ಬರೆದವರು: Thomas Hardy / Tess of the d’Urbervilles

ಮಲ್ಲಿಯು ಇಂಗ್ಲಿಷ್ ಪತ್ರಿಕೆಯನ್ನು ಓದುತ್ತಿದ್ದಾಳೆ. ನಾಯ ಕನು ಕೇಳುತ್ತಿದ್ದಾನೆ : ” ಜನರಲ್ ಡೈಯರ್‌ನು ನಿಷ್ಕರುಣೆಯಿಂದ ಜನಗಳನ್ನು ಮೊಲ ನರಿಗಳನ್ನು ಕೊಲ್ಲುವಂತೆ ಕೊಂದಿದ್ದಾನೆ. ಏಟು ತಿಂದು ನರಳುತ್ತಿದ್ದವರಿಗೆ ನೀರು ಕೊಡದೆ ಸಾಯಿಸಿದ್ದುನೆ. ಇಂತಹ ರಾಕ್ಷಸ ಕೃತ್ಯ ಇದುವರೆಗೆ ನಡೆದಿರಲಿಲ್ಲ.

ಇಬ್ಬರೂ ಯೋಚಿಸುತ್ತಿದ್ದಾರೆ: ನಾಯಕನಿಗೆ ಹೆಚ್ಚು ಯೋಚನೆ : “ಸರಕಾರ ಅವನನ್ನು ಬಿಡುವುದಿಲ್ಲ. ನೋಡುತ್ತಿರು ಮಲ್ಲಿ. ನಾಳೆ ನಾಡಿದ್ದಿನ ಪೇಪರ್ನಲ್ಲಿ ಅವನನ್ನು ಹಿಡಿದು ಗುಂಡಿನ ಬಾಯಿಗೆ ಕೊಟ್ಟರು ಎಂದು ವರ್ತಮಾನ ಬರದೇ ಇದ್ದರೆ ಕೇಳು?” ಎಂದು ಹೇಳುತ್ತಿದ್ದಾನೆ.

” ನಮಗೆ ಇದೆಲ್ಲ ತಿಳಿಯುವುದಿಲ್ಲ. ಮೇಷ್ಟು ಬಂದರೆ, ಎಲ್ಲಾ ಹೇಳುತ್ತಾರೆ” ಎಂದು ಮಲ್ಲಿಯೂ ಕಾತರಳಾಗಿ ನುಡಿದಳು.

ಆಳು ಬಂದು ಮೇಷ್ಟರು ಬಂದಿರುವುದನ್ನು ತಿಳಿಸಿದನು.

ಮಲ್ಲಿಯು ಸೆರಗು ಕೂದಲು ಸರಿಮಾಡಿಕೊಂಡು ದೂರ ಸರಿದು ಕೂತಳು.

ನರಸಿಂಹಯ್ಯನು ‘ಬರುತ್ತಿರುವ ಹಾಗೆ ಕಣ್ಣೀರು ಸುರಿಸುತ್ತಿ ದ್ದಾನೆ. ಎಷ್ಟು ಒರೆಸಿಕೊಂಡರೂ ನಿಲ್ಲದು : ಮೂಗು ಕಣ್ಣು ಕೆಂಪಗೆ ಉರಿಯುವಂತೆ “ಕಾಣಿಸುತ್ತಿವೆ.

ಮಲ್ಲಿಯು ಎದ್ದು ಸರ್ರನೆ ಹೋಗಿ ಒಂದು ಚೆಂಬು ನೀರು ಚೌಕ ತಂದುಕೊಟ್ಟು “ಮೊದಲು ಮೊಕತೊಳೆದುಕೊಳ್ಳಿ. ಆಮೇಲೆ ಮಾತು” ಎಂದಳು.

“ಯಾರಮ್ಮಿ? ಮೊದಲು ಟೀ ತತ್ತಾ!” ಎಂದು ಹೇಳಿಬಂದಳು.

ನರಸಿಂಹಯ್ಯನು ಅಳುವುದನ್ನು ಅದುವರೆಗೂ ಯಾರೂ ನೋಡಿ ರಲಿಲ್ಲ. ನಾಯಕನಂತೂ ಆಶ್ಚರ್ಯದಿಂದ ಅವಾಕ್ಕಾಗಿದ್ದಾನೆ. ನರಸಿಂಹಯ್ಯನು ಮೊಕವನ್ನು ತೊಳೆದುಕೊಂಡು ಬಂದನು. ಆ ವೇಳೆಗೆ ಟೀ ಬಂತು:

“ಏನಾದರೂ ತಿಂಡಿ ಬೇಕೆ?”

” ಏನೂ ಬೇಡಿ. ”

“ಊಟವಾದ ಹಾಗಿಲ್ಲ. ?

” ಇಲ್ಲ. ಇವೊತ್ತು ಊಟ ಸೇರಲಿಲ್ಲ. ನಿನ್ನೆ ಸಾಯಂಕಾಲ ದಿಂದ ನನಗೆ ರೇಗಿಹೋಗಿದೆ. ನನಗೆ ರಿವಾಲ್ಲರ್ ಇದ್ದಿದ್ದರೆ ಇಬ್ಬರು ಮೂರು ಜನ ಬ್ರಿಟಿಷರನ್ನು ಕೊಂದು ನಾನೂ ಸಾಯುತ್ತಿದ್ದೆ. ಅಯ್ಯೋ ! ನಮ್ಮ ದೇಶದಲ್ಲಿ ಕೇಳುವವರಿಲ್ಲದಂತಾಯಿತಲ್ಲ. ?

ಮತ್ತೆ ನರಸಿಂಹಯ್ಯ ಅಳುವುದಕ್ಕೆ ಆರಂಭಿಸಿದ.

ಮಲ್ಲಿ ಒಂದು ಗಳಿಗೆ ನೋಡಿದಳು: ಗಂಡನ ಮುಖವನ್ನು ನೋಡಿದಳು. ಉತ್ತರ ಕಣದಲ್ಲಿ ” ಮೇಷ್ಟೆ! ಯಾವ ನ್ಯಾಯ? ನಮ್ಮಮ್ಮ ಸತ್ತಾಗ ನಾನು ಅತ್ತರೆ ನನಗೆ ವೇದಾಂತ ಹೇಳಿದಿರಿ. ಈಗ ನೀವೇ ಅಳುತ್ತಿರುವಿರಲ್ಲಾ !” ಎಂದಳು.

