ವಾಹನದಟ್ಟಣೆ ಇರುವ ರಸ್ತೆಗಳಲ್ಲಿ ಪೆಟ್ರೋಲ್-ಡೀಸಿಲ್ ಚಾಲಿತ ನಾಲ್ಕು ಚಕ್ರ ವಾಹನಗಳಿಗಿಂತ ವೇಗವಾಗಿ ಸಾಗುವ ಅಗ್ಗದ ವಾಹನ ಯಾವುದು? ಸೈಕಲ್. ಎಂತಹ ಆಗಲ ಕಿರಿದಾದ ಹಾದಿಗಳಲ್ಲಿಯೂ ಸೈಕಲಿನಲ್ಲಿ ಸುಲಭವಾಗಿ ಮುನ್ನುಗ್ಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸೈಕಲನ್ನು ಓಡಿಸಲು ಯಾವುದೇ ಖರ್ಚಿಲ್ಲ. ಎರಡು ವಾರಗಳಿಗೊಮ್ಮೆ ಅದರ ಚಕ್ರಗಳ ಟ್ಯೂಬ್ ಗಳಿಗೆ ಗಾಳಿ ತುಂಬಿ, ಯಾವಾಗಾದರೊಮ್ಮ ಕೀಲುಗಳಿಗೆ ಎಣ್ಣೆ ಬಿಟ್ಟರಾಯಿತು. ಸೈಕಲ್ ಸಲೀಸಾಗಿ ಚಲಿಸುತ್ತಿರುತ್ತದೆ. ಸೈಕಲನ್ನು ರಿಪೇರಿ ಮಾಡಿಸುವುದೂ ಸುಲಭ. ಈಗಂತೂ ಸೀಟಿನ ಎತ್ತರ ಬದಲಾಯಿಸಬಹುದಾದ ಸೈಕಲ್‌ಗಳಿವೆ. ಇಂತಹ ಹಲವು ಕಾರಣಗಳಿಗಾಗಿ ಸೈಕಲ್ ನಮ್ಮ ಆಚ್ಚುಮೆಚ್ಚಿನ ವಾಹನ. ವರುಷಕ್ಕೆ 1.25 ಕೋಟಿ ಸೈಕಲ್‌ಗಳನ್ನು ನಮ್ಮ ದೇಶ ಉತ್ಪಾದಿಸುತ್ತಿರುವುದೇ ಈ ಮಾತಿಗೆ ರುಜುವಾತು. ಹತ್ತು ವರುಷಗಳ ಮುಂಚೆ ಸೈಕಲ್ ಬೇಕೆಂದಾದರೆ ಮಾರುಕಟ್ಟೆಗೆ ಹೋಗಿ ನಮಗೆ ಇಷ್ಟವಾದ ಬಣ್ಪದ ಸೈಕಲ್ ಆಯ್ಕೆ ಮಾಡಿ ತಂದರೆ ಕೆಲಸ ಮುಗಿಯುತ್ತಿತ್ತು. ಅದರ ಈಗ ಆದು ಅಷ್ಟು ಸುಲಭವಲ್ಲ. ಏಕೆಂದರೆ ಮಾರುಕಟ್ಟೆಯಲ್ಲಿ ಬಗೆಬಗೆಯ ಸೈಕಲುಗಳು ಲಭ್ಯವಿವೆ. ಮಕ್ಕಳಿಗೆ, ಮಹಿಳೆಯರಿಗೆ ಮತ್ತು ವಯಸ್ಕರಿಗೆ ಬೇರೆ ಬೇರೆ ವಿನ್ಯಾಸದ ಸೈಕಲುಗಳು ಸಿಗುತ್ತವೆ. ಹಾಗಾಗಿ ಸೈಕಲಿನ ಆಯ್ಕೆ ಅದರ ಅಳತೆ, ಹೊಂದಿಕೆ, ಬ್ರೇಕ್ ಇತ್ಯಾದಿಗಳನ್ನು ಅವಲಂಬಿಸಿದೆ.

