“ಎಲೆಕ್ಟ್ರಾನಿಕ್” ಯುಗದ ಆಶ್ಚರ್ಯ “ಗಣಕಯಂತ್ರ”

ಗಣಕಯಂತ್ರಕ್ಕೆ “ಕಂಪ್ಯೂಟರ್” ಎಂಡು ಎಲ್ಲರೂ ಸಂಬೋಧಿಸುತ್ತ ಸರ್ವವ್ಯಾಪಿಗೊಳಿಸಿದ್ದಾರೆ. ಏಕೆಂದರೆ ಇದು ಎಣಿಸಬಲ್ಲ, ಬರೆಯಬಲ್ಲ ಸಂಕೀರ್ಣ ಸಮಸ್ಯೆಗಳನ್ನು ಅತಿಬೇಗ ಕರಾರುವಾಕ್ಕಾಗಿ ಬಗೆಹರಿಸುವ ಒಂದು ವಿಸ್ಮಯ ಯಂತ್ರ. ಇತ್ತೀಚೆಗೆ ಗಣಕಯಂತ್ರಗಳಿಲ್ಲದೇ ನವೀನ ಪ್ರಪಂಚವು ಚಲನಶೀಲವಾಗುತ್ತದೆ ಎಂದು ಹೇಳುವುದು ಕಷ್ಟಕರ. ಕಾರ್ಖಾನೆಗಳು, ಕಛೇರಿಗಳು, ವೈಜ್ಞಾನಿಕ ಸಂಸ್ಥೆಗಳು ಶಾಲೆ, ಹೋಟೆಲ್‌ಗಳು, ಉಪಹಾರಗೃಹಗಳು, ಅಂಗಡಿ ಹೀಗೆ ಎಲ್ಲೆಂದರಲ್ಲಿ ವಿಹರಿಸುತ್ತ ವಾಸ್ತವ್ಯ ಹೂಡಿವೆ ಎಂದರೆ ತಪ್ಪಾಗಲಾರದು.

ಇತಿಹಾಸ ಮತ್ತು ಬೆಳವಣಿಗೆ : ೩೦೦೦ ವರ್ಷಗಳ ಸುಮಾರಿಗೆ ಚೀನೀಯರಿಂದ ‘ಅಬಾಕಸ್’ ಎಂದು ಕರೆಯುವ ಸಾಧನದ ಬೆಳವಣಿಗೆಯೊಂದಿಗೆ ಗಣಕ
ಯಂತ್ರದ ಇತಿಹಾಸವು ಪ್ರಾರಂಭವಾಗುತ್ತದೆ. ನಂತರ ಇದರ ಉಪಯೋಗಪು ಈಜಿಪ್ಟ್ ಗ್ರೀಕ್‌ಗೆ ಹರಡಿತು. ೧೬ನೇ ಶತವಮಾನದಲ್ಲಿ ಜಾನ್‌ಸಿಪಿಯರ್ ಎಂಬ ಒಬ್ಬ ಸ್ಕಾಟನು ನೇಪಿಯರ್ಸನ ಮೂಳೆಗಳು ಎಂಬ ಲೆಕ್ಕಮಾಡುವ ಸಾಧನವನ್ನು ಅಭಿವೃದ್ಧಿಪಡಿಸಿದ. ದೊಡ ಸಂಖ್ಯೆಗಳ ಗುಣಾಕಾರ, ಭಾಗಾಕಾರ ಮಾಡಲು ಈ ಯಂತ್ರವು ಉಪಕಾರಿಯಾಗಿತ್ತು ಕ್ರಿ.ಶ. ೧೬೨೦ರಲ್ಲಿ ಸರಿಯುವ ಅಳತೆಪಟ್ಟಿ (ಸ್ಲೈಡ್ ರೂಲ್) ಪಟ್ಟಿಯನ್ನು ಯೂರೋಪಿನಲ್ಲಿ ವಿಲಿಯಂ ಹೌಹ್‌ಟ್ರೆಡ್ ಕಂಡು ಹಿಡಿದನು. ಸ್ವಯಂ ಚಾಲಿತ ಗಣಕೀಕರಣದ ಕ್ಷೇತ್ರದಲ್ಲಿ ಮುಂದಿನ ಪ್ರಯತ್ನ ಕ್ರಿ.ಶ. ೧೬೪೨ರಲ್ಲಿ ಒಬ್ಬ ಪ್ರೆಂಚ್ ಭೌತವಿಜ್ಞಾನಿ ಮತ್ತು ಗಣಿತತಜ್ಞ ಚಾರ್ಲ್ಸ್ ಬ್ಲೇಯಿಸ್ನಿಂದ ಮಾಡಲ್ಪಟ್ಟಿತು.

