Home / ಲೇಖನ / ವಿಜ್ಞಾನ / ಉಪಕಾರಿ ಬ್ಯಾಕ್ಟರಿಯಾಗಳು (ಸೂಕ್ಷ್ಮಜೀವಿಗಳು)

ಉಪಕಾರಿ ಬ್ಯಾಕ್ಟರಿಯಾಗಳು (ಸೂಕ್ಷ್ಮಜೀವಿಗಳು)

ಬ್ಯಾಕ್ಟಿರಿಯಾಗಳು ಮನುಷ್ಯನ ದೇಹಕ್ಕೆ ಎಷ್ಟು ಪ್ರಯೋಜನವೋ ಅಷ್ಟೇ ಅಪಾಯಕಾರಿಗಳು ನಿಜ. ಕೆಲವು ಸಲ ಭಯಂಕರ ಕಾಯಿಲೆಗಳಿಗೆ ಕಾರಣವಾಗುವ ಇವುಗಳಿಂದಲೇ ಮಾನವನ ಆಹಾರವಸ್ತುಗಳ ಅಂಗಾಗಳಾಗಿಯೂ ಉಪಕರಿಸುತ್ತದೆ. ದೋಸೆ, ಇಡ್ಲಿ, ಬ್ರೆಡ್, ಮೊಸರು, ಬೆಣ್ಣೆ, ಗಿಣ್ಣು ಕಾಫಿ, ಟೀ, ವೈನು ಮತ್ತು ಉಪ್ಪಿನಕಾಯಿ ಇತ್ಯಾದಿಗಳ ತಯಾರಿಕೆಗೆ ಸೂಕ್ಷ್ಮ ಜೀವಿಗಳೇ ಮೂಲಕಾರಣವಾಗುತ್ತವೆ. ಜಾನುವಾರುಗಳ ಮೇವಾದ ಜೋಳ, ಹುಲ್ಲಿಗೂ ಸೂಕ್ಷ್ಮ ಜೀವಿಗಳೆ ಆಧಾರವಾಗುತ್ತವೆ. ದೊಸೆಹಿಟ್ಟನ್ನು ರುಬ್ಬಿದೊಡನೆ ಹಿಟ್ಟನ್ನು ಕಾವಲಿಯ ಮೇಲೆ ಚುಂಯ್ ಎಂದು ಬಿಡುವುದು ಸರಿಯಲ್ಲವೆಂದು ಗೊತ್ತು. ದೋಸೆಯ ಹಿಟ್ಟನ್ನು ಬೇಯಿಸಿ ಚೆನ್ನಾಗಿ ಹುಳಿಸಬೇಕು. ಇದರಿಂದ ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳು ಹಿಟ್ಟಿನಲ್ಲಿ ಬೆರೆತು ಇಂಗಾಲದ ಡೈ ಆಕ್ಸೈಡನ್ನು ಉತ್ಪತ್ತಿ ಮಾಡುತ್ತವೆ. ಕಾವಲಿಯ ಮೇಲೆ ಹಿಟ್ಟನ್ನು ಹಾಕಿದಾಗ ಇಂಗಾಲದ ಡೈ ಆಕ್ಸೈಡ್ ಹಿಟ್ಟಿನಿಂದ ಹೊರಬರುತ್ತವೆ. ಇದರಿಂದಾಗಿ ದೋಸೆಗಳಲ್ಲಿ ತೂತುಗಳು ಏಳುತ್ತವೆ. ಹೀಗಾದಾಗಲೇ ದೋಸೆ ಮತ್ತು ಇಡ್ಲಿಯ ರುಚಿ ಹೆಚ್ಚಾಗುತ್ತದೆ.

