ಇತ್ತೀಚೆಗೆ ಬಹು ಜನರನ್ನು ಪ್ರಬಲವಾಗಿ ಆಕರ್ಷಿಸಿರುವ ಜನಸೇವೆಯ ವಿಷಯವನ್ನು ಸರಿಯಾಗಿ ಅರಿತುಕೊಳ್ಳು-ವುದಕ್ಕೆ ಕೆಲವು ಜೀವಿಗಳು ಮನದೊಲವನ್ನು ಪ್ರಕಟಿಸಿದರು. ಅದಕ್ಕಾಗಿ ಸಂಗನುಶರಣನು ತನ್ನ ಅಭಿಪ್ರಾಯವನ್ನು
ಹೇಳತೊಡಗಿದನು. ಅದು ಹೇಗೆಂದರೆ-

“ಜನಸೇವೆ”ಯೆಂಬುದು ಒಳ್ಳೆಯ ಪ್ರವೃತ್ತಿಯೇ ಅಹುದು; ಆದರೆ ಅದೇ ಸರ್ವಶ್ರೇಷ್ಠವಾವ ಪ್ರವೃತ್ತಿಯೇನೂ ಅಲ್ಲ.

ಜನಸೇನೆಗಿಂತ ಜಗದೀಶನ ಸೇನೆ ಮಿಗಿಲಾದುದು. ಯಾಕಂದರೆ ಜನ ಜಂಗುಳಿಯು ಅಶಾಶ್ವತವಾದುದು, ನಶ್ವರವಾದುದು. ಜಗದೀಶನು ಶಾಶ್ವತನೂ ಅನಿನಾಶಿಯೂ ಆಗಿದ್ದಾನೆ.

ಜನಜಂಗುಳಿಗೆ ಸೇವೆಯ ಆವಶ್ಯಕತೆಯಿರಬಹುದು; ಜಗದೀಶ್ವರನಿಗೆ ಸೇವೆಯ ಆವಶ್ಯಕತೆ ಇರಲಿಕ್ಕಿಲ್ಲ. ಜನಜಂಗುಳಿಯೂ ತಮ್ಮ ಕೊರತೆಯ ನಿವಾರಣೆಗಾಗಿ ಬಯಸುವ ಸಹಾಯವು ಅಜ್ಞಾನಪೂರಿತವಾದುದು, ಜ್ಞಾನ
ಪ್ರೇರಿತವಾಗಿರಲಾರದು.

ಜನಜಂಗುಳಿಯ ಬಯಕೆಯನ್ನು ಈಡೇರಿಸುವದೆಂದರೆ, ರೋಗಿ ಬೇಡಿದ ಆಹಾರ ಕೊಟ್ಟ ಹಾಗೆ. ಜಗದೀಶ್ವರನ ಬಯಕೆಯನ್ನು ಈಡೇರಿಸುವದೆಂದರೆ, ಜಾಣವೈದ್ಯನು ಹೇಳಿದ ಪಥ್ಯಾಹಾರ ಕೊಟ್ಟ ಹಾಗೆ. ಜನಸೇವಕನು ರೋಗಿಯ
ಆಭಿರುಚಿ-ಆಕಾಂಕ್ಷೆಗಳಿಗೆ ಮಾರುವೋಗುವನು. ಜಗದೀಶ್ವರನ ಸೇವಕನು ರೋಗಿಯ ಕಲ್ಯಾಣಕಾರ್ಯಗಳಿಗೆ ಕರಗಿ ನೀರಾಗುವನು.

ಜಗದೀಶನ ಸೇವಕನು ಜಗದೀಶ್ವರನ ಒಲುಮೆಯನ್ನೂ ಜನಜಂಗುಳಿಯ ವಿಶ್ವಾಸವನ್ನೂ ಗಳಿಸಬಲ್ಲನು. ಜಗದೀಶ್ವರನ ಒಲುಮೆಯನ್ನು ಅರಿತುಕೊಳ್ಳುವುದಕ್ಕೆ ದಾರಿಯೇನು? ಮನಸ್ಸು ಇದ್ದಲ್ಲಿ ಮಾರ್ಗವಿದೆ; ಯಾಕಂದರೆ ಮನಸ್ಸಿನಂತೆ ಮಹಾದೇವ.

