ಜೈವಿಕ ತಂತ್ರಜ್ಞಾನದ ಮೈಲುಗಲ್ಲುಗಳು

ಜೈವಿಕ ತಂತ್ರಜ್ಞಾನದ ಮೈಲುಗಲ್ಲುಗಳು

ಪ್ರತಿಸೃಷ್ಟಿಯು ಇದುವರೆಗೂ ಅಸಾಧ್ಯವಾಗಿತ್ತು. ಇಂದು ಜೀವ ವಿಜ್ಞಾನದಲ್ಲಿ ನಿರಂತರ ಸಂಶೋಧನೆಗಳು ನಡೆದು ವಿಸ್ಮಯಕರ ಫಲಿತಾಂಶವನ್ನು ದೃಧೀಕರಿಸಿವೆ. ಹಿಂದೆ ನಾವು ಮಾಯಾ, ಮಂತ್ರ, ಮಾಟಗಳಿಂದ ಪ್ರತಿಸೃಷ್ಟಿಸುವ ಕಾದಂಬರಿಗಳನ್ನು ಓದಿದ್ದೇವೆ. ಅದೆಲ್ಲವೂ ಕಾಲ್ಪನಿಕವಾಗಿತ್ತು. ಅದರಿಂದ ಜೈವಿಕ ತಂತ್ರಜ್ಞಾನವು ಪ್ರತಿ ಸೃಷ್ಟಿಯಾಗುತ್ತಿದ್ದು, ಮಾನವನ ಪ್ರತಿಸೃಷ್ಟಿಯ ಸಂಶೋಧನೆಯು ತಾಜಾ ಹೆಜ್ಜೆಯಲ್ಲಿದೆ.

ಸ್ಕಾಟ್ಲ್‌ಂಡಿನ ಜೀವವಿಜ್ಞಾನಿ ಇಮಾನ್‌ವಿಲ್ಮಟ್ ಅವರು ಕುರಿಯೆ ಕೆಚ್ಚಲಿನಿಂದ ಬೆಳೆದ ಜೀವಕೋಶವನ್ನು ಹೊರೆತೆಗೆದು ಸೃಷ್ಟಿಸಿದ ಜೈವಿಕ ಅದ್ಭುತಗಳಲ್ಲಿ ಒಂದಾಗಿ ‘ಡಾಲಿ’ ಜೀವ ತೆಳೆದಿದೆ. ವಿಲ್ಮಟ್‌ರ ಕ್ಲೋನಿಂಗ್‌ನಲ್ಲಿ ಜೀವಕೋಶವನ್ನು ಭ್ರೂಣದಿಂದ ಪಡೆಯದೇ ಹೊಸ ಮೈಲುಗಲ್ಲಾಗಿದೆ. ಇದರಂತೆ ಅನೇಕ ಜೀವಿಗಳ ಪ್ರತಿಸೃಷ್ಟಿಯನ್ನು ಮಾಡಿದ ದಾಖಲೆಗಳು ಈದೀಗ ಬರುತ್ತಲಿವೆ.

