ಶಕುನ-ಭವಿಷ್ಯ

“ಜೀವನದಲ್ಲಿ ಮಾಡುವ ಕೆ೮ಸಕ್ಕೆ ಗೆಲವುಂಟಾಗಬೇಕೆಂದೂ, ನಾಳೆಯಾದರೂ ಸುಖಸೌಲಭ್ಯಗಳುಂಟಾಗಬೇಕೆಂದೂ ಅಪೇಕ್ಷೆಯಿಂದ ಭವಿಷ್ಯವನ್ನರಿಯದ ಕುತೂಹಲವುಂಟಾಗುತ್ತದೆ. ಹಿಡಿದ ಕೆಲಸವು ಯಶಸ್ವಿಯಾಗುವಂತೆ, ಜ್ಯೋತಿಷ್ಯ ಕೇಳುವದೂ ಶಕುನ ನೋಡುವದೂ ಅವಕ್ಯವೆನಿಸುತ್ತದೆ. ದೇವರಿಗೆ ಪೂಜೆಕಟ್ಟುವದೂ ಅಂಥದೊಂದು ದಾರಿ. ಆ ದಾರಿಯಲ್ಲಿ ಶಕುನ ಭವಿಷ್ಯಗಳ ಮೇಲೆ ಅದೆಷ್ಟು ನಂಬಿಗೆಯಿಟ್ಟು ಸಾಗಬೇಕೆಂಬದನ್ನು ಕೇಳಿಕೊಳ್ಳಲು ಅಪೇಕ್ಷಿಸುತ್ತೇವೆ. ಅದು ಶುಭದಾಯಕವಾಗುವ ರೀತಿಯನ್ನು ಹೇಳಿಕೊಡಬೇಕು” ಎಂಬ ಬಿನ್ನಹದ ಮೇರೆಗೆ ಸಂಗಮ-ಶರಣನು ಉತ್ತರಿಸಿದ್ದು  ಹೇಗೆಂಬುದನ್ನು ಕೇಳಿರಿ.

-“ಮನುಷ್ಯನ ತಿಳುವಳಿಕೆಯ ಅಂಗಗಳಾಗಿ ಸ್ಮರಣೆ, ತರ್ಕ, ವಿಚಾರ ಈ ಮೂರು ಮೊಳಕೆಯ ರೂಪದಲ್ಲಿರುತ್ತವೆ. ಭೂತಕಾಲದ ತಿಳವಿಗೆ ಸ್ಮರಣೆ ಸಾಧನವಾಗಿದ್ಧರೆ ವರ್ತಮಾನಕಾಲದ ತಿಳವಿಗೆ ವಿಚಾರವು ಸಾಧನವಾಗಿರುತ್ತದೆ. ತರ್ಕವು ಭವಿಷ್ಯದ ತೆರೆಯನ್ನು ಹೇಗೋ ಎತ್ತಿನೋಡಲು ಹವಣಿಸುತ್ತದೆ. ಭವಿಷ್ಯವನ್ನರಿಯುವದಕ್ಕೆ ತರ್ಕವು ಸಾಧನವಾಗಿದ್ಧರೂ ಸರಿಯಾದ ಸಂಗತಿಯನ್ನು ತಂದೊದಗಿಸುವದು ಅದಕ್ಕೆ ಕಠಿಣವಾಗುತ್ತದೆ. ನಿರಾಧಾರವಾಗಿ
ನಿಂತ ಆ ತರ್ಕವು ತಾನು ಆಧರಿಸುವದಕ್ಕೆ ಕೈಗೆ ಸಿಕ್ಕಿದ್ದನ್ನು ತೆಕ್ಕೆಹೊಡೆಯಲು ಪ್ರಯತ್ನಿಸುತ್ತದೆ.

ಭವಿಷ್ಯದ ಬಗ್ಗೆ, ಯಶಸ್ಸಿನ ಬಗ್ಗೆ ಯಾರನ್ನು ಕೇಳಿದರೂ ಏನಾದರೊಂದು ಉತ್ತರ ಸಿಗಬಲ್ಲದು. ಆದರೆ ಆ ಉತ್ತರವು ಸರಿಯಾದುದೋ ಅಲ್ಲವೋ ನಿಶ್ಚಯವಾಗಿ ಹೇಳಲಿಕ್ಕಾಗುವದಿಲ್ಲ. ಮಕ್ಕಳಿಗೆ ಕೇಳಬಹುದು; ಮರಗಳಿಗೆ ಕೇಳಬಹುದು; ಹಕ್ಕಿಗೆ ಕೇಳಬಹುದು; ಕಲ್ಲಿಗೆ ಕೇಳಬಹುದು. ಹಾಗೆ ಕೇಳುಪ ರೂಢಿ ಮಾಡಿದ್ದರಿಂದ ಶಕುನ, ಭವಿಷ್ಯ, ದೇವರು, ಹೊತ್ತಿಗೆ ಎನ್ನುವ ಅನೇಕ ಸಂಗತಿಗಳು ಸಾಧನವಾಗಿ ಕುಳಿತಿವೆ.