ನೂರಾರು ವರ್ಷಗಳವರೆಗೆ ವಿವಿಧ ಲೆಕ್ಕಮಾಡುವ ಯಂತ್ರಗಳನ್ನು ಕಂಡುಹಿಡಿದು ಪ್ರಪಂಚದ ಎಲ್ಲ ಭಾಗಗಳಲ್ಲಿ ಉಪಯೋಗಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ಮುಂದೆ ಕ್ರಿ.ಶ. ೧೮೩೦ರಲ್ಲಿ ಒಬ್ಬ ಇಂಗ್ಲೀಷ್ ಗಣಿತ ತಜ್ಞ ಚಾರ್ಲ್ಸ್‌ ಬಾಬ್ಚೇಜ್ ಒಂದು “ಯಾಂತ್ರಿಕ ಕ್ಯಾಲ್ಕುಲೇಟರ” ನ್ನು ಕಂಡು ಹಿಡಿದ. ಇದನ್ನು ಕೂಡ ಗಣಕ ಯಂತ್ರಕ್ಕೆ ಅಳವಡಿಸಿದ. ಅಂದಿನ ದಿನಗಳಲ್ಲಿ ಪರಿಪೂರ್ಣ ಗಣಕ ಯಂತ್ರಜ್ಞನೆಂದು ಇವನಿಗೆ “ನವೀನ ಗಣಕಯಂತ್ರ
ಪಿತಾಮಹ’ನೆಂದು ಕರೆಯಲಾಯಿತು. ಬಂದೂಕುಗಳಿಗೆ ಮಾರ್ಗದರ್ಶನ ಮಾಡುವ ಮತ್ತೊಂದು ಗಣಕಯಂತ್ರವನ್ನು ಕ್ರಿ.ಶ. ೧೯೩೦ ರಲ್ಲಿ ಪುನಃ ಹೊಸ ಆವಿಷ್ಕಾರಗಳೊಂದಿಗೆ ಇಂಜಿನಿಯರ್ ‘ವಾನ್ನೆವಾರ್ ಬುಶ್’ ಎಂಬುವವನು ‘ಅನಲೋಗ್’, ಗಣಕಯಂತ್ರವನ್ನು ರಚಿಸಿದನು. ಕೊನೆಗೆ ೧೯೪೬ರಲ್ಲಿ ಜೆ.ಪ್ರೆಸ್ಟರ್, ಮತ್ತು ಜಾನ್‌ಮೌಚ್ಲಿ ಎಂಬುವವರಿಂದ ನಿಜವಾದ ಎಲೆಕ್ಟ್ರಾನಿಕ್ ಗಣಕ ಯಂತ್ರ (E.N.I.A.C) (ಎಲೆಕ್ಟ್ರಾನಿಕ್ ನ್ಯೂಮೆರಿಕ್ ಇಂಟಿಗ್ರೇಟರ್ ಮತ್ತು ಕ್ಯಾಲ್ಕ್ಯುಲೇಟರ್) ವನ್ನು ಇದು ಹೊಂದಿದೆ. ಇವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳಾಗಿದ್ದವರು. ಇದು ದೊಡ್ಡ ಗಣಕಯಂತ್ರವಾಗಿದ್ದು ೧೮೦೦೦ ನಿರ್ವಾತ ಕೊಳವೆಗಳನ್ನು ಉಪಯೋಗಿಸಿತು.