ಜಗದೀಶ್ವರನಿಗೆ ಮಾನವನು ನೀಡುವ ಪೂಜೆಯಾಗಲಿ, ಸಲ್ಲಿಸುವ ಸಹಾಯವಾಗಲಿ, ಮಾಡುವ ಪ್ರಾರ್ಥನೆಯಾಗಛಿ ಬೇಕಾಗಿರುವದಿಲ್ಲ. ಜಗದೀಶ್ವರನು ಯಾವ ತನ್ನ ಸಜ್ಞ ಮಕ್ಕಳ ಯೋಗಕ್ಷೇಮದಲ್ಲಿ ತೊಡಗಿರುವನೋ ಆ ಮಕ್ಕಳ ಸಲುವಾಗಿ ಸೇವೆ ಸಲ್ಲಿಸುವ ದೀಕ್ಷೆಯನ್ನು ಈಶ್ವರಸೇವಕನಾಗ ಬಯಸುವವನು ಮಾಡಬೇಕಾದ ಮೊದಲ ಕೆಲಸ.

ಯಾರಲ್ಲಿ ದೈವೀಗುಣಗಳಾದ ಶಾಂತಿ, ಜ್ಞಾನ, ಪ್ರೇಮ, ಆನಂದ ಮೊದಲಾದವುಗಳು ಪ್ತಕಟವಾಗಿರುವವೋ, ಅವರೇ ಜಗದೀಶ್ವರನಿಗೆ ಹತ್ತಿರದ ಮಕ್ಕಳು ಅವರೇ ಸತ್ಪುರುಷರು, ಸಜ್ಜನರು, ಶರಣರು ಎನಿಸಿಕೊಳ್ಳುತ್ತಾರೆ. ಅಂಥವರಿಗೆ ಸಲ್ಲಿಸಿದ ಸೇನೆ ಸಾರ್ಥಕವಾದ ಸೇವೆ. ಅದು ಸೇವೆ ಸ್ವೀಕರಿಸುವವನಿಗೆ ಪ್ರಯೋಜನಕಾರಿಯಾಗುತ್ತದೆ; ಸೇವೆ  ಸಲ್ಲಿಸಿದವರಿಗೂ ಸಕಲ ದೈವೀಸಂಪದಗಳು ಪ್ರಾಪ್ತವಾಗುತ್ತವೆ. ಶರಣರು,  ಸತ್ಪುರುಷರು ಎಂದರೆ ಪರಮಾತ್ಮ ವೃಕ್ಷಕ್ಕಿರುವ ಬೇರುಗಳು.  ಪರಮಾತ್ಮವೃಕ್ಷಕ್ಕೆ ಬಾಯಿಯೆಂದರೆ ಬೇರುಗಳೇ. ಬೇರುಗಳು ವೃಕ್ಷವನ್ನು ಹೋಲುವುದಿಲ್ಲ- ವಾದರೂ ವೃಕ್ಷದ ನಿಲುಮೆಯನ್ನು ಎತ್ತಿಹಿಡಿಯಬಲ್ಲವು.

ಮರಕ್ಕೆ ಬಾಯಿ ಬೇಕೆಂದು ತಳಕ್ಕೆ ನೀರನೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ.
ಲಿಂಗದ ಬಾಯಿ ಜಂಗಮವೆಂದು ಪಡಿಪದಾರ್ಥವ
ನೀಡಿದರೆ ಮುಂದೆ ಸಕಳಾರ್ಥವನೀವನು.
ಆ ಜಂಗಮನ ಪರನೆಂದು ಕಂಡು, ನರನೆಂದು ಭಾವಿಸಿದಡೆ
ನರಕ ತಪ್ಪದು ಕಾಣಾ ಕೂಡಲಸಂಗನುದೇವಾ.