ನೀವು ಯಾವ ಪ್ರದೇಶದಲ್ಲಿ ಸೈಕಲ್ ಓಡಿಸಲಿದ್ದೀರಿ ಎಂಬುದೇ ಮೊದಲ ಪ್ರಶ್ನೆ. ನಿಮ್ಮ ಓಡಾಟ ಮಟ್ಟಸವಾದ ಪ್ರದೇಶಕ್ಕೆ ಸೀಮಿತವಾಗಿದ್ದರೆ ನಿಮಗೆ ಬೇಕಾಗಿರುವುದು ಸಾಮಾನ್ಯ ಸೈಕಲ್. ಪ್ರತಿದಿನವೂ ನೀವು ಏರುತಗ್ಗಿನ ಪ್ರದೇಶದಲ್ಲಿ ಸೈಕಲ್ ಸವಾರಿ ಮಾಡಬೇಕಾಗಿದ್ದರೆ ನಿಮಗೆ ಗೇರುಗಳಿರುವ ಸೈಕಲ್ ಆಗತ್ಯ. ಏಕೆಂದರೆ ಗೇರ್‌ಗಳನ್ನು ಬಳಸಿದರೆ ಏರು ರಸ್ತೆಯಲ್ಲಿ ಸಾಗುವಾಗ ಕಾಲುಗಳಿಗೆ ಶ್ರಮ ಕಡಿಮೆ. ಒಂದು ವೇಳೆ ನೀವು ಗುಡ್ಡಗಾಡಿನ ಪ್ರದೇಶದಲ್ಲಿ ಸೈಕಲನ್ನು ಓಡಿಸಬೇಕಾಗಿದ್ದರೆ ನಿಮಗೆ ಮೌಂಟೇನ್ ಸ್ಯೆಕಲ್ ಆನುಕೂಲ.

ಸಾಮಾನ್ಯ ಸೈಕಲ್‌ಗಳು ಹಗುರ. ಇವುಗಳ ಚಕ್ರಗಳು ಸಪೂರ ಮತ್ತು ಮಟ್ಟಸು ರಸ್ತೆಗಳಲ್ಲಿ ಓಡಿಸಲು ಸುಲಭ. ಸೂಕ್ತ ಸೈಕಲನ್ನು ಆಯ್ಕೆ ಮಾಡಲಿಕ್ಕಾಗಿ ಸೈಕಲಿನ ವಿವಿಧ ಭಾಗಗಳ ಬಗ್ಗೆ ತಿಳಿಯೋಣ.

ಗೇರ್‌ಗಳಿಂದ ಸಹಾಯ
ಸೈಕಲ್ ಚಲಾಯಿಸುವಾಗ  ಎದುರು ಗಾಳಿಯಿಂದಾಗಿ ಆಥವಾ ಏರುರಸ್ತೆಯಿಂದಾಗಿ ಆಥವಾ ಸವಾರಿಯ ಆರಂಭದಲ್ಲಿ ವೇಗ ಗಳಿಸಲು ಕಷ್ಟವಾಗುತ್ತದೆ ಎಂದಾದರೆ ಸೈಕಲಿನ ಗೇರ್‌ಗಳು ನಿಮ್ಮ, ಸಹಾಯಕ್ಕೆ ಬರುತ್ತವೆ. ಇಂತಹ ಸಂದರ್ಭಗಳಲ್ಲಿ ಸಲೀಸಾಗಿ ಮತ್ತು ದಕ್ಷತೆಯಿಂದ ಸೈಕಲ್ ಓಡಿಸಲು ನೀವು ಮಾಡಬೇಕಾದ ಕೆಲಸ : ಗೇರ್‌ಗಳನ್ನು ಬದಲಾಯಿಸುವುದು.

