ಕಗ್ಗತಲಲ್ಲಿ ಯಾವ ಬೆಳಕಿನ ಸಹಾಯವಿಲ್ಲದೇ ಚಿತ್ರ ಕ್ಲಿಕ್ಕಿಸುವ ಶೋಧನೆಗಳಾಗಿವೆ. ಇಂಥಹ ಚಿತ್ರಗಳನ್ನು ತೆಗೆದು ಪ್ರದರ್ಶಿಸಿದ ಪ್ರಥಮ ಸಂಶೋಧಕ ಎಂದರೆ ಬೇರ್‍ಡೆ, ಅವನ ಸಹಾಯಕರು. ಈ ಕ್ಯಾಮರಾವು ವಿದ್ಯುತ್ ಶಕ್ತಿಯನ್ನು ಉಪಯೋಗಿಸದೇ ಗಾಢಂಧಾಕ್ಕಾರದಲ್ಲಿಯೂ ಸಹ ೨೦೦ ಗಜಗಳ ದೂರದಲ್ಲಿ ನಿಂತಿರುವ ಮನುಷ್ಯನ ಅಥವಾ ಒಂದು ಮೈಲು ದೂರದಲ್ಲಿ ಕತ್ತಲೆಯಲ್ಲಿರುವ ಮನೆಯ ಚಿತ್ರಗಳನ್ನು ಸೆರೆಹಿಡಿಯ ಬಲ್ಲಸಾಮರ್ಥ್ಯ ಹೊಂದಿದೆ. ಇ.ವಿ.ಎ. ಸಾಧನದ ಕಾರ್ಯ ವಿಧಾನವು ಸಾಮಾನ್ಯ ಕ್ಯಾಮರಾದಂತೆಯೆ ಬೆಳಕಿನ ಬದಲು ವಸ್ತುವಿನಿಂದ ಹೊರಚಿಮ್ಮುವ ಕಿರಣಗಳನ್ನು ಸೆರೆಹಿಡಿದು ತೆಳುವಾದ ತೈಲದಿಂದ ಲೇಪಿತವಾಗಿರುವ ಮೆಲ್ಮೈ ಆ ವಸ್ತುವಿನ ಚಿತ್ರಣವನ್ನುಂಟುಮಾಡುತ್ತದೆ. ತೈಲ ಲೇಪಿತ ಪಟದ ಮೇಲೆ ಇನ್ಫ್ರಾರೆಡ್‌ಕಿರಣಗಳು ತಾಗಿದ ಭಾಗದಲ್ಲಿ ಅವುಗಳ ಶಾಖದ ತೀಷ್ಟತೆಯಿಂದಾಗಿ ತೈಲವು ಕರಗಿ ಆವಿಯಾಗಿ ಹೋಗುತ್ತದೆ. ವಸ್ತುವಿನ ವಿವಿಧ ಭಾಗಗಳಿಂದ ವಿವಿಧ ತೀಕ್ಷ್ಣತೆಯ ಕಿರಣಗಳು ತೈಲ ಫಲಕದ ಮೇಲೆ ಬಿದ್ದಾಗ ಆಯಾ ಭಾಗಗಳ ಪ್ರತಿರೂಪವು ಕಪ್ಪು ಬಿಳುಪಾಗಿ ಚಿತ್ರಿಸಲಾಗುತ್ತದೆ. ಇನ್ನೂ ಸ್ಪಷ್ಟವಾದ ಚಿತ್ರವನ್ನು ಇ.ವಿ.ಎ. ಸಾಧನದೊಂದಿಗೆ ಅಳವಡಿಸಿರುವ ಸಾಧಾರಣ ಕ್ಯಾಮರಾದಿಂದ ಪಡೆಯಬಹುದು.

ಎವಾಪೊರಾಗ್ರಫಿ ಒಂದು ಸಣ್ಣಪೆಟ್ಟಿಗೆಯಿಂದ ಮಾಡಲ್ಪಟ್ಟಿದೆ. ಇದರ ಒಂದು ಬದಿಗೆ ಗಾಜಿನ ಕಿಟಕಿ ಇದೆ. ಇದಕ್ಕೆ ಎದುರಾಗಿ ಎಣ್ಣೆಯಿಂದ ಲೇಪಿತವಾದ ಒಂದು ಪಟಲವಿರುತ್ತದೆ. ಇವೆರಡಕ್ಕೂ ನಡುವೆ ಇನ್ಫ್ರಾರೆಡ್ ಕಿರಣಗಳನ್ನು ಸೇರಬಲ್ಲ ಕೆಲವು ಸೂಕ್ಷ್ಮ ಉಪಕರಣಗಳಿರುತ್ತವೆ. ಸಾಮಾನ್ಯ ಬೆಳಕಿನ ಕಿರಣಗಳು ಈ ಕ್ಯಾಮರಾದ ಮೇಲೆ ಯಾವ ಪರಿಣಾಮವನ್ನು ಉಂಟುಮಾಡುವುದಿಲ್ಲ.

ಉಪಯೋಗಗಳು : E.V.A. ಕ್ಯಾಮರಾದ ಸಹಾಯದಿಂದ ಯುದ್ಧ ಕಾಲದಲ್ಲಿ ಶತ್ರುಗಳಿಗೆ ಗೊತ್ತಾಗದಂತೆ ಅವರ ಸೈನ್ಯದ ಚಿತ್ರಗಳನ್ನು ತೆಗೆಯಬಹುದಾಗಿದೆ. ಶತ್ರುಗಳ ಗುಪ್ತ ಕಾರ್ಯ ಸ್ಥಾನಗಳ ಛಾಯಾಚಿತ್ರಗಳನ್ನು ಗಾಢಾಂದಕ್ಕಾರದಲ್ಲಿಯೂ ಸೆರೆಹಿಡಿಯಬಹುದಾಗಿದೆ. ಭೂಗರ್ಭದಲ್ಲಿಡಗಿರುವ ಕಾರ್ಖಾನೆಗಳೂ ಸಹ ಬೆಕ್ಕಿನ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗುವದೇ ಇಲ್ಲ. ಕೈಗಾರಿಕಾರಂಗದಲ್ಲಿಯೂ ಇದರ ಉಪಯೋಗ ಇಲ್ಲದಿಲ್ಲ. ಯಂತ್ರಗಳು ಕೆಲಸ ಮಾಡುತ್ತಿರುವಾಗಲೇ ಅವುಗಳನ್ನು E.V.A.ಕ್ಯಾಮರಾಗಳಿಂದ ವಿಕ್ಷೀಸಿ ಯಾವ ಭಾಗಗಳನ್ನು ಬದಲಿಸಿ ಮುಂದೊದಗಬಹುದಾಗಿದ್ದ ಅಪಾಯವನ್ನು ತಪ್ಪಿಸಬಹುದು ಎಂದು ತಿಳಿಸುತ್ತದೆ. ರಾತ್ರಿಯ ಗಾಢಾಂಧಕಾರದಲ್ಲಿ ನೀರಿನಲ್ಲಿ ಮುಳುಗಿ ಹೋದ ಮನುಷ್ಯ ಅಥವಾ ಇತರ ಉಪಯುಕ್ತ ವಸ್ತುಗಳು ಇರುವ ಸ್ಥಳವನ್ನು ಗುರುತಿಸಲು E.V.A.ಸಾಧನದಿಂದ ಸಾಧ್ಯವಾಗುತ್ತದೆ.
*****