ಕೆ ಕೃಷ್ಣಪ್ಪನವರು

ಅಂದು ಶಾಲೆಗೆ ಲೇಟ್ ಕೆಂಚಪ್ಪ ಅವರ ಮಗ ಕೆ. ಕೃಷ್ಣಪ್ಪ ಅವರು ಇತ್ತೀಚೆಗೆ ವಿದೇಶದಿಂದ ಬಂದಿದ್ದರು.

ಕೆ. ಕೃಷ್ಣಪ್ಪನವರು- ಸಾರಿಗೆ ಸಂಸ್ಥೆಯ ಮುದ್ರಣಾಲಯದಲ್ಲಿ ಹಿರಿಯ ಮ್ಯಾಕ್ಯಾನಿಕ್ ಇಂಜಿನಿಯರ್ ಆಗಿ ದಕ್ಷತೆ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅವರನ್ನು ಶಾಲಾ ಶಿಕ್ಷಕರೆಲ್ಲ ಮಕ್ಕಳೆಲ್ಲ ಸೇರಿ ಏನನ್ನಾದರೂ ವಿದೇಶದ ಸುದ್ದಿಯೊಂದನ್ನು ಹೇಳಬೇಕೆಂದು ವಿನಂತಿಸಿದರು. ಅಪಾರ ಅನುಭವ ಸೇವಾ ಹಿರಿತನದ ಹಿರಿಯ ವಿಶ್ವಚೇತನವೆಂದೇ ಖ್ಯಾತರಾದ ಶ್ರೀಯುತ ಕೆ. ಕೃಷ್ಣಪ್ಪನವರು ಎದ್ದು ನಿಂತು- ತಾವು ವಿದೇಶದಿಂದ ತಂದಿದ್ದ “ವೈರ್‌ಲೆಸ್ ಪೋಡೊ…”ವನ್ನು ಎಲ್ಲರಿಗೆ ಕುತೂಹಲದಿಂದ ತೋರಿಸುತ್ತಾ ಹೋದರು. ಹೊಚ್ಚ ಹೊಸ ಸೆಟ್ ಅದು! ತಂತ್ರಜ್ಞಾನದ ಉತ್ಕೃಷ್ಟ ಕೊಡುಗೆಯದು ಕೆ. ಕೃಷ್ಣಪ್ಪನವರು ಮಾತಿಗಾರಂಭಿಸಿದರು…

ಓ ನನ್ನ… ಮುದ್ದು ಮಕ್ಕಳೆ… ನೀವೆಲ್ಲ ವೈರ್‌ಲೆಸ್ ಪೋಡೊವನ್ನು ಈಗ ನೋಡಿದಿರಲ್ಲಾ…?! ಇನ್ನು ಮುಂದೆ ಸೆಲ್‌ಫೋನ್ ಕೈಲಿಡಿದು ಸೆಲ್ಫಿಗೆ ಲುಕ್ ಕೊಡುವುದೂ ತುಸು ಇಬ್ಬಂದಿನೇ… ಅಪಾಯನೇ ಎಷ್ಟೋ ಜನರು ಪ್ರಾಣ ಕಳೆದುಕೊಂಡಿರುವರೂ… ಕೂಡಾ. ಅದೂ ನಿಖರವಾಗಿ ಬರುವುದೆಂದೂ ಖಾತ್ರಿ ಇಲ್ಲ! ಇಂಥಾ ಪುಟ್ಟ ಸಮಸ್ಯೆಯನ್ನು ದೂರ ಮಾಡಲು ಬಂದ ‘ಸೆಲ್ಫಿಸ್ಟಿಕ್’ ಕೂಡಾ ತುಂಬಾ ಓಲ್ಡಾಯಿತು..!!

ಈಗೀಗ ದೇಶ ವಿದೇಶಗಳಲ್ಲಿ ತೀರಾ ಸದ್ದುಗದ್ದಲ ಮಾಡುತ್ತಿರುವುದು ವೈರ್‌ಲೆಸ್ ಪೋಡೊ.. ಈಗೋ ನನ್ನ ಕೈಲಿರುವ ವೈರ್‌ಲೆಸ್ ಪೋಡೊ… ಇದು ಬ್ಲೂಟೂತ್ ರೀತಿಯಲ್ಲಿ ಕೆಲಸ ಮಾಡುವುದು. ಈಗೋ ಇದರ ಹಿಂಬದಿಗೆ ಮ್ಯಾಗ್ನೆಟ್ ಇದ್ದು ಎಲ್ಲಿ ಬೇಕಾದಲ್ಲಿ ಸಿಕ್ಕಿಸಲು ಕ್ಲಿಕ್ಕಿಸಲು ಸಾಧ್ಯವಿದೆ. ತದನಂತರ ನಿಮ್ಮ ಸೆಲ್‌ಫೋನ್‌ಗೆ ಕನೆಕ್ಟ್ ಮಾಡಿಕೊಳ್ಳಬಹುದು!