ಸಾಮಾನ್ಯವಾಗಿ ಪೆಡಲನ್ನು ಒಂದು ಸುತ್ತು ತಿರುಗಿಸಿದಾಗ ಸೈಕಲಿನ ಚಕ್ರವೂ ಒಂದು ಸುತ್ತು ತಿರುಗುತ್ತದೆ. ಗೇರ್‌ಗಳು ಈ ಅನುಪಾತವನ್ನು ಬದಲಾಯಿಸುತ್ತವೆ. ಆದ್ದರಿಂದ ಮಟ್ಟಸ ರಸ್ತೆಗಳಲ್ಲಿ ಸೈಕಲ್ ಓಡಿಸುವಾಗ ಪೆಡಲಿನ ಒಂದು ಸುತ್ತಿಗೆ ಚಕ್ರವನ್ನು ಹಲವು ಸುತ್ತು ತಿರುಗಿಸುವ ಗೇರ್ ಆಯ್ಕೆ ಮಾಡಿರಿ. ಆದರೆ ಏರು ರಸ್ತೆ ಹತ್ತುವಾಗ, ಇದಕ್ಕೆ ವಿರುದ್ಧವಾದ ಗೇರಿಗೆ ಬದಲಾಯಿಸಿಕೊಳೃರಿ. ಅಂದರೆ ಚಕ್ರದ ಒಂದು ಸುತ್ತಿಗೆ ಪೆಡಲನ್ನು ಆನೇಕ ಸುತ್ತು ತಿರುಗಿಸುವ ಗೇರ್‌ಬಳಸಿರಿ.

ಹೆಚ್ಚು ಗೇರ್‌ಗಳಿದ್ದರೆ ಆನುಕೂಲ ಎಂದೇನಿಲ್ಲ. ಸೈಕಲಿನಲ್ಲಿ ಐದು ಗೇರ್‌ಗಳಿದ್ದು, ನೀವು ಆವನ್ನೆಲ್ಲ ಬಳಸುವುದಿಲ್ಲ ಎಂದಾದರೆ ಆವಕ್ಕಾಗಿ ಹಣ ಪಾವತಿಸಿದ್ದು ವ್ಕರ್ಥ. ನಿಮಗೆ ಮೂರು ಗೇರ್‌ಗಳೇ ಸಾಕೆಂದಾದರೆ ಆಂತಹ ಸೈಕಲನ್ನೇ ಖರೀದಿಸಿರಿ. ಆದ್ದರಿಂದ ಟೆಸ್ಟ್ ರೈಡ್ ಮಾಡಿದ ಬಳಿಕವೇ ನಿಮಗೆ ಎಷ್ಟು ಗೇರ್‌ಗಳ ಸೈಕಲ್ ಬೇಕಂದು ನಿರ್ಧರಿಸುವುದು ಸೂಕ್ತ.

ಮಲ್ಪಿ-ಸ್ಪೀಡರ್ ಸೈಕಲ್‌ಗಳ ಪೆಡಲಿನ ಪಕ್ಕದಲ್ಲಿ ಎರಡು ಆಥವಾ ಮೂರು ಚೈನ್ ರಿಂಗ್ ಗಳಿರುತ್ತವೆ. ಸಣ್ಣ ಮತ್ತು ದೊಡ್ಲ ಚೈನ್ ರಿಂಗ್ ಗಳ ವ್ಯಾಸದ ಆಂತರ ಜಾಸ್ತಿಯಾದಷ್ಟು ಏರು ರಸ್ತೆಯಲ್ಲಿ ಸೈಕಲ್ ಓಡಿಸುವುದು ಸುಲಭ.

ಗೇರ್‌ಗಳಿರುವ ಸೈಕಲ್‌ಗಳ ಹ್ಯಾಂಡಲ್ ಬಾರ್‌ಗಳಲ್ಲಿ ಗೇರ್‌ಗಳನ್ನು ಬದಲಾಯಿಸುವ ಶಿಫ್ಟರ್‌ಗಳು ಇರುತ್ತವೆ. ಹೊಸ ಸೈಕಲನ್ನು ಎರಡು ವಾರ ಓಡಿಸಿದ ಬಳಿಕ ಶಿಷ್ಟರ್‌ಗಳ ಕೇಬಲ್‌ಗಳನ್ನು ಬಿಗಿ ಮಾಡಿಸಬೇಕು. ಯಾಕೆಂದರೆ ಅವು ಆರಂಭದ ಚಲಾವಣೆಯಿಂದಾಗಿ ಸಡಿಲವಾಗುತ್ತವೆ.