ಶಕುನ ಭವಿಷ್ಯಗಳು ನಿಶ್ಚಿತ ತಿಳುವಳಿಕೆ ಮಾಡಿಕೊಡುವದಕ್ಕೆ ಸಮರ್ಥವಾಗಿಲ್ಲ. ಹಲವು ಸಾರೆ ಅವುಗಳಿಂದ ನಿಶ್ಚಿತ ತಿಳುವಳಿಕೆ ಕಂಡುಬಂದರೂ ಅದು ಆಕಸ್ಮಿಕ ಘಟನೆಯಂತೆಯೇ ಇರುತ್ತದೆ. ಅಶಕ್ಯತೆ-ಅಪಯಶಸ್ಸು ಸೂಚಿಸುವ
ಶಕುನ ಭವಿಷ್ಯಗಳಿಂದ ಮನುಷ್ಯನು ಸೋಲುವ ಮೊದಲೇ ಕೈ-ಕಾಲು ಕಳಕೊಂಡು, ಕಾರ್ಯಕ್ಕೆ ಕೈಹಾಕುವವನ್ನೇ ಕೈಬಿಟ್ಟುಕೊಡುವ ಸಂಭವವಿರುತ್ತದೆ. ಕೈ-ಹಾಕಿದರೂ ಅಶಕ್ಯತೆ-ಅಪಯಶಸ್ಬಿನ ಭವಿಷ್ಯವನ್ನು ತಲೆಯಲ್ಲಿಟ್ಟುಕೊಂ
ಡಿದ್ಧರಿಂದ ಮಾಡುವ ಕೆಲಸದಲ್ಲಿ ಶ್ರದ್ಧೆಯಾಗಲಿ, ಉಲ್ಲಾಸವಾಗಲಿ ಅಷ್ಟೊಂದು ಕಾಣಿಸಿಕೊಳ್ಳುವದಿಲ್ಲ. ಅದರಿಂದ ಕಾರ್ಯದ ಮುಗಿತಾಯವಷ್ಟೇ ಅಪಯಶಸ್ಸಿಗೀಡಾಗಿ ಬಿಡದೆ ಆರಂಭದಿಂದ ಇಡಿಯ ಕೆ೮ಸವು ಅಯಶಸ್ವಿಯಾಗಿಯೇ ಸಾಗುತ್ತಿರುತ್ತದೆ.

ಯಾವ ಕೆಲಸವನ್ನೇ ಮಾಡಿದರೂ ಅದನ್ನು ಒಳ್ಳೆಯರೀತಿಯಲ್ಲಿ ಆರಂಭಿಸಿದರೆ, ಬಹುಶಃ ಯಶಸ್ಸು ಕಟ್ಟಿರುತ್ತದೆ. ಮಾಡಿಮುಗಿಸುವ ದೃಢನಿಶ್ವಯದಲ್ಲಿಯೇ ಕಾರ್ಯಸಫಲತೆಯು ಅಡಗಿರುತ್ತದೆ.

ಸಾಮಾನ್ಯಜೀವನವು ರೋಗಿಯಂತೆ. ಭಕ್ತನು ಆರೋಗ್ಯನಿಯಮಗಳನ್ನು ಸರಿಯಾಗಿ ಪಾಲಿಸುವವನಂತೆ. ರೋಗಿಯಾದ ಬಳಿಕ ಎಂಥವನೇ ಇದ್ಧರೂ ವೈದ್ಯನ ಸಲಹೆಯಂತೆ ನಡಕೊಳ್ಳುವದು ಅವನಿಗೆ ಕಲ್ಯಾಣಕರ. ನಿರೋಗಿಯಾದವನು ವೈದ್ಯನ ಗಸಣೆಗೆ ಸಿಲುಕದೆ ಆರೋಗ್ಯದ ಮಹಾ ನಿಯಮಗಳನ್ನು ಪಾಲಿಸುಪುದೇ ಅವನಿಗೆ ಮಂಗಲಕರ. ಅವನು ರೋಗ ಬಂದರೆ, ರೋಗನಿವಾರಣೆಯ ಉಪಾಯ ಹುಡುಕುವವಲ್ಲದೆ ಇನ್ನೇನೂ ಮಾಡುವದಿಲ್ಲ. ರೋಗಬಾರದಂತೆ ಆರೋಗ್ಯ ನಿಯಮಗಳಿಂದ ಸರಿಯಾದ ಜೀವನಕ್ರಮ ನಡೆಸುವನಲ್ಲದೆ ಬೇರೆ ಏನನ್ನೂ ಲಕ್ಷಿಸುವದಿಲ್ಲ. ರೋಗಕ್ಕೆ ದೇವರ ಕಾಟವೆಂದು ಅಪವಾದ ಹೊರಿಸುವದಿಲ್ಲ. ತನ್ನ ತಪ್ಪಿಗಾಗಿ ದೇವರನ್ನು ದೂರುವು-ದಾಗಲಿ, ತಪ್ಪುದಂಡ ಕೊಡುವುದಾಗಲಿ ಅವನಿಗೆ ಒಪ್ಪಿಗೆಯಾಗವದಿಲ್ಲ. ಪರಮಾತ್ಮನ ಕಣ್ಣರಿಕೆಯಲ್ಲಿದ್ದವನಿಗೆ ಮಾರಿಯ ಕ್ರೂರದ್ಭಷ್ಟಿಯು ಕವಳಿಸದು; ಮಸಣಿಯ ಕೋಪದೃಷ್ಟಿಯು ಕಷ್ಟಪಡಿಸದು.