ನರಸಿಂಹಯ್ಯನು ಕಣ್ಣು ಮೂಗು ಒರೆಸಿಕೊಂಡು ಹೇಳಿದನು: “ಮಲ್ಲಮ್ಮಣ್ಣಿಯವರೆ, ಇದು ಕುಟುಂಬದ ವಿಚಾರವಲ್ಲ. ದೇಶದ ವಿಚಾರ. ನಿಮಗೆ ಗೊತ್ತೆ ? ಮುನ್ನೂರು ಜನ ಸತ್ತಿದ್ದಾರೆ. ನೂರಾರು ಜನ ರಾತ್ರಿಯೆಲ್ಲಾ ಒದ್ದಾಡಿ ಸತ್ತಿದ್ದಾರೆ. ಇನ್ನು ಎಷ್ಟು ಜನ ನಾಪತ್ತೆ ಯಾಗಿದ್ದಾರೋ ? ಎಷ್ಟು ಜನರನ್ನು ಪೋಲೀಸಿನವರು ಎಳೆದು ಕೊಂಡು ಹೋಗಿ ಠಾಣಾಗಳಲ್ಲಿ ಹಾಕಿಕೊಂಡಿದ್ದಾರೋ?”

ಮಾತು ಮಾತಿಗೂ ಬೇಡವೆಂದು ಅಡ್ಡಬರುವಂತೆ ಗಂಟಲು ಕಟ್ಟುತ್ತದೆ: ಬಿಕ್ಕಿ ಬಿಕ್ಕಿ ಅಳುಬರುತ್ತದೆ : ಏನು ಮಾಡಿದರಣ ದುಃಖ ನಿಲ್ಲದು.

ಮಲ್ಲಿಯು ಮೆಲ್ಲಗೆ ಮಾತನಾಡುತ್ತ “ಮೇಷ್ಟ್ರೆ! ನೀವು ಬಲ್ಲ ವರು. ತಡೆದುಕೊಳ್ಳಿ. ಈ ಟೀ ಕುಡಿಯಿರಿ” ಎಂದು ಸಮಾಧಾನ ಮಾಡಿದಳು. ಅವಳ ಮಾತು ಮೀರಲಾರದೆ ನರಸಿಂಹಯ್ಯನು ಟೀ ಮಲ್ಲಿಯು ಕೇಳಿದಳು: “ಕುಟುಂಬದ ಸಮಾಚಾರ, ನಿಜ ಅವೊತ್ತು ! ಇವೊತ್ತು ತಾವೂ ಇದನ್ನು ದೇಶದ ಸಮಾಚಾರವೆಂದು ಅತ್ತಿಡಿ.

“ತಾವು ಅಂದು ಹೇಳಿದಂತೆ ಇಂದು ನಾನೂ ಗೀತೆಯನ್ನೇ, ಹೇಳುತ್ತೇನೆ. ” ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಂ

ಕ್ಲೈಬ್ಲ್ಯಂ ಮಾಸ್ಮಗಮಃ ಪಾರ್ಥ ಸೃತಿ ನೈತತ್ತ್ವಯ್ಯುಪದ್ಯತೇ

ಕ್ಷುದ್ರಂ ಹೃದಯ ದೌರ್ಜಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ.’ ಇದು ಅಳುವ ಸಮಯವೇ ದೇವ! ಅಳುವುದು ಕೈಲಾಗದಾಗ. ಈಗ ಏನು ಮಾಡಬೇಕೋ ಯೋಚಿಸಿ ನಿಮ್ಮ ಜೊತೆಗೆ ನಾವೂ ಬುದ್ದಿಯವರೂ ಸಿದ್ದವಾಗಿದೇವೆ. ಅಳುವುದು ಬೇಡವೆಂದ ನೀವೇ ಅಳುವುದಾದಕ್ಕೆ ಕೆತ್ತಬಲ್ಗತ್ತಲೆಗೆ ತರಣಿ ಮುಂಗಾಣದಿರೆ ಪೊತ್ತುವೆಳಗಂ ತೋರ್ಪ ರಾರ್ ಎಂಬಂತಾಗುವುದಲ್ಲವೆ? ಅಥವಾ ಗುರುಗಳು ತಾವೇ ಅಳುತ್ತಿ ರುವಿರೆಂದು ನಾವೂ ಅಳುವನ್ನು ಆರಂಭಿಸೋಣವೆ? ಅಪ್ಪಣೆಯಾಗಲಿ, ಗುರುವೆ ! ದೇಶದ ಸಮಾಚಾರವೆಂದಿರಿ. ದೇಶವೆಂದರೆ ನಾವೇ ತಾನೇ!”

ನರಸಿಂಹಯ್ಯನಿಗೆ ಏನೋ ಮೂಢ ಭಾವ. ಕೋಪ, ರೋಷ, ಕ್ರೋಧ, ತಾನೆ ತಾನಾಗಿದೆ. ಹೊಡಿ, ಕಡಿ, ತಿವಿ, ಕೊಲ್ಲು, ಎನ್ನುವ ಭಾವ ಬಲಿಯುತ್ತಿದೆ. ಅದನ್ನು ಮುಚ್ಚಿಟ್ಟು ಕೊಳ್ಳಲು ಅವನು ಪ್ರಯತ್ನ ಮಾಡುತ್ತಿಲ್ಲ, ಅದನ್ನು ಕಂಡು ಮಲ್ಲಿಯು ನುಡಿದಳು ;