ಆದ್ದರಿಂದ ಜಗದೀಶನ ಸೇವಕನಾಗಲು ಕಂಕಣಕಟ್ಟುವುದು ಒಳ್ಳೆಯದು; ದೀಕ್ಷೆ ವಹಿಸುವುದು ಮತ್ತೂ ಒಳ್ಳೆಯದು. ದೇವರ ಹೆಸರಿಗೆ ಬಿಟ್ಟ ಗೂಳಿಯಾಗುವುದು ಇನ್ನೂ ಒಳ್ಳೆಯದು. ದೇವನವ ನಾನೆಂಮ ಹೇಳಿಕೊಳ್ಳುವಂತೆ ಲಿಂಗಮುದ್ರೆನೊತ್ತಿಸಿಕೊಳ್ಳುವುದು ತೀರ ಒಳ್ಳೆಯದು.
“ಲಿಂಗದುಂಡಿಗೆಯ ಪಶುವಾನಯ್ಯ.
ಕೂಡಲಸಂಗನ ಶರಣರ ಧರ್ಮದ
ಕಪಿಲೆಯಾನು. ”
ಎಂದು ಹೇಳಿಕೊಳ್ಳುವುದರಲ್ಲಿ ಹಿಗ್ಗುತ್ತಿರಬೇಕು. ಮೂರ್ತಿಪೂಜೆಗಾಗಿ ಪಡುತ್ತಿರುವ ಶ್ರಮವು ಒಮ್ಮೊಮ್ಮೆ ವ್ಯರ್ಥಪರಿ- ಶ್ರಮವಾಗುತ್ತಿರುಪುದುಂಟು. ಎರೆದ ನೀರಿನಿಂದ ಲಿಂಗಮೂರ್ತಿಯು ನೆನೆಯುವುದೂ ಇಲ್ಲ; ಬಿಟ್ಟರೆ ಬಾಡುವುದೂ ಇಲ್ಲ. ಅದೇ ಸೇವೆಯನ್ನು ಸತ್ಪುರುಷರಿಗೆ ಸಲ್ಲಿಸಿದರೆ, ಸಜ್ಜನಿಕೆಯ ಅಂಶಕ್ಕೆ ಸಲ್ಲಿಸಿದರೆ ಲೋಕದಲ್ಲಿ ಒಂದು ಒಳ್ಳೆಯತನ ಬೆಳೆಯುವುದಕ್ಕೆ ನೀರೆರೆದಂತಾಗುವುದರಲ್ಲಿ ಸಂಶಯವೇ ಇರಲಾರದು.
ಎರೆದಡೆ ನೆನೆಯದು, ಮರೆದಡೆ ಬಾಡದು.
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ.
ಕೂಡಲಸಂಗಮದೇವಾ ಜಂಗಮಕ್ಕೆರೆದಡೆ
ಸ್ಥಾವರ ನೆನೆಯಿತ್ತು
ಯಾಕಂದರೆ ಶರಣರಿಗೆ ಸಲ್ಲಿಸಿದ ಸೇವೆ ಜಗದೀಶ್ವರನಿಗೆ ಸಲ್ಲುತ್ತದೆ. ಶರಣರಿಗೆ ಹನಿಸಿವ ನೀರಿನಿಂದ ಜಗದೀಶ್ವರನು ನೆನೆಯುತ್ತಾನೆ. ಶರಣರಿಗೆ ನೀಡಿದನ್ನದಿಂವ ಜಗದೀಶ್ವರನು ತೃಪ್ತಿಪಡುತ್ತಾನೆ.ಯಾಕಂದರೆ ಶರಣನು ಪರಮಾತ್ಮನ ಪಾದವಿಡಿದಿರುತ್ತಾನೆ. ಹಾಗೆಂದರೆ ಮಹಾವೃಕ್ಷದೊಂದಿಗೆ ಕಲಮಿ ಮಾಡಿದಂತೆ. ಮಹಾವೃಕ್ಷದ ಮಹಾಗುಣಗಳೆಲ್ಲ ಕಲಮಿಗೊಂಡ ಚಿಕ್ಕ ತೊಂಗಲಲ್ಲಿ ಒಳಸೇರುತ್ತವೆ. ಮಹಾವೃಕ್ಷಕ್ಕಿರುವ ಸಕಲಸಂಪದಗಳಿಗೆ ಆ ತೊಂಗಲು
ಸಮಭಾಗಿ ಆಗುತ್ತದೆ; ಅದು ಸಕಲೈಶ್ವರ್ಯಗಳ ಭಾಗವಾಗುತ್ತದೆ. ಅಂಥವರ ಸೇವೆ ಅಪ್ರತ್ಯಕ್ಷವಾದ ಪರಮಾತ್ಮ- ಸೇವೆಯೇ ಆಗಿಬಿಡುತ್ತವೆ.

ನಿಮ್ಮ ಪಾದವಿಡಿದು ಮನನಿರ್ಮಳವಾಯಿತ್ತು
ನನ್ನ ತನು ಶುದ್ಧವಾಯಿತ್ತು. ಕಾಯಗುಣವಳಿಯಿತ್ತು
ಕರಣಗುಣ ಸುಟ್ಟು, ಭಾವವಳಿದು, ಬಯಕೆ ಸವೆದು,
ಮಹಾದೇಪನಾದ ಶರಣರ ಪಾದವಿಡಿದು
ನಿಜಮುಕ್ತಳಾದೆನಯ್ಯ ಅಣ್ಣಪ್ಪಪ್ರಿಯ ಚೆನ್ನಬಸನಣ್ಣ..