ಫ್ರೇಂ ಅಳತೆ
ಯಾವುದೇ ಸೈಕಲಿನಲ್ಲಿ ಕುಳಿತು ಪರಿಶೀಲಿಸಿದರೆ ಅಥವಾ ಟೆಸ್ಟ್ ರೈಡ್ ಮಾಡಿದರೆ ಅದರ ಫ್ರೇಂ ಅಳತೆ ನಿಮಗೆ ಸೂಕ್ತವೇ ಎಂದು ತಿಳಿಯುತ್ತದೆ. ಇದರ ಪರೀಕ್ಷೆಗಾಗಿ ಈ ಎರಡು ಆಂಶಗಳನ್ನು ಗಮನಿಸಿರಿ :

1) ಪೆಡಲ್ ಸುತ್ತುವಾಗೆಲ್ಲ ನಿಮ್ಮ, ಪಾದವನ್ನು ಮಟ್ಟಸವಾಗಿಡಲು ಸಾಧ್ಯವಾಗಬೇಕು.

2) ಕೆಳಗಿನ ತಖ್ತೆ ನೋಡಿ ನಿಮ್ಮ ಕಾಲಿನ ಉದ್ದಕ್ಕೆ ಸೂಕ್ತವಾದ ಅಳತೆಯ ಸೈಕಲಿನ ಫ್ರೇಂ ಆಯ್ಕೆ ಮಾಡಿರಿ. ಬಾಲಕ-ಬಾಲಕಿಯರಿಗೆ ಸೈಕಲ್ ಆಯ್ಕೆ ಮಾಡುವಾಗ ಬಹಳ ಹುಷಾರಾಗಿರಬೇಕು. ಆವರಿಗೆ ಸೂಕ್ತವಾದ ಫ್ರೇಂ ಅಳತೆಯ ಸೈಕಲನ್ನು ಹಿರಿಯರೇ ನಿರ್ಧರಿಸಬೇಕಾಗುತ್ತದೆ.

ಹ್ಯಾಂಡಲ್ ಬಾರ್
ಸೈಕಲ್ ರೇಸಿನ ಸ್ಪರ್ಧಾಳುಗಳು ಬಳಸುವ ಸೈಕಲ್‌ಗಳ ಕೆಳಮುಖವಾಗಿ ಬಾಗಿದ ಡ್ರಾಪ್ ಬಾರ್‌ಗಳನ್ನು ಗಮನಿಸಿದ್ದೀರಾ? ಇವನ್ನು ಕ್ಕೆಗಳಿಂದ ಹಿಡಿದುಕೊಂಡಾಗ ದೇಹದ ಮೇಲ್ಭಾಗ ಮುಂದಕ್ಕೆ ಬಾಗುವ ಕಾರಣ ಸೈಕಲ್
ಓಡಿಸುವಾಗ ಎದುರು ಗಾಳಿಯ ಪ್ರತಿರೋಧ ಕಡಿಮೆಯಾಗುತ್ತದೆ ಮತ್ತು ಕಡಿಮೆ ಶ್ರಮದಿಂದ ಸೈಕಲನ್ನು ಆಧಿಕ ವೇಗವಾಗಿ ಓಡಿಸಲು ಸಾಧ್ಯವಾಗುತ್ತದೆ. ಆದರೆ ಬೆನ್ನುನೋವು ಇರುವವರಿಗೆ ಡ್ರಾಪ್ ಬಾರ್‌ನ ಸೈಕಲ್ ತುಳಿದರೆ ತೊಂದರೆಯಾದೀತು. ನೆಲಕ್ಕೆ ಸಮಾನಾಂತರವಾದ ಹ್ಯಾಂಡಲ್ ಬಾರ್‌ನ ಸೈಕಲನ್ನು ಹೆಚ್ಚು ಎದೆ ಬಾಗಿಸದೆ ಓಡಿಸಬಹುದು.