” ಗುರುವೇ, ನಮ್ಮ ಮಾತೃ ಭೂಮಿ ಇಂದು ನೊಂದಿದ್ದಾಳೆ. ಸ್ವಾತಂತ್ರವು ಬರುವುದು ಎಂದು ನಿರೀಕ್ಷಿಸಿದ್ದಾಗ, ಸಭೆಯನ್ನೂ ಸೇರಿ ಸಲೂ ನಿಮಗೆ ಸ್ವಾತಂತ್ರ್ಯವಿಲ್ಲ ಎಂದು ಸರಕಾರವು ಘೋಷಿಸಿ ದೇಶ ಭಕ್ತರ ಹೃದಯದಲ್ಲಿ ಚೂರಿಯನ್ನು ನೆಟ್ಟಿದೆ. ಇಂದು ನಮ್ಮಲ್ಲಿ ಮದ್ದಿಲ್ಲ ಗುಂಡಿಲ್ಲ. ನಾವೇನು ಮಾಡಬೇಕು? ಆದರಿಂದ ನಮಗಿರುವುದು ಒಂದೇ ಒಂದು ಜನಬಲ : ಅದನ್ನು ರೂಢಿಸಬೇಕು. ಹಮಾಂ ಕೋಮುಗಳೆಲ್ಲ ಸರಕಾರವನ್ನು ಪ್ರತಿಭಟಿಸುವಂತೆ ಮಾಡಬೇಕು. ಅದರಿಂದ ಅದಕ್ಕಿರು ವುದು ಒಂದೇ ಒಂದು ದಾರಿ. ಗುರುವೇ, ಒಂದೇ ದಾರಿ. ಅದು ಯುಧ್ಯಸ್ವವಿಗತಜ್ವರಃ” ನಾಯಕನು ವಿಷಯಾಂತರ ಮಾಡಿ ನರಸಿಂಹಯ್ಯನನ್ನು ಸಮಾ ಧಾನ ಪಡಿಸಲು ಪ್ರಶ್ನೆಯನ್ನು ಕೇಳಿದನು :

“ಅದೆಲ್ಲಿರುವುದು ಆ ಜಲಿರ್ಯವಾಲ್ ಬಾಗ್ ಎನ್ನುವುದು?”

“ಅಮ್ಬತಸರದ ಒಂದು ಉಪವನ ಅದು. ಸುತ್ತಲೂ ಗೋಡೆ. ಇರುವುದು ಒಂದು ಬಾಗಿಲು. ಅದರಲ್ಲಿ ಜನ ಸೇರಿದ್ದರು. ರಾಕ್ಷಸ ಡೈಯರ್‌ನು ಆ ಬಾಗಿಲಿನಲ್ಲಿ ಮೆಷೀನ್‌ಗನ್‌ ಇರಿಸಿ ಜನರನ್ನು ಕೊಲ್ಲಿಸಿದ. ಕಲ್ಕತ್ತೆಯ ಕತ್ತಲೆಯ ಕೋಣೆಯ ಸುಳ್ಳು ಸುದ್ದಿ ಹಬ್ಬಿಸಿ ಆಗ ಇಂಗ್ಲಿಷ್ ಜನಾಂಗವನ್ನು ರೇಗಿಸಿದ ಸಿರಾಜುದ್ದೀನನನ್ನು ಧ್ವಂಸಮಾಡಿ ಸಿತು ಆಗಿನ ಕುಂಸಣಿಸರಕಾರ. ಈಗ ನೂರಾರು ಜನರನ್ನು ನಿಷ್ಕರುಣೆ ಯಿಂದ ಕೊಲ್ಲಿಸಿದೆ ಪಾಪಿ ಇನ್ನೂ ಬದುಕಿದ್ದಾನೆ.”

“ನೀವೇನು ಮಾಡಬೇಕೂಂತೀರಿ? ”

” ಮಾಡುವುದೇನು ಸಾರ್ ! ಮಾತಿಗೆ ತಪ್ಪಿರುವ ಸರ್ಕಾರ, ಪ್ರಜಾದ್ರೋಹಿಯನ್ನು ಸಹಿಸುವ ಸರಕಾರ, ಇದಕ್ಕೆ ಧಿಕ್ಕಾರ ಎಂದು ಕೂಗಿಕೊಂಡು ದೇಶವೆಲ್ಲಾ ತಿರುಗಬೇಕು. ಬಂಗಾಳದಲ್ಲಿ ಮಾಡುತ್ತಿ ರುವ ಹಾಗೆ ಹೆಂಗಸರು ಹುಡುಗರೂ ಸಹ ಬ್ರಿಟಿಷರ ತಲೆ ಕಂಡರೆ ಬಾಂಬು ಹಾಕಬೇಕು.?

“ನೀವು ‘ಬಾಂಬು ಮಾಡುವುದು ಹೇಗೆ ಸಾರ್ ?”

“ಹೇಗೇನು ? ಅರವಿಂದರ ವಿಚಾರಣೆ ಆದ ಮೇಲೆ ನಡೆದ ಇನ್ನೊಂದು ವಿಚಾರಣೆಯಲ್ಲಿ ಒಬ್ಬ ಅಪರಾಧಿ ಎನ್ನಿಸಿಕೊಂಡವನು ಬಾಂಬು ಮಾಡುವ ಕ್ರಮವನ್ನು ಹೇಳಿದ್ದಾನೆ. ಇಂಗ್ಲಿಷರೆಲ್ಲ ಇಲ್ಲಿರು ವುದು ಸುಮಾರು ಮೂರು ಲಕ್ಷ. ಮೂರು ಲಕ್ಷ ನಮ್ಮ ಜನ ಪ್ರಾಣ ಕೊಟ್ಟರೆ, ಒಂದೇ ಒಂದು ದಿನದಲ್ಲಿ ಇಂಡಿಯಾ ಸ್ವರಾಜ್ಯವನ್ನು ಸ್ಥಾಪಿ ಸಬಹುದು. ”

“ಅವರಲ್ಲಿ ಆಯುಧಗಳಿವೆ. ನಮ್ಮಲ್ಲಿಲ್ಲ. ?

“ಆಗಲಿ, ಸಾರ್. ಒಬ್ಬೊಬ್ಬನು ಹತ್ತು ಜನರನ್ನು ಕೊಂದಾನೆ? ನೂರು ಜನರನ್ನು ಕೊಂದಾನೆ ? ನೂರುಜನ ಒಬ್ಬನಿಗೆ ಬಲಿ ಅಂದರೂ ಮೂರು ಕೋಟಿ ಆಯಿತು. ಮೂವತ್ತು ಮೂರರಲ್ಲಿ ಮೂರು ಹೋದರೂ ಇನ್ನೂ ಮೂವತ್ತು ಕೋಟಿ ಇರುವುದಲ್ಲ? ಈಗೇನಾಗಿದೆ ಗೊತ್ತೆ ? ಎಲ್ಲರಿಗೂರೇಗಿದೆ. ಮುಸಲ್ಮಾನರು ತಮ್ಮ ಖಿಲಾಫತ್ ಹೋಯಿತು ಎಂದು ರೇಗಿದ್ದಾರೆ. ರೌಲತ್ ಆಕ್ಸ್ ತಂದಿದ್ದಾರೆ ಎಂದು ಹಿಂದೂ ಮುಸಲ್ಮಾನ್‌ ಇಬ್ಬರೂ ರೇಗಿದ್ದಾರೆ. ಎಲ್ಲರೂ ಹಿಂದೂ ಮುಸಲ್ಮಾನ್‌ ಕೀಜ್ಛೆ, ಡೌನ್ ವಿತ್ ಬ್ರಿಟಷ್ರಾಜ್ ಎನ್ನುತ್ತಿದ್ದಾರೆ. ಆ ಗಾಂಧಿಯ ವರು ಮಾತ್ರ ಎಲ್ಲರನ್ನೂ ತಡೆಯುತ್ತಿದ್ದಾರೆ.”

