ಮರಳಿ ಗೂಡಿಗೆ

10 ವರ್ಷಗಳಿಂದ ಸೌದಿ ಅರೇಬಿಯದಲ್ಲಿ ಸಾಕಷ್ಟು ಖುಷಿಯಿಂದ ಕಳೆದೆವು. ಇಲ್ಲಿಯ ಐಶಾರಾಮಿ ಜೀವನಕ್ಕೆ ಒಗ್ಗಿಕೊಂಡೂ ಬಿಟ್ಟೆವು. ಯಾವುದರ ಬಗೆಗೂ ತಲೆ ಕೆಡೆಸಿಕೊಳ್ಳುವ ಪ್ರಮೇಯವೇ ಇರಲಿಲ್ಲ. ಯಾವ ಬಗೆಯ ಬಿಲ್ಲು ತೆರಿಗೆಗಳ ಯೋಚನೆ ಇರದಿದ್ದ ಸ್ಥಿತಿ ನಮ್ಮದು. ಮಕ್ಕಳ ಶಾಲಾ ವೆಚ್ಚ ಹಾಗೂ ಊರಿಗೆ ಪಯಣಿಸುವ ವೆಚ್ಚ ಕಂಪನಿ ಕೊಡುತ್ತಿದ್ದುದರಿಂದ ಯಾವುದರ ತೊಂದರೆ ಇಲ್ಲದೆ ನಿಶ್ಚಿಂತರಾಗಿದ್ದೆವು.

ಪಾರ್ಟಿಗಳು, ಕೆಂಪುಸಮುದ್ರ್ಭ ಸನಿಹತೆ, ಪೇಟೆಯಲ್ಲಿ ಸುತ್ತಾಡುವಿಕೆ, ವರ್ಷಕ್ಕೊಮ್ಮೆ ಭಾರತಕ್ಕೆ ಭೆಟ್ಟಿ, ನಡುವೆ ಯುರೋಪ ಪ್ರವಾಸ, ಸೌದಿ ನಾಡಿನ ದೀರ್ಘ ಪರಿಚಯ, ಹುಡುಗರ ಶಾಲೆ ಎಂದು ಇನ್ನೂ ಎಲ್ಲ ಕಡೆಗೆ ಓಡಾಡಿ ಕೊಂಡಿರುವಂತೆಯೇ ಹತ್ತು ವರ್ಷಳಗಳು ಕಳೆದುಹೋದವು.

ಅಲ್ಲಿಯ ಬ್ರಿಟಿಷ್ ಕಾಂಟಿನೆಂಟಲ್ ಶಾಲೆಯಲ್ಲಿ ಓದುತ್ತಿರುವ ನಮ್ಮ ಮಕ್ಕಳು ಬೆಳೆಯತೊಡಗಿದರು. ಬ್ರಿಟಿಷ್ ಪದ್ಧತಿಯ ಶಾಲೆಗಳೇ ಬೇರೆ. ಈ ಶಾಲೆಗಳಲ್ಲಿ ಇಂಗ್ಲೀಷ್, ಸಾಯನ್ಸ್, ಗಣೀತ ವಿಷಯಗಳಿಗೆ  ಇಂಡಿಯಾದಂತೆ ವರ್ಷಕ್ಕೊಂದು ಸಲ ಪರೀಕ್ಷೆಯೊಂದಿರುವುದಿಲ್ಲ. ಪ್ರತಿ ದಿನ ಹುಡುಗರ ಓದು, ಬರಹ, ಸಾಮಾನ್ಯಜ್ಞಾನ ಉಳಿದ ಪಠ್ಯೇತರ ಚಟುವಟಿಕೆಗಳಿಂದ ಅವರ ಬುದ್ಧಿ ಮೌಲ್ಯಮಾಪನ ಮಾಡುವರು. ಬುದ್ಧಿ, ಬರಹಗಳ ಆಧಾರದ ಮೇಲೆ ವಿದ್ಯಾರ್ಥಿಮಾನಸಿಕತೆ ಅರಿತು ಮುಂದಿನ ಕ್ಲಾಸಿಗೆ ಕಳಿಸುವರು ಅಥವಾ ಕೊರತೆ ಅತೀ ಇದೆಯೆಂದೆನಿಸೆತೊಡಗಿದರೆ
ವಿದ್ಯಾರ್ಥಿ ಪಾಲಕರೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳುವರು.

