿನ ಬಗ್ಗೆ ಅಂಥ, ಎಚ್ಚರಿಕೆಯೇನೂ ಬೇಡವೆ? ಆದಕಾರಣ ಗಂಡು-ಹೆಣ...

“ಬಾಳಿನುದ್ದಕ್ಕೂ ಅನಿಷ್ಟ, ಕುತ್ತು, ಸಂಕಟ, ಎಡರು, ಅಡೆ-ತಡೆ ಇವುಗಳೊಡನೆ ಒಂದೇಸಮನೇ ಹೋರಾಟ ನಡೆದಿರುತ್ತದೆ. ಅನಿಷ್ಟವಿಲ್ಲದ ಒಂದೇ ಒಂದು ಗಳಿಗೆ ಬೇಡ, ಕ್ಷಣ ಇಲ್ಲವೆ ಒಂದು ನಿಮಿಷವಾದರೂ ದೊರೆತೀತೇ ಎನ್ನುವುದು ಸಹ ಸಂಶಯಾಸ್ಪದವೇ ಆಗಿದೆ. ಆ...

“ಜೀವನದಲ್ಲಿ ಮಾಡುವ ಕೆ೮ಸಕ್ಕೆ ಗೆಲವುಂಟಾಗಬೇಕೆಂದೂ, ನಾಳೆಯಾದರೂ ಸುಖಸೌಲಭ್ಯಗಳುಂಟಾಗಬೇಕೆಂದೂ ಅಪೇಕ್ಷೆಯಿಂದ ಭವಿಷ್ಯವನ್ನರಿಯದ ಕುತೂಹಲವುಂಟಾಗುತ್ತದೆ. ಹಿಡಿದ ಕೆಲಸವು ಯಶಸ್ವಿಯಾಗುವಂತೆ, ಜ್ಯೋತಿಷ್ಯ ಕೇಳುವದೂ ಶಕುನ ನೋಡುವದೂ ಅವಕ್ಯವೆನಿ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...