ಮಾರಿ ಮಸಣಿ ಎಂಬಿವು ಬೇರಿಲ್ಲ ಕಾಣಿರೋ
ಮಾರಿ ಎಂಬುದೇನು?
ಕಂಗಳು ತಪ್ಪಿ ನೋಡಿವರೆ ಮಾರಿ.
ನಾಲಗೆ ತಪ್ಪಿ ನುಡಿದರೆ ಮಾರಿ,
ನಮ್ಮ ಕೂಡಲಸಂಗಮದೇವರ ನೆನಹು
ಮರೆದರೆ ಮಾರಿ,
ನಿಶ್ಚಲಶರಣನ ಅಂಗಳದಲ್ಲಿ ಅಷ್ಟಾಷಷ್ಟಿ ತೀರ್ಥಗಳು ನೆಲೆಸಿರುವಾಗ ಮಾರಿ-ಮಸಣಿಗಳು ಅವನ ಮನೆಗೆ ಬರುವದಕ್ಕೆ ದಾರಿಯೆಲ್ಲಿ? ತಪ್ಪಿ ತೀರ್ಥದಲ್ಲಿ ಇಳಿದರೆ, ಮಾರಿಯು ತನ್ನ ಕಾಡುವ ಗುಣಗಳನ್ನು ಯಾರಿಗೋ ಮಾರಿ ಕೊಳ್ಳಬೇಕಾಗುತ್ತದೆ. ತೀರ್ಥವನ್ನು ತಪ್ಪಿ ಬಾಗಿ ನೋಡಿದರೆ ಮಸಣಿಗೊಂದು ಮರು ಮಸಣಿಕಾಣಿಸಿತೆಂದು ಬಂದದಾರಿಯಿಂದ ಓಡಿಹೋಗಬೇಕಾಗುತ್ತದೆ. ಭಕ್ತನು ಎಚ್ಚರಿಕೆಯರಬಲ್ಲನು. ಅವನು ನಿದ್ರೆಗೈದರೆ ಜಡ, ಎಚ್ಚರಿದ್ದರೆ ಶಿವರಾತ್ರಿ. ಅಂಥ ಅಗ್ನಿದೇಹಿಯನ್ನು ಹಿಡಿಯುವ ಮಾರಿಮಸಣಿಗಳನು ಎಲ್ಲಿಂದ ತರಬೇಕು? ಅವನ ಕನಸಿನಲ್ಲಿಯೂ ಅವು ಸುಳಿಯಲಾರವು. ಮಲಗಿದವವನ್ನು ಕಂಡು, ಗಪ್ಪುಗಡದಾಗಿ ಆತನನ್ನು ಸಂಧಿಸಿ ಕನಸಿನಲ್ಲಿ ಕಾಣಿಸಿಕೊಳ್ಳಬಹು- ದಾದರೂ ಆತನನ್ನು ಕೆರಳಿಸಲಾರವು. ದೂರನಿಂತು ಅಣಗಿಸಿ ಅಡಗಿ ಹೋಗಬಲ್ಲವು. ಆದರೆ ಎಚ್ಚರಿಕೆಯ ಜೀವಿ- ಯಾದವನು ನಿದ್ರೆಯಲ್ಲಿದ್ದಂತೆ ಕಂಡರೂ ಆತನು ನಿದ್ರೆಯ ಆಚೆಗಿನ ಎಚ್ಚರಿಕೆಯಲ್ಲಿ ವಿಹರಿಸಬಲ್ಲನು. ಕನಸಿನಲ್ಲಿ ತೊಳಲುವಂತೆ ತೋರಿದರೂ ಆತನು ಎಚ್ಚರಿಕೆಯ ಮುಂಬೆಳಗಿನಲ್ಲಿ ಲಾಲಿಯಾಡಬಲ್ಲನು. ಅವನು ಕನಸುಗಳನ್ನು ಕುರಿತು ಇರಿಸಿಕೊಂಡ ಬಗೆಯೇ ಬೇರೆಯಾಗಿರುತ್ತದೆ. ಮನಸ್ಸಿನ ಮಲಿನತೆಯೀ ಕನಸಿನಲ್ಲಿ ಭೂತವಾಗಿ ಕಾಣಿಸಿ-ಕೊಳ್ಳುತ್ತದೆಂದು ನೆನಪಿನ ಕೆನೆಯೇ ಕನಸಾಗಿ ರೂಪುಗೊಳ್ಳುತ್ತದೆಂದೂ ಆವನ ಭಾವನೆ. ಮಲಿನತೆ ಕಳೆದರೆ ಭೂತವಡಗುತ್ತದೆ; ಕೆನೆ ಕರಗಿದಲ್ಲಿ ರೂಪವಡಗುತ್ತದೆ.