“ಗಾಂಧೀಗೆ ಎಲ್ಲರನ್ನೂ ತಡೆಯುವ ಶಕ್ತಿ ಇದೆಯೇ? ”

“ಅದೇ ಆಶ್ಚರ್ಯ, ತಿಲಕರು ಏನೂ ಇಲ್ಲದೆ ರೇಗುವವರು ; ಅವರು ಸುಮ್ಮನಿದ್ದಾರೆ. ಬೆಸೆಂಟರು ಸುಮ್ಮನಿದ್ದಾರೆ. ಈತನ ಮಾತೇ ಮಾತಾಗಿದೆ. ”

“ಆತನಲ್ಲಿ ಅಂಥಾ ಶಕ್ತಿ ಏನಿದೆ?”

“ಹಿಂದಿನ ಕಾಲದ ಸಾಧುಗಳ ಹಾಗೆ ಮಾತೆತ್ತಿದರೆ “ನನಗೆ ಅಂತರ್ವಾಣಿ ಹೇಳಿತು’ ಎಂದು ಇತರರ ಬಾಯಿ ಮುಚ್ಚಿಸುತ್ತಾನೆ. ಒಂದು ಸಲ ತಿಲಕರು ರೇಗಿ “ಏನ್ರಿ, ನಿಮಗೆ ಮಾತ್ರವೇ ಏನು ಅಂತ ರ್ವಾಣಿ ಇರುವುದು? ಇನ್ನು ಯಾರಿಗೂ ಇಲ್ಲವೇ ಇಲ್ಲವೋ? ‘ ಎಂದು ಪ್ರತಿ ಭಟಸಿದರು. ಈಗ ಸತ್ಯಾಗ್ರಹವಂತೆ! ಅಹಿಂಸೆಯಂತೆ! ಇನ್ನೊಂದು ವಿಷಯ ಗೊತ್ತೇನು ? ನಮ್ಮ ಪೊಫೆಸರ್ರು ರಾಧಾಕೃಷ್ಣನ್‌ ಅವರು ಯಾವಾಗಲೂ ನಗುನಗುತ್ತ ಇರುವವರು. ಅವರು ಕೂಡ ರೇಗಿದ್ದಾರೆ. ಈ ಗಾಂಧಿ ಸೌತ್ ಆಫ್ರಿಕದಲ್ಲಿ ಹೂಡಿದಂತೆ ಇಲ್ಲಿಯೂ ಸತ್ಯಾಗ್ರಹ ಹೊಡಬೇಕೆಂದಿದ್ದಾರೆ. ಕ್ರಿಸ್ತನು ಹೇಳಿದ ಉಪದೇಶದಂತೆ ಒಂದು ಕನ್ನೆಗೆ ಹೊಡೆದರೆ ಇನ್ನೊಂದ ಕೆನ್ನೆಯನ್ನು ತೋರಿಸುವುದಕ್ಕೆ ಸಿದ್ಧರಾಗಿ ದ್ದಾರೆ. ಅಲ್ಲಿ ಸೋತಿರುವ ಬ್ರಿಟಿಷರು ಇಲ್ಲಿ ಗೆಲ್ಲಬೇಕೆಂದು ಎರಡು ಕೆನ್ನೆ ಹೊಡೆದು ತಲೆಯನ್ನು ಒಡೆಯುವುದಕ್ಕೂ ಸಿದ್ಧವಾಗಿದ್ದಾರೆ. ಅಲ್ಲಿ ಜನವೆಲ್ಲ ಗಾಂಧಿಯ ಮಾತು ಕೇಳಲು ಸಿದ್ದವಾಗಿತ್ತು: ಒಂದು ಮನಸ್ಸಿ ನೆಂದ ನಡೆಯಲು ಒಪ್ಪಿತ್ತು. ಇಲ್ಲಿ ಬಂಗಾಳಿಗೆ ಮರಾಠಾ ಕಂಡರೆ ಆಗುವುದಿಲ್ಲ. ಪಂಜಾಬಿಗೆ ಮದರಾಸಿ ಕಂಡರೆ ಆಗುವುದಿಲ್ಲ. ಸಿ. ಪಿ. ಯಲ್ಲಿ ಗಲಾಟೆಯಾದರೆ ಮಲಬಾರಿ ಸಿಪಾಯಿಗಳನ್ನು ಬಿಟ್ಟು ಹೊಡೆಸುತ್ತಾರೆ. ಮದರಾಸಿನಲ್ಲಿ ಗಲಾಟಿಯಾದರೆ ಸಿಕ್ಕರನ್ನು ಬಿಡುತ್ತಾರೆ. ಸಿಕ್ಕರೇ ಗಲಾಟೆ ಮಾಡಿದರೆ ಘೂರ್ಕರನ್ನು ಬಿಡುತ್ತಾರೆ. ಹೀಗೆ ದೇಶದ ವಿಶಾಲತೆಯೇ ನಮಗೆ ಮೃತ್ಯುವಾಗುವಂತೆ ಮಾಡಿದ್ದಾರೆ. ಇಲ್ಲಿ ಸತ್ಯಾಗ್ರಹ ಗೆಲ್ಲುವುದೂ ನಿಜವೇ? ತಿಲಕರು ಹೇಳುವಂತೆ ಶಠಂ ಪ್ರತಿಶಾಠ್ಯಂ. ಅದೊಂದೇದಾರಿ! ಹೊಡೆತಕ್ಕೆ ಹೊಡೆತ ಎನ್ನುತ್ತಿದ್ದಾರೆ. ಈತ ಅದೇನೋ ವಿಚಿತ್ರ ಪುರುಷನಾಗಿದ್ದಾಸೆ. ಅದಿರಲಿ ಮಲ್ಲಮಣ್ಣಿ ನಾನಿನ್ನು ಅಳುವುದಿಲ್ಲ. ಆದುದು ಅಗಲಿ. ತಮ್ಮ ಮಾತಿನಂತೆ ಯು ಧ್ಯಸ್ವ ವಿಗತಜ್ವರಃ ಎಂದುಕೊಂಡು ಹೊರಡುತ್ತೇನೆ.”