ಸೇವೆ ಸಲ್ಲಿಸುವ ಶಕ್ತಿಯು ಎಲ್ಲರಲ್ಲಿಯೂ ಒಂದೇ ಬಗೆಯಾಗಿರುವದಿಲ್ಲ. ಧನದ ಆನುಕೂಲತೆ ಒಬ್ಬರಿಗೆ ಹೆಚ್ಚಾಗಿದ್ದರೆ, ದೇಹದ ಅನುಕೂಲತೆ ಇನ್ನೊಬ್ಬರಿಗೆ ಹೆಚ್ಚಾಗಿರುತ್ತದೆ. ಗಾಡಿ-ಗುಂಡಾರಗಳನ್ನು ಕಟ್ಟಸಿದರೆ ಬಹುಜನರ ಕಣ್ಣಿಗೆ ಕಾಣುವ ಸೇವೆಯೆನಿಸಬಹುದು. ಅದು ಬಹುಕಾಲ ನೆನಪಿನಲ್ಲಿ ಉಳಿಸುವ ಸೇವೆಯೆನಿಸಬಹುದು. ಪ್ರಯೋಜನದಲ್ಲಿ ಗುಡಿ-ಗುಂಡಾರಗಳಿಗಿಂತ ಮಿಗಿಲಾದ ಸೇವೆಗಳು ಹ೮ವಾರು ಇರಬಹುದು. ಮಿಗಿಲಾದುದನ್ನು ಆರಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ಸ್ವಾಭಾವಿಕವೆಸಿದುದೇ ಮಿಗಿಲಾದ ಸೇವೆ. ಸ್ವಾಭಾನಿಕವಾದುದೇ ಸಹಜವೂ, ವಾಸ್ತನಿಕವೂ, ಸುಂದರವೂ ಆಗಬಲ್ಲದು.
ಉಳ್ಳವರು ಶಿವಾಲಯನ ಮಾಡುವರು.
ನಾನೇನ ಮಾಡುವೆ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ.
ಕೂಡಲಸಂಗಮದೇವಯ್ಯ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ದೇಹವನ್ನೇ ದೇವಾಲಯ ಮಾಡಿ ಅಲ್ಲಿ ಪರಮಾತ್ಮನನ್ನು ಸ್ಥಾಪಿಸಿದರೆ ಬೇರೆ ದೇವಾಲಯಗಳನ್ನು ಕಟ್ಟಿಸುವ ಶ್ರಮವೇಕೆ? ದೇವಾಲಯವಾಗುತ್ತಿರುವ ದೇಹಗಳನ್ನು ರಕ್ಷಿಸುವ, ಜೋಪಾನವಾಗಿಸುವ ಎತ್ತುಗಡೆ ನಡೆಸಿದರೆ ಸಾಕು.
ದೇವಾಲಯದ ಸ್ಥಿರತೆಗೆ ಗಚ್ಚು-ಗಾರೆಗಳು ಅತ್ಯಾವಶ್ಯಕವಾದ ವಸ್ತುಗಳಾದರೆ, ದೇಹದ ಸ್ಥಿರತೆಗೆ ಆಹಾರವು ಗಚ್ಚುಗಾರೆಯಂತೆ ಅತ್ಯಾವಶ್ಯಕ ವಸ್ತುವಾಗ ಲಾರದೇ? ದೇಹವು ದೇಹಾರವಾಗುವ ಎತ್ತುಗಡೆ ನಡೆದಿರುವಲ್ಲಿ ಹತ್ತೂ
ಕೈಗಳು ಎತ್ತಿಹಿಡಿಯಬೇಕು. ಅದೊಂದು ಸಾರ್ಥಕವಾದ ಸೇವೆ; ಸ್ಥಿರವಾದ ಪೂಜೆ.; ಶಾಶ್ವತವಾದ ಪ್ರಾರ್ಥನೆ.
ದೇಹಾರವ ಮಾಡುವ ಅಣ್ಣಗಳಿರಾ,
ಒಂದು ಆಹಾರವನ್ನಿಕ್ಕಿರಯ್ಯಾ!
ದೇಹಾರಕ್ಕೆ ಆಹಾರವೇ ನಿಚ್ಚಣಿಕೆ.
ದೇಹಾರವ ಮಾಡುತ್ತೆ ಆಹಾರವನಿಕ್ಕಿದಿರ್ದೊಡೆ
ಆಹಾರವಿಲ್ಲೆಂದನಂಬಿಗರ ಚೌಡಯ್ಯ,