ಚಕ್ರಗಳು
ಮುಚ್ಚಳದಂತಹ ಚಕ್ರಗಳಿಗಿಂತ ಕಡ್ಡಿಗಳಿರುವ ಚಕ್ರಗಳು ಹಗುರ. ಸ್ಪರ್ಧೆಗಳಲ್ಲಿ ಓಡಿಸುವ ಸೈಕಲ್‌ಗಳಿಗೆ ಮುಚ್ಚಳದಂತಹ ಚಕ್ರಗಳು ಇರುತ್ತವೆ. ಆದರೆ ಅವು ದುಬಾರಿ. ಕೆಲವು ಮಕ್ಕಳ ಸೈಕಲ್‌ಗಳಿಗೂ ಮುಚ್ಚಳದಂತಹ ಚಕ್ರಗಳನ್ನು ಜೋಡಿಸಿರುತ್ತಾರೆ. ಅದಲ್ಲದೆ ಕೆಲವು ಮಕ್ಕಳ ಸೈಕಲ್‌ಗಳ ಚಕ್ರಗಳಿಗೆ ಟ್ಯೂಬಿಲ್ಲದ ಟಯರ್‌ಗಳನ್ನು ಜೋಡಿಸಿರುತ್ತಾರೆ. ಇದರಿಂದ ಎರಡು ಅನುಕೂಲಗಳು : ಟ್ಯೂಬಿಗೆ ಗಾಳಿ ಹಾಕುವ ಕೆಲಸವಿಲ್ಲ ಮತ್ತು ಪಂಕ್ಚರಿನ ಸಮಸ್ಯೆಯೂ ಇರುವುದಿಲ್ಲ.

ಬ್ರೇಕ್‌ಗಳು
ಈಗಿನ ಬಹುಪಾಲು ಸೈಕಲ್‌ಗಳಿಗೆ ಇಕ್ಕುಳ ಬ್ರೇಕ್‌ಗಳನ್ನು ಜೊಡಿಸಿರುತ್ತಾರೆ. ಇವು ಹಗುರ ಮತ್ತು ಅಗ್ಗ. ಮೌಂಟೇನ್ ಸೈಕಲ್‌ಗಳಲ್ಲಿ ‘ವಿ’ ಬ್ರೇಕ್ ಗಳಿರುತ್ತವೆ. ಅವುಗಳ ಕೊಕ್ಕೆಗಳು ಉದ್ದವಾಗಿದ್ದು ಉತ್ತಮ ಹಿಡಿತ ಒದಗಿಸುತ್ತವೆ.

ಸೈಕಲಿನ ಬ್ರೇಕ್‌ಗಳನ್ನು ಮಿತವಾಗಿ ಬಳಸಬೇಕು. ಅವುಗಳ ಕೇಬಲ್ ಸಡಿಲವಾದರೆ ಬಿಗಿ ಮಾಡಿಸುತ್ತಿರಬೇಕು.

