ಆಹಾ! ಯಂತಾ ಶುಂದರಿ! ನಾನ ನೋಡಿ ಬಂದೇ
ಯಾವರ್ ದನುವೇನ ಶಂದ ಕಾನೂಶ್ತ ನಮ್ಮ ತಂಗೀ
ಯಾವರ್ ದನುವೇನ ಡೌಲು ತೋರುಶತನೇ || ೧ ||
ಬಂಗರ ಜುಲೇ ನಿಟ್ಟಿದಾನೆ ಕೆಂಪದ ಕಪ್ಪ ಲತ್ತಿದಾನೆ
ಯಾವರ್ ದನುವೇನ ಶಂದ ಕಾನೂಶತ ನಮ್ಮ ತಂಗೀ || ೨ ||
ಇಲ್ಲಿ ದಾರಿಯಲ್ಲಿ ಕುಂತಿ ಇಂತಾ ಶಲುವಿ ಯೆಲ್ಲುಕಾನೆ
ಕಲ್ಲಿನಂತಾ ದೇಯ ಕರಗಿ ನೀರಾ ನೀರಾ || ೩ ||
ಮುಂಡ್ಗಿ ಮುಂಡಾಸ್ ಕಟ್ಟಿದ್ದನೆ ಮುತ್ತಿನ ತೂರಾಯ್ ಇಟ್ಟಿದಾನೆ
ಹನ್ಯ ಮೇನೆ ನ್ಯಾಮದ್ ಬೊಟ್ಟು ತಲ್ಯುಮೇನೆ ಜುಟ್ಟು ಬಿಟ್ಟಿ || ೪ ||
ಬೆಲ್ಲದಂತಾ ಮುತ್ತುಕಟ್ಟಿ ಗಲ್ಲಗಲ್ಲವ ಕೊನಶಿದ್ದೆ
ಕಲ್ಲುಶಕ್ರೆ ಕಡ್ದಂಗಾಯ್ತು ಕರಾತರಾ || ೫ ||
*****
ಹೇಳಿದವರು: ಕುಟ್ಣಪ್ಪ ಹಾಣಿ ಗೌಡ, ವಂದೂರು
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.