ದೇಹಾರವಾಗಿ ಮಾರ್ಪಟ್ಟ ದೇಹಕ್ಕೆ ಕಾಲು ಕಾಲುಗಳಾಗಿ ಉಳಿಯುವ ದಿಲ್ಲ; ದೇಹಾರವನ್ನು ಹೊತ್ತ ಕಂಬಗಳಾಗು- ವವು. ನಾಲಗೆಯು ರಸನೆ ಮಾತ್ರ ಅಗಿರದೆ, ಮಾತಿನ. ಮಲ್ಲಣೆಯೂ ಆಗಿರದೆ ಮಹಾನಾದವನ್ನು ಸ್ಫುರಿಸುವ
ಗಂಟೆಯಾಗಿ ಬಿಡುವದು. ಶಿರವು ಮೆದಳನ್ನು ಹೊತ್ತ ಬುರುಡೆಯಾಗದೆ, ದೇವದೇವನ ನಿಲುವನ್ನು ಹೊತ್ತು ದೂರದವರಿಗೆ ಸೂಚು ಮಾಡುವ ಹೊನ್ನ ಕಳಸವಾಗುವುದು. ಸರವು ಸರವಾಗಿ ಉಳಿಯವೆ, ಲಿಂಗಕ್ಕೆ ಸಿಂಹಾಸನವಾಗಿ ನಿಲ್ಲುವದು. ಹೀಗೆ ಮಾರ್ಪಟ್ಟ ದೇಹವು ದೇವನ ದೇಹಾರನಾಗಿ ಆತನ ಆಸ್ತಿತ್ವವನ್ನು ವ್ರತಿಷ್ಠೆಗೊಳಿಸಲು ಅನುನಾಗುವಾಗ, ಅದಕ್ಕೆ ಸೇವೆ ಸಲ್ಲಿಸುವದಾಗಲಿ, ನೆರವು ನೀಡುವುದಾಗಲಿ ಅದೆಂಥ ಘನನಾವ ಕೆಲಸನೆನ್ನುವುದನ್ನು ಮರೆಯಲಿಕ್ಯಾಗದು.

ದೇಹನನ್ನು ದೇಹಾರನಾಗಿ ರೂಪಾಂತರಿಸುನ ಕೆಲಸ ತನ್ನದೇ ಇರಲಿ, ನನ್ನವರದೇ ಇರಲಿ, ಆ ಫನವಾದ ಕಾರ್ಯಕ್ಕಾಗಿ ಸರ್ವಸ್ವವನ್ನೂ ಸೂರೆಗೊಳಿಸಿದರೆ ಅವ್ಯರ್ಥವಾದ ಪುಣ್ಯವು ಉಡಿಯಲ್ಲಿ ಬೀಳದಿರಲಾರದು. ಹಾಗೆ
ಸಾಯವ ತನುವು ಹೀಗೆ ಸವೆಯಲಿ. ಆಶೆಯ  ಬೆನ್ನುಹತ್ತಿ ಗಾಸಿಗೊಳ್ಳುವ ಬದಲು ಈಶಸೇವೆಗಾಗಿ ಕರಗಿ ಹೋಗುವುದು ಸಾರ್ಥಕನಲ್ಲವೇ? ಭೂಷಣವಲ್ಲವೇ? ಮಾತಿಗಾಗಿ ಮೈಗೂಡುವ ಬಂಟಿರಿದ್ಧಾರೆ; ಅಭಿಮಾನಕ್ಕಾಗಿ ಸರ್ವವನ್ನು ಬಲಿದಾನಮಾಡಬಲ್ಲ ತ್ಯಾಗಿಗಳಿದ್ದಾರೆ. ಯಶಸ್ಸಿಗಾಗಿ ತನುಮನಧನಗಳನ್ನು ಸೂರೆಗೊಳ್ಳುನ ಸಾಹಸಿಗಳಿದ್ದಾರೆ. ಆದರೆ ಪರಮೇಶ್ವರನ ಸಲುನಾಗಿ ಯಾರು ಸೂರೆಗೊಂಡಿದ್ದಾರೆ? ಜಗದೀಶ್ವರನ ಕಾರ್ಯಕ್ಕಾಗಿ ಯಾರು ತೂರಿ
ಕೊಂಡಿದ್ದಾರೆ?