ಮಲ್ಲಣ್ಣ ಶಂಭುರಾಮಯ್ಯ ಇಬ್ಬರೂ ಬಂದರು. ಶಂಭು ರಾಮಯ್ಯನು ಪತ್ರಿಕೆಯನ್ನು ಹಿಡಿದಿದ್ದನು. ಏನೋ ಹೇಳುವುದಕ್ಕೇ ಬಂದಂತಿತ್ತು.

ನಾಯಕನೂ ಹೇಳಿದನು : “ಏನು ಸಮಾಚಾರ? ?

“ಟಾಗೋರರು ‘ಸರ್’ ಟೈಟಲನ್ನು ಒಂದಕ್ಕೆ ಕೊಟ್ಟು ಬಿಟ್ಟಿದ್ದಾರೆ”

ನಾಯಕನಿಗೆ ಏನೋ ಮಧ್ಯಾಹ್ನ ಮೂರು ಗಂಟೆಯಲ್ಲಿ ಸೂರ್ಯ ನು ಇದ್ದಕ್ಕಿದ್ದಂತೆ ಆಸ್ತಮಯವಾದಂತಾಯಿತು.

“ನಿಜವಾಗಿ!”

ಶಂಭುರಾಮಯ್ಯನು ಪತ್ರಿಕೆಯನ್ನು ಕೊಟ್ಟನು. ಮದರಾಸ್ ಪತ್ರಿಕೆಯೋದು ಟಾಗೂರರನ್ನು ವಾಚಾಮಗೋಚರವಾಗಿ ಬಯ್ದಿದೆ. “ಇವರು ಬಿರದುಗಳನ್ನು ಗುಲಾಮಗಿರಿಯ ಗುರುತು ಎಂದು ಹೆಸ ರಿಟ್ಟು ಬಿಟ್ಟಿದ್ದಾರೆ. ಇವರಂತಹವರಿಗೂ ಈ ಭಾವ ಬಂದಿರುವುದು ನಂಬುವುದಕ್ಕಾಗುವುದಿಲ್ಲ. ಈ ಮಾತಿನಿಂದ ಆಳೆಯಬೇಕೆಂದರೆ ಕವೀಂದ್ರರಿಗೆ ಹುಚ್ಚು ಹಿಡಿದಿದೆ ಎನ್ನಬೇಕು. ಆ ಸೌತ್ ಆಫ್ರ್ರಿಕನ್‌ ಕಾಡು ಮನುಷ್ಯನ ಪ್ರಭಾವ ಇದು ಎಂದು ಆದರೆ, ಆ ಮನುಷ್ಯನು ಇತರರಿಗೂ ಹೆಚು ಹಿಡಿಸುವುದೆರೊಳಗಾಗಿ ಆತನನ್ನು ವಿಚಾರಣೆ ಮಾಡದೆಯೆ ಗಲ್ಲಿಗೇರಿಸಬೇಕು. ”

ನಾಯಕನು ಅಸಹ್ಯ ಪಡುತ್ತಿದ್ದಾನೆ.

ನರಸಿಂಹಯ್ಯನು ತೆಕೆದೂಗು ಗುತಿದ್ದಾನೆ.

ಮಲ್ಲಿಯು ಏನೋ ಲಾಭವಾದಂತೆ ಥಟ್ಟನೆ ಎದ್ದು “ಮೇಷ್ಟ್ರೆ ಇಂಧಿ ಗೆದ್ದರು.” ಎಂದಳು.

“ಹಾಗೆಂದರೆ ?”

“ಈ ಮದ್ರಾಸ್ ಪತ್ರಿಕೆ ಸರಕಾರದ ಕಡೆ ಬರೆಯುವ ಪತ್ರಿಕೆ. ಅದು ಟಾಗೂರರನ್ನು ಬಯುತ್ತಾ, ಇವರು ಹೀಗಾದುದು ಗಾಂಧಿಯವ ರಿಂದ ಎಂದಿದೆ. ಅವರ ಪ್ರಭಾವ ಬೆಳೆಯುತ್ತದೆ ಎಂದು ಹೆದರಿ ಅವರನ್ನು ಗಲ್ಲಿಗೇರಿಸಬೇಕು ಎಂದಿದೆ. ಶತ್ರುಗಳು ರೇಗಿದರಲ್ಲವೆ ನಮಗೆ ಜಯ ? ಇನ್ನು ದಿಗಿಲಿಲ್ಲ.”

