ಸಕ್ಕರೆ ಕಾಯಿಲೆ ಬಹಳ ಅಪಾಯಕಾರಿ ರೋಗ. ಇದು ಬಂತೆಂದರೆ ಬದುಕಿನುದ್ದಕ್ಕೂ ಒಂದಿನಿತು ಸಿಹಿ ಪದಾರ್‍ಥಗಳನ್ನು ಸೇವಿಸುವಂತೆಯೇ ಇಲ್ಲ. ಏನೆಲ್ಲ ಔಷಧಿಗಳನ್ನು ಸ್ವೀಕರಿಸಿದರೂ ಬಿಟ್ಟು ಹೋಗುವುದೇ ಇಲ್ಲ. ಅದರಲ್ಲೂ ಪುರುಷರಿಗೆ ಬಂದರೆ ಜೀವನವಿಡೀ ಈ ಮಧುಮೇಹ ಕಾಯಿಲೆಯಲ್ಲಿಯೇ ಒದ್ದಾಡಬೇಕಾಗುತ್ತದೆ. ಇತ್ತೀಚಿಗೆ ವೈದ್ಯಕೀಯವಾಗಿ ಒಂದು ಸಂಶೋಧನೆ ಯಾಗಿದ್ದು ಫಲಪ್ರದವಾಗಿದೆ. ಸಾಮಾನ್ಯವಾಗಿ ಹೆಂಗಸರು ಹೆಚ್ಚಾಗಿ ಕಾಫಿ ಕುಡಿಯುತ್ತಾರೆ. ಇನ್ನೂ ಹೆಚ್ಚೆಚ್ಚು ಕಾಫಿ ಕುಡಿದು ಮಧುಮೇಹ ರೂಗದಿಂದ ದೂರಿವಿರಿ ಎಂದು ಶೋಧನೆ ತಿಳಿಸುತ್ತದೆ. ಕಾಫಿಯಲ್ಲಿರುವ ಕೆಫಿನ್ ಅಂಶ, ದೇಹದಲ್ಲಿ ಗ್ಲೂಕೋಸ್ ಪರಿವರ್‍ತನೆಗೆ ನೆರವು ನೀಡುತ್ತದೆ. ಪ್ರತಿದಿನ ೪ ಕಪ್ ಕಾಫಿ ಸೇವಿಸುವ ಮಹಿಳೆಯರಿಗೆ ಮಧುಮೇಹ ಬರುವ ಇತರರಿಗಿಂತ ಶೇ.೨೯ ರಷ್ಟು ಕಡಿಮೆ. ಪ್ರತಿದಿನ ಹತ್ತು ಕಪ್ ಕಾಫಿ ಕುಡಿಯುವ ಮಹಿಳೆಯರಲ್ಲಿ ರೋಗ ಬರುವ ೭೯ ರಷ್ಟು ಕಡಿಮೆ ಎಂದು ಆಹಾರ ವಿಜ್ಞಾನಿಗಳು ತಿಳಿಸುತ್ತಾರೆ.
*****