ಮನಸಿನ ಸಂಶಯ ಕನಸಿನ ಭೂತವಾಗಿ
ಕಾಡುವದು ನೋಡಾ.
ಮನಸಿನ ಸಂಶಯವಳಿದರೆ ಕನಸಿನ ಕಾಟ
ಬಿಟ್ಟೋಡಿತ್ತು ನೋಡಾ.
ಮಹಾಲಿಂಗ ಗುರುಶಿವಸಿದ್ದೇಶ್ವರ ಪ್ಪಭುವೇ,

ಒಳ್ಳೆಯವರು ಮಾಡುವ ಕಾರ್ಯವು ಒಳ್ಳೆಯದೇ ಇರುತ್ತದೆ. ಒಳ್ಳೆಯ ಕೆಲಸವನ್ನು ಯಾವಾಗ ಮಾಡಿದರೂ ಒಳ್ಳೆಯದೇ. ಅದರಿಂದ ಒಳ್ಳೆಯ ಪರಿಣಾಮವೇ ಆಗಬಲ್ಲದು. ಆಗಬಾರದ ಕೆಲಸ ಆಗಲೇಬೇಕೆಂದಾಗ, ಮಾಡ
ಬಾರದ ಕೆಲಸ ಮಾಡಿಯೇಮುಗಿಸುನೆನೆಂದಾಗ ದೆವ್ವ-ಭೂತಗಳ ಬೆಂಬಲವೂ ಗೃಹನಕ್ಷತ್ರಗಳ ಸುದೃಷ್ಟಿಯೂ ಬೇಕಾಗಬಹುದು. ಬಲಿದಾನ ಕೊಡಬೇಕಾದೀತು; ಶಿಶುಬಲಿ-ಸ್ತ್ರೀಬಲಿ ನೀಡಬೇಕಾದೀತು. ಆದರೆ ಒಲ್ಲೆಯ ಕೆಲಸಕ್ಕೆ
ಒಳ್ಳೆಯ ಮಹೂರ್ತವೇ ಮೇಳಯಿಸಿರುತ್ತದೆ. ಒಳ್ಳೆಯ ಕೆಲಸವು ಶುಭಕರವಾಗಿಯೇ ಆರಂಭವಾಗಿ ಶುಭಕರವಾಗಿಯೇ ಸಾಗಿರುತ್ತದೆ. ಒಳ್ಳೆಯ ಕೆಲಸವು ಒಳ್ಳೆಯ ರೀತಿಯಲ್ಲಿಯೇ ಮುಗಿಯಲಿರುತ್ತದೆ. ಒಳ್ಳೆಯ ಕೆಲಸವು ಒಂದು ವೇಳೆ ಅರ್ಧಕ್ಕೆ ನಿಂತರೂ ಆಗಿರುವಷ್ಟ್ರು ಒಳ್ಳೆಯದೇ ಇರುತ್ತದೆ. ಆಗಲಿರುವ ಒಳ್ಳೆಯ ಕೆ೮ಸಪು ಆಗುವದಕ್ಕೆ ತಡವಾಗ- ಬಾರದು. ಅದಕ್ಕೆ ನಾಳೆ ನಾಡಿದು ಎನ್ನಲಿಕ್ಯಾಗದು. ನಾಳೆಗಿಂತ ಇಂದೇ ಆರಂಭವಾಗಲೆಂದು ಹೇಳಬೇಕು

ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದೆನ್ನಿರಯ್ಯ.
ರಾಸಿ, ಕೂಟ, ಗಣ, ಸಂಬಂಧವುಂಟೆಂದು ಹೇಳಿರಯ್ಯ.
ಚಂದ್ರಬಲ, ತಾರಾಬಲ ಉಂಟೆಂದು ಹೇಳಿರಯ್ಯ.
ನಾಳಿನ ದಿನಕ್ಕೆ ಇಂದಿನ ದಿನವೇ ಲೇಸೆಂದು ಹೇಳಿರಯ್ಯ.
ಕೂಡಲಸಂಗಮದೇವರ ಪೂಜಿಸಿದ ಫಲ ನಿಮ್ಮದಯ್ಯಾ.
ಒಳ್ಳೆಯವರು ತಮ್ಮ ಕೆಲಸಕ್ಕೆ ಮಹೂರ್ತ ಕೇಳಲಿಕ್ಕೆ ಬಂದಾಗ ಸರಿಯಾದ ಮಹೂರ್ತವಿರುವದರಿಂದ ಎಲ್ಲವೂ ಸರಿಯಾಗಿ ಸಫಲವಾಗುವ ದೆಂದೂ, ನಾಳೆಗಿಂತ ಇಂದೇ ಒಳ್ಳೆಯದೆಂದೂ ಹೇಳಿಬಿಟ್ಟಿರೆ, ಕೂಡಲಸಂಗಮ ದೇವರ ಪೂಜಿಸಿದ ಫ೮ವು ಪ್ರಾಪ್ತವಾಗುತ್ತದೆ. ನಮಗೆ ತೀರ ಹತ್ತಿರದ ಮಹೂರ್ತವೆಂದರೆ ಇಂದು; ನಾಳೆ ಆಲ್ಲ. ಇಂದು ಸರಿದುಹೋದರೆ ಕೈಗೆ ಸಿಲುಕದು. ನಾಳೆಯೇ ಇಂದು ಆಗಿ ಬರುತ್ತದೆ. ಆದ್ಧರಿಂದ ನಾಳೆ-ನಾಡಿದು ಮಹೂರ್ತವಿದೆ- ಯೆಂದು ಕೈಗೆ ಬಂದಿರುವ ಇಂದು ಕಳಕೊಳ್ಳಬೇಡಿರಿ. ಮಹೂರ್ತಗೊಂಡ ನಾಳೆ ನಾಢಿದುಗಳೂ ಇಂದು ಆಗಿ ಬಂದಾಗಲೇ ಕಾರ್ಯಾರಂಭವಷ್ಟೆ? ಬರಲಿರುವ ಇಂದುಗಳಿಗಾಗಿ ಕಾಯದೆ ಬಂದು ನಿಂತಿರುವ ಇಂದಿನ ಶುಭಲಗ್ನದ ಕರುಹನ್ನು ಸ್ವಾಗತಿಸಿರಿ. ಅದು ಸುಮಹೂರ್ತದ ಕ್ಷಣ; ಮಂಗಲದ ನಿಮಿಷ. ಸಕಲಗ್ರಹದ ಬಲಗಳನ್ನೊಳಗೊಂಡು ಪ್ರಸನ್ನ ಮುದ್ರೆಯಿಂದ ಮುಂದೆ ಬಂದು: ನಿಂತ ಇಂದು ಕಳಕೊಳ್ಳಬಾರದು.

ಅಂದು ಇಂದು ಮತ್ತೊಂದು ಎನಬೇಡಿ.
ದಿನವೊಂದೇ ಶಿವಶರಣೆಂಬುವಂಗೆ.
ದಿನವೊಂದೇ ಹರಶರಣೆಂಬುವಂಗೆ.
ದಿನವೊಂದೇ ನಮ್ಮ ಕೂಡಲಸಂಗವ
ಮಾಣದೆ ನೆನೆಯುವಂಗೆ.

ಸಕಲಗ್ರಹಗಳಿಗೆ ಬಲಕೊಡುವ ಪರಮಾತ್ಮನ ಪಾದದೂಳಿಗನಾದ ಭಕ್ತನು, ಕಾಗೆಗಂಜುವದು ನಾಚೆಕೆಗೇಡು. ಬೆಕ್ಕಿಗೆ ಭಯಪಡುವದು ಅಪಹಾಸ್ಯ. ಎಡಗಣ್ಣು ಹಾರುವದಕ್ಕೆ ಸಂದೇಹಪಡುವದು ಹಾಸ್ಯಾಸ್ಪದ. ಒಂಟಿ ಸೀನಿಗೆ ಬೆಚ್ಚಿ ನಿಲ್ಲುವುದು ಹೇಡಿತನ. ಆದರಿಂದ ತನ್ನನ್ನು ತಾನು ಅಪಮಾನ ಕ್ಕೀಡು ಮಾಡುವವಲ್ಲದೆ ತಾನು ನಂಬಿದ ಸರ್ವಶಕ್ತನ ಅವಹೇಳನ ಮಾಡಿದಂತೆಯೂ ಆಗುವದು. ಹಾಗೆ ಮಾಡಿದ ಭಕ್ತನ ವ್ರತಭಂಗವಾಯಿತು; ಆಚಾರವಳಿಯಿತು. ವ್ರತಗೇಡಿಗೂ ಆಚಾರಹೀನಠಿಗೂ ಪರಮಾತ್ಮ ಸಾಮಿಪ್ಯವು ಪ್ರಾಪ್ತವಾಗಬಲ್ಲದೇ?

ಒಡೆಯರು, ಭಕ್ತರು, ತಾನೆಂದು ಅಡಿಮೆಟ್ಟಿ ಹೋದಲ್ಲಿ.
ತಡೆಯನ್ನು ಶಕುನವೆಂದುಳಿದರೆ.
ಕಾಗೆ, ವಿಹಂಗ, ಮಾರ್ಜಾಲ, ಮರವಕ್ಕಿ ಗಾರ್ದಭ, ಶೇಷ
ಶಂಕೆಗಳು ಮೊದಲಾದ ಸಂಕಲ್ಪಕ್ಕೊಳಗಾದಲ್ಲಿ
ವ್ರತಭಂಗ, ಆಚಾರಕ್ಕೆ ದೂರ.
ಆದೆಂತೆಂದೊಡೆ ಅಂಗಕ್ಕಾಚರವ ಸಂಬಂಧಿಸಿ
ಮನಕ್ಕೆ ಅರಿವು, ಅರಿವಿಂಗೆ ವ್ರತವ ಮಾಡಿದಲ್ಲಿ
ಬೇರೊಂದು ಪರಿಹರಿಸುವ ನಿಮಿತ್ತವುಂಟೇ?
ಇಂತೀ ಸತ್‌ಕ್ರಿಯಾವಂತಂಗೆ ಕಷ್ಟಜೀವನದ ಲಕ್ಷಣದಲ್ಲಿ
ಚಿತ್ತು ದೇಹನ್ನಕ್ಕ ಆತನು ಆಚಾರಭ್ರಷ್ಟ..
ಏಲೇಶ್ವರ ಲಿಂಗಕ್ಕೆ ದೂರ.

ಇಂಥ ಆಚಾರಭ್ರಷ್ಟ್ರರು ತಾವು ಭಕ್ತರೆಂದು ಹೇಳಿಕೊಂಡರೂ ಭಕ್ತರಾಗಲಾರರು. ಇಂದು ಭಕ್ತರಂತೆ ಬೋಳರಾಗಿದ್ದ- ರೇನಾಯಿತು? ನಾಳೆ ಇನ್ನೊಬ್ಬರನ್ನು ಕಂಡರೆ ಅವರಂತೆ, ಹೀಗೆ ಗೋಸುಂಬೆಯಂತೆ ಜೀವನ ನಡೆಸುವವರಿಗೆ ಕಾಗೆ, ಬೆಕ್ಕು, ಕತ್ತೆ, ಹಾವು ಕಾಡುವುದೇನು ಅರಿದೇ? ಕಲ್ಲು-ಮುಳ್ಳು ಗಳೂ ಕಾಲುಹಿಡಿಮ ಜಗ್ಗಬಹುದು. ಇಂಥವರು ಮಾರಿ- ಮಸಣಿಗಳ ಕಣ್ಣಂಜಿಕೆಗೆ ಕೈ-ಕಾಲು ಕಳಕೊಳ್ಳುವರು. ಮಾರಿಕವ್ವೆಯನ್ನು ನೋಂತು ಕೊರಳಲ್ಲಿ ಕಟ್ಟಿಕೊಳ್ಳುವ- ದಕ್ಕೂ ತಡವಿಲ್ಲ. ಸಾಲಬಟ್ಟರೆ ಮಾರಿಕೊಳ್ಳುವದಕ್ಕೂ ಹಿಂದೆ ಮುಂದೆ ನೋಡುವದಿಲ್ಲ. ಅವಸರ ಬಂದರೆ ಒತ್ತೆಯಿಟ್ಟು ಕೊಂಡುಂಬುದಕ್ಕೂ ಹೇಸುವದಿಲ್ಲ. ಇಂದು ಭಕ್ತರಂತೆ ಬೋಳಾಗಿ ನಿಲ್ಲಬಲ್ಲರು. ನಾಳೆ ಸವಣರನ್ನು ಕಂಡರೆ ಬತ್ತಲೆಯಾಗಬಲ್ಲರು. ಹಾರುವರ ಕಂಡು ಹರಿನಾಮವೆನ್ನಲಿಕ್ಕೂ ಒಲ್ಲೆನ್ನುವದಿಲ್ಲ. ಅವರವರ ಕಂಡರೆ ಅವರವರಂತೆ!

ಶಕುನಭವಿಷ್ಯಗಳನ್ನು ಆಳವಡಿಸಿಕೊಂಡು ಮನುಷ್ಯನು ಸುಳ್ಳುಸುಖಕ್ಕೆ ಮರುಳಾಗಿ ಬೆಂಬಳಿಸಿದಂತೆ, ಕೆಲವು ಸಿದ್ಧಿ- ಗಳನ್ನು ಪಡೆದು ಅದೃಷ್ಟವನ್ನು ತಿದ್ಧಿಕೊಳ್ಳುವ ದಾರಿಯಲ್ಲಿ ಹುಚ್ಚಾಪಟ್ಟೆಯಾಗಿ ಓಡುತ್ತಿರುವುದುಂಟು. ಲೋಹ ಸಿದ್ಧಿ- ಯಲ್ಲಾಗಲಿ ಕಾಯಸಿದ್ಧಿಯಲ್ಲಾಗಲಿ ಸತ್ಯಾಂಶವಿದ್ಧರೂ, ಅವುಗಳಿಗಾಗಿ ಸಿದ್ಧಿಯಲ್ಲಾಗಲಿ ಆತ್ಮಸಿದ್ಧಿಯನ್ನು ಅಲ್ಲಗಳೆ- ಯುವುದು ಒಳ್ಳೆಯದಲ್ಲ. ರಸ ಸಿದ್ಧಿ-ಆತ್ಮಸಿದ್ಧಿಗಳನ್ನು ಬದಿಗಿರಿಸಿ ಲೋಹಸಿದ್ಧಿಗಾಗಿಯೋ ಕಾಯಸಿದ್ಧಿಗಾಗಿಯೇ ಜೀವನವನ್ನು ಸನೆಸುವುದು ಅಸಾರ್ಥಕ.

ರಸವಾದಂಗಳ ಕಲಿತಲ್ಲಿ ಲೋಹಸಿದ್ಧಿಯಲ್ಲವೆ
ರಸ ಸಿದ್ಧಿಯಾದುದಿಲ್ಲ,
ನಾನಾ ಕಲ್ಪಯೋಗ ಅದೃಶ್ಯಕರಣಂಗಳ ಕಲಿತಲ್ಲಿ
ಕಾಯ ಸಿದ್ಧಿಯಲ್ಲದೆ ಆತ್ಮಸಿದ್ಧಿಯಾದುದುಂಟೇ: ?
ನಾನಾ ವಾಗ್ವಾದಂಗಳಿಂದ ಹೋರಿ ಮಾತಿಮಾಲೆ
ಆಯಿತಲ್ಲದೆ ಆತ್ಮಹಿತವಾದುದಿಲ್ಲ.
ನೀ, ನಾ ಎಂದಲ್ಲಿ ನೀನು ನಾನಾದೆಯಲ್ಲದೆ
ನಾನು ನೀನಾದುದಿಲ್ಲ.
ಗೋಪಾಲರಕ್ಷಕ ಮಹಾವ್ರಭು ಸಿದ್ವ ಸೋಮಲಿಂಗನಾಥಲಿಂಗ
ನೀ ನಾನಾದೆಯಲ್ಲದೆ
ಲೀಯವಾಗಿ ನಾ ಆ ಲಿಂಗವೇ ಆದುದಿಲ್ಲ.