ತನ್ನ ಬಾಯಿಂದ ತಾನೇ ಉಗುಳಿದ ಎಂಜಲನ್ನೇಹಾರ ಮಾಡಿ ಕೊಂಡು ಅದರ ಬಲದಿಂದಲೇ ಹತ್ತಿ ಇಳಿಯುವ ಜಾಡನಂತೆ, ಮಲ್ಲಿಯು ಶತ್ರುಗಳ ರೇಗೆಂಬ ಸಣ್ಣ, ಸೂಕ್ಷ್ಮ ತಂತುವನ್ನು ಹಿಡಿದು ಗಾಂಧಿಯ ವರ ಜಯವನ್ನು ಕಾಣುತ್ತಿರುವುದನ್ನು ಕಂಡು ನರಸಿಂಹಯ್ಯನಿಗೆ ನಗು ಬಂತು. “ಮಗಳೇ ಬ್ರಿಟಿಷ್‌ರನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಬ್ರಿಟಿಷ್‌ನೊಬ್ಬನು ಇಂಡಿಯದಲ್ಲಿ ಇರುವವರೆಗೂ ಇಂಡಿಯಕ್ಕೆ ಸ್ವಾತಂತ್ರ್ಯವಿಲ್ಲ. ಬೇಕೆಂದರೆ ಹಡಗಿನಲ್ಲಿ ಕೂತಲ್ಲಿ ನಡಗೆಯಲ್ಲಿ ಇಂಗ್ಲೆಂಡಿನಲ್ಲಿರುವವರೆಲ್ಲಾ ಇಂಡಿಯಕ್ಕೆ ಬಂದು ಬಿಟ್ಟಾರು. ಆದರೂ ನೀನು ಹೇಳಿದುದರಲ್ಲಿ ಸತ್ಯವಿಲ್ಲದೆ ಇಲ್ಲ. ಬ್ರಿಟಿಷರೊಡನೆ ಅಸಹಕ ರಿಸುವುದು ನಮಗೆ ಇನ್ನೊಂದು ನೈತಿಕ ಬಲವನ್ನು ಕೊಡುತ್ತದೆ. ಅಲ್ಲಿಗೆ ಎದುರಾಳಿ ಅಯೋಗ್ಯನೆಂದು ಲೋಕಕ್ಕೆ ತೋರಿಸಿ ಕೊಟ್ಟಂತಾಗು ತ್ತದೆ. ಟಾಗೋರರು ಹಾಕಿ ಕೊಟ್ಟಿರುವ ಈ ದಾರಿಯೇ ಕಹು ಸತ್ರಾಗ್ರಹದ ರಥ ಮುಂದೆ ಹೋಗಲು ಹೆದ್ದಾರಿಯಾಗುವುದೇನೋ? ನಾನು ಇಲ್ಲಿಗೆ ಬಂದಾಗ ಸರ್ವಸ್ವವೂ ಹೋಯಿತು ಎಂದು ಅಳುತ್ತಾ ಬಂದೆ. ನಿನ್ನ ಮಾತು ನನಗೆ ಸೊಸಬೆಳಕನ್ನು ಕೊಡುತ್ತಿದೆ. ಬಹುಶಃ ಗಾಂಧಿಯ ಮಾತೇ ಸರಿಯೇನೋ ? ಆಗಲಿ, ಮಗಳೇ, ನೀನೆ ನನ್ನ ಪಾಲಿನ ಭಾರತಿ. ಕಾಯುತ್ತೇನೆ. ‘ಯುಧ್ಯಸ್ವ ವಿಗತಜ್ವರಃ’ ಎಂಬ ನಿನ್ನ ಮಾತನ್ನು ದೇವರಾಣತಿಯಂತೆ ಪಾಲಿಸುತ್ತೇನೆ.”

ಮಲ್ಲಿಯು ಏನೋ ಹೇಳ ಹೋದಳು. ನಾಯಕನು ತಡೆದನು.

ಮಲ್ಲಣ್ಣನ ಕಡೆತಿರುಗಿ ” ಏನು? ” ಎಂದನು.

ಮಲ್ಲಣ್ಣನು ಏನೊ ಗಂಭೀರವಾದ ಮುಖ ಮುದ್ರೆಯನ್ನು ಪ್ರದ ರ್ಶಿಸುತ್ತಾ “ಬುದ್ಧಿಯವರಲ್ಲಿ ಏನೋ ಹೇಳಬೇಕೆಂದಿದ್ದೆ. ಸಮಯ ಹೆಂಗೋ? ” ಎಂದನು.

ನಾಯಕನಿಗೆ ವಿಷಯಾಂತರವಾಗುವುದು ಬೇಕಾಗಿತ್ತು. “ಹೇಳಿ? ಎಂದು ಕೂಡಲೇ ಹೇಳಿದನು. ಇಬ್ಬರೂ ಇನ್ನೂ ನಿಂತಿರುವುದನ್ನು ಕಂಡು ಕುಳಿತು ಕೊಳ್ಳಿ ಎಂದನು. ಇಬ್ಬರೂ ಕುಳಿತರು. ಮಲ್ಲಣ್ಣನು ಹೇಳಿದನು.

” ಬುದ್ದಿಯೋರ ಪಾದದಲ್ಲಿ ಮಲ್ಲಮ್ಮನ ನೋಡಿಕೊಂಡು ಸುಖ ವಾಗೇ ಇದ್ದೀನಿ. ಅದರೂ ಒಂಟಿ ಹಕ್ಕಿ ಪತರಗುಟ್ಟೋಹಂಗೆ ಜೀವ ಬಾಳಾ ಒದ್ದಾಡುತದೆ. ಅಪ್ಪಣೆಯಾದರೆ ನಾನು ಕಾಸೀ ರಾಮೇಶ್ವರ ತಿರುಗಿಕೊಂಡು ಬರೋವ ಅಂತ ಅನ್ನಿಸ್ತಾ ಅದೆ.”

“ಈಗ ಎಲ್ಲೆಲ್ಲೂ ಜನ ಹಿಡಿದು ಜೈಲಿಗೆ ತುಂಬುತ್ತಾ ಅವರಂತೆ. ಈಗಲೇ ಯಾತ್ರೆ ? ಏನು ನರಸಿಂಹಯ್ಯನವರೇ ? ”

“ಇಲ್ಲ ಸಾರ್, ಮಲ್ಲಣ್ಣ ನೋರ ಮಾತಿನಲ್ಲಿ ಒಂದು ಅಂಶವಿಡೆ. ಈಗ ಅವರಲ್ಲ. ನಾವೆಲ್ಲ ಯಾತ್ರೆ ಹೋಗೋಣ. ಒಂದು ಸಲ ಪೆಷಾವರ್ ನಿಂದ ಕನ್ಯಾಕುಮಾರಿವರೆಗೆ, ಕರಾಚಿಯಿಂದ ಕಲಕತ್ತವರೆಗೆ ಅಲೆದು ಬರೋಣ. ನೀವು ನಿಮ್ಮ ರಾವ್ ಬಹದ್ದೂರ್ ಬಿರುದು ಬಿಟ್ಟು ಬಿಡಿ ಎನ್ನುವುದರಲ್ಲಿದ್ದೆ. ಬೇಡಿ. ಆದರ ಆಶ್ರಯದಲ್ಲಿ ಬ್ರಿಟಷ್ ಸರಕಾರದ ಭೀತಿಯಿಲ್ಲದೆ ದೇಶವನ್ನು ಅಲೆದು ಈ ಆಂದೋಳನ ಎಲ್ಲಿಯವರೆಗೂ ವ್ಯಾಪಿಸಿದೆ ನೊಡಿಕೊಂಡು ಬರೋಣ.”

“ಅಲ್ರೀ! ಈ ಸಲ ಬಿ.ಎ.ಗೆ ಕಟ್ಟುತ್ತೀರೇನೋ ?”

“ನನಗೆ ಬಿ. ಎ. ಆಗಿ ಆಗಬೇಕಾದ್ದೇನು ಸಾರ್ ! ಅದೊಂದು ಸರಕಾರೀ ನೌಕರಿಗೆ ಒಂದು ಸುಂಕದ ಚೀಟಿ. ಸರಕಾರ ಬೇಡ ಎನ್ನು ವವನು ಸರಕಾರದ ನೌಕರಿಗೆ ಏಕೆ ಆಸೆ ಬೀಳಬೇಕು ? ನನಗೆ ಕಾಲೇಜಿ ನಿಂದೆ ಯೂನಿವರ್ಸಿಟಿಯಿಂದ ಆಗಬೇಕಾದ ಪ್ರಯೋಜನವಾಗಿದೆ. ಅಲ್ಲಿರುವ ಮಹಾ ವಿದ್ವಾಂಸರ ಉಪದೇಶಗಳನ್ನು ಕೇಳಿ ಕೃತಾರ್ಥನಾಗಿದ್ದೇನೆ. ಈ ದೇಶಸೇವಾವ್ರತವು ನನ್ನ ಮನಸ್ಸಿಗೆ ಬಂದಿರುವುದು ಅವರ ಕೃಪೆಯಿಂದ. ಈಗ ನನಗೆ ತಿಳಿದಿರುವುದು ಸಾಕು. ಇದನ್ನು, ಜನಸಾಮಾನ್ಯಕ್ಕೆ ಹಂಚಬೇಕು. ಆ ಕಾಲವೂ ಬರುತ್ತಿದೆ. ಸಾರ್, ತಮ್ಮ ಅಪ್ಪಣೆಯಾದರೆ ಒಂದು ಕೆಲಸ ಮಾಡಬೇಕು ಎನ್ನಿಸುತ್ತಿದೆ : ಮಾಡುತ್ತೀನೆ. ”

“ಏನು ಹೇಳಿ?”

” ಈಗ ವಿದ್ಯಾಭ್ಯಾಸ ಅದರಲ್ಲೂ ಕಾಲೇಜಿನ ವಿದ್ಯಾಭ್ಯಾಸ ನಗರ ವಾಸಿಗಳಿಗೆ ಮಾತ್ರವಾಗಿದೆ. ಇನ್ನೂ ಹಳ್ಳಿಯವರು ಅಷ್ಟಾಗಿ ಬರು ತ್ತಿಲ್ಲ. ಅಂಥವರು ಕಾಲೇಜಿಗೆ ಬರುವುದಕ್ಕೆ ಅನುಕೂಲವಾಗಿರುವ. ಹಾಗೆ, ಒಂದೆರಡು ಸ್ಕಾಲರ್‌ಷಿಪ್ಸ್ ಕೊಡಬೇಕು. ವರ್ಷಕ್ಕೆ ಒಬ್ಬ ನಿಗೆ ೬೪ ರೂಪಾಯಿ ಆದರೆ ಸಾಕು. ಅಂಥದು ಎರಡು ಸ್ಕಾಲರ್ ಹಿಪ್ಸ್ ಕೊಡಲು ತಾವು ಕೊಟ್ಟಿರುವ ಹಣನನ್ನು ಯೂನಿವರ್ಸಿಟಿಗೆ ತಮ್ಮ ಹೆಸರಿನಲ್ಲೇ ಕೊಟ್ಟ ಬಿಡೋಣ ಎಂದಿದ್ದೇನೆ. ಅಪ್ಪಣೆಯಾಗ ಬೇಕು. ”

“ಆ ಹಣ ನಿಮ್ಮದು. ಅದನ್ನು ನೀವು ಏನು ಬೇಕಾದರೂ: ಮಾಡಬಹುದು. ?

“ನನ್ನದಲ್ಲ. ನಾನು ನ್ಯಾಯವಾಗಿ ಸಂಪಾದಿಸಿರುವುದು ಅದ ರಲ್ಲಿ ಒಂದೇ ಸಾವಿರ. ಉಳಿದ ನಾಲ್ಕು ಸಾವಿರ, ತಮ್ಮ ಮಲ್ಲಮ್ಮಣ್ಣಿ ಯವರ ಔದಾರ್ಯದಿಂದ ಬಂದುದು. ಅದರಿಂದ ಅದನ್ನು ತಮ್ಮ ದಂಪತಿಗಳ ಹೆಸರಿನಲ್ಲಿ ದಾನ ಮಾಡಿಬಿಡುತ್ತೇನೆ.?