ಮಾನವ ಜೀವಕೋಶ ಹೊಂದಿರುವ ಮಿಶ್ರತಳಿ ಕುರಿ ‘ಪಾಲಿ’ ಡಾಲಿಯನ್ನು ಸೃಷ್ಟಿಸಿದ ವಿಜ್ಞಾನಿಗಳೇ ಇದನ್ನು ಸೃಷ್ಟಿಸಿದ್ದಾರೆ. ಪಾಲಿ ಮೊದಲ ಮಿಶ್ರತಳಿಯ ಪ್ರತಿ ಕೃತಿಯಾಗಿದೆ. ಇಲ್ಲಿ ಮಾನವ ಜೀನಮ್ನ ಕುರಿಯ ಜೀವಾಂಶ ಮಧ್ಯ ನ್ಯೂಕ್ಲಿಯಸ್‌ಗೆ ಸೇರಿಸಲಾಗುತ್ತದೆ. ಇದನ್ನು ನಂತರ ಕುರಿಯ ಈ ಮೊದಲೇ ನ್ಯೂಕ್ಲಿಯಸ್ ತೆಗೆದು ಸಿದ್ಡಪಡಿಸಿಟ್ಟಿರುವ ಭ್ರೂಣಕ್ಕೆ ಅಳವಡಿಸುವುದು. ಆಗ ಮಿಶ್ರತಳಿಯ ಪ್ರತಿಕೃತಿಯುಳ್ಳ ಕುರಿ ಜೀವ ತಳೆಯಿತು. ಮಾನವ ವಂಶಾಣುವಿನಿಂದ ‘ಜೈನಿ’ ಯ ಸೃಷ್ಟಿ ಆಶ್ಚರ್ಯವಾದರೂ ಇದು ಹಂದಿಯ ಹೊಟ್ಟೆಯಲ್ಲಿ ಜನಿಸಿದೆ. ಇದರ ರಕ್ತದಲ್ಲಿ ಮಾನವನ ಗುಣಗಳು ಸೇರಿವೆ. ಇದರ ಕೆಚ್ಚಲಿನಿಂದ ಬರುವ ಹಾಲಿನಲ್ಲಿ
ಮಾನವ ಪ್ರೋಟೀನ್ ಇರುತ್ತದೆಂದರೆ ವಿಶೇಷವೆ. ಜೈವಿಕ ತಂತ್ರಜ್ಞಾನದಲ್ಲಿ ಇದು ಮತ್ತೊಂದು ಮೈಲುಗಲ್ಲಾಗಿದೆ. ಇದರಂತೆ ಎಡಿನ್ ಬರೋ ವಿಜ್ಞಾನಿಗಳು ವಿಶ್ವದಲ್ಲಿಯೇ ಮೊದಲ ಬಾರಿಗೆ ‘ದನದ ತದ್ರೂಪಿ’ ಯನ್ನು ಸೃಷ್ಟಿ ಮಾಡಿದರು. ೧೯೯೮ ಫೆಬ್ರುವರಿ ೧೬ ರಂದು ಜನಿಸಿದ ಇದಕ್ಕೆ ‘ಜೆಫರ್‍ಸನ್’ ನಾಮಕರಣ ಮಾಡಲಾಗಿದೆ. ಡಾಲಿಯನ್ನು ಸೃಷ್ಟಿಸಿದ ವಿಧಾನವನ್ನೇ ಈ ಜೆಫರ್‍ಸನ್‌ಗೆ ಬಳಸಲಾಗಿದೆ. ಈ ರೀತಿ ಪ್ರತಿಸೃಷ್ಟಿ ಮಾಡಿದ ದನಗಳು ಹೆಚ್ಚು ರಕ್ತದ ತೆಳುವಾದ ಅಂಶವನ್ನು ಉತ್ಪಾದಿಸುತ್ತವೆ. ಇದನ್ನು ಅಪಘಾತಕ್ಕೆ ಈಡಾದ ಸಂದರ್ಭದಲ್ಲಿ ಬಳಸಲಾಗುವುದು. ಮನುಷ್ಯನಿಗೆ ‘ರೋಸಿಯ’ ವಾಸ್ತವವಾಗಿ ಹಸುವೇ ಆಗಿದ್ದರೂ ಕರೆಯುವುದು ಮಾತ್ರ ಮನುಷ್ಯರ ಹಾಲನ್ನು! ರೋಸಿಯ ಹಾಲಿನ ರಾಸಾಯನಿಕ ಸಂಯೋಜನ ನಮ್ಮ ತಾಯಂದಿರ ಹಾಲಿನಂತೆಯೇ ಇರುತ್ತದೆ. ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಳ್ಳುವ ನತದೃಷ್ಟ ಶಿಶುಗಳ ಜೀವಗಳನ್ನು ಉಳಿಸಬಲ್ಲ ಅಮೃತವಾಗಬಲ್ಲದು ಈ ಹಾಲು.

ಹಿಂದೆ ತಿಳಿಸಿದ ಡಾಲಿಗೆ ೧೯೯೬ ರಲ್ಲಿ ‘ಬಾನಿ’ ಎಂಬ ತದ್ರೂಪಿ ಕುರಿಯು ಜನಿಸಿದೆ. ಈ ಡಾಲಿಯ ಜತೆ ವಾಸಿಸಲು ವಾಲ್ಫ್‌ಮೌಂಟನ್ ಟಗರನ್ನು ಬಿಡಲಾಗಿತ್ತು ಸಹಜ ವಿಧಾನದಲ್ಲಿ ಡಾಲಿ ಗರ್ಭಧರಿಸಿತು. ಇದರ ಗರ್ಭಧಾರಣೆ ಯಾವುದೇ ತೊಂದರೆಗಳಿಲ್ಲದೇ ಪೂರ್ಣ ಗೊಂಡಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಪಾಕ್ರಸಿ (ಬಡಾಯಿ)
Next post ಯಾರೂ ತಿಳಿಯರು ನಿನ್ನ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys