ಯಾರೂ ತಿಳಿಯರು ನಿನ್ನ
ಮನದ ಮಾಯ ಜಾಲ |
ಮಾಧವ ನಿನಗಲ್ಲದೇ ಇನ್ನಾರಿಗಿದೆ
ಈ ಪರಿಯ ಪ್ರಭೆಯು||

ಪಂಚಪಾಂಡವರಿಗೆ ನೀನೊಲಿದು
ಧರ್ಮವನು ಕೈ ಹಿಡಿದೆ|
ಸೋದರಿ ದ್ರೌಪದಿಯ
ಮಾನಾಪಮಾನವನು ಕಾಯ್ದೆ|
ದರ್ಪ ದುರಾಂಕಾರ ದುರ್ಬುದ್ಧೀಯ
ನೀನಳಿಸಿ ಅಧರ್ಮವ ಅಡಗಿಸಿದೆ||

ಜನ್ಮಜನ್ಮಾಂತರದ
ಪಾಪಕರ್ಮವನುನೀ ಕಳೆದು
ದಟ್ಟ ದರಿದ್ರರಿಗೋಲಿದು
ಸಕಲ ಸಂಪದವಿಯನಿತ್ತೆ|
ಮತ್ತೆ ಪಾಮರರಿಗೆ ನೀ ಒಲಿದು
ಮಂಗಳ ಪದವಿಗಳನಿತ್ತೆ||

ಸತ್ಯ ಧರ್ಮ ನಿಷ್ಠೆಯಲಿ
ನಡೆವ ಸದ್ಭಕ್ತರಿಗೆ ನೀನೊಲಿದು|
ತಂದೆ ನೀನಾಗಿ ಕರುಣದಿ ಕಣ್ಣತೆರೆದು
ಮುಕ್ತಿ ದಯಪಾಲಿಸು ದೀನಬಂಧು||
*****