ನಾಯಕನು ಮಲ್ಲಿಯ ಮುಖವನ್ನು ನೋಡಿದನು : ಅವಳು. ಅದೇನೋ ; ಮಲ್ಲಣ್ಣನ ಮುಖವನ್ನು ನೋಡಿದಳು. ಮಗಳು ತಂದೆ ಯೊಡನೆ ಏನು ಹೇಳಿದಳೋ? ಅವನು ಎದ್ದು ನಿಂತು “ಕೆಂಪೀ ಒಡವೆ ವಸ್ತಾ ಎಲ್ಲಾ ನನ್ನ ಅತ್ರಲೇ ಅದೆ. ಅದನೂ ಒಪ್ಪಿಸ್ತೀನಿ. ಎರಡು. ಪಾಲು ಮಾಡಿ ಒಂದು ಪಾಲು ಆ ಮಕ್ಕಳಿಗೆ ಇನ್ನೊಂದು ಪಾಲು. ಇವರು ಹೇಳೋಂಗೆ ಕಾಲರ್ ಷಿಪ್ಪಿಗೆ ಕೊಡಬೇಕು ಅಂತ ಕಾಣ್ತದೆ. ಬುದ್ದಿ, ಅದೂ ತಮ್ಮ ಹಣವೇ !”ನಾಯಕನು ನಕ್ಕನು. “ನಮ್ಮ ಹೆತ್ತಿರಲೂ ಕೊಂಚ ಹಣ ವಿದೆ. ನರಸಿಂಹಯ್ಯನವರೇ, ನಾನು ಮಹಾರಾಜರನ್ನು ಕಂಡು ಈ ಸ್ಕಾಲರ್‌ಷಿಪ್ ನದು ಗೊತ್ತು ಮಾಡುತ್ತೇನೆ. ‘ಅಷ್ಟೇ ಆಲ್ಲ. ಹಳ್ಳಿಯ ವರಿಗೆ ವಿದ್ಯಾಭ್ಯಾಸ ಬೇಕು: ಜ್ಞಾನ ಹಂಚಬೇಕು ಅಂದಿರಿ’ ಅದಕ್ಕೂ ಏರ್ಪಾಡು ಮಾಡೋಣ. ಸರಿಯಾದೋರನ್ನ ನೋಡಿ. ಈಗ ಮಜ್ಜಿಗೆಹಳ್ಳಿಯಲ್ಲಿರುವ ಎಲಿಮೆಂಟರಿಸ್ಕೂಲು ಮಿಡಲ್‌ಸ್ಕೂಲ್ ಆಗಲಿ. ಅದಕ್ಕೆ ಬೇಕದ್ದನ್ನೆಲ್ಲಾ ಮಾಡಿ ಆಂತ ಒಂದು ಐವತ್ತು ಸಾವಿರ. ಯೂನಿವರ್ಸಿಟಿಗೆ ಹಳ್ಳಿಯವರಿಗೆ ಸ್ಕಾಲರ್ ಷಿಪ್ಸ್‌ಗೆ ಅಂತ ಒಂದು ಲಕ್ಷ ಕೊಡುವ. ನಿಮ್ಮಲ್ಲಿ ಇರುವ ಹಣ ಇಟ್ಟುಕೊಂಡಿರಿ. ಬೆಟ್ಟ ಹತ್ತುವವನು ನೆಲ್ಲಿಕಾಯಿ ಎಸೆಯಬಾರದು. ”

ಒಂದು ಗಳಿಗೆ ಯಾರೂ ಮಾತಾಡಲಿಲ್ಲ. ಮಲ್ಲಣ್ಣ ” ನನ್ನ ಮಾತು” ಎಂದನು. ನಾಯಕರು ” ಇನ್ನೇನು ಸಂಕ್ರಾಂತಿ ಬಂತು. ರಥಸಪ್ತಮಿ ಆಗಿಹೋಗಲಿ. ಆಮೇಲೆ “ಎಲ್ಲರೂ ಹೋಗೋವ” ಎಂದನು.

ಆಳು ಬಂದು “ಹಕೀಂಸಾಬರು ಬಂದಿದ್ದಾರೆ” ಅಂದನು.

ಹಕೀಂ ಒಳಕ್ಕೆ ಬಂದನು. ಅವನು ಅತ್ತು ಅತ್ತು ಕಣ್ಣು ಕೆಂಪಗೆ ಆಗಿಹೋಗಿದೆ : ಊದಿಕೊಂಡಿದೆ. ಹಕೀಂನು ನಾಯಕನನ್ನು ಕಂಡು “ಖಾವಂದ್!” ಎಂದನು. ಮುಂದಕ್ಕೆ ಮಾತನಾಡಲಾಗಲಿಲ್ಲ. ನಾಯಕನು “ಏನು? ಏನು?” ಎಂದು ಆತುರವಾಗಿ ಕೇಳಿದನು.

“ಹೋಗಿಬುಟ್ಟೋ! ಎರಡೂ ಹೋಗಿಬುಟ್ಟೊ ! ರಾಣಿ, ಸುಲ್ತಾನ್‌ ಎರಡೂ ಬುಟ್ಟೋ !”

ಎಲ್ಲರೂ ಪೆಚ್ಚಾಗಿಹೋದರು. ನಾಯಕನ ಕಣ್ಣಿ೦ದ ಎರಡು ತೊಟ್ಟು ನೀರು ಉದುರಿತು. ನಿದಾನವಾಗಿ ಅಕ್ಷರ ಅಕ್ಷರವನ್ನೂ ಸೃಷ್ಟಿ ಮಾಡಿ ಹೊರಕ್ಕೆ ತೆಗೆದಿಡುವನಂತೆ “ಎರಡೂ ಹೋದವಾ! ಬೆಳಿಗ್ಗೆ ಚೆನ್ನಾಗ್ತಾ ಅವೆ ಅಂದೆಯಲ್ಲೋ ?” ಎಂದನು.

“ನಾನು ಊಟಕ್ಕೆ ಹೋದಾಗ ನೋಡ್ದೆ. ಎರಡೂ, ಪಾಪ, ಮೊಕದಲ್ಲಿ ಮೊಕ ಇಟ್ಟು ಮೂತಿ ಉಜ್ಜಿದುವು-ಮತ್ತೆ ಮೂರು ಗಂಟೇಲಿ ಹೋಗಿ ನೋಡ್ದೆ. ನಾಲು ಗಂಟೆಗೆ ಡಾಕ್ಟರು ಬಂದು ನೋಡಿ, ಇನ್ನೇನು ಇಲಾಖೆ ಬೇಕಿಲ್ಲ. ಹುರುಳಿ ಕಟ್ಟಿಸಿ ಅಂದನು. ನಂಗೂ ಧೈರ್ಯ ಆಯಿತು. ಹುರುಳಿ ಕಟ್ಟಿಸಿ ಮೈಯೆಲ್ಲಾ ಸವರಿಬಂದೆ. ಐದು ನಿಮಿಷ ಆಯಿತು: ಆಳು ಬಂದು ಎರಡೂ ಬಿದ್ದು ಹೋಗವೆ ಅಂದ. ಹೋಗಿ ನೋಡ್ತೀನಿ. ಎರಡೂ ಸತ್ತು ಮಲಗವೆ.”

ಹಕೀಂನ ದುಃಖ ಹೇಳತೀರದು. ನಾಯಕನು ಎದ್ದು ಕುದುರೆ ಗಳನ್ನು ನೋಡುವುದಕ್ಕೆ ಹೊರಟನು : ಮಲ್ಲಿಯೂ ಮೊಕ ಪೆಚ್ಚು ಮಾಡಿಕೊಂಡು ಹಿಂದೆ ಹೋದಳು. ಮಿಕ್ಕವರೂ ಅವರ ಹಿಂದೆ ಹೋದರು.
*****