ಅಶಕ್ತರಾದಾಗ ವೈದ್ಯರು ಮೊಟ್ಟೆಗಳನ್ನು ತಿನ್ನಲು ಹೇಳುತ್ತಾರೆ. ಮೊಟ್ಟೆಯಲ್ಲಿ ಜೀವಸತ್ವ ಇರುವುದರಿಂದ ಶಕ್ತಿವರ್‍ಧಕವೆಂದು ತಿಳಿಸುವ ವೈದ್ಯರ ಈ ಸಿಫಾರಸ್ ಈಗ ತಿರುಮರುವಾಗಿದೆ. ಜತೆಗೆ ಮೊಟ್ಟೆ ಮಾಂಸಾಹಾರಿ ಅಲ್ಲವೆಂಬ ಸತ್ಯವನ್ನು ಸಹ ತಲೆಕೆಳಗೆ ಮಾಡಿ ಇದೊಂದು ಮಾಂಸಾಹಾರಿಯೇ ಎಂದು ತಿರ್‍ಮಾನಿಸಲಾಗಿದೆ. ಮೊಟ್ಟೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಂದರೆ ಪ್ರತಿಶತ ೨೫೦ ಮಿ ಗ್ರಾಂನಿಂದ ೩೦೦ ಮಿ ಗ್ರಾಂ ನಷ್ಟು ಕೊಲಸ್ಟರಾಲ್ ಸಂಗ್ರಹವಿದೆ. ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ನಾರಿನಂಶ ಮೊಟ್ಟೆಯಲ್ಲಿ ಇಲ್ಲವೇ ಇಲ್ಲ. ಹಾಗೆಯೇ ಶಕ್ತಿಯ ಉತ್ಪಾದನೆಗೆ ಅಗತ್ಯವಾಗಿ ಬೇಕಾದ ಕಾರ್‍ಬೋಹೈಡ್ರೆಟ್ ಮೊಟ್ಟೆಯಲ್ಲಿ ಇಲ್ಲ. ನಿಸರ್‍ಗದಲ್ಲಿ ಮೊಟ್ಟೆ ತಿನ್ನುವ ಪ್ರಾಣಿ ಮಾನವನ್ನೊಬ್ಬನೇ ಎಂದು ವಿಜ್ಞಾನಿಗಳು ಹೇಳುತ್ತಾರೆ ಡಾ| ಇನ್ನಾ ಎಂಬ ಆಹಾರ ವಿಜ್ಞಾನಿಗಳ ಪ್ರಕಾರ ಮೊಟ್ಟೆ ವಿಷ ಆಹಾರವೆಂದು ಹೇಳಲಾಗುತ್ತದೆ. ಆದ್ದರಿಂದ ಸಸ್ಯಮೂಲದ ಪ್ರೋಟೀನ್, ವಿಟಮಿನ್, ಕಾರ್‍ಬೊಹೈಡ್ರೆಟ್, ನಾರಿನಂಶ, ಕೊಬ್ಬು ಪ್ರಕೃತಿಯಲ್ಲಿ ಸಾಕಷ್ಟು ಇರುವಾಗ ಆರೋಗ್ಯವನ್ನು ಹಾಳು ಮಾಡುವ ಮೊಟ್ಟೆಗಳನ್ನು ಸೇವಿಸುವುದು ಅಪಾಯವೆಂದು ಈ ವಿಜ್ಞಾನಿಗಳು ತಿಳಿಸುತ್ತಾರೆ. ಮೊಟ್ಟೆಯ ಹೊರಕವಚದಲ್ಲಿ ಸು. ೧೫ ರಿಂದ ೨೦ ಸಾವಿರ ಸೂಕ್ಷ್ಮರಂಧ್ರಗಳಿರುತ್ತವೆ. ಮೊಟ್ಟೆ ಮರಿಯಾಗಲು ಈ ಸೂಕ್ಷ್ಮ ರಂಧ್ರದ ಮೂಲಕ ಆಮ್ಲಜನಕ ಪೂರೈಕೆಯಾಗುತ್ತದೆ. ೨೪ ಗಂಟೆಗಳಿಗೂ ಅಧಿಕ ಕಾಲ ಮೊಟ್ಟೆಗಳನ್ನು ಶೇಖರಿಸಿಟ್ಟರೆ ಬ್ಯಾಕ್ಟೀರಿಯಾಗಳು ಮೊಟ್ಟೆಯ ಒಳಮೈ ಪ್ರವೇಶಿಸಿ ತಿನ್ನುವವರಿಗೆ ಕೂಡಲೇ ಅಪಾಯ ತರಬಹುದೆಂದು ಹೇಳುತ್ತಾರೆ.
*****
