ಪ್ರಗತಿ
Latest posts by ಸಿಂಪಿ ಲಿಂಗಣ್ಣ (see all)
- ಕಣ್ಮಸಕು - June 21, 2020
- ಮಾಡುವುದು ಮತ್ತು ಮುರಿಯುವುದು - February 19, 2020
- ಯಾರದು? - January 3, 2020
” ಮನುಷ್ಯನು ಹುಟ್ಟಬಂದ ಬಳಿಕ ತನ್ನ ಪ್ರವೃತ್ತಿಗನುಸಾರನಾಗಿ ವಿದ್ಯಾಭ್ಯಾಸ ಮಾಡುವನು. ಒಲವಿನ ಉದ್ಯೋಗ ಕೈಕೊಳ್ಳುವನು. ಆತನು ಶಿಲ್ಪಿಯಾಗಬಲ್ಲನು; ಕವಿಯಾಗಬಲ್ಲನು; ವ್ಯಾಪಾರಿಯಾಗಬಲ್ಲನು; ಸಾರ್ವಜನಿಕ ಜೀವನವನ್ನು ನಡೆಯಿಸಬಲ್ಲನು. ಆದರ ಅದರಲ್ಲಿ ಮನುಷ್ಯನು ಪ್ರಗತಿ ಹೊಂದಿದನೆಂದು ಭಾವಿಸುವುದು ಏತರ ಲಿಂದ? ಪ್ರಗತಿಯೆಂದು ಏತಕ್ಕೆ ಅನ್ನಲಾಗುತ್ತದೆ? ನಿಜವಾದ ಪ್ರಗತಿಯ ದಾರಿಯಾವುದು-? ಈ ಎಲ್ಲ ತೊಡಕುಗಳನ್ನು ಬಿಡಿಸಿಕೊಟ್ಟರೆ ಒಳ್ಳೆಯದಾಗುತ್ತದೆ” ಎಂದು ಜೀವಜ೦ಗುಳಿಯು ಪ್ರಾರ್ಥಿಸಿಕೊಂಡಿತು. […]