ಕೀರ್ತಿಯ ಬೆನ್ನುಹತ್ತಿ ಜನಸೇವೆಯ ವ್ರತ ಕೈಕೊಂಡವರುಂಟು. ಸ್ಪೂರ್ತಿಯಿಂದ ಕೈಗೋಲಾಗಿ ಕ್ಷಣಿಕ ಆವೇಶವನ್ನು ಮೆರೆದವರುಂಟು. ಹೊನ್ನ ಶೂಲವಿದ್ಧರೂ ಹೊಗಳಿಕೆಯ ಹೊಲಬಿಗೆ ತಲೆವಾಗಿ ಕೊರಳು ನೀಡಿದವರುಂಟು. ಅಧಿಕಾರಪ್ರಾಪ್ತಿಯ ಹುಚ್ಚು ಹಂಬಲದಲ್ಲಿ ದೈವಾಯುತ್ತವಾದ ಸ್ವಾಭಾವಿಕ ಅಧಿಕಾರಗಳನ್ನು ಕಳಕೊಂಡು ನಿರ್ಜೀವರಾದವರುಂಟು. ಹೊನ್ನಿನ ಬೆನ್ನು ಹತ್ತಿ ಅನ್ಯರಾದವರುಂಟು. ಹೆಣ್ಣಿನ ಹವ್ಯಾಸಕ್ಕೀಡಾಗಿ ಹತಭಾಗ್ಯರಾದವ- ರುಂಟು. ಆದರೆ ಸಂಕಟ ಬಂದಾಗ ವೆಂಕಟರಮಣನನ್ನು ನೆನೆಯವಿನ ರೂಢಿಯುಳ್ಳ ಮನುಷ್ಯನು ಸಂಕಟವಿಲ್ಲದಾಗ ದೇವನನ್ನು ಎಡವಿದರೂ ಕಣ್ಣೆತ್ತಿ ನೋಡಲಾರದ ಕುರುಡನಾಗಿರುತ್ತಾನೆ.
ಆಸೆಗೆ ಸತ್ತುದು ಕೋಟಿ
ಆಮಿಷಕ್ಕೆ ಸತ್ತುದು ಕೋಟಿ,
ಹೊನ್ನು, ಹೆಣ್ಣು, ಮಣ್ಣಿಂಗೆ ಸತ್ತುದು ಕೋಟಿ,
ಗುಹೇಶ್ವರಾ: ನಿನಗಾಗಿ ಸತ್ತವರನಾರನೂ
ಕಾಣೆ!!
ಉತ್ತೇಜಕವಾದ ನುಡಿಗಡಣವನ್ನು ಕೇಳಿ, ಸರ್ವತ್ಯಾಗಕ್ಕೆ ನಿಂತವರು ಸಾಮಾನ್ಯರಲ್ಲ; ಸುಸಂಧಿಯನ್ನು ಕಳಕೊಳ್ಳದೆ ಪ್ರಾಣಾರ್ಪಣಕ್ಕೂ ಸಂತೋಷದಿಂದ ಸಿದ್ಧರಾದವರು ಸಾಮಾನ್ಯರಲ್ಲ. ತನಗಾಗಿ ಅಲ್ಲ; ಅನ್ಯರಿಗಾಗಿ ಆತ್ಮಾಹುತಿಯನ್ನು ಇತ್ತವರನ್ನು ಸಾಮಾನ್ಯರೆನ್ನಲಾಗದು. ಅನ್ಯಾಯವನ್ನು ಎದುರಿಸುವ ಸಲುನಾಗಿ ಬಲಿದಾನ ಕೊಟ್ಟು ಕೀರ್ತಿಶರೀರಿ- ಗಳಾದವರನ್ನು ಸಾಮಾನ್ಯರೆನ್ನುವುದು ಹೇಗೆ? ಇವಾವುವೂ ಸಹಜದ ಕೆಲಸಗಳಲ್ಲ. ಸಾಮಾನ್ಯವಾಗಿ ಎಲ್ಲರೂ ಮಾಡಬಹುದಾದ ಕೆಲಸಗಳೂ ಇವಲ್ಲ. ಆದರೂ ಇವು ಪರಮಾತ್ಮನ ಸಂಕಲ್ಪಕ್ಕೆ ಹೊಂದಿಕೊಳ್ಳುವ ದೈವೀಕಾರ್ಯ- ಗಳಾಗಬಲ್ಲವೋ ಇಲ್ಲವೋ ತಿಳಿಯದು.ಯಾಕಂದರೆ ಅವುಗಳ ಹಿಂದೆ, ಗಗನಕ್ಕೇರಿ ನಿಲ್ಲಬಲ್ಲ ಕೀರ್ತಿಪತಾಕೆಯಲ್ಲಿ ದೃಷ್ಟಿನೆಟ್ಟಿರಬಹುದು. ಮಾನ-ಮನ್ನಣೆಯ ಬಿರುದಿಗೆ ಕೈಚಾಚಿರಬಹುದು. ಅಜರಾಮರವಾದ ಪ್ರಸಿದ್ಧಿಯ ಗೋಪುರವು ತಲೆಯೆತ್ತಿರಬಹುದು.

