ತಲೆದಿಂಬು
- ತಲೆದಿಂಬು - December 28, 2020
- ಟಚ್ - December 21, 2020
- ದೇವರಾಣೆ ಮಾಡಿ? - December 14, 2020
ಹೇರ್ ಪಿನ, ಕ್ಲಿಪ್, ಮನೆಕೀಲಿಕೈ ವಾಚ್, ಪೆನ್, ಪುಸ್ತಕಗಳ ಪಿಸ್ತೋಲ್, ಬ್ಯಾಟರಿ, ಆಭರಣ, ಚಾಕ್ಲೆಟ್ಗಳ – ಮಿನಿ ಲಾಕರ್ ನನ್ನ ತಲೆದಿಂಬು. *****
ಪೊರಕೆಯಿಂದ ಟಾಯಿಲೆಟ್ ಬ್ರಷ್ವರೆಗೂ – ಬಾಚಣಿಕೆಯಿಂದ ಟೂತ್ಬ್ರಷ್ವರೆಗೂ- ನಿಮ್ಮನ್ನೂ ನಿಮ್ಮ ಮನೆಯನ್ನೂ ಕ್ಲೀನ್ ಗೊಳಿಸಿದ ನಮ್ಮನ್ನೆಂದಾದರೂ ಕ್ಲೀನ್ ಆಗಿ ಇಟ್ಟಿದ್ದೀರಿಯೆ? ಹೇಳಿ ದೇವರಾಣೆ ಮಾಡಿ? *****
ಚೆಲ್ಲಾ ಪಿಲ್ಲಿಯಾಗಿ ಹರಿದುಹೋದ ಮನಸ್ಸುಗಳನ್ನು ಒಂದುಗೂಡಿಸಿ ಹೊಲೆದು ಅಲ್ಲಲ್ಲಿ ಕಲರ್ಫುಲ್ ಬಟನ್, ಹೂವುಗಳ ಪ್ಯಾಚ್ ವರ್ಕ್ ಮಾಡಿ ಇಸ್ತ್ರಿ ಮಾಡಿಬಿಡುತ್ತಾನೆ. *****
ಇಂತಿಂತಿಷ್ಟೇ ಔಷದಿಗೆಂದು ಖರ್ಚಿಸಿ ಅಷ್ಟಷ್ಟೇ ಉಳಿಸಿಕೊಳ್ಳುತ್ತಾರೆ ನಾಳೆಯ ಊರುಗೋಲು ಕೊಳ್ಳಲು – ನಾಡದ್ದಿನ ಹೊಲಸು ತೊಳೆಯುವವರಿಗೆ ಕೊಡಲು – ನಂತರ, ಹೆಣ ಹೊರುವವರಿಗೊಂದಿಷ್ಟು ಇಟ್ಟು ತರಸ್ಕರಿಸಿಕೊಳ್ಳುವ ಮಕ್ಕಳು ಮೊಮ್ಮಕ್ಕಳಿಂದ ಭಾರವಾಗದೇ ಭೂಮಿ ಸೇರಲು – *****
ವಿರಹ ಗೀತೆ ಹಾಡಿ ರಂಬೆ – ಊರ್ವಶಿಯಾಗಿ ನನ್ನ ಕನಸುಗಳ ಕೊಲೆ ಮಾಡಬೇಡ ಹೆಚ್ಚಾದರೆ ಹೃದಯವೂ ಒಡೆದೀತು ಜೋಕೆ! *****