Home / ಲೇಖನ / ವಿಜ್ಞಾನ / ವಿನೂತನ ಫರ್ನಿಚರ್‌ಗಳು

ವಿನೂತನ ಫರ್ನಿಚರ್‌ಗಳು

ಮೂಲತಃ ಮರದ ಕುರ್ಚಿ, ಟೇಬಲ್‌ಗಳಿಂದ ಮನೆಯನ್ನು ಶಂಗರಿಸಲಾಗುತಿತ್ತು. (ಇಂದಿಗೂ) ನಂತರ ಈ ಸ್ಥಳವನ್ನು ಸ್ಟೀಲ್ ತುಂಬಿತು. ಇದೂ ಕೂಡ ಅನೇಕ ಕಾರಣಗಳಿಗಾಗಿ ಬೇಡವೆನಿಸಿ ಷ್ಟಾಸ್ಟಿಕ್, ಟೇಬಲ್, ಕುರ್ಚಿಗಳು ಬಂದವು. ಇವು ಯಾವವನ್ನು ಪೂರ್ಣ ತಿರಸ್ಕರಿಸಲಾಗದಿದ್ದರೂ ಹೊಸ ಆವಿಷ್ಕಾರಗಳು ದಿನೇ ದಿನೇ ಆಗುತ್ತಿರುವುದರ ಪರಿಣಾಮವಾಗಿ ನೂತನ ತಂತ್ರಜ್ಞಾನ ಮತ್ತು ಯಂತ್ರಗಳಿಂದ ದೊಡ್ಡಪ್ರಮಾಣದಲ್ಲಿ ಉತ್ತಮ ಗುಣಮಟ್ಟದೆಂದು ಕರೆಯಿಸಿಕೊಳ್ಳುವ ಫರ್ನಿಚರ್‌ಗಳು ತಯಾರಾಗುತ್ತಲಿದೆ.

ಹುಸೈಫಾ ಫರ್ನಿಚರ್ ಇಂಡಸ್ತ್ರೀಸ್ ಈ ತರಹ ಹೊಸ ಫರ್ನೀಚರ್ ತಯಾರಿಸುವ ಒಂದು ಸಂಸ್ಥೆ. ಇಟಾಲಿಯನ್ ಮಾದರಿ ಫರ್ನಿಚರ್‌ಗಳ ಪ್ರಾಯಶಃ ಏಕಮಾತ್ರ ತಯಾರಿಕರಾದ ಇವರ ಉತ್ಪನ್ನಗಳು ರೆಸಿಡೆನ್ಸಿ ರಸ್ತೆಯ ಶೋರೂಮ್ ಹುಸೈಫಾ ಡೆಕೋರ್‌ನಲ್ಲಿ “ಇಂಡೋಲೈನ್” ಎಂಬ ಬ್ರ್ಯಾಂಡ್‌ನಲ್ಲಿ ದೊರೆಯುತ್ತವೆ. ಅಂದವಾಗಿ ಕಾಣುವ ದೀರ್ಘವಾಗಿ ಬಾಳಿಕೆ ಬರುವ, ಸುಲಭವಾಗಿ ನಿರ್ವಹಿಸಲ್ಪಡುವ ಇವುಗಳ ಮಾರಾಟದ ಬೆಲೆಯೂ ಕೂಡ ದುಬಾರಿ ಅಲ್ಲವೆಂದು ತಯಾರಕರು ಹೇಳುತ್ತಾರೆ.

ಹುಸೈಫಾ ಡೆಕೋರಾದಲ್ಲಿ ಸಿಜನ್ ಮಾಡಿದ ಹಾಗೂ ಟ್ರೀಟ್ ಮಾಡಿದ ರಬ್ಬರ್ ಮರ ಮತ್ತು ಎಂ.ಡಿ.ಎಫ್ (ಮಿಡಿಯಂ ಡೆನ್ಸಿಟಿ ಪೈಬರ ಬೋರ್ಡ್‌, ಇದನ್ನು ಅಮೇರಿಕಾದಲ್ಲಿ ಮರಕ್ಕೆ ಸಮಾನವೆಂದು ತಿಳಿಯುತ್ತಾರೆ) ನಲ್ಲಿ ಕುರ್ಚಿ, ಟೇಬಲ್‌ಗಳು ದೊರೆಯುತ್ತವೆ. ಆಧುನಿಕ ಯಂತ್ರಗಳಿಂದ ತಯಾರಾದ ಫರ್ನಿಚರ್‌ಗಳಿಗೆ ವೆನಿರ್ ಅಥವಾ ಪೇಂಟ್ ಹಚ್ಚಿ ಪಾಲಿಯರಿಥೇನ್ ಕೋಟಿಂಗ್ ಕೊಟ್ಟಿರುವುದರಿಂವ ಇದು ಫರ್ನಿಚರ್ ಅನ್ನು ರಕ್ಷಿಸುತ್ತದೆ. ಸುಲಭದರದ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಸಾಟಿಯಾಗಿ ನಿಲ್ಲುವ ೨೧ನೇ ಶತಮಾನದ ಸಿದ್ಧ ಫರ್ನಿಚರ್‌ಗಳು ಇವು ಆಗಿದೆ.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...