ಬಲಿದಾನಕ್ಕಿಂತ ಬಲುಹಾದ, ಆತ್ಮಾಹುತಿಗಿಂತ ಅಮರವಾದ, ಪ್ರಾಣಾರ್ಪಣಕ್ಕಿಂತ ಪ್ರಕಾಶಪೂರ್ಣವಾದ, ಸರ್ವತ್ಯಾಗಕ್ಕಿಂತ ಸಂಪೂರ್ಣವಾದ ಜಗದೀಶ್ವರನ ಸೇವೆಯಿಲ್ಲವೇ? ಇದ್ದೇ ಇದೆ. ಇಲ್ಲದೆ ಏನು? ಅದೇ ಸರ್ವಾರ್ಪಣ; ಸಂಪೂರ್ಣ ಸಮರ್ಪಣ. ಪರಮೇಶ್ವರನ ಪಾದಕ್ಕೆ ಸರ್ವಾಂಗ ಪರಿಪೂರ್ಣವಾದ ಸಮರ್ಪಣ. ಕೀರ್ತಿಯ ಕಟ್ಟಳೆ- ಯಿಲ್ಲದೆ, ಪ್ರಕೃತಿಯನ್ನೆಲ್ಲ ಹುಚ್ಚು ಹುಡಿಯನ್ನಾಗಿ ಹರಹಬಲ್ಲ ಮಹಾತ್ಯಾಗವು ಅದರಲ್ಲಿರುತ್ತವೆ ಪ್ರಸಿದ್ಧಿಯ ಪ್ರಯಾಸವಿಲ್ಲದೆ ಮುತ್ತಿನಂಥ ಮೈಮನಗಳನ್ನು ಗೊಬ್ಬರಗೊಳಿಸುವ ಆತ್ಮಾಹುತಿ ಅದರಲ್ಲರುತ್ತದೆ. ಮಾನ-ಮನ್ನಣೆಯ ಕನಸು ಸಹ ಕಾಣದೆ, ಸಿಂಗಾರದ ಬಾಳುವೆಯನ್ನು ಧೂಳಿಪಟ ಮಾಡಿ ಮುಗಿಲಲ್ಲಿ ತೂರಿಬಿಡುವ ಬಲಿದಾನ ಅದರಲ್ಲಿರುತ್ತದೆ. ಲಾಭದ ಹಿನ್ನೆಲೆ ಅದಕ್ಕಿರದೆ ಸಾರ್ಥಕತೆಯ ಹಿಂಬಲವಿರುತ್ತದೆ.

ಸರ್ವಾರ್ಪಣವೇ ಜಗದೀಶ್ವರ ಮಹಾಸೇವೆ. ಈಶ್ವರ ಸೇವಕನಿಗೆ ಒಪ್ಪುವ ಸೇವೆಯೆಂದರೆ ಸಂಪೂರ್ಣ ಸಮರ್ಪಣವೇ ಸರಿ. ಇದೇ ಎಲ್ಲಕ್ಕಿಂತ ಹಿರಿದಾದ ಈಶಸೇವೆ. ಇದೇ ಎಲ್ಲಕ್ಕಿಂತ ಶಾಶ್ವತವಾದ ಜನಸೇವೆ. ಇದೇ ಅಕಲಂಕವಾದ ಈಶಪೂಜೆ. ಆ ಈಶ್ವರ ಸೇವಕನು ತನಗಾಗಿ ಮಾಡುವ ಕೆಲಸವಾವುದೂ ಇರುವದಿಲ್ಲ. ತನಗಾಗಿ ಇಟ್ಟುಕೊಂಡ ಒಡವೆ ಒಂದೂ ಇರವದಿಲ್ಲ. ಇಂದಿನ ಚಿಂತೆ ಸತ್ತಿದೆ; ನಾಳಿನ ಚೆಂತೆಗೆ ಜನನನಿಲ್ಲ.
ಹೊನ್ನಿನೊಳಗೊಂದೆರೆಯ
ಸೀರೆಯೊಂದೆಳೆಯ,
ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ನಿಮ್ಮ ಶರಣರಿಗಲ್ಲದೆ, ಮತ್ತೊಂದುವನರಿಯೆ
ಕೂಡಲಸಂಗಮದೇವಾ.

ಸಂಪೂರ್ಣವನ್ನು ಸಮರ್ಪಿಸಿ ಬಂದ ಪ್ರತಿಫಲವನ್ನು ಒಲ್ಲೆನ್ನದೆ, ಆಗುನ ಮಾರ್ಪಾಡಿಗೆ ಬೇಡೆನ್ನದೆ ಅಚಲನಾಗಿ ನಿಲ್ಲುವುಮ ಸುಲಭವಾದ ಕೆಲಸವಲ್ಲ.

ಪರಮೇಶ್ವರನನ್ನು ಒಲಿಸುವುದು ಸುಲಭವಾದೀತು; ಆದರೆ ಪರಮೇಶ್ವರ ಪ್ರತೀಕರಾದ ಶರಣರನ್ನು ಮೆಚ್ಚಿಸುವುಮ ಬಿಗಿ. ಲಿಂಗಪೂಜೆ ಮುಂಜಾವಿನ ಬಿಸಿಲಿನಂತೆ ಮೈಗೆ ಹಿತಕರ. ಜಂಗಮಭಕ್ತಿ ಮಧ್ಯಾನ್ಹದ ಬಿಸಿಲು, ಅಂಗಕ್ಕೆ ಕಠಿಣ.

