ನಗ್ತಾರಲ್ಲೋ ತಮ್ಮಾ

ನಗ್ತರಲ್ಲೋ ತಮ್ಮ ನಮ್ಮನ್ನು
ನಗ್ತಾರಲ್ಲೋ ಅಣ್ಣಾ ||ಪ||

ಎದುರಿಗೆ ಕೊಂಡಾಡಿ ಭಾಷಣ ಬಿಗಿದಾಡಿ
ಹಿಂದಿಂದೆ ನಗ್ತಾರೋ ತಮ್ಮಾ ನಮ್ಮನ್ನು
ನಗ್ತಾರಲ್ಲೋ ಅಣ್ಣಾ ||ಅ.ಪ.||

ನೀನೇ ದೇಶಕ್ಕೆ ಬೆನ್ನೆಲುಬು ಅಂತಾರೆ
ತಾಂಡವ ತುಳದಾರೆ ಮ್ಯಾಲೆ
ದೇಶಕ್ಕೆ ಅನ್ನವ ನೀಡುವನಂತಾರೆ
ನಿನ್ನ ಕೈಗೆ ಕೊಟ್ಟಾರೆ ಪ್ಯಾಲೆ ||೧||

ನಿನಗಾಗಿ ಅಂತ ಚುನಾವಣೆ ನಡಿತಾವೆ
ಉದ್ದುದ್ದ ವಾಗ್ದಾನಗಳು
ಕೇಂದ್ರದ ರಾಜ್ಯದ ಶಾಸಕ ಸೂರರು
ನೀನೇ ಹಡೆದ ಕುನ್ನಿಗಳು ||೨||

ನಿನಗಾಗಿ ಹಾಡ್ತಾವೆ ಓಡ್ತಾವೆ ರೇಡಿಯೋ
ನಿನಗಾಗಿ ಕುಣಿತಾವೆ ಟೀವೀ
ನಿನಗಾಗಿ ಬರಿತಾವೆ ನಿನಗಾಗಿ ಕೊರಿತಾವೆ
ಸುದ್ದಿಯ ಪತ್ರಿಕೆ ಬಾವೀ ||೩||

ಯೋಜನೆಗಳಾಗ್ತಾವೆ ಬಡ್ಜೆಟ್ಟು ಬರ್ತಾವೆ
ಕೋಟಿ ಕೋಟಿ ಹಣದ ರಾಶೀ
ಕಾರುಗಳೋಡ್ತಾವೆ ಫೈಲು ಹಾರಾಡ್ತಾವೆ
ನಿನ್ನದೆ ನಾಮವ ನೆನೆಸೀ ||೪||

ನಿನ್ನ ಸೇವೆಗೆ ಅಂತ ಅಧಿಕಾರ ವರ್ಗವು
ಪೋಲೀಸು ಕೋರ್ಟು ಕಛೇರಿ
ನಿನ್ನನ್ನ ಗಾಣಕ್ಕೆ ಹಾಕುತ್ತ ಹಿಂಡುತ್ತ
ರಸ ಹೀರಿ ಕೊಬ್ಯಾವೆ ಸೇರಿ ||೫||

ನಿನ್ನನ್ನ ಚೆನ್ನಾಗಿ ಚಿತ್ರಿಸಿ ತೋರಸ್ಯಾರೆ
ಅಂತಂದು ಸೀನಿಮಾಕ ಪ್ರೈಜು
ಕತೆ ಕಾದಂಬರಿಯಾಗೆ ಕಾವ್ಯ ನಾಟಕದಾಗೆ
ನಿನ್ನನ್ನೇ ಕೊಡತಾರೆ ಪೋಜು ||೬||

ಎಲ್ಲಾ ನಿನ್ನೆಸರ ಮ್ಯಾಲೇ ಬದಿಕ್ಯಾರೆ
ನೀನಾದಿ ಸತ್ತಂಥ ಹೆಣವು
ಬೆನ್ನಿಗಂಟಿದ ಹೊಟ್ಟೆ ಮೈಯಿ ತೋರುವ ಬಟ್ಟೆ
ನೀನಾದೆ ಪ್ರಶ್ನೆಗಳ ಮಣವು ||೭||

ಝಾಡಿಸಿ ಎದ್ದೇಳೋ ಮೈಕೊಡವಿ ನಿಂತ್ಕೊಳೊ
ನಿನ್ನ ಉದ್ಧಾರ ನಿನ್ಕೈಲಿ
ಅಕ್ಷರ ಕಲಿಯುತ ಕಲಿಯು ನೀನಾಗುತ
ತಕ್ಕೊಳ್ಳೋ ಲಗಾಮ್ ನಿನ್ಕೈಲಿ ||೮||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರಳಿ ಗೂಡಿಗೆ
Next post ಸೈಕಲ್ಲಿನ ಆಯ್ಕೆ ಹೇಗೆ?

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…