ಶುದ್ಧ ಪ್ರಕೃತಿಯ ತುಂಬೆಲ್ಲ ವಿಧವಿಧದ ಸಂಗೀತ
ಇದಕಿಲ್ಲವಾವುದೇ ಪಕ್ಕ ವಾದ್ಯದ ಬಡಿತ
ಇದನಾಲೋಚಿಸುತೆಮ್ಮ ಮನ ಮೀಡಿತ
ಎದೆ ಬಡಿತ, ಹದತಪ್ಪಿದೆಮ್ಮ ಭೀತಸಂಗೀತವನು
ತಿದ್ದಿದೊಡೆಮ್ಮ ಬಾಳ ಸವಿಯುಳಿದೀತು ಖಚಿತ – ವಿಜ್ಞಾನೇಶ್ವರಾ
*****