ಆನು ನಿಮ್ಮ ಶರಣರಿಗೆ, ಮಂಡೆಯ ಬೋಳಿಸಿಕೊಂಡು
ಗಂಡುದೊತ್ತಾದೆನಯ್ಯ..
ಕೂಡಲಸಂಗಮದೇವಾ, ನಿಮ್ಮ ಶರಣರ ಮನೆಯ
ಮಗ ನಾನಯ್ಯ

ಅನ್ನಬೇಕಾಗುವದು. ಪರಮೇಶ್ವರನ ಸೇವೆಗೆ ಹೊರುವ ಎತ್ತಾಗಬೇಕು, ಹೊರುವ ತೊತ್ತಾಗಬೇಕು; ಯೋಗಿ- ಜೋಗಿಯಾಗಬೇಕಾದೀತು; ಆಳು ತೊತ್ತಾಗಬೇಕಾದೀತು; ಮಂಡೆ ಬೋಳಿಸಿಕೊಂಡ ಗಂಡುದೊತ್ತಾಗಬೇಕಾದೀತು. ನಾಚದೆ, ಲಜ್ಜೆಗೆಡದೆ,  ಹಿಂಜರಿಯದೆ, ಆಲಸದೆ, ಬೇಸರದೆ, ನಡುಕಟ್ಟಿ, ಕೈಕಟ್ಟಿ ನಿಂತವನೇ ನಿಜವಾಗಿ ಜಗದೀಶ್ವರನ ಸೇವಕನಾಗಬಲ್ಲನು. ಜಗದೀಶನ ಸೇವೆಗೆ ನಮ್ಮ ಹುಲ್ಲು ಕ್ಕೆಗಳು ಹಾಳತವೇ? ಮಾಡಲಿಕ್ಕೆ ನಿಂತ ಮಾತ್ರಕ್ಕೆ ಮುಗಿಸಿಬಿಡುವ ಬಲುಹು ಬರಬಲ್ಲದೇ? ಮಾಡಲಿಕ್ಕೆ. ನಿಂತುದೇ ಕೊನೆಯ ಪರೀಕ್ಷೆ:. ತನ್ನ ಸೇನೆಯನ್ನು ತಾನೇ ಮಾಡಿಕೊಂಡು ಜಗದೀಶ್ವರನು ತನ್ನ ಸೇವಕನನ್ನು ತೇರ್ಗಡೆಗೊಳಿಸಿಯೇ ಬಿಡುವನು.

ಮಾಡುವಾತ ನಾನಲ್ಲಯ್ಯ  ನೀಡುವಾತ ನಾನಲ್ಲಯ್ಯ.
ಬೇಡುವಾತ ನಾನಲ್ಲಯ್ಯ ನಿಮ್ಮ ಕಾರುಣ್ಯ ವಲ್ಲದೆ.
ಎಲೆದೇವಾ, ಮನೆಯ ತೊತ್ತಲಿಸಿದರೆ
ಒಡತಿ ಮಾಡಿಕೊಂಬಂತೆ
ನಿನಗೆ ನೀ ಮಾಡಿಕೋ ಕೂಡ೮ಸಂಗಮದೇವಾ.”

ಇದನ್ನೆಲ್ಲ ಅಕ್ಶರೆಯಿಂದ ಕೇಳುತ್ತ ಕುಳಿತ ಜಗದೀಶ್ವರೀಮಾತೆಯು, ಸನ್ನೆಮಾಡಿ, ತನ್ನ ಭರತವಾಕ್ಯವನ್ನು ಉದ್ಘೋಷಿಸಿದ್ದು ಏನಂದರೆ-

“ಜಗದೀಶ್ವರನ ಸೇವಕರಾಗಲಿಚ್ಚಿಸುವವರು ಮಾಡಬೇಕಾದ ಪ್ರಾರ್ಥನೆಯೊಳಗಿನ ಮುಖ್ಯವಾದ ಮಾತುಯಾವುದೆಂದರೆ-ಪ್ರಭೋ, ನೀವು ಕೊಟ್ಟ ಯಾವ ವಸ್ತುವನ್ನೂ ವ್ಯರ್ಥವಾಗಿ ಹಾಳು ಗೈಯಲಾರದಂತೆ ಕರುಣಿಸಿರಿ! ಹಾಳು ಗೈಯಲಾರದಂತೆ ಕರುಣಿಸಿರಿ!!”

ಜನಜಂಗುಳಿಯು  ಹರುಷದಿಂದ “ಜಗಜ್ಜನನಿಗೆ ಜಯವಾಗಲಿ” ಎಂಮ ಉಗ್ಗಡಿಸಿತು.

*****

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)