ನಮ್ಮ ಹತ್ತು ವರ್ಷಕ್ಕೆ ಎಸ್.ಎಸ್.ಎಲ್‌.ಸಿ . ಅದ ಹಾಗೆ ಇಲ್ಲಿ ‘0’ Level Exam ಎಂದು, ಹನ್ನೆರಡು ವರ್ಷಕ್ಕೆ  ಪಿ.ಯು.ಸಿ. ಅದ ಹಾಗೆ ಇಲ್ಲಿ ‘A’ Level Exam ಎಂದು ಪರಿಗಣಿಸುವರು. ಪ್ರತಿವರ್ಷದ ಪರೀಕ್ಷೆಗಳಿಗಿಂತ ಇಲ್ಲಿ ಈ Level Exam ಗಳು ಅತಿ ಮುಖ್ಯ ಕಠಿಣವಾಗಿಯೂ ಇರುತ್ತವೆ. ಹೀಗಾಗಿ ಇಲ್ಲಿ ಯ ಹುಡುಗರು 10 ವರ್ಪಗಳ ಶಾಲೆಯಲ್ಲಿ ಅಭ್ಯಾಸ ಒತ್ತಡವಿಲ್ಲದೇ ಯಾವತ್ತೂ ಖುಷಿಯಿಂದ  ಕುಣಿದಾಡಿಡ್ಡೇ ಕುಣಿದಾಡಿದ್ದು. ನಮ್ಮಲ್ಲಿಯಂತೆ ಇಲ್ಲಿ ಪ್ರತಿ ತಿಂಗಳು ಯುನಿಟ್ ಟೆಸ್ಟ್‌ಗಳಿದ್ದರೆ ಏನಾಗುತ್ತಿತ್ತೋ ಏನೋ, ಹೀಗಾಗಿ ನಮಗೆ ಇಲ್ಲಿಯ ಈ ಸ್ಯಾಂಡರ್ಡ್ ಒಳ್ಳೆಯದೋ ಭಾರತದ್ದು ಒಳ್ಳೆಯದೋ,  ಗೊತ್ತಾಗುವದೇ ಇಲ್ಲ.

ಅದೇನೇ ಆಗಲಿ, ನಮ್ಮ ಸಂಸ್ಕೃತಿ-ಭಾರತೀಯ ಮೌಲ್ಯಗಳು ಉಚ್ಛಮಟ್ಟದ ವುಗಳೆಂದೆನಿಸಿ ನಮ್ಮ ಮಕ್ಕಳ ವ್ಯಾಸಂಗ ಭಾರತದಲ್ಲಿಯೇ ಮುಂದುವರೆಸಿದ ರಾಯ್ತೆಂದು ಸಾಕಷ್ಟು ವಿಚಾರಿಸಿ, ಚರ್ಚಿಸಿ ನಿರ್ಣಯ ತೆಗೆದುಕೊಂಡೆವು. ಮೊದಲು
ನಾನು ಮಕ್ಕಳು ಹೊರಡುವದೆಂದಾಯ್ತು.

ಹೊರಡುವದು ಇನ್ನೊಂದು ಎರಡು ತಿಂಗಳು ಮಾತ್ರ ಉಳಿದಿತ್ತು. ಎಲ್ಲರೂ ಊಟಕ್ಕೆಂದು,ಕಾಫಿಗೆಂದು ಕರೆಯುವವರೇ; ನೆನಪಿನ ಕಾಣಿಕೆ ಕೊಡುವವರೆ.

‘ಈಸ್ಟ್‌ವೆಸ್ಟ್ ಎಕ್ಸ್‌ಪ್ರೆಸ್ ಪ್ಯಾಕೇಜ್’ ದವರು ಮನೆಗೆ ಬಂದು ನಮ್ಮ ಸಾಮಾನುಗಳೆಲ್ಲ 3 ದಿವಸ ಪ್ಯಾಕ್ ಮಾಡಿ (ನಾವು ಹೊರಡುವದೆಂದು ನಮ್ಮ ಹೊಸ ಮನೆಗೆ, ಬೇಕಾದ ಸಾಮಾನುಗಳೆಲ್ಲ ಕೂಡಿಸಿದ್ದು) Air Cargo ಗೇ ಕಳಿಸಿದಾಗ ಮನಸ್ಸಿಗೆ ಏನೋ ಒಂಧರಾ ಹಳಹಳಿ. “ನಿಜವಾಗಿಯೂ ಇನ್ನು ಹೊರಟೇ ಬಿಟ್ಟೆವೆ” ಎಂದೆನಿಸಿ ಬಹಳ ಬೇಸರವಾಯಿತು.