ಟ್ರಾನ್ಸಿಸ್ಟರ್‌ಗಳು ಮತ್ತು ಸಿಲಿಕಾನ್ ಬಿಲ್ಲೆಗಳು ಮುಂತಾದ ಹೊಸ ತಂತ್ರಜ್ಞಾನಗಳ ಅಭಿವೃದದ್ಧಿಯಾಗುತ್ತಿದ್ದಂತೆ ಗಣಕಯಂತ್ರವು ತೀವ್ರ ಬದಲಾವಣೆಯನ್ನು ಹೊಂದಿತು. ಮೊದಲಿನ ಮಾದರಿಗಳಿಗಿಂತ ಅವಿಷ್ಟಾರಗೊಳ್ಳುತ್ತ ಈಗೀಗ ಚಿಕ್ಕದಾಗಿರುವ ಹೆಚ್ಚು ಕರಾರುವಕ್ಕಾಗಿರುವ ಮತ್ತು ಕಡಿಮೆ ಖರ್ಚಿನ ಗಣಕಯಂತ್ರಗಳು ದೊರೆಯುತಲಿವೆ. ಸಮಗ್ರ ಮಂಡಲಗಳು ಮತ್ತು ಸೂಕ್ಷ್ಮ ಎಲೆಕ್ಟ್ರಾನಿಕ್ ಮಂಡಲ ಮುಂತಾದವುಗಳಲ್ಲಿ ಗಣಕಯಂತ್ರದ ಸಮರ್ಥನೆಯನ್ನು ಹೆಚ್ಚಿಸಿವೆ.

ಗಣಕಯಂತ್ರದ ಉಪಯೋಗಗಳು : ಗಣಕ ಯಂತ್ರಗಳು ವೇಗವಾಗಿ ಕೆಲಸಮಾಡುವುದರಿಂದ ಅವು ಬಹು ಉಪಯುಕ್ತವಾಗಿದ್ದು ಸೂಚನೆಗಳನ್ನು ಸೆಕೆಂಡಿನ ಭಾಗಾಂಶದೊಳಗೆ ನಿರ್ವಹಿಸುತ್ತವೆ.

ಫಲಿತಾಂಶಗಳನ್ನು ಕೊಡುವುದರಲ್ಲಿ ಇವು ನಿಖರವಾಗಿದ್ದು ತಮ್ಮಷ್ಟಕ್ಕೆ ತಾವೇ ತಪ್ಪು ಮಾಡಲಾರವು.

ಅಪರಿಮಿತ ಅನುಷ್ಠಾನ ಮತ್ತು ಶಕ್ತಿಯನ್ನು ಅವುಗಳ ಸಂಗ್ರಹಣಾ ಸಾಮರ್ಥ್ಯದಿಂದ ಪಡೆದಿದ್ದು ಬಹಳ ಹೆಚ್ಚಿನ ಅಂಕಿ‌ಅಂಶಗಳನ್ನು ಬಹಳವೇಗವಾಗಿ ಮತ್ತು ಅನುಕೂಲವಾದ ರೀತಿಯಲ್ಲಿ ಮರಳಿಪಡೆಯುತ್ತವೆ.

ಇವು ಎಲ್ಲ ಸಾಧುವಾದ ಕ್ಷೇತ್ರ ಮತ್ತು ವಿದ್ಯೆಯಲ್ಲಿ ಉಪಯೋಗಿಸಬಹುದು. ಒಬ್ಬ ಅಣುವಿಜ್ಞಾನಿಗೆ ಸಹಾಯ ಮಾಡಿದಂತೆ ಒಬ್ಬ ಗೃಹಿಣಿಯ ಅಡುಗೆ ಮನೆಯ ದಿನನಿತ್ಯದ ಕಾರ್ಯಗಳನ್ನು ಇನ್ನು ಚೆನ್ನಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಡಕೆ ಒಡೆವ ಆಟ
Next post ಅರೇಬಿಯಾದ ಅರುಣೋದಯ

ಸಣ್ಣ ಕತೆ

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ಕತೆಗಾಗಿ ಜತೆ

  ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

cheap jordans|wholesale air max|wholesale jordans|wholesale jewelry|wholesale jerseys