ಸಿದ್ಧಿಗಳಿಗಾಗಿ ಅನೇಕ ದೇವರುಗಳನ್ನು ಕಲ್ಪಿಸಿಕೊಂಡು, ಅನೇಕ ವಿಧದ ಪೂಜೆಗಳಲ್ಲಿ ತೊಡಗುವುದು ಬೇಡ. ಅಡಿಗಡಿಗೂ ದೇವರು, ಹೆಜ್ಜೆ ಹೆಜ್ಜೆಗೂ ಪೂಜೆ. ಎಡವಿದರೆ ದೇವರು. ಮುಗ್ಗಿದರೆ ದೇವರು. ಕಣ್ಣು ತೆರೆದರೆ ದೇವರು.
ಕಣ್ಣುಮುಚ್ಚಿದರೆ ವೇವರು. ಮನುಷ್ಯ ಸಂಖ್ಯೆಯಷ್ಟೇ ದೇವಸಂಖ್ಯೆಯಾಗಿ ದ್ದರೆ ಜನಗಣನೆಯಂತೆ ದೇವಗಣನೆ ಇನ್ನೂ ಆರಂಭವಾಗಲಿಲ್ಲ.

ಅರಗು ತಿಂದು ಕರಗುವ ದೈವ, ಉರಿಯಕಂಡರೆ ಮುರುಟುವ ದೈವ ಅವಸರ ಬಂದರೆ ಮಾರುವ ದ್ಯೆವವಿದ್ಧಂತೆ, ಅಂಜಿಕೆಬಂದರೆ ಹೂಳುವ ದೈವವೂ ಉಂಟು. ಮಡಕೆ ದೈವವಾಯಿತು, ಮೊರ ದೈವವಾಯಿತು. ಬೀದಿಯ ಕಲ್ಲು
ದೈವವಾಗಿ ಬಿಡದೆ ಹಣಿಗೆ ದೈವ, ಬಿಲ್ಲಂನಾರಿ-ದೈವ, ಕೊಳಗ ದೈವ, ಗಿಣಿಲು ದೈವವಾಗಿಬಿಟ್ಟರೆ ಗತಿಯೇನು? ದೈವ ದೈವವೆಂದು ಕಾಲಿಡಲಿಂಬಿಲ್ಲ.

ಎಲ್ಲೆಲ್ಲಿಯೂ ದೈವಗಳೇ. ಹಾಳುಮೊರಡಿಗಳಲ್ಲಿ ಒಂದು ದೈವ ನೆಲೆಸಿದರೆ, ಊರ ಹಾದಿಯಲ್ಲಿ ಇನ್ನೊಂದು ದೈವ ಕಂಗೊಳಿಸಿದೆ. ಕೆರೆ ಬಾವಿ ಹೂ ಗಿಡ ಮರಗಳಲ್ಲಿ ಒಂದು ದೈವ ಕಾಣಿಸಿಕೊಂಡರೆ ಗ್ರಾಮ ಮಧ್ಯದಲ್ಲಿ, ಚೌಪಥ
ಪಟ್ಟಣಪ್ರದೇಶದಲ್ಲಿ ಬೇರೊಂದು ದೈವವು ತೋರ್ಪಡಿಸಿಕೊಳ್ಳುತ್ತದೆ. ಹಿಂಡುವ ಎಮ್ಮೆಯನ್ನು ಹಿಡಿದು ಬೇಡುವ ದೈವ ಇಲ್ಲಿದ್ಧರೆ, ಹಸುಗೂಸು ಬಾಣಂತಿಯರನ್ನು ಕಾಲುಕಟ್ಟಿ ಕೇಳುವ ದೈವ ಅಲ್ಲಿರುವದು. ಮಾರಯ್ಯ ಬೀರಯ್ಯರಾಗಿ
ಮುಗಿಯಲಿಲ್ಲ. ಬೇಚರಗಾವಿಲಿಯಾಗಿ ತೀರಲಿಲ್ಲ. ಅಂತರಬೆಂತರವಾಗಿ ಸಾಕಾಗದೆ, ಕಾಳಯ್ಯ ಮಾಳಯ್ಯರಾಗಿ ತಲೆಯೆತ್ತಿಬಿಡದೆ, ಕೇತಯ್ಯ ಧೂಳಯ್ಯಗಳಾಗಿ ಮೈದೋರಿ ನಿಂತಿದ್ದಾರೆ. ಇವೆಲ್ಲ ದೈವಗಳು ನೂರುಮಡಿಕೆಗಳಾದರೆ
ಕೂಡಲಸಂಗನುದೇವರಿಗೆ ಶರಣೆನ್ನುವುದು ಒಂದು ಟೊಣ್ಣೆ! ಸಾಲದೇ?

ಲಗ್ನವೆಲ್ಲಿಯದೋ ವಿಘ್ನವೆಲ್ಲಿಯದೋ ಸಂಗಯ್ಯ ?
ದೋಷವೆಲ್ಲಿಯದೋ ದುರಿತವೆಲ್ಲಿಯದೋ ಸಂಗಯ್ಯ?
ನಿಮ್ಮ ಮಾಣದೆ ನೆನೆವಂಗೆ ಭವಕರ್ಮವೆಲ್ಲಿಯದೋ
ಕೂಡಲಸಂಗಮದೇವಯ್ಯ.

