ಬೇಡುವೆ ನಿತ್ಯ ಬೇಡುವೆ
ಗುರುವಿನ ಜ್ಞಾನವೊಂದೆ
ಪ್ರಭು ಚಿಂತನೆ ಧ್ಯಾನವೆಂದೆ
ಉಳಿದೆಲ್ಲ ಅಜ್ಞಾನವೆಂದೆ
ಬೇಡುವೆ ನಿತ್ಯ ಬೇಡುವೆ
ಶುದ್ಧ ಮನವು ನಿತ್ಯ
ಪ್ರಾಪಂಚಿಕ ಸುಳಿಯದಂತೆ
ಬೆಳಗಲಿ ದೇವನ ಸತ್ಯ
ಬೇಡುವೆ ನಿತ್ಯ ಬೇಡುವೆ
ಕಿರಿತನ ಇನ್ನು ಕಿರಿತನ
ಎನ್ನ ಹೊರತು ಅನ್ಯರೆಲ್ಲ
ನನಗಾಗಲಿ ಹಿರಿತನ
ಬೇಡುವೆ ನಿತ್ಯ ಬೇಡುವೆ
ಚಿಂತನೆ ಕೀರ್‍ತನೆ ನೆನೆ
ಎನ್ನ ಬಾಳಿನ ಅರೆಗಳಿಗೆಯಲ್ಲೂ
ಅರಳಲಿ ದೇವ ಸ್ಮರಣೆ
ಬೇಡುವೆ ನಿತ್ಯ ಬೇಡುವೆ
ನೆನೆದು ಹಸಿಯಾಗಲಿ ಮನ
ಕಣ್ಣೀರ ಕಂಬನಿ ಸುರಿಯಲಿ
ಮಾಣಿಕ್ಯ ವಿಠಲಪಾವನ
*****