ಸೈಕಲ್ ಬ್ರೇಕ್‌ಗಳ ದಕ್ಷತೆ ಬಗ್ಗೆ ಆಸ್ಟ್ರೇಲಿಯದ ಮಾನದಂಡ ಹೀಗಿದೆ : ಗಂಟೆಗೆ 24 ಕಿ.ಮೀ. ವೇಗದಲ್ಲಿ ಓಡುವ ಸೈಕಲಿನ ಬ್ರೇಕ್ ಒತ್ತಿದ ಬಳಿಕ 5.5 ಮೀ. ಚಲಿಸುವಷ್ಟರಲ್ಲಿ ಅದರ ಚಲನೆ ಪೂರ್ತಿ ನಿಲ್ಲಬೇಕು. ಕೆಲವು ಸೈಕಲ್‌ಗಳ ಬ್ರೇಕ್ ಗಳನ್ನು ಮಳೆಯಿರುವಂತಹ ಸನ್ನಿವೇಶದಲ್ಲಿ ಪರೀಕ್ಷಿಸಿದಾಗ ಅಂದರೆ ಚಕ್ರಗಳ ಅಂಚುಗಳನ್ನು ನೀರಿನಿಂದ ಒದ್ದೆ ಮಾಡಿ ಬ್ರೇಕ್ ಒತ್ತಿದಾಗ ಮಾನದಂಡಕ್ಕಿಂತ ಎರಡರಿಂದ ಮೂರು ಪಟ್ಟು ಜಾಸ್ತಿ ದೂರ ಓಡಿದ ಬಳಿಕ ಸೈಕಲ್‌ಗಳ ಚಲನೆ ಪೂರ್ತಿ ನಿಂತಿತು. ಮಳೆ ಬೀಳುತ್ತಿರುವಾಗ ರಸ್ತೆಗಳೂ ಒದ್ದೆಯಾಗಿರುತ್ತವೆ. ಹಾಗಾಗಿ ಆಗ ಸೈಕಲ್ ಇನ್ನಷ್ಟು ದೂರ ಓಡಿದ ಬಳಿಕವೇ ಅದರ ಚಲನೆ ಪೂರ್ತಿ ನಿಲ್ಲುತ್ತದೆ. ಆದ್ದರಿಂದ ಸುರಿಯುವ ಮಳೆಯಲ್ಲಿ ಸೈಕಲ್ ಓಡಿಸುವಾಗ ಅದರ ವೇಗ ತಗ್ಗಿಸಲು ಅಥವಾ ಅದನ್ನು ನಿಲ್ಲಿಸಲು ಸಾಕಷ್ಟು ಮುಂಚಿತವಾಗಿ ಬ್ರೇಕ್ ಒತ್ತಬೇಕು.

ಸೀಟು
ನಿಮ್ಮ ಸೈಕಲಿನ ಸೀಟಿನಲ್ಲಿ ಕುಳಿತಾಗ ಆರಾಮ ಎನಿಸುತ್ತದೆಯೇ? ಇಲ್ಲವಾದರೆ ಸೀಟನ್ನು ಬದಲಾಯಿಸಿರಿ. ಭಿನ್ನ ಭಿನ್ನ ವಿನ್ಯಾಸದ ಸೀಟುಗಳಿವೆ. ಅವನ್ನು ಪರಿಶೀಲಿಸಿ, ನಿಮಗೆ ಅತ್ಯುತ್ತಮವಾಗಿ ಹೊಂದಿಕೆಯಾಗುವ ಸೀಟನ್ನೇ ಆಯ್ಕೆ ಮಾಡಿರಿ. ಆರಾಮವಾಗಿಲ್ಲದ ಸೀಟುಗಳಿಂದ ದೇಹದ ಸಂವೇದನಾಶೀಲ ಭಾಗಗಳಿಗೆ ಹಾನಿಯಾದೀತು.

ಸೈಕಲಿಗೆ ಬೀಗ
ಸೈಕಲಿನ ಚಕ್ರ ಸುತ್ತದಂತೆ ಬೀಗ ಹಾಕಿದರೆ ಸಾಲದು. ಕಳ್ಳಕಾಕರು ಅದನ್ನು ಒಂದೇಟಿಗೆ ಒಡೆಯಬಲ್ಲರು. ಸುಲಭವಾಗಿ ಮುರಿಯಬಹುದಾದ ತಂತಿ ಅಥವಾ ಸರಳಿಗೆ ಸೈಕಲನ್ನು ಸರಪಳಿಯಿಂದ ತಗಲಿಸಿ ಬೀಗ ಜಡಿದರೂ ಸಾಲದು. ಬಲವಾದ ‘U’ ಆಕೃತಿಯ ಕಬ್ಬಿಣದ ಸರಳನ್ನು ಗೋಡೆಗೆ ಸಿಮೆಂಟನಿಂದ ಜೋಡಿಸಿ ಇದಕ್ಕೆ ಸರಪಳಿಯಿಂದ ಸೈಕಲನ್ನು ತಗಲಿಸಿ ಬೀಗ ಹಾಕುವುದು ಸುರಕ್ಷಿತ.