ಗ್ರಹ-ನಕ್ಷತ್ರ ನಿಜವಿಲ್ಲದಿಲ್ಲ; ತಿಥಿ-ವಾರಗಳಲ್ಲಿ ಸತ್ಯಾಂಶವಿನಿಲ್ಲದಿಲ್ಲ. ಮಹಾಸತ್ಯದ ಮುಂದೆ ಸತ್ಯಾಂಶಕ್ಕೆ ಮಹತ್ವ ಕೊಡಲಾಗದು. ತಂತಮ್ಮ ಮಕ್ಕಳ ಮದುವೆಗೆ ಶಕುನ ನೋಡಹೊರಟಾಗ ಹಾವಾಡಿಗನಿಗೆ ಮೂಕೊರಿತೆ, ಮೂಕೊರಿತೆಗೆ ಹಾವಾಡಿಗ ಸಂಧಿಸುವಂತೆ ಜಗತ್ತಿನ ತುಂಬ ಎಲ್ಲಿ ನೋಡಿದಲ್ಲಿ ಒಂದು ದೃಷ್ಟಿಯಿಂದ ಅಮಂಗಲವೇ; ಅಶುಭವೇ. ಅಹುದು. ಶುಭವೆಂಬುದೇ ಇಲ್ಲ. ಆಶುಭವೇ ಎಲೆಲ್ಲಿಯೂ ತಾಂಡವವಾಡುತ್ತಿವೆ. ಅದು ಆರ ಪಾಲಿಗೆ?
ಶಿವನನ್ನು ನಂಬಲಾರದವರಿಗೆ; ಶಿವನ ಪಾದಗಳನ್ನು ಹಿಡಿಯಲಾರದವರಿಗೆ. ಅಂಥ ಅಶುಭದ ಕಾರ್ಗತ್ತಲೆಯಿಂದಲೇ ಒಂದು ಕಿಡಿಯಂಥ ಶುಭಮುಹೂರ್ತವನ್ನು ಹುಡುಕಿ ತೆಗೆಯಬೇಕಾಗಿದೆ.

ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ ಗ್ರಹಣ.
ಸಂಕ್ರಾಂತಿಯಿಂದ ವೆಗ್ಗಳ ಏಕಾದಶಿ.
ವ್ಯತೀಪಾತದಿಂದ ವೆಗ್ಗಳ ಸೂಕ್ಷ್ಮ.
ಶಿವಪಥವನರಿದಂಗೆ, ಹೋಮ ನೇಮ
ಜಪತಪದಿಂದ ವೆಗ್ಗಳ.
ಕೂಡಲಸಂಗಮದೇವ ನಿಮ್ಮ ಮಾಣದೆ ನೆನೆವಂಗೆ.”

ಕೊನೆಯಲ್ಲಿ ಜಗದೀಶ್ವರಿಮಾತೆಯು,ಯಾವ ಭರತವಾಕ್ಯದಿಂದ ಮಾತು ಮುಕ್ತಾಯಗೊಳಿಸಿದರೆಂದರೆ-

” ಸಾಮಾನ್ಯಜೀವಿಗಳು ಈ ಸೂರ್ಯಮಂಡಲದ ಆಳಿಕೆಗೆ ಒಳಪಟ್ಟಿದ್ದಾರೆ. ಆದರೆ ಭಕ್ತರಾಗಲಿ, ನನ್ನ ನಂಬಿದ ಅಕ್ಕರೆಯ ಮಕ್ಕಳಾಗಲಿ ಈ ಸೂರ್ಯಮಂಡಲದ ನಿಯಮ-ಕಟ್ಟಳೆಗಳನ್ನು ಮೀರಿದ ಜೀವನ ಸಾಗಿಸಲು
ನಿಂತಿರುವದರಿಂದ, ಅವರಿಗೆ ಬೃಹದ್ ‍ಭಾನುವಿನ ಮಹಾಮಂಡಲದ ನಿಯಮ ಕಟ್ಟಳೆಗಳು ಹೊಂದಿಕೆಯಾಗುವವು. ಆದ್ದರಿಂದ ನನ್ನ ಮಕ್ಕಳಿಗೆ ಗ್ರಹ ಜ್ಯೋತಿಷ್ಯಗಳ ಅಗತ್ಯವಿಲ್ಲ. ಶಕುನಕೂಟಗಳ ಕಾರಣವಿಲ್ಲ. ಎಲ್ಲವೂ ಯಾವಾಗಲೂ ಶುಭವೇವೇ. ಎಂದೆಂದೂ ಮಂಗಲವೇ. ನನ್ನನ್ನು ನೆನಪಿನಲ್ಲಿ ಇರಿಸಿಕೊಂಡರೆ ಸಕಲಗ್ರಹಬಲಗಳೆಲ್ಲ ಆತನ ಬೆನ್ನಿಗೆ ”

ಜನಜಂಗುಳಿಯು ಒಕ್ಕೊರಲಿನಿಂದ “ಜಗನ್ಮಾತೆಗೆ ಜಯವಾಗಲಿ” ಎಂದು ಮುಗಿಲು ಮರುದನಿ ಕೊಡುವಂತೆ, ಅತ್ಯಂತ ಆವೇಶದಿಂದ ಉಗ್ಗಡಿಸಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೊಟ್ಟು ಕಳಚಿತು.
Next post ನಗೆ ಡಂಗುರ-೧೫೬

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

cheap jordans|wholesale air max|wholesale jordans|wholesale jewelry|wholesale jerseys