ಹತ್ತು ವರ್ಷಗಳಿಂದ ಕಳೆದ ಸೌದಿ ನಾಡನ್ನು ಬಿಟ್ಟು Saudi Jumbojet ದಲ್ಲಿ  ಕುಳಿತಾಗ ಹೃದಯ ಭಾರವಾಗಿತ್ತು. ನಮ್ಮವರು ನಮ್ಮನ್ನು ಸಾಮಾನುಗಳನ್ನು ನಮ್ಮೂರವರೆಗೆ ತಲುಪಿಸಲು ನಮ್ಮೊಂದಿಗೆಯೇ ಇದ್ದರು.

ವಿಮಾನ ಆಕಾಶಕ್ಕೇರಿತು. ಮುಂದೆ ಮರುಭೂಮಿ, ತೈಲ ನಿಕ್ಷೇಪಗಳ ಮೇಲಿಂದ ಹಾಯ್ದು, ಅರಬ್ಬಿ ಸಮುದ್ರದ ವಿಹಂಗಮತೆಯಲ್ಲಿ ಲೀನವಾಗಿ ರಾತ್ರಿ 11 ಗಂಟೆಗೆ ಸರಿಯಾಗಿ ಬಾಂಬೆಯ ಸಹಾರ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಸಾಮಾನು ಪರಿಶೀಲನಾ ವಿಭಾಗದಲ್ಲಿ ಹೆಚ್ಚು ಸಮಯ ಕಳೆಯಲಿಲ್ಲ. ಕಾರಣ ನಮಗೆ ಬೇಕಿದ್ದ ಸಾಮಾನೆಲ್ಲ ಟಿ.ಅರ್. (Transit of Resident) ಎಂದು Air Cargo ದಲ್ಲಿ ಕಳಿಸಿದ್ದಾಗಿತ್ತು. ಈಗ ನಮ್ಮೊಂದಿಗೆ ಸುಂಕ ಕೊಡುವ ವಸ್ತುಗಳೇನಿರಲಿಲ್ಲ. ಆದರೂ ಎಕ್ಸ್‌-ರೇ ಮಶೀನ್ ಮುಖಾಂತರ ಬ್ಯಾಗ್‌ಗಳನ್ನೆಲ್ಲಾ ಪರಿಶೀಲಿಸಿದ ನಂತರ ಅರ್ಧ ತಾಸಿನಲ್ಲಿ ಹೊರಬಂದೆವು.

ನನ್ನ ಸೋದರಿ ನಂದಾ, ಅವಳ ಪತಿ ಉದಯ, ಅವರ ಎರಡು ವರ್ಷದ ಮಗಳು ಸುಪ್ರಿಯು ನಿಲ್ದಾಣದಲ್ಲಿ ನಮಗಾಗಿ ಕಾಯುತ್ತಿದ್ದರು. ಎಲ್ಲರೂ ಭೆಟ್ಟಿಯಾಗಿ ಖುಷಿ ವ್ಯಕ್ತಪಡಿಸಿಕೊಂಡೆವು. ನಂತರ ಅವರ ಮನೆಯಲ್ಲಿ 3 ದಿನಗಳು ಇದ್ದು. Cargo ದಿಂದ ಬಂದ ನಮ್ಮ ಸಾಮಾನುಗಳೆಲ್ಲ ಪರಿಶೀಲನಾ ವಿಭಾಗದಲ್ಲಿ ಪರಿಶೀಲಿಸಿ ಕೆಲವೊಂದಕ್ಕೆ ಸುಂಕ ಕೊಟ್ಟು ಮತ್ತೊಂದು ಸಲ ಪ್ಯಾಕ್ ಮಾಡಿ ಊರಿಗೆ ಕಳಿಸಿದೆವು. ಸಾಮಾನು ಸರಂಜಾಮುಗಳೊಂದಿಗೆ ಬಾಂಬೆಯಿಂದ ವಿಮಾನ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಬೆಳಗಿನ ತುಂತುರು ಮಳೆ ನಮ್ಮನ್ನು
ಸ್ವಾಗತಿಸಿದಂತೆನಿಸಿತು.

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಕ್ರವರ್ತಿಗಳು ದೇವರಗುಂಡಿಗೆ
Next post ನಗ್ತಾರಲ್ಲೋ ತಮ್ಮಾ

ಸಣ್ಣ ಕತೆ

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ಸ್ನೇಹಲತಾ

  ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…