ಸೈಕಲಿಗೆ ವಿಮೆ
ಮನೆಯ ವಿಮೆ ಮಾಡಿಸುವಾಗ ಅದರಲ್ಲಿ ಸೈಕಲಿನ ವಿಮೆಯನ್ನು ಸೇರಿಸಬಹುದು. ಆದರೆ ಸೈಕಲ್ ಕಳವಾದರೆ ವಿಮಾ ಪರಿಹಾರ ಪಡೆಯುವುದು ಸುಲಭವಲ್ಲ. ಮೊದಲಾಗಿ ಪೋಲೀಸ್ ರಾಣೆಗೆ ದೂರು ನೀಡಿ ಪ್ರಥಮ ಮಾಹಿತಿ ವರದಿ (ಎಥ್.ಐ.ಆರ್.) ದಾಖಲಿಸಬೇಕು. ಅನಂತರ ತನಿಖಾ ವರದಿಯ ಪ್ರತಿಯನ್ನು ಪೋಲೀಸರಿಂದ ಪಡೆದ ಬಳಿಕವೇ ವಿಮಾ ಕಂಪನಿಗೆ ಕೈಮ್ ಅರ್ಜಿ ಸಲ್ಲಿಸಲು ಸಾದ್ಕ. ಇಷ್ಟೆಲ್ಲ ಕೆಲಸ ಮಾಡಿದರೆ ರೂ. 1000ದಿಂದ ರೂ.
2,000 ವಿಮಾ ಪರಿಹಾರ ಸಿಕ್ಕೀತು. ಈ ಕಿಂಚಿತ್ ಪರಿಹಾರಕ್ಕಾಗಿ ರಾಣೆ-ಕಛೇರಿಗಳಿಗೆ ಆಲೆದಾಡಿ ಸುಸ್ತಾಗುವುದು ಬೇಕೇ ಎಂದು ನೀವೇ ನಿರ್ಧರಿಸಿರಿ. ಬೇಕೆಂದಾದರೆ ರೂ. 1,000 ಬೆಲೆಯ ಸೈಕಲಿಗೆ ರೂ. 20 ವಾರ್ಷಿಕ ಪ್ರೀಮಿಯಂ ಆನ್ನು ನಿಮ್ಮ, ಮನೆಯ ವಿಮಾ ಪಾಲಿಸಿಯಲ್ಲಿ ಸೈಕಲಿನ ಬಾಬ್ತು ಸೇರಿಸಿಕೊಳ್ಳರಿ. ಬೇಡವೆಂದಾದರೆ ಸೈಕಲಿಗೆ ಭದ್ರವಾಗಿ ಬೀಗ ಹಾಕಿರಿ.

ಕಾಲಿನ ಉದ್ದ                      ಸೂಕ್ತಫ್ರೇಂ ಅಳತೆ
(ತೊಡೆ ಸಂದಿಯಿಂದ ಪಾದದ     (ಸೈಕಲಿನ ಸೀಟಿನ ಬುಡದಿಂದ
ಮಣಿಗಂಟಿನ ಆಂತರ)              ಪೆಡಲುಗಳ ಆಂತರ)
24″ – 30″                                          16″
29″ – 35″                                          20″
30″ – 36″                                          21″
31″ – 37″                                          22″
33″ – 39″                                          24″