ನಾವು ತಿನ್ನುವ ಬ್ರೆಡ್‌ಗೆ (ತಯಾರಿಕೆಯಲ್ಲಿ) ಯೀಸ್ಟ್ (Yeast) ಎಂಬ ಸೂಕ್ಷ್ಮ ಜೀವಿಗಳೇ ಆಧಾರ. ಯೀಸ್ಟ್ ಬ್ಯಾಕ್ಚೀರಿಯಾಗಳೊಂದಿಗೆ ಹಿಟ್ಟನ್ನು ಕಲಸಿಟ್ಟಾಗ ಅವು ಪಿಷ್ಟ ವಸ್ತುಗಳನ್ನು ಹೀರಿಕೊಂಡು ಕಣಗಳನ್ನು ಉತ್ಪತ್ತಿಮಾಡುತ್ತವೆ. ಇಂಗಾಲದ ಡೈ ಆಕ್ಸೈಡ್ ಈ ಕ್ರಿಯೆಯಲ್ಲಿ ಉತ್ಪತ್ತಿಯಾಗುವುದರಿಂದ ಬ್ರೆಡ್ ಉಬ್ಬಿಕೊಳ್ಳುತ್ತದೆ. ಅಲ್ಲದೇ ಲ್ಯಾಕ್ಟಿಕ್ ಬ್ಯಾಸಿಲೈ, ಎಂಬ ಸೂಕ್ಷ್ಮ ಬ್ಯಾಕ್ಟೀರಿಯಾಗಳು ಸಕ್ಕರೆ ವಸ್ತುಗಳನ್ನು ಆಮ್ಲವಾಗಿ ಪರಿವರ್‍ತಿಸುತ್ತವೆ. ಬಿ ಅನ್ನಾಂಗಗಳು ಅಧಿಕವಾಗಿರುವ ಬ್ರೆಡ್ ಸುಲಭವಾಗಿ ಜೀರ್‍ಣವಾಗುತ್ತದೆ. ಮೊಸರಿನಲ್ಲಿ ಸಹ ಲ್ಯಾಕ್ಟಿಕ್ ಆಮ್ಲದ ಸೂಕ್ಷ್ಮ ಜೀವಿಗಳು ಅಧಿಕವಾಗಿರುತ್ತವೆ. ಹಾಲಿಗೆ ಹೆಪ್ಪು ಹಾಕಿದಾಗ ಈ ಬ್ಯಾಕ್ಟೀರಿಯಾಗಳ ಸಹಾಯದಿಂದಲೇ ಹಾಲು ಹೆಪ್ಪಾಗಿ ಮೊಸರಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿವಾಗಿರುವ ಗಿಣ್ಣವನ್ನು ಮಾಗಿಸಲು ಪೆನಿಸಿಲಿಯಂ ಹಾಗೂ ಇತರ ಬ್ಯಾಕ್ಟೀರಿಯಾಗಳು ಸಹಕರಿಸುವವು ಅಲ್ಲದೇ ಅದಕ್ಕೆ ಒಂದು ಬಗೆಯ ಸುವಾಸನೆಯನ್ನು ನೀಡುತ್ತವೆ. ಕಾಫೀ, ಟೀ, ಮೊದಲಾದ ತಯಾರಿಕೆಯಲ್ಲಿಯೂ ಸೂಕ್ಷ್ಮಜೀವಿಗಳ ಪಾತ್ರ ಹೆಚ್ಚಾಗಿರುತ್ತದೆ. ಕಾಫೀ ಬೀಜವನ್ನು ಗಿಡದಿಂದ ಕಿತ್ತ ಮೇಲೆ ಅದರ ಮೇಲಿನ ಸಿಪ್ಪೆಯನ್ನು ತೆಗೆಯಲು ಬ್ಯಾಕ್ಟೀರಿಯಾಗಳು ಸಹಕಾರಿಯಾಗುತ್ತವೆ. ಟೀ, ಎಲೆಗಳನ್ನು ಶುದ್ಧಗೊಳಿಸುವಾಗ ಬ್ಯಾಕ್ಟೀರಿಯಾಗಳು ಸಹಕಾರಿಯಾಗುತವೆ. ಟೀ ಗೆ ಸುವಾಸನೆ ಒದಗಿಸಲು ಬಾಕ್ಟೀರಿಯಾಗಳೇ ಕಾರಣವಾಗುತ್ತವೆ.

ದ್ರಾಕ್ಷಿಯ ರಸದಿಂದಾಗುವ ವೈನ್, ತಯಾರಿಕೆಯಲ್ಲಿ ದುಂಬಿಯ ಪಾತ್ರ ಬಹು ಮುಖ್ಯ. ದುಂಬಿಯು ದ್ರಾಕ್ಷಿಯ ಬಳ್ಳಿಯಿಂದ ಬಳ್ಳಿಗೆ ಸೂಕ್ಷ್ಮಜೀವಿಗಳನ್ನು ಕೊಂಡೊಯುತ್ತದೆ. ಇದರಿಂದ ದ್ರಾಕ್ಷಿರಸದಲ್ಲಿ ಒಂದು ಬಗೆಯ ಯೀಸ್ಟ್, ಇದ್ದೇ ಇದು ಹುಳಿಸುತ್ತದೆ. ಈ ಹುಳಿಸುವ ಬ್ಯಾಕ್ಟೀರಿಯಾಗಳಿಂದಾಗಿ ವೈನ್‌ಗೆ ಅಮಲಿನ ಅಂಶಕೂಡಿಕೊಳ್ಳುತ್ತದೆ.

ಹೀಗೆ ಜೀವನದಲ್ಲಿ ವ್ಯಕ್ತಿಬಳೆಸುವ ಅನೇಕ ಆಹಾರ ಪದಾರ್ಥಗಳು ತಯಾರಾಗುವಲ್ಲಿ ಈ ಸೂಕ್ಷ್ಮಜೀವಿಗಳು ಮಹತ್ವದ ಪಾತ್ರವಹಿಸಿ ಆಹಾರ ತಯಾರಿಕೆಯಲ್ಲಿ ಗುಪ್ತಗಾಮಿನಿಯಾಗಿ ಉಪಕಾರ ಮಾಡುತ್ತವೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...