ವಿಡಿಯೋ ಗ್ರೂಪ್ ಫಿ ಕೂಡಾ ಸಾಧ್ಯ! ಹೀಗಾಗಿ ಬೇರೊಬ್ಬರಿಗೆ ಫೋಟೋ ತೆಗೆಯಿರಿ ಎಂದು ದುಂಬಾಲು ಬೀಳುವುದೂ ಇರುವುದಿಲ್ಲ ಎಂದು ಕೆ. ಕೃಷ್ಣಪ್ಪನವರು ಬಾಳ ಚೆಂದಾಗಿ ವಿವರಿಸುತ್ತಾ ನಿಂತರು.

ಅಲ್ಲಿದ್ದವರೆಲ್ಲ ಬಲು ಕುತೂಹಲದಿ ಕೇಳುತ್ತಾ ಕುಳಿತರು. ಇವರ ಮಾತೆಂದರೆ ಹಾಲು ಜೇನು ಸವಿಸವಿ ಕಲ್ಲು ಸಕ್ಕರೆ ಎಲ್ಲರಿಗೆ ಅವರೆಂದರೆ… ಅಕ್ಕರೆ….

ಹೌದು! ಪುಟ್ಟದಾದ ಅಂದಚೆಂದದ ಈ ವೈರ್‌ಲೆಸ್‌ ಪೋಡೊವನ್ನು ನೀವೆಲ್ಲ ಸುಲಭವಾಗಿ ನಿಮ್ಮೊಂದಿಗೆ ಎಲ್ಲಿಗೆ ಬೇಕಾದರೂ ಜೊತೆ ಜೊತೆಯಲ್ಲಿ ತೀರಾ ಸರಳವಾಗಿ ತೆಗೆದುಕೊಂಡು ಹೋಗಬಹುದು. ಏಕೆಂದರೆ ನೀವೂ ಎಲ್ಲಿ ಬೇಕಾದರೂ ನಿಂತು ಕುಂತು ಲುಕ್ ಕೊಟ್ಟರೆ ಸಾಕು ಅದರಷ್ಟಕ್ಕೆ ಅದೇ ಫೋಟೋ ತೆಗೆಯುವುದು! ಹೀಗಿದೆ ಪೋಡೊ.. ಮಹಿಮೆ?! ಕೃಷ್ಣಪ್ಪನವರ ಮಾತಿನ ಮೋಡಿನ ಹಾಗೇ ಮುತ್ತಿನ ಹಾರದಾ ಹಾಗೇ. ಮಾಣಿಕ್ಯದ ದೀಪ್ತಿಯಾ ಹಾಗೇ… ಅಲ್ಲಿದ್ದವರೆಲ್ಲ ಹೌದೌದು ಎಂದರು.

ಎಲ್ಲರ ಕೈಯಲ್ಲಿರುವ ಸೆಲ್ ಫೋನ್‌ಗಳ ದರಗಳಂತೇ ಇದೂ ಕೂಡಾ ಹೆಚ್ಚಿನ ದರವಿಲ್ಲ! ಹೆಚ್ಚಿನ ಉಪಯೋಗವಿದೆಯೆಂದೂ.. ಕೆ.ಕೃಷ್ಣಪ್ಪನವರು ವಿವರಿಸುತ್ತಾ ನಿಂತರು. ಹೊತ್ತು ಹೋಗಿದ್ದು ಗೊತ್ತೇ ಆಗಲಿಲ್ಲ. ಹೊಸ ಹೊಸ ವಿಚಾರ ಹೊಚ್ಚ ಹೊಸತು ಪೋಡೊ….

ಅಲ್ಲಿದ್ದವರೆಲ್ಲ ಹರ್ಷದಿ ಚಪ್ಪಾಳೆ ತಟ್ಟಿದರಲ್ಲದೆ, ಅವರನ್ನು ಸನ್ಮಾನಿಸಿದರು. ಅಲ್ಲಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಪರ್‍ಯಾಸ
Next post ಏನ ಮೋಹಿಸಲೋ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

cheap jordans|wholesale air max|wholesale jordans|wholesale jewelry|wholesale jerseys