ಸೈಕಲ್ ಖರೀದಿಸುವ ಮುನ್ನ

* ಬ್ರೇಕಿನ ರಬ್ಬರ್‌ಪ್ಯಾಡ್ ಗಳನ್ನು ಬೆರಳಿನಿಂದ ಅಲುಗಾಡಿಸಿರಿ. ಅವು ಭದ್ರವಾಗಿರಬೇಕು. ಚಕ್ರಗಳನ್ನು ತಿರುಗಿಸಿ ನೋಡಿರಿ. ಬ್ರೇಕಿನ ಪ್ಯಾಡ್ ಬ್ರೇಕ್ ಒತ್ತದಿರುವಾಗ ಚಕ್ರಗಳಿಗೆ ತಗಲಬಾರದು. ಬ್ರೇಕಿನ ಲಿವರ್‌ಗಳನ್ನು ಎಳೆದು ಪರೀಕ್ಷಿಸಿರಿ. ಆವು ಚಕ್ರಗಳ ರಿಮ್ ಗಳನ್ನು ಅಚ್ಚುಕಟ್ಟಾಗಿ ಮತ್ತು ಬಲವಾಗಿ ಕಚ್ಚಿಕೊಳ್ಳಬೇಕು. * ಸೈಕಲಿನ ಮುಂಚಕ್ರವನ್ನು ನಿಮ್ಮ ಕಾಲುಗಳ ನಡುವೆ ಇರಿಸಿಕೊಂಡು ಸೈಕಲಿನ ಹ್ವಾಂಡಲನ್ನು ತಿರುಗಿಸಿರಿ ಮತ್ತು ಮೇಲಕ್ಕೆಳೆಯಿರಿ. ಹ್ಯಾಂಡಲ್ ಸಾಕೆಟಿನಿಂದ ಕಿತ್ತು ಬರುವಂತೆ ಸಡಿಲವಾಗಿರಬಾರದು. * ಸೈಕಲಿನ ಸೀಟು ಭದ್ರವಾಗಿರಬೇಕು. ಎಡಕ್ಕೆ ಆಥವಾ ಬಲಕ್ಕೆ ಆಥವಾ ಮೇಲೆ ಕೆಳಗೆ ಚಲಿಸುವಂತಿರಬಾರದು. * ಸೈಕಲನ್ನು ತಲೆಕೆಳಗಾಗಿಸಿರಿ. ಈಗ ಎರಡೂ ಚಕ್ರಗಳನ್ನು ತಿರುಗಿಸಿ ಪರಿಶೀಲಿಸಿರಿ. ಅವು ತಿರುಗುವಾಗ ಎಡ – ಬಲಕ್ಕೆ ಅಲುಗಾಡಬಾರದು. ಚಕ್ರಗಳ ಆಕ್ಷಗಳನ್ನು ‘U’ ಆಕಾರದ ಕಚ್ಚಿನಲ್ಲಿ ಭದ್ರವಾಗಿ ಜೋಡಿಸಲಾಗಿದೆಯಾ? ಎಂದು ಕದಲಿಸಿ ಪರೀಕ್ಷಿಸಿರಿ. ಚಕ್ರದ ಕಡ್ಡಿಗಳನ್ನು ಎಳೆದು ನೋಡಿರಿ. ಅವು ಸಡಿಲವಾಗಿರಬಾರದು. * ಸೈಕಲಿನ ಟೆಸ್ಟ್ ರೈಡ್ ಮಾಡುವಾಗ ಎಲ್ಲ ಗೇರ್‌ಗಳನ್ನು ಪರೀಕ್ಷಿಸಿರಿ. ಆಗ ಸೈಕಲಿನ ಚೈನ್ ತನ್ನಿಂತಾನೇ ಜಿಗಿಯಬಾರದು. * ಈ ಪರೀಕ್ಷೆಗಳನ್ನು ಮಾಡುವಾಗ ಸೈಕಲಿನಲ್ಲಿ ತೊಂದರೆ ಕಂಡುಬಂದರೆ ಮಾರಾಟ ಅಂಗಡಿಯ ಅನುಭವಿ ಕೆಲಸಗಾರನಿಂದ ಸರಿಪಡಿಸಿಕೊಳೃರಿ.

೨೦೧೩-೧೦-೦೨